ಆರೋಗ್ಯದ ವಿಷಯವಾಗಿರಬಹುದು ಅಥವಾ ಆಹಾರ ಪದಾರ್ಥಗಳ ಬಗ್ಗೆ ಚರ್ಚೆ ಇರಬಹುದು, ಈಗೀಗ ಸೂಪರ್‌ ಫುಡ್‌ ಶಬ್ದ ಬಹಳಷ್ಟು ಕೇಳಿ ಬರುತ್ತಿದೆ. ಇದೇನಿದು ಸೂಪರ್‌ ಫುಡ್‌? ಸಿನಿಮಾದಲ್ಲಿ ಸೂಪರ್‌ ಮ್ಯಾನ್‌ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವಂತೆ ಸೂಪರ್‌ ಫುಡ್‌ ಸಹ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತದೆಯೇ?

ಅಂದಹಾಗೆ ಸೂಪರ್‌ ಫುಡ್‌ ಯಾವುದೇ ವೈಜ್ಞಾನಿಕ ಶಬ್ದವಲ್ಲ. ಆದರೆ ಸಾಮಾನ್ಯ ಆಹಾರ ಪದಾರ್ಥಗಳ ವಿಶಿಷ್ಟ ಗುಣಗಳು ಕಂಡುಬಂದ ಹಾಗೆಲ್ಲಾ ಕೆಲವು ತಜ್ಞರು ಅವನ್ನು ಸೂಪರ್‌ ಶ್ರೇಣಿಯಲ್ಲಿಡುತ್ತಾರೆ. ಈ ಪದಾರ್ಥಗಳನ್ನು ಸೂಪರ್‌ ಫುಡ್‌ ಎಂದು ಕರೆಯುವುದು ಏಕೆಂದರೆ ಅಗತ್ಯವಾದ ಪೌಷ್ಟಿಕಾಂಶಗಳಲ್ಲದೆ, ಅವುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳೂ ಇವೆ. ಅವು ನಮ್ಮನ್ನು ತಾರುಣ್ಯದಲ್ಲಿ ಇಡುವುದಲ್ಲದೆ ಕ್ಯಾನ್ಸರ್‌ನಂತಹ ಗಂಭೀರ ರೋಗಗಳಿಂದ ರಕ್ಷಿಸುತ್ತವೆ. ಅವುಗಳಲ್ಲಿ ಹೆಲ್ದಿ ಫ್ಯಾಟ್‌ ಇದ್ದು ಹೃದಯರೋಗಗಳಿಂದ ರಕ್ಷಿಸುತ್ತದೆ. ಅವುಗಳಲ್ಲಿ ಫೈಬರ್‌ ಇದ್ದು ಡಯಾಬಿಟೀಸ್‌ ಮತ್ತು ಹೊಟ್ಟೆಯ ಸಮಸ್ಯೆಗಳು ಮಾಯಾಗುತ್ತವೆ. ಅವುಗಳಲ್ಲಿ ಫೈಟೋ ಕೆಮಿಕಲ್ಸ್ ಇದ್ದು ಅವು ನಮಗೆ ರೋಗಗಳು ಬರದಂತೆ ತಡೆಯುತ್ತವೆ.

ಇಲ್ಲಿ ಕೆಲವು ಪ್ರಮುಖ ಸೂಪರ್‌ ಫುಡ್‌ಗಳು ಹಾಗೂ ಅವುಗಳ ವಿಶೇಷತೆಯನ್ನು ಕೊಡಲಾಗಿದೆ. ಈ ಸೂಪರ್‌ ಫುಡ್‌ ನಮ್ಮ ದೇಶದಲ್ಲಿ ಸುಲಭವಾಗಿ ಲಭ್ಯವಿವೆ.

ಬ್ರೌನ್ರೈಸ್

ಇದು ಬಿಳಿ ಅಕ್ಕಿಯ ಅನ್‌ರಿಫೈನ್ಡ್ ರೂಪವಾಗಿದೆ. ಇವುಗಳಲ್ಲಿ ಪ್ರೋಟೀನ್‌ ಥಿಯೆಮೈನ್‌, ಕ್ಯಾಲ್ಶಿಯಂ, ಮೆಗ್ನೀಶಿಯಂ, ಸೆಲೆನಿಯಂ, ಪೊಟ್ಯಾಶಿಯಂ ಮತ್ತು ಫೈಬರ್‌ ಇವೆ. ಡಯಾಬಿಟೀಸ್‌ನ ಅಪಾಯ ಕಡಿಮೆ ಮಾಡಲು ಬ್ರೌನ್‌ ರೈಸ್‌ ಉತ್ತಮ. ಇದರಲ್ಲಿ ಗ್ಲೈಸೆಮಿಕ್‌ ರೇಟ್‌ ಬಹಳ ಕಡಿಮೆ ಇರುತ್ತದೆ. ಇದು ಬ್ಲಡ್‌ ಶುಗರ್‌ನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಲ್ಲಿರುವ ಸೆಲೆನಿಯಂ ಕ್ಯಾನ್ಸರ್‌, ಹೈ ಕೊಲೆಸ್ಟ್ರಾಲ್, ಹೃದಯ ಮತ್ತು ಮೂಳೆಗಳ ತೊಂದರೆಯನ್ನು ಕಡಿಮೆ ಮಾಡುತ್ತವೆ. ಫೈಬರ್‌ನಿಂದ ತುಂಬಿರುವ ಈ ಅಕ್ಕಿ ಬಹಳ ಹೊತ್ತು ನಮ್ಮ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹೀಗಾಗಿ ಅದು ತೂಕ ಕರಗಿಸುವಲ್ಲಿಯೂ ಸಹಾಯವಾಗುತ್ತದೆ. ಕರುಳಿನ ಕ್ಯಾನ್ಸರ್‌ನ ಅಪಾಯ ಕಡಿಮೆ ಮಾಡುತ್ತದೆ. ಕಿಡ್ನಿ ಸ್ಟೋನ್‌ನಲ್ಲೂ ಲಾಭಕಾರಿ. ತಜ್ಞರು ಇದನ್ನು ಬೋರೆ ಮತ್ತು ಇತರೆ ಹಣ್ಣುಗಳೊಂದಿಗೆ ತಿನ್ನಲು ಸಲಹೆ ನೀಡುತ್ತಾರೆ. ಇದರ ಆ್ಯಂಟಿ ಆಕ್ಸಿಡೆಂಟ್‌ ಗುಣಗಳಿಂದ ಶರೀರಕ್ಕೆ ಪೂರ್ಣಾನುಭವ ಸಿಗುತ್ತದೆ.

ಚನ್ನಂಗಿ, ಹೆಸರುಬೇಳೆ ಇತ್ಯಾದಿ ಬೇಳೆಗಳಲ್ಲಿ ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ವಿಟಮಿನ್‌, ಫೈಬರ್‌, ಫಾಸ್ಛರಸ್‌ ಮತ್ತು ಅನೇಕ ಮಿನರಲ್‌ಗಳು ಸಿಗುತ್ತವೆ. ತೊಗರಿಬೇಳೆಯಲ್ಲಿ ವಿಟಮಿನ್‌ ಎ ಮತ್ತು ಬಿ ಇರುತ್ತವೆ. ಅದು ರಕ್ತ, ಕಫ ಮತ್ತು ಪಿತ್ತದ ತೊಂದರೆಗಳನ್ನು ಸರಿಪಡಿಸುತ್ತದೆ. ಉದ್ದಿನಬೇಳೆ ಮಲಬದ್ಧತೆಯನ್ನು ದೂರ ಮಾಡುತ್ತದೆ ಹಾಗೂ ಶಕ್ತಿ ಕೊಡುತ್ತದೆ. ಇದನ್ನು ರುಬ್ಬಿ ಒಡೆದ ಕುರುಗಳ ಮೇಲೂ ಹಚ್ಚಬಹುದು. ಹೆಸರುಬೇಳೆಯಲ್ಲಿ ಫೈಬರ್‌ ಇರುತ್ತದೆ. ಇದು ಸುಲಭವಾಗಿ ಜೀರ್ಣವಾಗುವುದರಿಂದ ರೋಗಿಗಳಿಗೆ ಸಹಾಯವಾಗುತ್ತದೆ. ಇದರ ಹಲ್ವಾ ಸಾಕಷ್ಟು ಶಕ್ತಿ ಕೊಡುತ್ತದೆ. ಇದು ಕಣ್ಣುಗಳಿಗೂ ಉತ್ತಮ. ರಾಜ್ಮಾ ಪ್ರೋಟೀನ್‌ಗಳ ಭಂಡಾರವಾಗಿದೆ. ಇದರಲ್ಲಿ ಐರನ್‌ ಮತ್ತು ವಿಟಮಿನ್‌ ಬಿ9 ವಿಶೇಷ ರೂಪದಲ್ಲಿ ಸಿಗುತ್ತದೆ. ಚನ್ನಂಗಿ ಬೇಳೆ ರಕ್ತವನ್ನು ಸಮೃದ್ಧಗೊಳಿಸುತ್ತದೆ. ಆಹಾರ ರೂಪದಲ್ಲೂ ಚೆನ್ನಾಗಿರುತ್ತದೆ. ಕಡಲೆಕಾಳು ಮಲಬದ್ಧತೆ, ಡಯಾಬಿಟೀಸ್‌, ಜಾಂಡೀಸ್‌ ಮತ್ತು ರಕ್ತದ ಕೊರತೆಗೆ ಒಳ್ಳೆಯದು. ಕಡಲೆಹಿಟ್ಟು ಕೂದಲು ಹಾಗೂ ಚರ್ಮಕ್ಕೂ ಲಾಭಕಾರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ