ಇಂದು ಡೇರಿ ಉತ್ಪಾದನೆಯ ಕ್ಷೇತ್ರದಲ್ಲಿ ಹಲವು ಬಗೆಯ ಪೇಯಗಳು ಲಭ್ಯ. ಹೀಗಾದರೂ ಗಿಡಮೂಲಿಕೆಗಳ ಆಧಾರಿತ ಡೇರಿ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿದೆ. ಸೋಯಾ ಮಿಶ್ರಿತ ಧಾನ್ಯ ಮತ್ತು ಬೀಜಗಳ ಹೊರತಾಗಿ ಈ ಶ್ರೇಣಿಯಲ್ಲಿ ಮತ್ತೊಂದು ಹೊಸ ನಾನ್ ಡೇರಿ ಉತ್ಪನ್ನವಾದ ತೆಂಗಿನ ಹಾಲು ಕೂಡ ಶಾಮೀಲಾಗಿದೆ, ಇದು ರೆಡಿ ಟು ಡ್ರಿಂಕ್ ಆಗಿದೆ. ಈ ಹಾಲಿನ ವೈಶಿಷ್ಟ್ಯ ಎಂದರೆ, ಇದರಲ್ಲಿ ಲ್ಯಾಕ್ಟೋಸ್ ಇರುವುದಿಲ್ಲ. ಜೊತೆಗೆ ತೆಂಗಿನ ಹಾಲಿನಲ್ಲಿ ಹಲವು ಪೋಷಕಾಂಶಗಳು ಲಭ್ಯವಿವೆ ಹಾಗೂ ಇವು ಅತ್ಯಾವಶ್ಯಕ ಪೋಷಕಾಂಶಗಳ ಸ್ರೋತ ಎನಿಸಿದೆ. ಯಾರಿಗೆ ಲ್ಯಾಕ್ಟೋಸ್ ಹೊಂದುವುದಿಲ್ಲವೇ ಅಥವಾ ಹಾಲಿನ ರುಚಿ ಇಷ್ಟವಿಲ್ಲವೇ, ಅಂಥವರು ಈ ತೆಂಗಿನ ಹಾಲನ್ನು ಧಾರಾಳವಾಗಿ ಸೇವಿಸಬಹುದು.
ತಯಾರಿಯ ಪ್ರಕ್ರಿಯೆ
9-10 ತಿಂಗಳ ತಾಜಾ ತೆಂಗಿನಿಂದ ಈ ಹಾಲನ್ನು ಸಿದ್ಧಪಡಿಸಲಾಗುತ್ತದೆ. ಇದಕ್ಕಾಗಿ ಎಲ್ಲಕ್ಕೂ ಮೊದಲು ಹ್ಯಾಂಡ್ ಟೂಲ್ಸ್ ಬಳಸಿ ಕೈಗಳಿಂದ ಅಥವಾ ಯಂತ್ರದಿಂದ ಅದರ ಗಟ್ಟಿ ಭಾಗದ ಹೊರ ಸಿಪ್ಪೆ, ನಾರು ಸುಲಿದಾಗ ಅದು ಚೆಂಡಿನಂತೆ ಕಾಣಿಸುತ್ತದೆ. ಇದರ ಬೀಜಾವರಣ ತೆಗೆದುಹಾಕಲು ಸ್ಕ್ರೇಪರ್ ಬಳಸಲಾಗುತ್ತದೆ, ಅದಕ್ಕಾಗಿ ಇದನ್ನು ಸ್ವಚ್ಛ ನೀರಿನಿಂದ ತೊಳೆಯಾಗುತ್ತದೆ. ನಂತರ ತೆಂಗಿನ ತಿರುಳನ್ನು ತೆಗೆದು ಬಿಸಿ ಹಾಗೂ ತಣ್ಣೀರಿನಲ್ಲಿ ಇರಿಸಲಾಗುತ್ತದೆ, ಆಗ ಸೂಕ್ಷ್ಮಾಣುಗಳ ಸಂಖ್ಯೆ ತಾನಾಗಿ ತಗ್ಗುತ್ತದೆ. ಇದಾದ ಮೇಲೆ ಮೆಶೀನ್ ನೆರವಿನಿಂದ ತಿರುಳನ್ನು ನುಣ್ಣಗೆ ಮಾಡಿ, ಹಾಲನ್ನು ಬೇರ್ಪಡಿಸಲಾಗುತ್ತದೆ, ನಂತರ ತಿಳಿನೀರು ಬೆರೆಸಿ ಇದನ್ನು ತೆಳು ಮಾಡುತ್ತಾರೆ, ಅದು ಗ್ರಾಹಕರ ಬಳಕೆಗೆ ಯೋಗ್ಯ ಆಗುವವರೆಗೆ. ನಂತರ ಇದಕ್ಕೆ ಸಕ್ಕರೆ, ಫುಡ್ ಕಲರ್‌ಬೆರೆಸಲಾಗುತ್ತದೆ. ಆಮೇಲೆ ಈ ಹಾಲನ್ನು ಸೂಕ್ತ ತಾಪಮಾನದಲ್ಲಿ ಬಿಸಿ ಮಾಡಿ ಪ್ಯಾಕ್ ಮಾಡಲಾಗುತ್ತದೆ.
ಈ ತೆಂಗಿನ ಹಾಲನ್ನು ತಯಾರಿಸುವಾಗ ಪಾಶ್ಚರೈಸೇಷನ್ ಹಾಗೂ ಅಲ್ಟ್ರಾ ಹೈ ಟೆಂಪರೇಚರ್ ಟ್ರೀಟ್‌ಮೆಂಟ್ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಎರಡೂ ಪ್ರಕ್ರಿಯೆಗಳಲ್ಲಿ ಪೂರ್ವಾರ್ಧ ಪ್ರಕ್ರಿಯೆಗಳಾದ ಸಿಪ್ಪೆ ಸುಲಿಯುವಿಕೆ, ಕವಚ ತೆಗೆಯುವಿಕೆ, ಮುರಿದು, ತಿರುಳು ಬಿಡಿಸಿ ಹಾಲನ್ನು ಸಿದ್ಧಪಡಿಸುವುದು ಒಂದೇ ಆಗಿರುತ್ತದೆ.
ಪಾಶ್ಚರೈಸೇಷನ್
ಈ ಪ್ರಕ್ರಿಯೆಯಲ್ಲಿ ಹಾಲನ್ನು ಡಬ್ಬಲ್ ಆವರಣದ ಟ್ಯಾಂಕಿನಲ್ಲಿ ಬಿಸಿ ಮಾಡುತ್ತಾರೆ ಹಾಗೂ 10 ನಿಮಿಷಕ್ಕೆ 80 ಡಿಗ್ರಿ ಸೆಂ. ತಾಪಮಾನದಲ್ಲಿ ಕಾಯಿಸುತ್ತಾರೆ. ಬಿಸಿ ಹಾಗೂ ತಣ್ಣಗೆ ಮಾಡಲು ಪಾತ್ರೆಯ ಹೊರ ಮತ್ತು ಒಳ ಆವರಣದ ಮೇಲೆ ಬಿಸಿ ಹಾಗೂ ತಣ್ಣೀರು ಸುರಿಯಲಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ನಡುನಡುವೆ ಹಾಲನ್ನು ನಿಧಾನವಾಗಿ ಅಲುಗಾಡಿಸಿ, ತೆಂಗಿನ ಹಾಲಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಸೂಕ್ತ ತಾಪಮಾನ ಬಳಸಿ ಇನ್ನಿಲ್ಲವಾಗಿಸುತ್ತಾರೆ. ಈ ಫಿಕ್ಸ್ಡ್ ಟೆಂಪರೇಚರ್‌ನಿಂದ ಇದರಲ್ಲಿನ ಯೀಸ್ಟ್, ಬೂಷ್ಟು, ಇತರ ಹಾನಿಕಾರಕ ಬ್ಯಾಕ್ಟೀರಿಯಾಗಳು, ತಾಪ ಪ್ರತಿರೋಧಕ ರೋಗಾಣುಗಳು ಸಹ ನಷ್ಟಗೊಳ್ಳುತ್ತವೆ.
ಅಲ್ಟ್ರಾ ಹೈ ಟೆಂಪರೇಚರ್
ಅಲ್ಟ್ರಾ ಹೈ ಟೆಂಪರೇಚರ್ ಟ್ರೀಟ್‌ಮೆಂಟ್‌ನಲ್ಲಿ ಉತ್ಪಾದನೆಗಾಗಿ 1380-1400 ಸೆಂ.ನಲ್ಲಿ 15 ಕ್ಷಣಗಳ ಕಾಲ ಬಿಸಿ ಮಾಡುತ್ತಾರೆ. ನಂತರ ತಕ್ಷಣ ಅದನ್ನು ಕೋಣೆಯ ತಾಪಮಾನಕ್ಕೆ ಇಳಿಸಲಾಗುತ್ತದೆ. ಇದರ ಪರಿಣಾಮವಾಗಿ, ಉತ್ಪನ್ನದ ಪೋಷಕಾಂಶಗಳನ್ನು ದೀರ್ಘಕಾಲ ಸಂರಕ್ಷಿಸಿಡಲು ಸಾಧ್ಯವಾಗುತ್ತದೆ, ಅದಕ್ಕೆ ತಕ್ಕಂತೆ ಅದರಲ್ಲಿನ ಸೂಕ್ಷ್ಮಾಣುಗಳನ್ನು ನಷ್ಟಪಡಿಸುತ್ತಾರೆ. ಈ ರೀತಿ ಇದು ಸುರಕ್ಷಿತವಾಗುತ್ತದೆ. ಟ್ರೀಟ್‌ಮೆಂಟ್ ಪ್ರಕಾರ, ಗ್ರಾಹಕರು ಆ ಉತ್ಪನ್ನವನ್ನು ತಮ್ಮ ಎಂದಿನ ಕೋಣೆಯ ತಾಪಮಾನದಲ್ಲೇ ಇರಿಸಿ (ಫ್ರಿಜ್ ಬೇಡ) ಕೊಳ್ಳಬಹುದು.