ಹೈಜೀನ್‌ ಹೆಸರು ಕೇಳಿದೊಡನೆ ನಮಗೆ ಎಲ್ಲೆಲ್ಲೂ ಕ್ಲೀನ್‌, ಶುಚಿತ್ವ, ಶುಭ್ರತೆಯ ವಾತಾವರಣದ ನೆನಪಾಗುತ್ತದೆ. ಅದೇ ತರಹ ನಮ್ಮನ್ನು ನಾವು ಶುಚಿಯಾಗಿ, ನೀಟಾಗಿ ಇಟ್ಟುಕೊಳ್ಳುವ ಅಗತ್ಯವಿದೆ. ನಮ್ಮನ್ನು ನಾವು ಶುಭ್ರವಾಗಿಟ್ಟುಕೊಂಡಾಗ ಮಾತ್ರ ರೋಗಗಳಿಂದ ದೂರವಿರಲು ಸಾಧ್ಯ. ಸ್ವಚ್ಛತೆ ಶುಭ್ರತೆ ಎಂದೊಡನೆ ಅದು ಕೇವಲ ದೇಹದ ಹೊರಭಾಗಗಳತ್ತ ಗಮನ ಕೊಡತಕ್ಕದ್ದು ಎಂದುಕೊಳ್ಳಬಾರದು. ಇದರಲ್ಲಿ ಅನಗತ್ಯ ಕೂದಲ ನಿವಾರಣೆ ಪ್ರಧಾನ ಪಾತ್ರ ವಹಿಸುತ್ತದೆ, ಏಕೆಂದರೆ ಅದು ಚರ್ಮದ ಅವಿಚಿನ್ನ ಭಾಗ.

ಆದರೆ ಈಗ ಜನ ಕೊರೋನಾ ಮಹಾಮಾರಿಯ ಕಾಟದಿಂದಾಗಿ ಪಾರ್ಲರ್‌ಗೆ ಹೋಗಿ ನೀಟ್‌ ಆಗದೆ, ಹೇಗೋ ಇದ್ದರಾಯಿತು ಎಂದುಕೊಳ್ಳುತ್ತಾರೆ. ಹೇಗೂ ಆಫೀಸಿಗೆ, ಹೊರಗೆ ಹೋಗುವ ಗೋಜಿಲ್ಲ. ಮನೆಯಲ್ಲೇ ತಾನೇ ಇರುವುದು? ಹೇಗಿದ್ದರೇನು? ಎನಿಸುತ್ತದೆ. ಮುಂದೆ ಅನುಕೂಲ ಆದಾಗ ಪಾರ್ಲರ್‌ಗೆ ಹೋಗಿ ಒಂದೇ ಸಲ ಎಲ್ಲಾ ಮಾಡಿಸಿಕೊಂಡರಾಯಿತು ಅಂತಾರೆ. ಆದರೆ ಖಂಡಿತಾ ಹೀಗೆ ಭಾವಿಸಬೇಡಿ. ಆದರೆ ಎಲ್ಲವನ್ನೂ ಪಾರ್ಲರ್‌ ವಶಕ್ಕೇ ಬಿಟ್ಟುಬಿಡುವುದು ಸರಿಯಲ್ಲ. ಆದ್ದರಿಂದ ನೀವು ಮನೆಯಲ್ಲೇ ಅನಗತ್ಯ ಕೂದಲನ್ನು ತೆಗೆದುಹಾಕಿ, ಸ್ಕಿನ್‌ ಹೈಜೀನ್‌ ಕಡೆ ಹೆಚ್ಚಿನ ಗಮನ ಕೊಡಬೇಕಿದೆ.

ಮನೆಯಲ್ಲೇ ಹೇರ್‌ ರಿಮೂವರ್

ಪಾರ್ಲರಿನಂತೆ ಮನೆಯಲ್ಲೇ ನಾವು ಹೇರ್‌ ರಿಮೂವ್ ‌ಮಾಡಲು ಸಾಧ್ಯವಾ ಎಂದು ಅಂದುಕೊಂಡಿರಾ? ಪಾರ್ಲರಿಗೆ ಹೋಗುವುದರಿಂದ ಬಾಡಿ ಕ್ಲೀನ್‌ ಆಗುವುದು ಮಾತ್ರವಲ್ಲದೆ ರಿಲ್ಯಾಕ್ಸ್ ಆಗಲು ಸಮಯಾವಕಾಶ ದೊರಕುತ್ತದೆ, ಅಂಥದ್ದು ಮನೆಯಲ್ಲಿ ಹೇಗೆ ಸಾಧ್ಯ? ಹಾಗೇನೂ ಇಲ್ಲ. ಮನೆಯಲ್ಲಿ ನೀವು ತುಸು ಹೆಚ್ಚು ಕಷ್ಟ ಪಡಬೇಕಾದೀತು, ಖರ್ಚಂತೂ ಬಹಳ ಉಳಿಯಿತಲ್ಲವೇ? ಮನೆಯಲ್ಲಿ ಈ ಆಪ್ಶನ್‌ ನಿರ್ಧರಿಸಿದಾಗ, ನಿಮಗೆ ಬೇಕಾದ ಬೆಸ್ಟ್ ಕ್ವಾಲಿಟಿ ಪ್ರಾಡಕ್ಟ್ಸ್ ಬಳಸಿಕೊಳ್ಳಬಹುದು. ಇದರಿಂದ ನೀವು ಸಕಾಲದಲ್ಲಿ ಸ್ಕಿನ್‌ ಹೈಜೀನ್‌ ಕುರಿತು ಎಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು. ಜೊತೆಗೆ ನೀವೇ ಮಾಡಿಕೊಳ್ಳುವುದರಿಂದ ಸ್ಕಿನ್‌ ಅಲರ್ಜಿಯ ಪ್ರಶ್ನೆಯೇ ಏಳುವುದಿಲ್ಲ. ಆದರೆ ಪಾರ್ಲರಿನಲ್ಲಿ ಈ ಸದವಕಾಶವಿಲ್ಲ. ನಿಮ್ಮಿಂದ ಚೆನ್ನಾಗಿ ಹಣ ವಸೂಲಿ ಮಾಡುತ್ತಾರೆ. ಆದರೆ ಬ್ರಾಂಡೆಡ್‌ ಪ್ರಾಡಕ್ಟ್ ಬಳಸುತ್ತಾರೋ ಇಲ್ಲವೋ ಯಾವ ಗ್ಯಾರಂಟಿಯೂ ಇಲ್ಲ.

ಹೇರ್‌ ರಿಮೂವ್ ‌ಕ್ರೀಂ

ಹೇರ್‌ ರಿಮೂವ್ ‌ಕ್ರೀಂ ಹಚ್ಚುವುದರಿಂದ ಅದು ಆಳವಾಗಿ ಬೇರೂರಿದ ಕೂದಲನ್ನು ತೆಗೆಯಲಾರದು, ಮೇಲಷ್ಟೇ ಕ್ಲೀನ್‌ ಮಾಡುತ್ತದೆ ಎಂದು ಭಾವಿಸಿದ್ದರೆ ಅದು ತಪ್ಪು. ಆದರೆ ಈಗ ಮಾರುಕಟ್ಟೆಯಲ್ಲಿ ಎಂಥ ಪವರ್‌ ಫುಲ್ ಹೇರ್‌ ರಿಮೂವ್ ‌ಕ್ರೀಂ ಬಂದಿದೆ ಎಂದರೆ, ಅದು ಬುಡದಲ್ಲಿನ ಕೂದಲನ್ನೂ ಇನ್ನಿಲ್ಲವಾಗಿಸುತ್ತದೆ. ಸುದೀರ್ಘ ಕಾಲ ಆ ಭಾಗದಲ್ಲಿ ಮತ್ತೆ ಕೂದಲು ಕಾಣಿಸುವುದಿಲ್ಲ. ಇಂಥ ಕ್ರೀಂ ವಿಟಮಿನ್‌, ಆ್ಯಲೋವೆರಾ, ಶಿಯಾ ಬಟರ್‌ನಂಥ ಗುಣಗಳಿಂದ ಸಮೃದ್ಧವಾಗಿರುತ್ತದೆ, ಇದರಿಂದ ನಿಮ್ಮ ಚರ್ಮಕ್ಕೆ ಹೆಚ್ಚಿನ ಲಾಭವಿದೆ.

ರೆಡಿ ಟೂ ಯೂಸ್‌ ವ್ಯಾಕ್ಸ್ ಸ್ಟ್ರಿಪ್ಸ್

ನೀವು ಪಾರ್ಲರ್‌ನಲ್ಲಿ ವ್ಯಾಕ್ಸ್ ಹಚ್ಚಿಸಿದ ನಂತರ ಸ್ಟ್ರಿಪ್ಸ್ ಬಳಸಿ ಕೂದಲು ತೆಗೆಯುವುದನ್ನು ನೋಡಿಯೇ ಇರುತ್ತೀರಿ. ಆದರೆ ಇದೀಗ ರೆಡಿ ಟು ಯೂಸ್‌ ವ್ಯಾಕ್ಸ್ ಸ್ಟ್ರಿಪ್ಸ್ ಬಳಸಿ ಮನೆಯಲ್ಲೇ ಸುಲಭವಾಗಿ ಅನಗತ್ಯ ಕೂದಲನ್ನು ತೆಗೆದುಬಿಡುಬಹುದೆಂದು ನಿಮಗೆ ಗೊತ್ತೇ? ಇದಕ್ಕಾಗಿ ನೀವು ವ್ಯಾಕ್ಸ್ ಸ್ಟ್ರಿಪ್ಸ್ ನ್ನು ನಿಮ್ಮ ಕೂದಲಿನ ಡೈರೆಕ್ಷನ್‌ ನಲ್ಲೇ ಅಪ್ಲೈ ಮಾಡುವ ಅಗತ್ಯವಿದೆ. ನಂತರ ಅದನ್ನು ವಿರುದ್ಧ ದಿಕ್ಕಿನಲ್ಲಿ ಎಳೆದು, ಸುಲಭವಾಗಿ ಕೂದಲನ್ನು ಕಿತ್ತುಹಾಕಬಹುದು. ಇದು ಖಂಡಿತಾ ಪಾರ್ಲರ್‌ನಂಥ ಫಿನಿಶಿಂಗ್‌ನೀಡುವುದರಲ್ಲಿ ಸಂದೇಹವಿಲ್ಲ. 1 ತಿಂಗಳಿಡೀ ಮತ್ತೆ ನೀವು ಈ ಶ್ರಮಪಡುವ ಅಗತ್ಯ ಇರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ