ಪುರುಷರಲ್ಲಿ ವೀರ್ಯಾಣುಗಳ ಕೊರತೆಗೆ ಕಾರಣಗಳು ಬದಲಾಗುತ್ತಲೇ ಇರುತ್ತವೆ. ಇಂತಹ ಸ್ಥಿತಿಯಲ್ಲಿ ಈ ಮಾಹಿತಿ ನಿಮ್ಮ ಸಮಸ್ಯೆ ನಿವಾರಣೆಗೆ ಅತ್ಯುಪಯುಕ್ತವಾಗಬಹುದು ಎಂಬುದನ್ನು ವಿವರವಾಗಿ ಗಮನಿಸಿ....

ಭಾರತದಲ್ಲಿ ಸಂತಾನ ಅಪೇಕ್ಷೆ ಇರುವ ದಂಪತಿಗಳಿಗೆ 2 ವರ್ಷಗಳಲ್ಲೂ ಮಗು ಆಗದೇ ಇದ್ದರೆ, ಅದಕ್ಕೆ ಮಹಿಳೆಯದೇ ಕಾರಣ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಮಹಿಳೊಬ್ಬಳು ತಾಯಿಯಾಗದೇ ಹೋದರೆ ಪುರುಷನ ಪುರುಷತ್ವದ ಮೇಲೂ ಸಂದೇಹ ಬರುತ್ತದೆ. ಪುರುಷ ಕೂಡ ಈ ನಿಟ್ಟಿನಲ್ಲಿ 50: 50 ಪಾಲುದಾರನಾಗಿರುತ್ತಾನೆ. ಈಗ ಈ ಕುರಿತಂತೆ ಸಾಕಷ್ಟು ಜಾಗರೂಕತೆ ಉಂಟಾಗಿದೆ.

ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತನ್ನ ವೈಫಲ್ಯದ ಬಗ್ಗೆ ಪುರುಷ ಈಗ ಒಪ್ಪಿಕೊಳ್ಳಲು ಆರಂಭಿಸಿದ್ದಾನೆ. ಅದರ ಜೊತೆಗೆ ಚಿಕಿತ್ಸೆಗೂ ಮುಂದೆ ಬರುತ್ತಿದ್ದಾನೆ.

ಲಭ್ಯ ಅಂಕಿಅಂಶಗಳ ಪ್ರಕಾರ, ಮಕ್ಕಳಾಗದೇ ಇರುವ 3 ಪ್ರಕರಣಗಳಲ್ಲಿ 1 ಪ್ರಕರಣ ಪುರುಷರ ವೀರ್ಯಾಣು ಕೊರತೆಗೆ ಸಂಬಂಧಪಟ್ಟಿದೆ. ಉಳಿದ 2 ಪ್ರಕರಣಗಳಲ್ಲಿ 1 ಪ್ರಕರಣ ಸ್ತ್ರೀಯರಲ್ಲಿನ ಸಮಸ್ಯೆಗೆ ಕಾರಣವಾಗಿರುತ್ತದೆ. ಇನ್ನೊಂದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಕಾರಣಗಳು

ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಕ್ಷೀಣಿಸಲು ಮುಖ್ಯ ಕಾರಣ ವೀರ್ಯಾಣುಗಳ ಕೊರತೆ. ಅವುಗಳ ಚಲನೆ ಹಾಗೂ ಟೆಸ್ಟೊಸ್ಟೆರಾನ್‌ ಹಾರ್ಮೋನಿನ ಕೊರತೆ. ವೀರ್ಯಾಣುಗಳ ಕೊರತೆಯಿಂದ ಸಂತಾನೋತ್ಪತ್ತಿಯ ಸಾಧ್ಯತೆ ಕಡಿಮೆಯಾಗುತ್ತದೆ. ಒಂದು ವೇಳೆ ವೀರ್ಯಾಣುಗಳ ಚಲನೆ ಮಂದವಾಗಿದ್ದರೆ, ಅವು ವೇಗವಾಗಿ ಚಲಿಸಿ ಅಂಡಾಣುವಿನ ತನಕ ತಲುಪಿ, ಅದನ್ನು ಭ್ರೂಣವಾಗಿ ಪರಿವರ್ತಿಸುವಲ್ಲಿ ವಿಫಲವಾಗುತ್ತದೆ. ಟೆಸ್ಟೊಸ್ಟೆರಾನ್‌ ಒಂದು ಹಾರ್ಮೋನಾಗಿದ್ದು, ಅದು ವೀರ್ಯಾಣುಗಳನ್ನು ಉತ್ಪತ್ತಿ ಮಾಡಲು ಪ್ರಮುಖ ಪಾತ್ರವಹಿಸುತ್ತದೆ. ಸಮಸ್ಯೆಯ ಈ ಕಾರಣಗಳು ಬದಲಾಗುತ್ತಿರುತ್ತವೆ. ಇವುಗಳಲ್ಲಿ 1 ಕ್ಕಿಂತ ಹೆಚ್ಚು ಕಾರಣಗಳು ಒಬ್ಬ ಪುರುಷನಲ್ಲಿ ಇದ್ದರೆ ಅವನ ಸಂತಾನೋತ್ಪತ್ತಿ ಸಾಮರ್ಥ್ಯವೇ ಹೊರಟುಹೋಗುತ್ತದೆ.

ವೀರ್ಯಾಣುಗಳ ಸಂಖ್ಯೆ ಅಥವಾ ಗುಣಮಟ್ಟದಲ್ಲಿ ಕೊರತೆಗೆ ಹಲವು ಕಾರಣಗಳಿರಬಹುದು. ಉದಾಹರಣೆಗೆ ಆನುವಂಶಿಕ ಕಾರಣಗಳು, ಟೆಸ್ಟಿಕ್ಯೂಲರ್‌ (ಅಂಡಕೋಶ)ನ ಸಮಸ್ಯೆ, ಕ್ರಾನಿಕ್‌ ಪ್ರೋಸ್ಟೇಟ್‌ನ ಸೋಂಕು, ಸ್ಕ್ರೋಟಮ್ ನ ನರಗಳು ಉಬ್ಬಿರುವುದು ಮುಂತಾದ ಕಾರಣಗಳನ್ನು ಪಟ್ಟಿ ಮಾಡಬಹುದು.

ವೀರ್ಯಾಣು ಉತ್ಪತ್ತಿಗೆ ಬಾಧಕವಾಗಿರುವ ಇತರೆ ಕಾರಣಗಳೆಂದರೆ, ಕೆಲವು ವಿಶೇಷ ರಸಾಯನಗಳು, ವಿಷಕಾರಿ ಘಟಕಗಳ ಪ್ರಭಾವ, ಕ್ಯಾನ್ಸರ್‌ನ ಚಿಕಿತ್ಸೆ (ಅದರಲ್ಲಿ ಕೀಮೊಥೆರಪಿ) ಸೇರಿದೆ.

ಕೆಲವು ಸಾಮಾನ್ಯ ಅಪಾಯಗಳೂ ಇವೆ. ಅವುಗಳೆಂದರೆ ತಂಬಾಕು, ಮದ್ಯ ಸೇವನೆ. ಇವುಗಳಿಂದ ಪುರುಷನ ಗುಪ್ತಾಂಗದ ಉತ್ತೇಜನ ಶಕ್ತಿ ಹೊರಟುಹೋಗುತ್ತದೆ. ಅಷ್ಟೇ ಅಲ್ಲ, ವೀರ್ಯಾಣುಗಳ ಸಂಖ್ಯೆಯಲ್ಲೂ ಕೊರತೆ ಉಂಟಾಗುತ್ತದೆ.

ಬೊಜ್ಜು ಕೂಡ ವೀರ್ಯಾಣು ಕೊರತೆಗೆ ಪ್ರಮುಖ ಕಾರಣ. ಇದರಿಂದಾಗಿ ವೀರ್ಯಾಣುಗಳ ಸಂಖ್ಯೆ ಮತ್ತು ಟೆಸ್ಟೊಸ್ಟೆರಾನ್‌ ಮಟ್ಟ ಕುಸಿಯುತ್ತದೆ. ಇದರ ಹೊರತಾಗಿ ವ್ಯಾಯಾಮ ಮಾಡದೇ ಇರುವುದು ಅಥವಾ ಅತ್ಯಲ್ಪ ಪ್ರಮಾಣದಲ್ಲಿ ಮಾಡುವುದು ಕೂಡ ಕಾರಣವಾಗುತ್ತದೆ.

ಗಂಡಹೆಂಡತಿ ಇಬ್ಬರೂ ಮಕ್ಕಳಾಗಬೇಕೆಂದು ಗಂಭೀರವಾಗಿ ಪ್ರಯತ್ನ ನಡೆಸುವ ತನಕ ಬಹಳಷ್ಟು ಪುರುಷರಿಗೆ ತಾವು ನಪುಂಸಕರು ಎಂಬ ಸಂಗತಿ ತಿಳಿಯುವುದಿಲ್ಲ. ಇದಕ್ಕಾಗಿ ಗಂಡಹೆಂಡತಿ ಸ್ವಾಭಾವಿಕವಾಗಿ ಗರ್ಭ ಧರಿಸಲು 1 ವರ್ಷದ ಸಮಯವನ್ನಾದರೂ ತೆಗೆದುಕೊಳ್ಳಬೇಕು. ಆ ಬಳಿಕ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ