ನಾವು ಫಿಟ್‌ನೆಸ್‌ ಕಾಪಾಡಿಕೊಳ್ಳಲು ಬ್ರೇಕ್‌ಫಾಸ್ಟ್ ಅತಿ ಮುಖ್ಯ. ಅದರ ಹೆಲ್ಡಿ ಡಯೆಟ್‌ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಇದು ಜಿಮ್ ವರ್ಕ್‌ಔಟ್‌, ಜಾಗಿಂಗ್‌ಮಾಡುವವರಿಗೆ ಹೆಚ್ಚಿನ ಶಕ್ತಿ ಒದಗಿಸುತ್ತದೆ. ನೀವು ರೆಗ್ಯುಲರ್‌ ಮಾರ್ನಿಂಗ್‌ ಜಾಗಿಂಗ್‌ಗೆ ಹೋಗತ್ತೀರಾ? ಹಾಗಿದ್ದರೆ ನಿಮ್ಮ ಪೋಸ್ಟ್ ರನ್‌ ಬ್ರೇಕ್‌ಫಾಸ್ಟ್ ಮಾರನೇ ದಿನದ ಓಟವನ್ನು ರಿಕವರ್‌ ಮಾಡುವಂತಿರಬೇಕು. ಕೆಲವರು ಮಧ್ಯಾಹ್ನ ಪಾರ್ಕ್‌ನಲ್ಲಿ ಜಾಗ್‌ ಮಾಡುತ್ತಾರೆ. ಆಗಲೂ ಸಹ ಈ ಬ್ರೇಕ್‌ಫಾಸ್ಟ್ ಆ ಓಟಕ್ಕೆ ಶಕ್ತಿ ತುಂಬುವಂತಿರಬೇಕು.

ನೀವು ಸಂಜೆ ಓಡುವವರಾದರೆ, ಈ ಬ್ರೇಕ್‌ಫಾಸ್ಟ್ ಇಡೀ ದಿನದ ಬ್ಲಡ್‌ ಶುಗರ್‌ ಲೆವೆಲ್ ‌ನಿಯಂತ್ರಿಸಲು ಪೂರಕವಾಗಿರಬೇಕು. ಒಳ್ಳೆಯ ಬ್ರೇಕ್‌ಫಾಸ್ಟ್ ನಿಮ್ಮನ್ನು ಅನಗತ್ಯವಾಗಿ ಹೆವಿ ಲಂಚ್‌ಗೆ ಪ್ರೇರೇಪಿಸುವುದಿಲ್ಲ. ಆಗ ಸಂಜೆ ಜಾಗಿಂಗ್‌

ಹೋಗುವವರಿಗೆ ದೇಹ ಭಾರಿ ಆಗಿರುವಂತೆ ಅನಿಸುವುದಿಲ್ಲ.

ರನ್ನರ್ಸ್‌ ಬ್ರೇಕ್‌ಫಾಸ್ಟ್

ಬ್ರೇಕ್‌ಫಾಸ್ಟ್ ಇಡೀ ದಿನದ ಅತಿ ಮಹತ್ವಪೂರ್ಣ ಆಹಾರ ಎನಿಸುತ್ತದೆ. 7-8 ಗಂಟೆಗಳ ನಿದ್ದೆಯ ನಂತರ ನೀವು ಎದ್ದಾಗ, ನಿಮ್ಮ ಬೆಳಗಿನ ಕೆಲಸಗಳ ಚಟುವಟಿಕೆಗಾಗಿ ಹೆಚ್ಚಿನ ಶಕ್ತಿ ಬೇಕೆನಿಸುತ್ತದೆ. ನೀವು ಜಾಗಿಂಗ್‌ನಲ್ಲಿ ಎಷ್ಟು ಕ್ಯಾಲೋರಿ ಬರ್ನ್‌ ಮಾಡುತ್ತೀರಿ, ಅದು ನಿಮ್ಮ ಓಟದ ವೇಗ ಮತ್ತು ನಿಮ್ಮ ತೂಕವನ್ನು ಅವಲಂಬಿಸಿದೆ. ನೀವು ಎಷ್ಟು ವೇಗವಾಗಿ ಓಡುವಿರೋ ನಿಮ್ಮ ಮೆಟಬಾಲಿಕ್‌ರೇಟ್‌ ಅಷ್ಟೇ ಹೆಚ್ಚುತ್ತದೆ. ಆಗ ಮಾತ್ರ ಹೆಚ್ಚಿನ ಕ್ಯಾಲೋರಿ ಬರ್ನ್‌ ಆಗಲು ಸಾಧ್ಯ. ಉದಾ: 1 ಮೈಲಿ ವೇಗದ ನಡಿಗೆಗಿಂತ, ಓಟದಲ್ಲಿ 2 ಪಟ್ಟು ಕ್ಯಾಲೋರಿ ಹೆಚ್ಚು ಬರ್ನ್‌ ಆಗುತ್ತದೆ. 1 ಮೈಲಿ ಓಡಲು ಸಾಧಾರಣ ತೂಕದ ವ್ಯಕ್ತಿ 100 ಕ್ಯಾಲೋರಿ ಬರ್ನ್‌ಮಾಡಬಲ್ಲ. ನೀವು ಮಾರ್ನಿಂಗ್‌ ರನ್ನರ್‌ ಆಗಿದ್ದರೆ ನಿಮ್ಮ ಬ್ರೇಕ್‌ಫಾಸ್ಟ್ ನ್ನು 2 ಭಾಗವಾಗಿ ವಿಂಗಡಿಸಬೇಕು.

ಪ್ರೀ ರನ್ನಿಂಗ್‌ ಮೋಸ್ಟ್ ರನ್ನಿಂಗ್‌ ಬ್ರೇಕ್‌ಫಾಸ್ಟ್

ಪ್ರೀ ರನ್ನಿಂಗ್‌ ಬ್ರೇಕ್‌ಫಾಸ್ಟ್ ಓಟದ ನಂತರದ ಪೌಷ್ಟಿಕ, ಸಮತೋಲಿತ ಆಹಾರ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಓಟಕ್ಕೆ ಮೊದಲಿನ ಶಕ್ತಿ ಪೂರೈಕೆ. ನೀವು ಓಟಕ್ಕೆ ಮುನ್ನ ಏನು ಸೇವಿಸುವಿರೋ, ಅದರ ಮೇಲೆ ನಿಮ್ಮ ಓಟದ ಪರ್ಫಾರ್ಮೆನ್ಸ್ ನಿಂತಿದೆ. ನೀವು ಯಾವಾಗ, ಎಷ್ಟು ಓಡಬೇಕೆಂದು ನಿರ್ಧರಿಸಿದ್ದೀರಿ ಎಂಬುದನ್ನೂ ಇದು ಅವಲಂಬಿಸಿದೆ.

ಮಹತ್ವಪೂರ್ಣ ಟೈಮಿಂಗ್

ನೀವು ಬೆಳಗ್ಗೆ 6 ಗಂಟೆಗೆ 3 ಮೈಲಿ ಓಟ ಓಡಲು ನಿರ್ಧರಿಸಿದರೆ, ಅದಕ್ಕೆ 20 ನಿಮಿಷ ಮೊದಲು 1 ಆರೆಂಜ್‌ ಸೇವಿಸಿದರೆ ಸಾಕು. ಯಾರು ರವಿವಾರದ ಮ್ಯಾರಥಾನ್‌ಗೆ ಓಡಲು ಬಯಸುತ್ತಾರೋ ಅವರು ಶನಿವಾರ ರಾತ್ರಿ ಧಾರಾಳ ಆಹಾರ ಸೇವಿಸಿರಬೇಕು. ಕ್ರೀಡಾಪಟು ಹಾಗೂ ಅಥ್ಲೀಟ್ಸ್ ತಮ್ಮ ಪ್ರದರ್ಶನದ 3 ದಿನಗಳ ಮುಂಚಿನಿಂದಲೇ, ತಮ್ಮ ದೈನಂದಿನ ಆಹಾರದಲ್ಲಿ ಕಾರ್ಬೊಹೈಡ್ರೇಟ್‌ನ ಪ್ರಮಾಣ ಹೆಚ್ಚಿಸಿಕೊಳ್ಳಬೇಕು.

ಜೀರ್ಣಿಸಲು ಸುಲಭ ಆಗುವಂತಿರಲಿ

ಓಟಕ್ಕೆ ಮುಂಚಿನ ಆಹಾರದಲ್ಲಿ ಕೊಬ್ಬು ಮತ್ತು ಕಾರ್ಬೊಹೈಡ್ರೇಟ್‌ ಪ್ರಮಾಣ ಕಡಿಮೆ ಇರಬೇಕು. ಆಗ ಅದು ಸುಲಭವಾಗಿ ಜೀರ್ಣವಾಗುತ್ತದೆ.

ಶಕ್ತಿ ತುಂಬಿರಲಿ

ಪ್ರೀ ರನ್ನಿಂಗ್‌ ಬ್ರೇಕ್‌ಫಾಸ್ಟ್ ಶಕ್ತಿಯಿಂದ ತುಂಬಿರಬೇಕು. ಆಗ ಓಡುವ ಸಮಯದಲ್ಲಿ ನಿಮ್ಮ ಮಸ್ತಿಷ್ಕ, ಮಾಂಸಖಂಡಗಳಿಗೆ ಸತತ ಶಕ್ತಿ ಹರಿದು ಬರುತ್ತಿರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ