ಆಂಗ್ಲ ಭಾಷೆಯಲ್ಲಿ ವಾರ್ನಿಂಗ್‌ ಅಂದರೆ ಮುಂಬರುವ ಅಪಾಯದ ಸಂಕೇತ. ನಾವು ನಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಗಮನಹರಿಸುತ್ತೇವೆ. ಹಾಗೊಮ್ಮೆ ನಮಗೆ ಯಾವುದಾದರೂ ಸಂಗತಿಯ ಬಗ್ಗೆ ಒಂದು ಸಣ್ಣ ಸುಳಿವು ಸಿಕ್ಕರೂ ಸಾಕು, ನಾವು ಅದರಿಂದ ದೂರ ಇರುತ್ತೇವೆ. ಏಕೆಂದರೆ ನಮಗೆ ಯಾವುದೇ ರೀತಿಯ ಹಾನಿ ಉಂಟಾಗದಿರಲಿ ಎಂಬುದೇ ಇದರ ಹಿಂದಿನ ಉದ್ದೇಶವಾಗಿರುತ್ತದೆ.

ಆದರೆ ಇದೇ ಎಚ್ಚರಿಕೆಯನ್ನು ನಾವು ನಮ್ಮ ಆರೋಗ್ಯದ ಬಾಬತ್ತಿನಲ್ಲಿ ಅನುಸರಿಸಲು ಹೋಗುವುದಿಲ್ಲ. ನಮ್ಮ ದೇಹ ಕೊಡುವ ಅನೇಕ ವಾರ್ನಿಂಗ್‌ ಸಿಗ್ನಲ್ಸ್ ಅಂದರೆ ಅಪಾಯದ ಸಂಕೇತಗಳನ್ನು ನಾವು ನಿರ್ಲಕ್ಷಿಸುತ್ತೇವೆ.

ಒಂದುವೇಳೆ ನಮ್ಮ ಎದೆಯಲ್ಲಿ ಸ್ವಲ್ಪ ಪ್ರಮಾಣದ ನೋವು ಉಂಟಾದರೆ, ಬಹುಶಃ ಇದು ಗ್ಯಾಸ್‌ ಸಮಸ್ಯೆಯಿಂದ ಉಂಟಾದ ನೋವು ಎಂದು ಯೋಚಿಸಿ ನಾವು ಸುಮ್ಮನಾಗಿಬಿಡುತ್ತೇವೆ. ಆ ನೋವು ಹೃದಯಕ್ಕೆ ಸಂಬಂಧಪಟ್ಟ ಯಾವುದಾದರೂ ಲಕ್ಷಣವಾಗಿರಬಹುದು ಎಂದು ನಾವು ಯೋಚಿಸಲು ಇಷ್ಟಪಡುವುದೇ ಇಲ್ಲ. ನಮ್ಮ ಈ ಅಜಾಗರೂಕತೆಯೇ ನಮ್ಮನ್ನು ಹೃದ್ರೋಗದತ್ತ ದೂಡುತ್ತದೆ.

ಬೆಂಗಳೂರಿನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯೊಂದರ ಡಾ. ಅನುರಾಧಾರ ಪ್ರಕಾರ, ನಮ್ಮ ದೇಹ ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಅನೇಕ ಸಂಕೇತಗಳನ್ನು ನೀಡುತ್ತಿರುತ್ತದೆ. ಹೃದ್ರೋಗಕ್ಕೆ ಸಂಬಂಧಪಟ್ಟಂತೆ ಅನೇಕ ಸಂಕೇತಗಳು ಇರುತ್ತವೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ :

ಚಿಂತೆ : ಅತಿಯಾದ ಚಿಂತೆ ಹೃದಯಕ್ಕೆ ಸಂಬಂಧಪಟ್ಟ ಅನೇಕ ರೋಗಗಳ ಒಂದು ಮುಖ್ಯ ಕಾರಣವಾಗಿದೆ. ಇಂತಹ ಸ್ಥಿತಿಯಲ್ಲಿ ಮನುಷ್ಯನಿಗೆ ಎಂತಹ ತೊಂದರೆ ಉಂಟಾಗುತ್ತದೆ ಎಂದರೆ, ಅದರಿಂದ ಮನುಷ್ಯನಿಗೆ ಸಾವು ನಿಕಟವಾಗಿದೆ ಎಂಬ ಅನುಭೂತಿ ಉಂಟಾಗುತ್ತದೆ.

ಎದೆಯಲ್ಲಿ ತಳಮಳ : ಎದೆಯಲ್ಲಿ ಎಂಥದೊ ತಳಮಳ ಹಾಗೂ ನೋವಿನ ಅನುಭೂತಿ ಅಪಾಯದ ಸಂಕೇತವಾಗಿದೆ. ಇದು ಹೃದಯಕ್ಕೆ ಸಂಬಂಧಪಟ್ಟ ರೋಗದ ಒಂದು ಲಕ್ಷಣ. ಆದರೆ ಇದು ಎಲ್ಲರ ಬಾಬತ್ತಿನಲ್ಲೂ ಅಲ್ಲ. ಯಾವ ನೋವು ಹೃದಯಕ್ಕೆ ಸಂಬಂಧಪಟ್ಟಿರುತ್ತದೋ ಅದು ಎದೆಯ ಎಡಭಾಗದಲ್ಲಿರುತ್ತದೆ. ಆಗ ವ್ಯಯಕ್ತಿಗೆ ತನ್ನ ಎದೆಯ ಮೇಲೆ ಯಾವುದೊ ಭಾರವಾದ ವಸ್ತು ಇಡಲಾಗಿದೆ ಎಂದು ಭಾಸವಾಗುತ್ತದೆ.

ಕೆಮ್ಮು : ಭಾರಿ ಕೆಮ್ಮು ಹೃದಯಾಘಾತದ ಒಂದು ಮುಖ್ಯ ಲಕ್ಷಣವಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಶ್ವಾಸಕೋಶಗಳಲ್ಲಿ ದ್ರವ ಪದಾರ್ಥ ಜಮೆಗೊಂಡಿರುತ್ತದೆ. ಕೆಲವು ಪ್ರಕರಣಗಳಲ್ಲಿ ಹಾರ್ಟ್‌ಫೇಲ್ ಜೊತೆಗೆ ರಕ್ತದ ವಾಂತಿಯೂ ಆಗುತ್ತದೆ.

ತಲೆ ಸುತ್ತುವಿಕೆ : ತಲೆ ಸುತ್ತಿದಂತಾಗುವುದು ಹೃದಯಾಘಾತದ ಇನ್ನೊಂದು ಲಕ್ಷಣವಾಗಿದೆ. ಇದರಿಂದ ಜೀವಕ್ಕೇನೂ ಅಪಾಯ ಉಂಟಾಗದು.

ದಣಿವು : ಅದರಲ್ಲೂ ಮಹಿಳೆಯರಲ್ಲಿ ಅಸಾಧ್ಯವೆನ್ನುವಂತಹ ದಣಿವು ಹೃದಯಾಘಾತ ಉಂಟಾಗುವ ಮುನ್ನ ಕಾಣಿಸಿಕೊಳ್ಳುವ ಒಂದು ಪ್ರಮುಖ ಲಕ್ಷಣವಾಗಿದೆ. ಇಂತಹ ಸ್ಥಿತಿಯಲ್ಲಿ ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ಏಕೆಂದರೆ ದಣಿವಿಗೆ ಇದೊಂದೇ ಕಾರಣ ಎಂದು ಹೇಳಲಾಗದು. ನಿಮ್ಮ ದಿನಚರಿಯ ಬಗ್ಗೆ ವಿಶೇಷ ಗಮನಕೊಡಿ.

ದೇಹದ ಇತರೆ ಭಾಗಗಳಲ್ಲಿ ನೋವು : ಕೆಲವು ಹೃದಯಾಘಾತದ ಪ್ರಕರಣಗಳಲ್ಲಿ ನೋವು ಎದೆಯಲ್ಲಿ ಶುರುವಾಗಿ ಬಳಿಕ ಭುಜ, ಕೈ, ಮೊಣಕೈ, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯ ತನಕ ಪಸರಿಸುತ್ತದೆ. ಎಷ್ಟೊ ಸಂದರ್ಭಗಳಲ್ಲಿ ಎದೆಯಲ್ಲಿ ನೋವಿನ ಅನುಭೂತಿಯೇ ಉಂಟಾಗುವುದಿಲ್ಲ. ಒಂದು ಅಥವಾ ಎರಡೂ ಕೈಗಳಲ್ಲಿ ಅಥವಾ ಭುಜಗಳ ನಡುವಿನ ಭಾಗದಲ್ಲಿ ನೋಂಟಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ