ಪ್ರತಿಯೊಬ್ಬ ಮಹಿಳೆ ತನ್ನ ಕುಟುಂಬದ ಆರೋಗ್ಯ ಕಾಪಾಡುವ ಸಕಲ ಪ್ರಯತ್ನ ಮಾಡುತ್ತಾಳೆ. ಆದರೆ ಆಕೆ ತನ್ನ ಆರೋಗ್ಯದ ಬಗ್ಗೆ ಮಾತ್ರ ನಿರ್ಲಕ್ಷ್ಯ ತೋರುತ್ತಾಳೆ. ಒಳ್ಳೆಯ ಆರೋಗ್ಯಕ್ಕೆ ಅದೆಷ್ಟೋ ಸಂಗತಿಗಳಿದ್ದು, ಅವುಗಳ ಬಗ್ಗೆ ಅಜಾಗರೂಕತೆ ತೋರಿಸಬಾರದು.

ಯೀಸ್ಟ್ ಇನ್ಫೆಕ್ಷನ್‌ : ವೈದ್ಯಕೀಯ ವಿಜ್ಞಾನದ ಸಮೀಕ್ಷೆಗಳ ಪ್ರಕಾರ, ಶೇ.95ರಷ್ಟು ಮಹಿಳೆಯರು ಜೀವನದಲ್ಲಿ ಒಂದಲ್ಲ ಒಂದು ಬಾರಿ ಈ ಸಮಸ್ಯೆಗೆ ಸಿಲುಕುತ್ತಾರೆ.

ಲಕ್ಷಣಗಳು : ಜೈನಾ ಭಾಗದಲ್ಲಿ ತುರಿಕೆ, ಉರಿ, ಬಿಳಿ ಬಣ್ಣದ ಗಾಢ ದ್ರವ ಸ್ರಾವ, ಸ್ಕಿನ್‌ ರಾಶೆಸ್‌, ಊತ, ಮೇಲಿಂದ ಮೇಲೆ ಮೂತ್ರಕ್ಕೆ ಹೋಗಬೇಕೆನ್ನುವುದು ಹಾಗೂ ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ನೋವುಂಟಾಗುವುದು.

ಕಾರಣಗಳು : ಯೀಸ್ಟ್, ವಜೈನಾದಲ್ಲಿ ಹಲವು ಕಾರಣಗಳಿಂದಾಗಿ ಸಕ್ರಿಯಗೊಂಡಿರುತ್ತದೆ. ಉದಾಹರಣೆಗೆ ಅಪೌಷ್ಟಿಕತೆ, ನಿದ್ರಾಹೀನತೆ, ಅತಿಯಾಗಿ ಆ್ಯಂಟಿಬಯಾಟಿಕ್‌ ಗಳನ್ನು ಸೇವಿಸುವುದು, ನೈಲಾನ್‌ ಅಥವಾ ಲೈಕ್ರಾದ ಒಳ ಉಡುಪುಗಳನ್ನು ಧರಿಸುವುದು, ಗರ್ಭಾವಸ್ಥೆಯಲ್ಲಿ ಮಧುಮೇಹ, ಗರ್ಭನಿರೋಧಕ ಮಾತ್ರೆಗಳ ಸತತ ಸೇವನೆ ಮತ್ತು ಅತಿಯಾದ ಹುಳಿ ಪದಾರ್ಥಗಳ ಸೇವನೆ.

ರಕ್ಷಣೆ : ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಕೊಡಿ. ಸ್ವಿಮ್ಮಿಂಗ್‌ ಬಳಿಕ ತಡ ಮಾಡದೆಯೇ ಸ್ನಾನ ಮಾಡಿ ಬಟ್ಟೆ ಬದಲಿಸಿ. ಹತ್ತಿಯ ಸಡಿಲವಾದ ಉಡುಪುಗಳನ್ನೇ ಧರಿಸಿ. ವೈದ್ಯರ ಸಲಹೆಯಿಲ್ಲದೆ, ಆ್ಯಂಟಿಬಯಾಟಿಕ್‌ ಗಳನ್ನು ಸೇವಿಸಬೇಡಿ. ನೀವು ಮಧುಮೇಹಿಗಳಾಗಿದ್ದಲ್ಲಿ, ರಕ್ತದಲ್ಲಿನ ಸಕ್ಕರ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಇದಕ್ಕಾಗಿ ತಜ್ಞರ ಸಲಹೆ ಪಡೆಯಿರಿ.

ಯೂರಿನ್ಲೀಕ್ಆಗುವುದು : ಈ ಸಮಸ್ಯೆಗೆ ತುತ್ತಾದ ಸ್ತ್ರೀ ನಗುವಾಗ, ಕೆಮ್ಮುವಾಗ, ಸೀನುವಾಗ ಅಥವಾ ವ್ಯಾಯಾಮ ಮಾಡುವ ಸಂದರ್ಭದಲ್ಲಿ ಮೂತ್ರ ಸೋರಿಕೆ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಪ್ರಸವದ ಬಳಿಕ ಮೂತ್ರ ಜನಕಾಂಗಕ್ಕೆ ಸಪೋರ್ಟ್‌ ಮಾಡುವ ಪೆಲ್ವಿಕ್‌ ಪ್ಲೇರ್‌ ಮಸಲ್ಸ್ ಬಿಗುವು ಕಳೆದುಕೊಳ್ಳುವುದರಿಂದ ತಲೆದೋರುತ್ತದೆ.

ರಕ್ಷಣೆ : ಸಾಮಾನ್ಯವಾಗಿ ಹೆರಿಗೆಯಾದ 6-7 ತಿಂಗಳ ಬಳಿಕ ಈ ಸಮಸ್ಯೆ ತಂತಾನೆ ಸರಿಹೋಗುತ್ತದೆ. ಏಕೆಂದರೆ ಪೆಲ್ವಿಕ್‌ ಪ್ಲೇರ್ ಮಸಲ್ಸ್ ತಂತಾನೇ ಬಿಗುವು ಪಡೆದುಕೊಳ್ಳುತ್ತವೆ. ಆಗಲೂ ಈ ಸಮಸ್ಯೆ ಸರಿಹೋಗದಿದ್ದರೆ ಕೇಜಲ್ ಎಕ್ಸರ್‌ ಸೈಜ್‌ ನಿಮಗೆ ನೆರವಾಗುತ್ತದೆ. ಇದರಿಂದ ಯೋನಿಯ ಸ್ನಾಯುಗಳ ಟೋನಿಂಗ್‌ ಆಗುತ್ತದೆ. ತೀಕ್ಷ್ಣ ಹಾಗೂ ಮಸಾಲೆಯುಕ್ತ ಆಹಾರ, ಚಹಾ/ಕಾಫಿ, ಚಾಕ್ಲೇಟ್‌ ಹಾಗೂ ಅಸಿಡಿಕ್‌ ಫ್ರೂಟ್‌ ಹಾಗೂ ಹಾಲಿನ ಪದಾರ್ಥಗಳನ್ನು ಸೇವಿಸಬೇಡಿ.

ಯುಟಿಐ : ಸ್ತ್ರೀಯರ ದೈಹಿಕ ರಚನೆ ಈ ಯೂರಿನರಿ ಟ್ರಾಕ್‌ ಇನ್‌ ಫೆಕ್ಷನ್‌ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಬೊವೆಲ್‌ ಹಾಗೂ ವಜೈನಾದ ಆಸುಪಾಸಿನಲ್ಲಿರುವ ಬ್ಯಾಕ್ಟೀರಿಯಾಗಳು ಯುರೇಥ್ರಾದ ದಾರಿಯಲ್ಲಿ ಬ್ಲ್ಯಾಡರ್‌ ಅಥವಾ ಯೂರಿನರಿ ಟ್ರ್ಯಾಕ್‌ ನ ಇನ್ನೊಂದು ಬದಿಗೆ ತಲುಪುತ್ತವೆ. ಈ ಕಾರಣದಿಂದಾಗಿ ಯುಟಿಐ ಸಮಸ್ಯೆ ಉಂಟಾಗುತ್ತದೆ. ಸಮಾಗಮದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನಕೊಡದೇ ಇರುವುದೂ ಇದಕ್ಕೆ ಕಾರಣ. ಮೂತ್ರದ ಒತ್ತಡವನ್ನು ಬಹಳ ಹೊತ್ತಿನತನಕ ತಡೆದುಕೊಳ್ಳುವುದರಿಂದ ಮೂತ್ರಾಶಯ ಸ್ನಾಯುಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದಾಗಿ ಅವು ದುರ್ಬಲಗೊಳ್ಳುತ್ತವೆ. ಹಾಗಾಗಿ ಯುಟಿಐನ ಸಮಸ್ಯೆ ಸೃಷ್ಟಿಯಾಗುತ್ತದೆ. ಗರ್ಭಾವಸ್ಥೆ ಮತ್ತು ಮಧುಮೇಹ ಕೂಡ ಯುಟಿಐಗೆ ಕಾರಣವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ