`ಹೆಲ್ತ್ ಈಸ್ ವೆಲ್ತ್' ಎನ್ನುವುದು ಬರಿ ಒಂದು ಹೇಳಿಕೆಯಷ್ಟೇ ಅಲ್ಲ, ಬದುಕಿನ ವಾಸ್ತವವಾಗಿದೆ. ಮಹಿಳೆ ಕುಟುಂಬವೆಂಬ ಗಾಡಿಯ ಅಚ್ಚು. ಅಂದರೆ ಯಾವುದೇ ಮಹಿಳೆ ಫಿಟ್ ಅಂಡ್ ಫೈನ್ ಆಗಿದ್ದಾಗಲೇ ಅವಳ ಕುಟುಂಬ ಸಂತೋಷವಾಗಿ ಮತ್ತು ಆರೋಗ್ಯವಾಗಿರುತ್ತದೆ.
ಒಬ್ಬ ಸ್ವಸ್ಥ ಮಹಿಳೆ ಉತ್ತಮ ರೀತಿಯಿಂದ ತನ್ನ ಕುಟುಂಬವನ್ನು ನೋಡಿಕೊಳ್ಳುವುದಲ್ಲದೆ, ಇಡೀ ಮನೆಯನ್ನು ಪಾಸಿಟಿವ್ ಎನರ್ಜಿಯಿಂದ ತುಂಬಿಸಿಡುತ್ತಾಳೆ.
ಮಹಿಳೆ ಸಾಮಾನ್ಯವಾಗಿ ಮನೆಯ ಎಲ್ಲಾ ಸದಸ್ಯರನ್ನು ಚೆನ್ನಾಗಿ ಗಮನಿಸುತ್ತಾಳೆ. ಆದರೆ ತನಗಾಗಿ ಸಮಯ ಇಟ್ಟುಕೊಳ್ಳುವುದಿಲ್ಲ. ತನ್ನ ಊಟ, ತಿಂಡಿ ಅಥವಾ ವಿಶ್ರಾಂತಿಯ ಬಗ್ಗೆ ಗಮನಿಸುವುದಿಲ್ಲ. ಸಣ್ಣಪುಟ್ಟ ಕಾಯಿಲೆಗಳನ್ನೂ ಅಲಕ್ಷಿಸುತ್ತಾಳೆ. ಇದರಿಂದಾಗಿ ಅವಳು ನಿಧಾನವಾಗಿ ಅಶಕ್ತಳೂ, ಸಿಡುಕುವವಳೂ ಆಗುತ್ತಾಳೆ. ಮುಂದೆ ಅವಳು ಇಷ್ಟಪಟ್ಟರೂ ತನ್ನ ಹೊಣೆಗಾರಿಕೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲಾಗುವುದಿಲ್ಲ. ಇದರ ಪರಿಣಾಮ ಇಡೀ ಕುಟುಂಬದ ಸಂತೋಷ ಮತ್ತು ಆರೋಗ್ಯದ ಮೇಲೆ ಉಂಟಾಗುತ್ತದೆ.
ಈ ಸ್ಥಿತಿಯಿಂದ ಪಾರಾಗಲು ಮಹಿಳೆಯರು ತಮ್ಮ ಬಗ್ಗೆ ಗಮನಿಸಿಕೊಳ್ಳಬೇಕು. ಏಕೆಂದರೆ ಅವರು ಫಿಟ್ ಆಗಿದ್ದಾಗಲೇ ಇಡೀ ಕುಟುಂಬಕ್ಕೆ ಸಂತಸಗಳ ಉಡುಗೊರೆ ನೀಡಬಲ್ಲರು.
ಆರೋಗ್ಯದ ಕಡೆ ಗಮನ
ಮಹಿಳೆಯರು ತಮ್ಮ ಬಾಹ್ಯ ಸೌಂದರ್ಯಕ್ಕೆ ಕಾಂತಿ ತರಲು ಯಾವಾಗಲೂ ಹೊಸ ಹೊಸ ಫ್ಯಾಷನ್ ನ ಬಟ್ಟೆಗಳು, ಒಡವೆಗಳು ಮತ್ತು ಸೌಂದರ್ಯ ಪ್ರಸಾಧನಗಳತ್ತ ಕಣ್ಣು ಹಾಯಿಸುತ್ತಾರೆ. ಆದರೆ ಅವರು ತಮ್ಮ ಆರೋಗ್ಯದ ಬಗ್ಗೆ ಗಮನಿಸುವುದು ಅಗತ್ಯವಲ್ಲವೇ? ಒಳಗಿನ ಫಿಟ್ ನೆಸ್ ನ ಪ್ರಭಾವವೇ ವ್ಯಕ್ತಿತ್ವವನ್ನು ತೋರಿಸುತ್ತದೆ.
ನಿಯಮಿತವಾಗಿ ಚೆಕಪ್ ಮಾಡಿಸಿ
ವೇಟ್ ಕಂಟ್ರೋಲ್ : ಡಯಾಬಿಟೀಸ್, ಹಾರ್ಟ್ ಅಟ್ಯಾಕ್, ಜಾಯಿಂಟ್ ಪೇನ್ ನಂತಹ ಸಮಸ್ಯೆಗಳು ಸ್ಥೂಲತೆಯಿಂದಲೇ ಉಂಟಾಗುತ್ತವೆ. ಆದ್ದರಿಂದ ಫಿಟ್ ಹಾಗೂ ಹೆಲ್ದಿಯಾಗಿರಲು ವೇಟ್ ನ್ನು ನಿಯಂತ್ರಿಸಿ. ವಿಶೇಷವಾಗಿ 40ರ ನಂತರ ತೂಕ ಹೆಚ್ಚದಂತೆ ನೋಡಿಕೊಳ್ಳಿ. ನಿಯಮಿತವಾಗಿ ತೂಕ ಪರೀಕ್ಷೆ ಮಾಡಿಕೊಳ್ಳುತ್ತಿರಿ.
ಬ್ಲಡ್ ಪ್ರೆಷರ್ : ಬಿ.ಪಿ. ಹೆಚ್ಚಾದರೆ ಮೆದುಳು, ಕಣ್ಣುಗಳು, ಹೃದಯ ಪ್ರಭಾವಿತಗೊಳ್ಳುತ್ತವೆ. ಬಿ.ಪಿ. ಕಡಿಮೆಯಾಗುವುದೂ ಬಲಹೀನತೆಯಿಂದಾಗಿ. ಆದ್ದರಿಂದ ನಿಯಮಿತವಾಗಿ ಬಿ.ಪಿ. ಚೆಕ್ ಮಾಡಿಸಿಕೊಳ್ಳಿ.
ಕೊಲೆಸ್ಟ್ರಾಲ್ ಪ್ರೊಫೈಲ್ : ಕನಿಷ್ಠ 3-4 ವರ್ಷಗಳಿಗೊಮ್ಮೆ ಕೊಲೆಸ್ಟ್ರಾಲ್ ಲೆವೆಲ್ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಏಕೆಂದರೆ ಅಧಿಕ ಕೊಲೆಸ್ಟ್ರಾಲ್ ಲೆವೆಲ್ ಹಾರ್ಟ್ ಅಟ್ಯಾಕ್ ಗೆ ಕಾರಣವಾಗುತ್ತದೆ. 2 ವರ್ಷಗಳಿಗೊಮ್ಮೆ ಫಾಸ್ಟಿಂಗ್ ಬ್ಲಡ್ ಶುಗರ್ ಟೆಸ್ಟ್ ಕೂಡ ಅಗತ್ಯ.
ಬ್ರೆಸ್ಟ್ ಎಗ್ಸಾಮಿನೇಶನ್ : ಬ್ರೆಸ್ಟ್ ಕ್ಯಾನ್ಸರ್ ಸಮಸ್ಯೆ ಮಹಿಳೆಯರಲ್ಲಿ ಒಂದೇ ಸಮನೆ ಹೆಚ್ಚುತ್ತಿದೆ. ಇದನ್ನು ಆರಂಭದಲ್ಲೇ ಪತ್ತೆ ಮಾಡಿಕೊಂಡರೆ ಚಿಕಿತ್ಸೆ ಸಾಧ್ಯವಿದೆ. ಆದ್ದರಿಂದ ಅದನ್ನು ಆಗಾಗ್ಗೆ ನೀವೇ ಪರೀಕ್ಷಿಸಿಕೊಳ್ಳಿ ಅಥವಾ 1-2 ವರ್ಷಕ್ಕೊಮ್ಮೆ ಲೇಡಿ ಡಾಕ್ಟರ್ ಮೂಲಕ ಬ್ರೆಸ್ಟ್ ಎಗ್ಸಾಮಿನೇಷನ್ ಅಗತ್ಯವಾಗಿ ಮಾಡಿಸಿಕೊಳ್ಳಿ. 40-45ರ ನಂತರ ಪ್ರತಿವರ್ಷ ಮೆಮೋಗ್ರಾಮ್ ಮಾಡಿಸಿಕೊಳ್ಳುವುದು ಒಳ್ಳೆಯದು.
ಪೆಲ್ವಿಕ್ ಎಗ್ಸಾಮಿನೇಶನ್/ಪೆಪ್ ಸ್ಮಿಯರ್ : ಸರ್ವೈಕಲ್ ಕ್ಯಾನ್ಸರ್ ಮತ್ತು ಇನ್ ಫರ್ಟಿಲಿಟಿಯಂತಹ ಸಮಸ್ಯೆಗಳ ಬಗ್ಗೆ ಸದಾ ಜಾಗರೂಕರಾಗಿರಬೇಕು. 2-3 ವರ್ಷಗಳಿಗೊಮ್ಮೆ ಈ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.
ಸ್ಕಿನ್ ಚೆಕಪ್ : ಸ್ಕಿನ್ ಬಗ್ಗೆ ನಿರ್ಲಕ್ಷ್ಯ ಬೇಡ. ಪ್ರತಿ 3 ವರ್ಷಗಳಿಗೊಮ್ಮೆ ಪರೀಕ್ಷೆ ಮಾಡಿಸಿ. ಏನಾದರೂ ಅಸಹಜ ಸ್ಕಿನ್ ಚೇಂಜಸ್ ಇದೆಯೇ ಎಂದು ಡಾಕ್ಟರ್ ಹೇಳುತ್ತಾರೆ.
ಕಣ್ಣುಗಳ ಚೆಕಪ್ : ನಿಮ್ಮ ಕಣ್ಣುಗಳ ಆರೋಗ್ಯದ ಬಗ್ಗೆಯೂ ಗಮನಹರಿಸಿ. ದೃಷ್ಟಿ ಕಡಿಮೆ ಇದ್ದರೆ ಕನ್ನಡಕ ಅಥವಾ ಲೆನ್ಸ್ ಧರಿಸಲು ಹೆದರದಿರಿ. ವಯಸ್ಸು ಹೆಚ್ಚಾದಂತೆ ಗ್ಲಾಕೋಮಾ ಇತ್ಯಾದಿ ಪರೀಕ್ಷೆ ಅಗತ್ಯ.
ಹಲ್ಲುಗಳ ಚೆಕಪ್ : ಕನಿಷ್ಠ ವರ್ಷಕ್ಕೊಮ್ಮೆ ಡೆಂಟಿಸ್ಟ್ ರಿಂದ ಹಲ್ಲುಗಳ ಪರೀಕ್ಷೆ ಮಾಡಿಸಿಕೊಳ್ಳಿ.
ಮಾನಸಿಕ ಸ್ವಾಸ್ಥ್ಯ : ಅನೇಕ ಬಾರಿ ಮಹಿಳೆಯರಿಗೆ ನಿಶ್ಶಕ್ತರಾದಂತೆ ಮತ್ತು ಆಯಾಸಗೊಂಡವರಂತೆ ಅನಿಸುತ್ತದೆ. ಇದು ಮಾನಸಿಕ ರೂಪದ ಕಾಯಿಲೆಯಿಂದ ಅಥವಾ ಡಿಪ್ರೆಶನ್ ನಿಂದ ಉಂಟಾಗುತ್ತದೆ.
ಡಬ್ಲ್ಯೂಎಚ್ಓನ ಒಂದು ಊಹೆಯಂತೆ ಪ್ರತಿ ಐವರಲ್ಲಿ ಒಬ್ಬ ಮಹಿಳೆ ಮತ್ತು ಪ್ರತಿ 12ರಲ್ಲಿ ಒಬ್ಬ ಪುರುಷ ಡಿಪ್ರೆಶನ್ ಗೆ ಬಲಿಯಾಗುತ್ತಾರೆ. ಅಧಿಕ ದೈಹಿಕ ಶ್ರಮ, ಗಂಡ ಮತ್ತು ಮನೆಯವರ ಅವಹೇಳನ, ಆಫೀಸ್ ನಲ್ಲಿ ಹೆಚ್ಚುತ್ತಿರುವ ಸ್ಪರ್ಧೆ, ಬೇರಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ತೊಂದರೆಗಳು. ಇದರಿಂದ ತಲೆನೋವು, ನಿದ್ದೆಬಾರದಿರುವುದು, ಚಿಂತೆ, ಸಿಡುಕು, ಸುಸ್ತು ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಯಾವ ಕೆಲಸ ಮಾಡುವುದಕ್ಕೂ ಮನಸ್ಸಾಗುವುದಿಲ್ಲ. ಜೀವನೋತ್ಸಾಹ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆ ಬಯಸಿದರೂ ತನ್ನ ಗಂಡ ಹಾಗೂ ಮಕ್ಕಳ ಯೋಗಕ್ಷೇಮ ಸರಿಯಾಗಿ ಗಮನಿಸುವುದಿಲ್ಲ. ಇದರ ಪರಿಣಾಮ ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಾಸ ಮತ್ತು ಗಂಡನ ಆರೋಗ್ಯದ ಮೇಲೆ ಉಂಟಾಗುತ್ತದೆ. ಆದ್ದರಿಂದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಮಹಿಳೆಯರು ತಮ್ಮ ಮಾನಸಿಕ ಆರೋಗ್ಯವನ್ನೂ ನೋಡಿಕೊಳ್ಳಬೇಕು.
ನೀವು ತೆಗೆದುಕೊಳ್ಳುವ ಆಹಾರದ ಪ್ರಭಾವ ನಿಮ್ಮ ಎನರ್ಜಿ ಲೆವೆಲ್ ಮತ್ತು ಫಿಸಿಕಲ್ ಹೆಲ್ತ್ ನ ಜೊತೆಜೊತೆಗೆ ನಿಮ್ಮ ಮೂಡ್ ಮೇಲೆ ಬೀಳುತ್ತದೆ. ಪೌಷ್ಟಿಕ ಮತ್ತು ಸಮತೋಲನ ಆಹಾರದಿಂದ ನಿಮಗೆ ಮಾನಸಿಕ ಸ್ವಾಸ್ಥ್ಯ ಉಂಟಾಗುತ್ತದೆ.
ಬಹಳಷ್ಟು ವಿಟಮಿನ್ ಗಳು ಮತ್ತು ಮಿನರಲ್ ಗಳು ಡಿಪ್ರೆಶನ್ ದೂರ ಮಾಡುತ್ತವೆ. ವಿಟಮಿನ್ ಬಿ12, ಕ್ಯಾಲ್ಶಿಯಂ, ಐರನ್, ಸೆಲೆನಿಯಂ, ಝಿಂಕ್, ಒಮೆಗಾ3 ಇತ್ಯಾದಿಗಳ ಕೊರತೆ ನೂತನ ತಾಯಂದಿರಲ್ಲಿ ಡಿಪ್ರೆಶನ್ ಉಂಟುಮಾಡುತ್ತದೆ.
ವರ್ಕ್ ಔಟ್ ಮಾಡಿ. ಅದರಿಂದ ನಿಮ್ಮ ಶರೀರದಲ್ಲಿ ಕೆಲವು ವಿಶೇಷ ರಸಾಯನಗಳು ಉತ್ಪತ್ತಿಯಾಗಿ ಒತ್ತಡ ಕಡಿಮೆ ಮಾಡುತ್ತದೆ.
ನಿಮಗಾಗಿ ಸಮಯ ಮೀಸಲಿಡಿ. ಪ್ರತಿದಿನ ಕನಿಷ್ಠ 15 ನಿಮಿಷ ಡ್ಯಾನ್ಸಿಂಗ್, ಸಿಂಗಿಂಗ್, ಪೇಂಟಿಂಗ್, ಗಾರ್ಡನಿಂಗ್, ರೈಟಿಂಗ್ಇತ್ಯಾದಿ ನಿಮಗಿಷ್ಟವಾದ ಸಂತಸ ನೀಡುವ ಕೆಲಸಗಳನ್ನು ಮಾಡಿ.
ಸ್ನೇಹಿತರೊಂದಿಗೆ ನಿಮ್ಮ ಸಂತೋಷ ಹಾಗೂ ದುಃಖವನ್ನು ಹಂಚಿಕೊಳ್ಳಿ. ಇದರಿಂದ ಮನಸ್ಸು ಹಗುರವಾಗುತ್ತದೆ.
ಕೊಂಚ ಸಮಯ ನಗಲು ಮೀಸಲಿಡಿ ಯಾರೊಂದಿಗಾದರೂ ಮಾತಾಡುವಾಗ ಮುಗುಳ್ನಗೆಯನ್ನು ಹೊಮ್ಮಿಸಿ. ಇದರಿಂದ ಇಮ್ಯೂನ್ ಸಿಸ್ಟಂ ಸದೃಢವಾಗುತ್ತದೆ ಮತ್ತು ಒತ್ತಡದ ದುಷ್ಪ್ರಭಾವ ಕಡಿಮೆಯಾಗುತ್ತದೆ.
ನಿಮಗಿಷ್ಟವಾದ ಮ್ಯೂಸಿಕ್ ಕೇಳಿ. ಮೆಂಟಲ್ ಹೆಲ್ತ್ ಸಮಸ್ಯೆ ಇರುವವರಿಗೆ ಇದೊಂದು ಪಾಸಿಟಿವ್ ಟ್ರೀಟ್ ಮೆಂಟ್ ಆಗಿದೆ. ಮ್ಯೂಸಿಕ್ ನೋವು ಮತ್ತು ಒತ್ತಡ ಕಡಿಮೆ ಮಾಡಿ ಮೆದುಳನ್ನು ಪ್ರಫುಲ್ಲಿತಗೊಳಿಸುತ್ತದೆ.
ಹೈಜೀನ್ ಬಗ್ಗೆ ಗಮನ ಕೊಡಿ
ಹೈಜೀನ್ ಅಂದರೆ ಸ್ವಚ್ಛತೆಯ ಅಭ್ಯಾಸ. ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವುದು, ಸ್ನಾನ, ಹಲ್ಲುಗಳ ಸ್ವಚ್ಛತೆ, ದೇಹದ ಅಂಗಗಳ ಸ್ವಚ್ಛತೆ, ಸ್ವಚ್ಛ ವಿಧಾನದಿಂದ ಆಹಾರ ತಯಾರಿಕೆ, ಮನೆಯನ್ನು ಸ್ವಚ್ಛವಾಗಿಡುವ ವಿಷಯಗಳು ನಿಮ್ಮೊಂದಿಗೆ ನಿಮ್ಮ ಕುಟುಂಬದವರನ್ನು ಆರೋಗ್ಯವಾಗಿಡುತ್ತದೆ. ಹೈಜೀನ್ ಮಹಿಳೆಯರಿಗೆ ಬಹಳ ಅಗತ್ಯ. ಇದಕ್ಕೆ ಕಾರಣಗಳು ಕೆಳಗಿನಂತಿವೆ.
ಬೆವರು, ಪೀರಿಯಡ್ಸ್ ಮತ್ತು ವಜೈನ್ ಡಿಸ್ಚಾರ್ಜ್ ಇತ್ಯಾದಿ ಮಹಿಳೆಗೆ ಆಕೆಯ ಪರ್ಸನಲ್ ಹೈಜೀನ್ ನ ಅಗತ್ಯ ಹೇಳುತ್ತದೆ. ಅಂದರೆ ಶರೀರದಿಂದ ಯಾವುದೇ ರೀತಿಯ ದುರ್ಗಂಧ ಬರಬಾರದು, ಇನ್ಛೆಕ್ಷನ್ ಅಪಾಯ ಇರಬಾರದು ಮತ್ತು ಆರೋಗ್ಯ ಚೆನ್ನಾಗಿರಬೇಕು.
ಮಹಿಳೆ ಇಡೀ ಕುಟುಂಬಕ್ಕೆ ಅಡುಗೆ ತಯಾರಿಸುತ್ತಾಳೆ, ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಹೀಗಿರುವಾಗ ಅವಳ ಮೂಲಕ ಇತರರಿಗೆ ಕೀಟಾಣುಗಳು ಹಾಗೂ ಕಾಯಿಲೆಗಳು ಹರಡುವ ಅಪಾಯ ಹೆಚ್ಚು ಉಂಟಾಗುತ್ತದೆ. ಆದ್ದರಿಂದ ಸ್ವಚ್ಛವಾಗಿರುವುದು ಬಹಳ ಅಗತ್ಯ.
ಮಹಿಳೆಯ ಶರೀರದ ರಚನೆ ಹೇಗಿರುತ್ತದೆಂದರೆ ಅವರಿಗೆ ಹೈಜೀನ್ ಗಮನಿಸುವುದು ಬಹಳ ಅಗತ್ಯವಾಗಿದೆ.
ಕೈಗಳು ಸ್ವಚ್ಛವಾಗಿರಲಿ
ಮಹಿಳೆಯರು ಕೈಗಳನ್ನು ತೊಳೆದುಕೊಳ್ಳುವುದು ಮಹತ್ವಪೂರ್ಣವಾಗಿದೆ. ಬಹಳಷ್ಟು ಕೆಲಸಗಳ ನಂತರ ಕೈಗಳನ್ನು ತೊಳೆದುಕೊಳ್ಳಬೇಕು. ಇದರಲ್ಲಿ ನಿರ್ಲಕ್ಷ್ಯ ಬೇಡ. ಏಕೆಂದರೆ ಇದು ಇಡೀ ಕುಟುಂಬದ ಆರೋಗ್ಯದ ವಿಷಯವಾಗಿದೆ.
ಕೈಗಳನ್ನು ಯಾವಾಗ ತೊಳೆಯಬೇಕು?
ಟಾಯ್ಲೆಟ್ ಗೆ ಹೋದ ನಂತರ.
ಮಕ್ಕಳ ಪೋಟಿ ಸ್ವಚ್ಛಗೊಳಿಸಿದ ನಂತರ.
ಮಕ್ಕಳ ನ್ಯಾಪಿ ಬದಲಿಸಿದ ನಂತರ.
ಮನೆಯನ್ನು ಸ್ವಚ್ಛಗೊಳಿಸಿದ ನಂತರ.
ಅಡುಗೆ ಮಾಡುವ ಮತ್ತು ಬಡಿಸುವ ಮೊದಲು.
ಚಿಕ್ಕ ಮಕ್ಕಳಿಗೆ ಊಟ ತಿನ್ನಿಸು/ ಹಾಲು ಕುಡಿಸುವ ಮೊದಲು.
ಊಟ ಮಾಡುವ ಮೊದಲು.
ಮಕ್ಕಳೊಡನೆ ಹೊರಗೆ ಆಡಿದ ನಂತರ.
ಗಾರ್ಡನಿಂಗ್ ಕೆಲಸ ಮಾಡಿದ ನಂತರ.
ಕೈಗಳು ತೊಳೆಯುವಾಗ ಗಡಿಬಿಡಿ ಬೇಡ. ಕೈಗಳಿಗೆ ಸುಮಾರು 20 ಸೆಕೆಂಡ್ ಗಳವರೆಗೆ ಚೆನ್ನಾಗಿ ಸೋಪ್ ಹಚ್ಚಿ. ನಂತರ ನೀರಿನಿಂದ ಚೆನ್ನಾಗಿ ತೊಳೆದು ಟವೆಲ್ ನಿಂದ ಒರೆಸಿ.
ಹೈಜೀನ್ ನ ಲಾಭಗಳು
ಕೈಗಳ ಸ್ವಚತೆ : ಇದು ರೋಗಾಣುಗಳು ಹರಡದಂತೆ ತಡೆಯುತ್ತದೆ.
ಮೆನ್ ಸ್ಟ್ರುಯಲ್ ಹೈಜೀನ್ : ಪೀರಿಯಡ್ಸ್ ಸಮಯದಲ್ಲಿ ಟ್ಯಾಂಪನ್/ಸ್ಯಾನಿಟರಿ ನ್ಯಾಪ್ ಕಿನ್ನನ್ನು ಪ್ರತಿ 4 ಗಂಟೆಗೊಮ್ಮೆ ಬದಲಿಸುವುದು ಮತ್ತು ಆ ಸಮಯದಲ್ಲಿ ಸ್ವಚ್ಛತೆ ಗಮನಿಸಿದರೆ ಶರೀರದ ದುರ್ಗಂಧ, ಇನ್ ಫೆಕ್ಷನ್ ಮತ್ತು ಸ್ಕಿನ್ ಇರಿಟೇಶನ್ ನಿಂದ ರಕ್ಷಿಸುತ್ತದೆ.
ಸ್ನಾನ : ದಿನ ಸ್ನಾನ ಮಾಡುವುದರಿಂದ ಶರೀರದ ಬೆವರು ಮತ್ತು ಬ್ಯಾಕ್ಟೀರಿಯಾ ದೂರವಾಗುತ್ತವೆ. ಅಂಡರ್ ಆರ್ಮ್ಸ್, ವಜೈನ್ ಏರಿಯಾ ಮತ್ತು ಕೈಕಾಲುಗಳ ಮೇಲೂ ಚೆನ್ನಾಗಿ ಸೋಪ್ ಹಚ್ಚಿ ಸ್ನಾನ ಮಾಡಿ.
ಓವರ್ ಹೈಜೀನ್ : ಉಸಿರಿನ ದುರ್ವಾಸನೆ, ದವಡೆಗಳ ಸಮಸ್ಯೆ, ಕ್ಯಾವಿಟೀಸ್ ಇತ್ಯಾದಿಗಳಿಂದ ಪಾರಾಗಲು ದಿನ 2 ಬಾರಿ ಪ್ರಾಪರ್ ಬ್ರಶಿಂಗ್ ಮತ್ತು ಟಂಗ್ ಕ್ಲೀನಿಂಗ್ ಮುಖ್ಯ.
ಬಟ್ಟೆಗಳ ಸ್ವಚ್ಛತೆ : ಬಟ್ಟೆಗಳು ಬೆವರನ್ನು ಹೀರಿಕೊಳ್ಳುವುದರಿಂದ ಬಟ್ಟೆಗಳಲ್ಲಿ ವಾಸನೆ ಬರುತ್ತದೆ. ಇದಲ್ಲದೆ ನೀವು ಎಲ್ಲ ಕೆಲಸ ಮಾಡುತ್ತಿರುವುದರಿಂದ ರೋಗಾಣುಗಳು ಉಂಟಾಗುವ ಅಪಾಯ ಉಂಟಾಗುತ್ತದೆ. ಆದ್ದರಿಂದ ಬಟ್ಟೆಗಳನ್ನು ಚೆನ್ನಾಗಿ ಒಗೆದು ಬಿಸಿಲಿನಲ್ಲಿ ಒಣಗಿಸಿಯೇ ಧರಿಸಿ.
ನಿಮ್ಮ ಜೊತೆಯಲ್ಲಿ ಮಕ್ಕಳಿಗೂ ಸ್ವಚ್ಛತೆಯ ಅಭ್ಯಾಸ ಮಾಡಿಸಿ.
ವ್ಯಾಯಾಮ ಶರೀರನ್ನು ಫಿಟ್ ಮತ್ತು ಹೆಲ್ದಿ ಆಗಿಡಲು ಎಕ್ಸರ್ ಸೈಜ್ ಮತ್ತು ಫಿಸಿಕಲ್ ಆ್ಯಕ್ಟಿವಿಟಿ ಬಹಳ ಅಗತ್ಯ.
ಫಿಸಿಕಲಿ ಆ್ಯಕ್ಟಿವಿಟಿಯಿಂ ಮಹಿಳೆಯರು ಅಧಿಕ ಆರೋಗ್ಯದಿಂದಿರುತ್ತಾರೆ. ಅವರಿಗೆ ಹಾರ್ಟ್ ಪ್ರಾಬ್ಲಂ, ಡಯಾಬಿಟೀಸ್ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಬರುವುದು ಕಡಿಮೆ. ನಿದ್ದೆ ಚೆನ್ನಾಗಿ ಬರುತ್ತದೆ, ಖುಷಿ ಇರುತ್ತದೆ. ಹೆಚ್ಚು ಎನರ್ಜೆಟಿಕ್ ಆಗಿರುತ್ತಾರೆ. ಶರೀರ ಫಿಟ್ ಅಂಡ್ ಸ್ಮಾರ್ಟ್ ಆಗಿರುತ್ತದೆ.
ಆದರೆ ವ್ಯಾಯಾಮದ ವಿಷಯ ಬಂದಾಗ ಮಹಿಳೆಯರು ನೆಪಗಳನ್ನು ಹೇಳುತ್ತಾರೆ.
ಕೆಲವು ವಿಶೇಷ ನೆಪಗಳು ಮತ್ತು ಅವುಗಳಿಗೆ ಪರಿಹಾರಗಳು ಹೀಗಿವೆ :
ಸಮಯ ಇಲ್ಲ
ಕೆಲಸದ ಮಧ್ಯೆಯೂ ಸಮಯ ಮಾಡಿಕೊಳ್ಳಬಹುದು. ಅಂದಹಾಗೆ ನೀವು ಟಿವಿ ಎಷ್ಟು ಹೊತ್ತು ನೋಡುತ್ತೀರಿ? ಅದನ್ನು ಕೊಂಚ ಕಡಿಮೆ ಮಾಡಿ 15 ನಿಮಿಷ ಉಳಿಸಲಾಗುವುದಿಲ್ಲವೋ? ನೀವು ಫಾರ್ಮಲ್ ವರ್ಕ್ ಔಟ್ ನ್ನೇ ಮಾಡಬೇಕೆಂದಿಲ್ಲ. ಗಂಟೆಗಟ್ಟಲೆ ವ್ಯಾಯಾಮ ಬೇಡ. ಸಮಯ ಸಿಕ್ಕಾಗ 15 ನಿಮಿಷಗಳ ವ್ಯಾಯಾಮ ಮಾಡಿ. ಸುತ್ತಾಟ, ಮನೆಗೆಲಸ ಮಾಡುವುದು, ಮಕ್ಕಳೊಂದಿಗೆ ಓಡಾಟ, ಮೆಟ್ಟಲುಗಳನ್ನು ಹತ್ತಿಳಿಯುವುದು ಇವೆಸ್ಸಾ ವ್ಯಾಯಾಮದ ಭಾಗಗಳೇ ಆಗಿವೆ.
ಬಹಳ ಸುಸ್ತಾಗಿದೆ
ಕೇಳಲು ವಿಚಿತ್ರವಾಗಿರಬಹುದು. ಆದರೆ ನಿಜ ಏನೆಂದರೆ ಸುಸ್ತಾದ ನಂತರ ವ್ಯಾಯಾಮ ನಿಮಗೆ ಎನರ್ಜಿ ಕೊಡುತ್ತದೆ. ನೀವು ಒಮ್ಮೆ ಜಾಗಿಂಗ್/ವಾಕಿಂಗ್ ಶುರು ಮಾಡಿ, ನಿಮ್ಮ ಆಯಾಸವೆಲ್ಲಾ ದೂರವಾಗುತ್ತದೆ.
ಅಂದಹಾಗೆ ವ್ಯಾಯಾಮದಿಂದ ಶರೀರದಲ್ಲಿ ಫೀಲ್ ಗುಡ್ ಹಾರ್ಮೋನ್ ಎಂಡಾರ್ಫಿನ್ ರಿಲೀಸ್ ಆಗುತ್ತದೆ. ಇದರಿಂದ ಶರೀರಕ್ಕೆ ಎನರ್ಜಿ ಸಿಗುತ್ತದೆ.
ಮಕ್ಕಳಿಂದ ಸಮಯ ಸಿಗಲ್ಲ
ನೀವು ಮಕ್ಕಳೊಂದಿಗೆ ಎಕ್ಸರ್ ಸೈಜ್ ಮಾಡಲು ಶುರು ಮಾಡಿ. ಅವರು ಪಾರ್ಕಿನಲ್ಲಿ ಉಯ್ಯಾಸೆ ಆಡುತ್ತಿದ್ದರೆ ನೀವು ವಾಕಿಂಗ್ ಮಾಡಿ. ಅವರನ್ನು ಶಾಲೆಯಿಂದ ಕರೆತರುವಾಗ ನಡೆದುಕೊಂಡು ಹೋಗಿ. ಅವರೊಂದಿಗೆ ಬ್ಯಾಡ್ಮಿಂಟನ್, ಕ್ರಿಕೆಟ್ ಇತ್ಯಾದಿ ಆಡಿ. ಅವರೊಂದಿಗೆ ಸುತ್ತಮುತ್ತ ಓಡಾಡಿ.
ಎಕ್ಸರ್ ಸೈಜ್ ಬೋರಿಂಗ್
ಬೋರಿಂಗ್ ಎಲ್ಲಿಯವರೆಗೆಂದರೆ ನೀವು ಅದನ್ನು ಕೆಲಸವೆಂದು ತಿಳಿದಿರುವವರೆಗೆ. ಆದ್ದರಿಂದ ಇದನ್ನು ಫನ್ ಟೈಂ ಎಂದು ಎಂಜಾಯ್ ಮಾಡಿ. ಆದರೂ ಬೋರಿಂಗ್ ಅನಿಸಿದರೆ ನಿಮಗೆ ಮೋಜೂ ಆಗಬೇಕು, ವ್ಯಾಯಾಮ ಆಗಬೇಕು ಅಂತಹ ಕೆಲಸ ಮಾಡಿ. ಸ್ಕೇಟಿಂಗ್, ಡ್ಯಾನ್ಸಿಂಗ್, ಗಾರ್ಡನಿಂಗ್ ನಂತಹ ಬಹಳಷ್ಟು ಫಿಸಿಕಲ್ ಆ್ಯಕ್ಟಿವಿಟೀಸ್ ಗಳಿವೆ. ನಿಮಗೂ ಅವನ್ನು ಮಾಡಲು ಬಹಳ ಇಷ್ಟವಾಗುತ್ತದೆ. ಅವು ಅತ್ಯುತ್ತಮ ವ್ಯಾಯಾಮಗಳಾಗಿವೆ.
ಅಲುಗಾಡುವುದೂ ಇಷ್ಟವಿಲ್ಲ
ಕೆಲವರಂತೂ ಮನೆ, ಆಫೀಸುಗಳಲ್ಲಿ ಅಲುಗಾಡಲೂ ಬಯಸುವುದಿಲ್ಲ. ಫಿಸಿಕಲ್ ಆ್ಯಕ್ಟಿವಿಟಿ ಹೆಸರು ಕೇಳಿದರೇ ಸಾಕು ದೂರ ಓಡುತ್ತಾರೆ. ಆದರೆ ಮಾಲ್ ಗಳಲ್ಲಿ ಎಷ್ಟು ಬೇಕಾದರೂ ಸುತ್ತಾಡುತ್ತಾರೆ. ನಿಮಗೆ ಬೆವರಿನ ಕಾರಣ ವರ್ಕ್ ಔಟ್ ಮಾಡಲು ಇಷ್ಟವಿಲ್ಲದಿದ್ದರೆ ರೂಮಿನಲ್ಲಿಯೇ ವ್ಯಾಯಾಮ ಮಾಡಿ. ಮ್ಯಾಯಾಮದಿಂದ ಜಾಯಿಂಟ್ ಪೇನ್ ಆದರೆ ನೀರಿನಲ್ಲಿ ವ್ಯಾಯಾಮ ಮಾಡಿ.
ಪೌಷ್ಟಿಕ ಆಹಾರ
ಬೆಳಗ್ಗೆ ಗಂಡ ಹಾಗೂ ಮಕ್ಕಳಿಗೆ ತಿಂಡಿ ಮಾಡಿ ಮಕ್ಕಳನ್ನು ಸಿದ್ಧಗೊಳಿಸಿ ಕಳಿಸುವ ಧಾವಂತದಲ್ಲಿ ಮಹಿಳೆಯರು ತಮ್ಮ ತಿಂಡಿಯನ್ನು ಮಿಸ್ ಮಾಡಿಕೊಳ್ಳುತ್ತಾರೆ. 2 ಬ್ರೆಡ್ ಸ್ಲೈಸ್ ಗೆ ಬಟರ್ ಹಾಕಿಕೊಂಡು ತಿನ್ನಲು ಅಥವಾ ಹಾಲಿನಲ್ಲಿ ಕಾರ್ನ್ ಫ್ಲೇಕ್ಸ್ ಹಾಕಿಕೊಂಡು ತಿನ್ನಲು ಎಷ್ಟು ಸಮಯ ಬೇಕಾಗುತ್ತದೆ? ಒಟ್ಟಿನಲ್ಲಿ ನಿಮಗೂ ತಿಂಡಿ ಬಹಳ ಅಗತ್ಯವಾಗಿದೆ.
ಬರೀ ತಿಂಡಿಯಷ್ಟೇ ಅಲ್ಲ, ಪೌಷ್ಟಿಕ ಹಾಗೂ ಸಮತೋಲ ಆಹಾರವನ್ನೂ ಸೇವಿಸಿ. ಹೊರಗೆ ಕರಿದ ತಿಂಡಿಗಳನ್ನು ತಿನ್ನುವ ಬದಲು ಪ್ರೋಟೀನ್, ವಿಟಮಿನ್ ಮತ್ತು ಕಾರ್ಬೋಹೈಡ್ರೇಟ್ಸ್ ಗಳಿಂದ ಕೂಡಿರುವ ಆಹಾರ ಸೇವಿಸಿ. ಮೀನು, ಹಾಲು, ಮೊಸರು, ಹಣ್ಣುಗಳು, ತರಕಾರಿ, ಮೊಳಕೆ ಕಾಳುಗಳು, ಬೇಳೆಗಳು, ಡ್ರೈಫ್ರೂಟ್ಸ್ ಇತ್ಯಾದಿ ಸೇವಿಸಿ.
ಪೂರ್ಣ ನಿದ್ರೆ ಅತ್ಯಗತ್ಯ
ಗಂಡನ ಕೋರಿಕೆಗಳು, ಮಕ್ಕಳ ತುಂಟಾಟಗಳಿಂದಾಗಿ ಮಹಿಳೆಯರು ಸಂಪೂರ್ಣವಾಗಿ ನಿದ್ರೆ ಮಾಡಲಾಗುವುದಿಲ್ಲ. ಒಳ್ಳೆಯ ಆರೋಗ್ಯಕ್ಕೆ ಕನಿಷ್ಠ 7-8 ಗಂಟೆ ನಿದ್ರೆ ಅಗತ್ಯ. ಅದನ್ನು ನಿರ್ಲಕ್ಷಿಸಬಾರದು.
- ಗಿರಿಜಾ ಶಂಕರ್
ಎನರ್ಜಿ ಹೆಚ್ಚಿಸಲು ಟಿಪ್ಸ್
ನಿಮಗೆ ಕೆಲಸ ಮಾಡಿ ದಣಿವಾಗಿದ್ದರೆ ಸ್ವಲ್ಪ ಹೊತ್ತು ಹೊರಗೆ ಹೋಗಿ. ಇದರಿಂದ 2 ಲಾಭಗಳಿವೆ. ಒಂದು ನೀವು ಫ್ರೆಶ್ ಆಗಿ ಫೀಲ್ ಆಗುತ್ತೀರಿ, ಎರಡು ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇದ್ದರೆ ನಿಮ್ಮ ಶರೀರ ಆರೋಗ್ಯವಾಗಿರುತ್ತದೆ. ಬಿಸಿಲಿನಿಂದ ಶರೀರಕ್ಕೆ ವಿಟಮಿನ್ `ಡಿ' ಸಿಕ್ಕು ಅದು ಮೂಳೆಗಳನ್ನು ಸದೃಢಗೊಳಿಸುತ್ತದೆ. ಸನ್ ಎಕ್ಸ್ ಪೋಷರ್ ನಿಂದ ಸಿರೋಟೋನಿನ್ ಲೆವೆಲ್ ಹೆಚ್ಚುತ್ತದೆ. ಅದರಿಂದ ನಿಮ್ಮ ಮೂಡ್ ಸರಿಯಾಗುತ್ತದೆ. ನಿದ್ರೆಯೂ ಚೆನ್ನಾಗಿ ಬರುತ್ತದೆ. ಹೀಗೆಯೇ ಸಂಜೆ ಹೊರಗೆ ಸುತ್ತಾಡುವುದರಿಂದ ಹೊಸ ಉತ್ಸಾಹ ಬರುತ್ತದೆ.
ಮೆಟ್ಟಿಲುಗಳನ್ನು ಹತ್ತಿಳಿಯಿರಿ. ಇದರಿಂದ ಹಾರ್ಟ್ ಪಂಪಿಂಗ್ ಉತ್ತಮವಾಗುತ್ತದೆ. ನಿಮ್ಮೊಳಗೆ ಎನರ್ಜಿ ಉಂಟಾಗುತ್ತದೆ.
ಕಾಫಿ ಬ್ರೇಕ್ ತೆಗೆದುಕೊಳ್ಳಿ. ಕಾಫಿ ಮೂಡ್ ನ್ನು ಫ್ರೆಶ್ ಮಾಡುತ್ತದೆ. ಸ್ಟ್ರಾಂಗ್ ಆ್ಯಂಟಿ ಆಕ್ಸಿಡೆಂಟ್ ಪ್ರಾಪರ್ಟೀಸ್ ನಿಂದಾಗಿ ಎನರ್ಜಿಯೂ ಸಿಗುತ್ತದೆ.
ಕವಿತೆಗಳು, ಶಾಯರಿಗಳು ಅಥವಾ ಯಾವುದಾದರೂ ಮೋಜಿನ ಲೇಖನಗಳನ್ನು ಓದಿ. ಪ್ರೇರಕ ಪುಸ್ತಕಗಳನ್ನು ಓದಿದರೆ ಮನಸ್ಸಿಗೆ ಉಲ್ಲಾಸ ಮತ್ತು ಹೊಸ ಉತ್ಸಾಹ ಸಿಗುತ್ತದೆ.
ವಾಕಿಂಗ್ ನಿಂದ ಎನರ್ಜಿ ಸಿಗುತ್ತದೆ. ದಿನ ಅರ್ಧ ಗಂಟೆ ವಾಕಿಂಗ್ ಮಾಡಿ.
ಪೌಷ್ಟಿಕ ಆಹಾರ ಲಾಂಗ್ ಟರ್ಮ್ ಎನರ್ಜಿ ಕೊಡುತ್ತದೆ.