ವಿಶ್ವದೆಲ್ಲೆಡೆ ಬಂಜೆತನ (ಇನ್‌ ಫರ್ಟಿಲಿಟಿ)ದ ಸಮಸ್ಯೆಗಳನ್ನು ಜನ ಎದುರಿಸುತ್ತಿದ್ದಾರೆ. ದಿನೇ ದಿನೇ ಇದು ಹೆಚ್ಚತ್ತಲೇ ಇದೆ. ಭಾರತದ ವಿವಾಹಿತರಲ್ಲಿ 10-15% ದಂಪತಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗಮನಿಸತಕ್ಕ ಅಂಶ ಭಾರತದ 30 ಮಿಲಿಯನ್ ಇನ್‌ ಫರ್ಟಿಲೈಸ್ ‌ದಂಪತಿಗಳಲ್ಲಿ ಸುಮಾರು 3 ಮಿಲಿಯನ್‌ ದಂಪತಿ, ಪ್ರತಿವರ್ಷ ಬಂಜೆತನದ ನಿವಾರಣೆಗೆ ಚಿಕಿತ್ಸೆ ಪಡೆಯುತ್ತಾರೆ. ನಗರ ಪ್ರದೇಶದಲ್ಲಿ ಈ ಅಂಕಿ ಅಂಶ ಬಹಳ ಹೆಚ್ಚು. ಅಲ್ಲಿ 6 ದಂಪತಿಗಳಲ್ಲಿ ಒಬ್ಬರಾದರೂ ಬಂಜೆತನದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಚಿಕಿತ್ಸೆ ಕುರಿತಾಗಿ ಬಹಳ ಜಾಗರೂಕರಾಗಿದ್ದಾರೆ. ಆದರೆ ನೆನಪಿಡಿ, ಇಂದಿನ ಆಧುನಿಕ ವೈದ್ಯಕೀಯದಲ್ಲಿ ಇದಕ್ಕೆ ಚಿಕಿತ್ಸೆ ಖಂಡಿತಾ ಸುಲಭ ಸಾಧ್ಯ. ಹೀಗಾಗಿ ವಿಶ್ವಾಸ ಕಳೆದುಕೊಂಡ ದಂಪತಿ ಸಹ ಇದೀಗ ಕೈಗೆ ಕೂಸನ್ನು ಎತ್ತಿಕೊಳ್ಳುವಂತಾಗಿದೆ!

ಇನ್‌ ಫರ್ಟಿಲಿಟಿ ಸಮಸ್ಯೆ ವಿಶ್ವ ಸಂಸ್ಥೆ ಪ್ರಕಾರ ಇದು ಸಂತಾನೋತ್ಪತ್ತಿಯ ಸಾಮರ್ಥ್ಯ ತಗ್ಗಿದಾಗಿನ ಸಮಸ್ಯೆ. ಇದನ್ನು ಕಾಯಿಲೆ ಎಂದು ಯಾವಾಗ ಪರಿಗಣಿಸುತ್ತಾರೆ? ದಂಪತಿ ಯಾವುದೇ ಸಂತಾನಹರಣ ಸಾಧನ ಬಳಸದೆ ಸಮಾಗಮ ನಡೆಸುತ್ತಾ 1 ವರ್ಷ ಕಳೆದರೂ, ಮಗು ಆಗದೇ ಇದ್ದಾಗ ಈ ಕಾಯಿಲೆ ಇದೆ ಎನ್ನಬಹುದು. ಈ ಬಂಜೆತನಕ್ಕೆ ಕಾರಣ ಕೇವಲ ಹೆಂಗಸರಷ್ಟೇ ಅಲ್ಲ, ಗಂಡಸರೂ ಅಷ್ಟೇ ಹೊಣೆಗಾರರು. ಹೆಂಗಸರಲ್ಲಿ ಈ ಸಮಸ್ಯೆಗೆ ಮೂಲಕಾರಣ ಫೆಲೋಪಿಯನ್‌ ಟ್ಯೂಬ್‌ ಬ್ಲಾಕ್‌ ಆಗುವುದು, ಥೈರಾಡಯ್ಡ್ ಸಮಸ್ಯೆ, ಪ್ರೆಗ್ನೆನ್ಸಿ ಹಾರ್ಮೋನ್ಸ್ ಬ್ಯಾಲೆನ್ಸ್ ಆಗದಿರುವುದು, PCOD ಸಮಸ್ಯೆ..... ಇತ್ಯಾದಿಗಳಿಂದ ಹೆಣ್ಣು ಬಂಜೆ ಎನಿಸಿದ್ದಾಳೆ.

ಅದೇ ತರಹ ಗಂಡಸರಲ್ಲಿ ಸ್ಪರ್ಮ್ ನ ಕೌಂಟ್‌ ಕಡಿಮೆ ಆಗುವುದು, ಅದರ ಗುಣಮಟ್ಟದಲ್ಲಿ ಏರುಪೇರು, ಅದರ ಚಲನೆ ನಿಷ್ಕ್ರಿಯಗೊಂಡಿರುವುದು..... ಇತ್ಯಾದಿಗಳಿಂದ ಪಾರ್ಟ್ನರ್‌ ಕನ್ಸೀಲ್ ‌ಆಗುವುದಿಲ್ಲ. ಚಿಂತೆ ಪಡುವುದರಿಂದ ಲಾಭವಿಲ್ಲ, ಇದರ ಸೂಕ್ತ ಚಿಕಿತ್ಸೆಯಿಂದ ಸಂತಾನ ಪ್ರಾಪ್ತಿಯ ಸೌಭಾಗ್ಯ ಸಿಗುತ್ತದೆ.

ಇದರ ಚಿಕಿತ್ಸೆ ಹೇಗೆ?

ಋತುಚಕ್ರದ ಏರುಪೇರನ್ನು ಸರಿಪಡಿಸುವುದು : ವಿಷಯ ನಾರ್ಮಲ್ ವಿಧಾನ ಅಥವಾ ವಿಶೇಷ ಚಿಕಿತ್ಸೆಯದೇ ಇರಲಿ, ವೈದ್ಯರು ಮೊದಲು ನಿಮ್ಮ ಮುಟ್ಟಿನ ದಿನಗಳ ಸೈಕಲ್ ಸರಿ ಇದೆಯೇ ಎಂದು ಪರೀಕ್ಷಿಸುತ್ತಾರೆ. ಅದು ನಾರ್ಮಲ್ ಆದಾಗ ಮಾತ್ರಾ ಮುಂದಿನ ಕ್ರಮ ಸಾಧ್ಯ. ಆಗ ಹಾರ್ಮೋನ್ಸ್ ಸಕ್ರಿಯಗೊಂಡು ಚುರುಕಾಗುತ್ತವೆ, ಆಗ ನೀವು ಬಸುರಾಗುವುದರಲ್ಲಿ ಸಂದೇಹವಿಲ್ಲ. ಜೊತೆಗೆ ನಿಮ್ಮ ಓವ್ಯೂಲೇಶನ್‌ ಪೀರಿಯಡ್‌ ನ್ನು ಟ್ರಾಕ್‌ ಮಾಡುವುದಕ್ಕೂ ಸುಲಭವಾಗುತ್ತದೆ. ಈ ಸಂದರ್ಭದಲ್ಲಿ ಹೆಲ್ದಿ ಈಟಿಂಗ್ ಹ್ಯಾಬಿಟ್ಸ್ ಅತ್ಯಗತ್ಯ. ಔಷಧಿಗಳ ನೆರವಿನಿಂದ, ಶಿಸ್ತಾದ ಪಥ್ಯದಿಂದ ಇದನ್ನು ಸರಿಪಡಿಸಬಹುದು.

ಹಾರ್ಮೋನ್ಸ್ ಬ್ಯಾಲೆನ್ಸ್ ನ್ನು ಸರಿಪಡಿಸುವುದು : ಗರ್ಭ ಧರಿಸಲು ಅಗತ್ಯದ ಹಾರ್ಮೋನ್ಸ್ ಅಂದ್ರೆ ಇದು ಓವರೀಸ್‌ನಲ್ಲಿ ಅಂಡಾಣು ಬೆಳೆಯಲು ನೆರವಾಗುತ್ತದೆ, ಇದರಿಂದ ಈಸ್ಟ್ರೋಜನ್‌ ಉತ್ಪಾದನೆ ಹೆಚ್ಚುತ್ತದೆ. ಹೀಗಾಗಿ ದೇಹದ ಹಾರ್ಮೋನ್ಸ್ ಬೆಳವಣಿಗೆಯ ಸಂಕೇತ ನೀಡುತ್ತದೆ. ಇದರಿಂದ ಓವ್ಯೂಲೇಶನ್‌ ಯಶಸ್ವಿಯಾಗಿ ಮುಂದುವರಿದು, ಗರ್ಭ ಧರಿಸಲು ದಾರಿಯಾಗುತ್ತದೆ. ಇಲ್ಲಿ ಅಗತ್ಯ ಎನಿಸಿದರೆ ಚಿಕಿತ್ಸೆ ಪಡೆಯಬಹುದು. ಔಷಧಿ ಇಂಜೆಕ್ಷನ್‌ ಗಳ ಮೂಲಕ ಬಂಜೆತನ ನಿವಾರಿಸಲಾಗುತ್ತದೆ. ಶಿಸ್ತುಬದ್ಧ ಎಚ್ಚರಿಕೆ ಮತ್ತು ಪಥ್ಯ ಅತಿ ಮುಖ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ