ಫೆಸ್ಟಿವ್ ಸೀಸನ್‌ನಲ್ಲಿ ನಾಲಿಗೆಯನ್ನು ಕಂಟ್ರೋಲ್ ಮಾಡುವುದು ಹರಸಾಹಸವೇ ಸರಿ. ಏಕೆಂದರೆ ಫೆಸ್ಟಿವ್‌ ಮೂಡ್‌ ಜೊತೆಯಲ್ಲೇ ಶಾಪಿಂಗ್‌ ಕೂಡ ಜೋರಾಗಿ ನಡೆಯುತ್ತಿರುತ್ತದೆ. ಹೀಗೆ ಹೊರಗೆ ಹೋದಾಗ ಅಲ್ಲಿನ ಮಾರ್ಕೆಟ್‌ನಲ್ಲಿ ಸ್ನ್ಯಾಕ್ಸ್ ಸವಿಯದೆ ಹಾಗೇ ಹೊರ ಬರಲು ಸಾಧ್ಯವೇ? ಇಂಥ ಆವೇಗದ ಕ್ಷಣಗಳಲ್ಲಿ ನಾವು ಓವರ್‌ ಈಟಿಂಗ್‌ಗೆ ಬಲಿಯಾಗುತ್ತೇವೆ. ಇದು ಹಬ್ಬಗಳ ಸಂದರ್ಭದಲ್ಲಿ ತೂಕ ಹೆಚ್ಚಿಸುವುದಷ್ಟೇ ಅಲ್ಲ ಬದಲಿಗೆ ಹೊಟ್ಟೆ ನೋವು, ಅಸಿಡಿಟಿ ಮುಂತಾದ ಸಮಸ್ಯೆಗಳನ್ನೂ ತಂದೊಡ್ಡುತ್ತದೆ.  ಇದು ಹಬ್ಬಗಳ ಸಡಗರ ಸಂಭ್ರಮ ತಗ್ಗಿಸಿ ವಾತಾವರಣ ಡಲ್ ಆಗಿಸುತ್ತದೆ. ಆದ್ದರಿಂದ ಈ ಸಲಹೆಗಳನ್ನು ಅಗತ್ಯ ಅನುಸರಿಸಿ :

ನಿಂಬೆ ಪಾನಕದಿಂದ ಹಬ್ಬದ ಆರಂಭ : ಪ್ರತಿಯೊಬ್ಬರೂ ತಮ್ಮನ್ನು ತಾವು ಫಿಟ್‌ ಆಗಿರಿಸಿಕೊಳ್ಳಲು ಬಯಸುತ್ತಾರೆ. ಅದರಲ್ಲೂ ಮುಖ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಆಕರ್ಷಕ ಕೇಂದ್ರಬಿಂದು ಆಗಿರಲು ಬಯಸುತ್ತಾರೆ. ಹೀಗಾಗಿ ಲೆಮನ್‌ ವಾಟರ್‌ ಈ ನಿಟ್ಟಿನಲ್ಲಿ ನಿಮಗೆ ಹೆಚ್ಚು ಪೂರಕ. ಅದು ನಿಮ್ಮ ದೇಹವನ್ನು ಡೀಟಾಕ್ಸ್ ಮಾಡುತ್ತದೆ. ಇದರಿಂದ ದೇಹದ ವಿಷ ಪದಾರ್ಥಗಳು ಹೊರಹೋಗುವುದರಿಂದ, ಮೆಟಬಾಲಿಸಂ ಸ್ಟ್ರಾಂಗ್‌ ಆಗುತ್ತದೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಮುಕ್ತಿ ಸಿಗುತ್ತದೆ.

ಬ್ರೇಕ್‌ಫಾಸ್ಟ್ ಲೋ ಕ್ಯಾಲೋರಿಯದಾಗಿರಲಿ : ದೇಹ ಚಟುವಟಿಕೆಯಿಂದ ಕೂಡಿರಲು ನಮಗೆ ಆಹಾರದ ಇಂಧನ ಬೇಕೇ ಬೇಕು. ಅದು ನಾವು ಸೇವಿಸುವ ಆಹಾರವನ್ನು ಆಧರಿಸಿದೆ. ಹೀಗಾಗಿ ನೀವು ಬ್ರೇಕ್‌ಫಾಸ್ಟ್ ಗೆ ಕಾರ್ಬೊಹೈಡ್ರೇಟ್ಸ್ ಗಿಂತ ಹೆಚ್ಚಾಗಿ ಪ್ರೋಟೀನ್ಸ್ಗೆ ಮಹತ್ವ ಕೊಟ್ಟು ಅದನ್ನು ಹೆಚ್ಚಾಗಿ ಸೇವಿಸಿ. ಏಕೆಂದರೆ ಬ್ರೇಕ್‌ಫಾಸ್ಟ್ ಪ್ರೋಟೀನ್‌ರಿಚ್‌ ಆಗಿರುವುದರಿಂದ ನಿಮ್ಮನ್ನು ಪರಿಪೂರ್ಣ ಆರೋಗ್ಯಕರವಾಗಿ ಇಡುವುದಲ್ಲದೆ ನಿಮಗೆ ಬಹಳ ಹೊತ್ತು ಹೊಟ್ಟೆ ಭರ್ತಿ ಆಗಿರುವಂತೆ ಅನುಭವ ಕೊಡುತ್ತದೆ. ಹೀಗಾಗಿ ನಿಮ್ಮ ಬ್ರೇಕ್‌ಫಾಸ್ಟ್ ನಲ್ಲಿ ಮೊಳಕೆಕಾಳು, ಹಾಲು, ಮೊಟ್ಟೆ ಮುಂತಾದವು ಇರಲಿ.

ಫೈಬರ್‌ ತುಂಬಿದ ಲಂಚ್‌ ಇರಲಿ : ಹಬ್ಬದ ನೆಪ ಮಾಡಿಕೊಂಡು ನಾವು ಹೆಚ್ಚು ಹೆಚ್ಚಾಗಿ ಕರಿದ ತಿನಿಸು, ಸಿಹಿ ಸೇವಿಸುತ್ತೇವೆ. ಇದರಿಂದ ಸಹಜವಾಗಿಯೇ ತೂಕ ಹೆಚ್ಚುತ್ತದೆ. ಜೊತೆಗೆ ಹೊಟ್ಟೆಯ ಸಮಸ್ಯೆಗಳೂ ಹೆಚ್ಚುತ್ತವೆ. ಹೀಗಾಗಿ ನೀವು ಲಂಚ್‌ಗೆ ಹೆಚ್ಚು ಫೈಬರ್‌ಯುಕ್ತ ರಿಚ್‌ ಫುಡ್‌ ಸೇವಿಸಬೇಕು. ಅಂದ್ರೆ ಓಟ್ಸ್, ಮೊಳಕೆಕಾಳು, ತಾಜಾ ಹಸಿರು ತರಕಾರಿ, ಹಣ್ಣು ಇತ್ಯಾದಿ ಸೇವಿಸಿ. ಇವನ್ನು ಜೀರ್ಣಿಸಿಕೊಳ್ಳುವುದೂ ಸುಲಭ. ಜೊತೆಗೆ ಮಲಬದ್ಧತೆಯ ಸಮಸ್ಯೆಗೂ ಪರಿಹಾರವಾಗಿದೆ.

ಚಹಾಕಾಫಿ ಬದಲು ಗ್ರೀನ್‌ ಟೀ : ಬಹಳ ಹೆಚ್ಚು ಬಿಝಿ ಶೆಡ್ಯೂಲ್ ಇರುವ ಕಾರಣ, ನಾವು ಸುಸ್ತಿನಿಂದ ಮುಕ್ತಿ ಹೊಂದಲು ಆಗಾಗ ಕಾಫಿಟೀ ಕುಡಿಯುತ್ತಿರುತ್ತೇವೆ. ನಮಗೆ ಅಸಿಡಿಟಿ ಸಮಸ್ಯೆ ಜೊತೆಗೆ ಇದು ನಮ್ಮ ಪಚನಕ್ರಿಯೆ ಹಾಳಾಗುವಂತೆಯೂ ಮಾಡುತ್ತದೆ. ಆದ್ದರಿಂದ ನೀವು ಈ ಚಹಾಕಾಫಿ ಬದಲು ಗ್ರೀನ್‌ ಟೀ ಸೇವಿಸಿ. ಇದರಲ್ಲಿ ಧಾರಾಳ ಆ್ಯಂಟಿ ಆಕ್ಸಿಡೆಂಟ್ಸ್ ಗುಣಗಳಿದ್ದು, ಇದು ರೋಗಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.

ಈವ್ನಿಂಗ್‌ ಸ್ನ್ಯಾಕ್ಸ್ ಹೆಲ್ದಿ ಆಗಿರಲಿ : ಪ್ರತಿಯೊಬ್ಬರಿಗೂ ಸಂಜೆ ಆಗುತ್ತಿದ್ದಂತೆ ಏನಾದರೂ ಕುರುಕಲು ತಿಂಡಿ ತಿನ್ನಬೇಕು ಎನಿಸುತ್ತದೆ. ಹೀಗಾಗಿ ಮಧ್ಯಾಹ್ನ ಹೆವಿ ಲಂಚ್‌ ಆಗಿದ್ದರೆ ಸಂಜೆಯ ತಿಂಡಿಗೂ ಸಹ ಕರಿದ ತಿನಿಸುಗಳಾದ ಕಜ್ಜಾಯ, ಕರ್ಜಿಕಾಯಿ, ಸಮೋಸಾ, ನಿಪ್ಪಟ್ಟು ಇತ್ಯಾದಿ ಸೇವಿಸಿದರೆ ಬೆಳಗ್ಗೆಯಿಂದ ನೀವು ಮಾಡಿದ ಡಯೆಟ್‌ ವ್ಯರ್ಥವಾಗುತ್ತದೆ. ಹೀಗಾಗಿ ನೀವು ಹುರಿದ ಕಡಲೆಬೀಜ, ಗೋಡಂಬಿ, ಬಾದಾಮಿ, ಫ್ರೂಟ್ಸ್ ಇತ್ಯಾದಿ ಸೇವಿಸಿ. ಇದರಿಂದ ನಿಮಗೆ ಹೊಟ್ಟೆ ತುಂಬಿದಂತೆನಿಸುತ್ತದೆ, ಟಮಿ ಫಿಟ್‌ ಆಗಿಯೂ ಇರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ