ಯಾವ ಡ್ರೆಸ್ ಜೊತೆ ಎಂಥ ಇನ್ನರ್‌ವೇರ್ ಖರೀದಿಸಬೇಕೆಂದು ವಿವರವಾಗಿ ಗಮನಿಸೋಣ :
- ಮಿನಿಮೈಸರ್ ಬ್ರಾ ಸ್ಲಿಂಫಿಟ್ ಟಾಪ್ಸ್ ಗೆ ಚೆನ್ನಾಗಿ ಹೊಂದುತ್ತವೆ. ನೀವು ನಿಮ್ಮ ಹೆವಿ ಬ್ರೆಸ್ಟ್ ನ್ನು ತುಸು ಕಡಿಮೆ ಮಾಡಿ ತೋರಿಸಲು, ಈ ಬ್ರಾ ಪರ್ಫೆಕ್ಟ್ ಅನಿಸಿದೆ.
- ಟೀಶರ್ಟ್ ಧರಿಸುವಿರಾದರೆ, ಅದಕ್ಕೆ ತಕ್ಕಂತೆ ಟೀಶರ್ಟ್ ಬ್ರಾವನ್ನೇ ಧರಿಸಿರಿ.
- ಯಾವ ಫ್ಯಾಬ್ರಿಕ್ಸ್ ತುಂಬಾ ಸ್ಮೂಥ್ ಆಗಿರುತ್ತದೋ ಅಂದರೆ ಸಿಲ್ಕ್ ಕಾಟನ್, ಲಿನೆನ್ ಇತ್ಯಾದಿ, ಅಂಥ ಉಡುಗೆಗಳಿಗೆ ಮಾತ್ರ ಪ್ಯಾಡೆಡ್ ಬ್ರಾ ಸರಿಹೋಗುತ್ತದೆ.
- ನೀವು ಡೀಪ್‌ನೆಕ್ ಡ್ರೆಸ್ ಧರಿಸುವಿರಾದರೆ, ಡೆಮಿ ಬ್ರಾ ಧರಿಸಲು ಮರೆಯದಿರಿ. ಈ ಬ್ರಾ ಆಫ್‌ಶೋಲ್ಡರ್ ಟ್ಯೂಬ್ ಟಾಪ್‌ನಡಿಯಲ್ಲೂ ಧರಿಸಬಹುದು.
- ಹಾಲ್ಟರ್‌ನೆಕ್ ಬ್ರಾವನ್ನು ಸಡಿಲವಾಗಿರುವ ಸ್ಪೋರ್ಟ್ಸ್ ವೇರ್‌ನಡಿ ಧರಿಸಬಹುದು. ಇದು ಬ್ರೆಸ್ಟ್ ನ್ನು ಎತ್ತಿಹಿಡಿಯುವುದು ಮಾತ್ರವಲ್ಲದೆ, ಬೆವರನ್ನೂ ಹೀರಿಕೊಳ್ಳುತ್ತದೆ. ಇದು ಬೆವರನ್ನು ನಿಮ್ಮ ಔಟರ್‌ವೇರ್‌ಗೆ ತಗುಲಿಸುವುದಿಲ್ಲ.
ಬ್ರೆಸ್ಟ್ ಬಂಪ್ಸ್ ಹೆಣ್ಣಿನ ದೇಹದ ಬಹುಮುಖ್ಯ ಅಂಗಗಳು. ಈ ಎರಡೂ ಭಾಗಗಳು ಹೆಣ್ಣಿಗೆ ಉತ್ತಮ ಫಿಗರ್ ತಂದುಕೊಡುತ್ತವೆ, ಡ್ರೆಸ್‌ಗೆ ಉತ್ತಮ ಎನಿಸುತ್ತದೆ. ಯಾರಿಗಾದರೂ ಅವಿಕಸಿತ ಸ್ತನವಿದ್ದರೆ, ಅವರಿಗೆ ಕೃತಕ ಸಪೋರ್ಟ್‌ಗಾಗಿ ಪ್ಯಾಡೆಡ್ ಬ್ರಾ ಧರಿಸಬಹುದು. ಬ್ರಾ ತರಹವೇ ಬಂಪ್ಸ್ ಉಬ್ಬರಿಸಿ ತೋರಿಸಲು ಪ್ಯಾಡೆಡ್ ಪ್ಯಾಂಟೀಸ್ ಧರಿಸಬಹುದು.
ಟೀನೇಜರ್ಸ್ ಇನ್ನರ್‌ವೇರ್
ಇಂದಿನ ಕಾಲೇಜು ಕಿಶೋರಿಯರಿಗೆ ಇನ್ನರ್‌ವೇರ್ ಕುರಿತು ಹೆಚ್ಚಿನ ಅರಿವಿರಬೇಕಾದುದು ಅತ್ಯಗತ್ಯ. ಅದರಲ್ಲೂ ಟೀನೇಜರ್ಸ್‌ಗೆ ಇದು ಮಸ್ಟ್. ಹೆಣ್ಣುಮಕ್ಕಳು ಹೈಸ್ಕೂಲು ಮೆಟ್ಟಿಲೇರುವ ಮೊದಲೇ ಋತುಮತಿಯರಾಗುತ್ತಾರೆ. ಹೀಗಾಗಿ ಅವರಲ್ಲಿ ದೈಹಿಕ ವಿಕಾಸ ಬೇಗ ಆಗುತ್ತದೆ. ಸ್ತನಗಳ ಬೆಳವಣಿಗೆ ಇದನ್ನೇ ಆಧರಿಸಿದೆ.
ಮಗಳಿಗೆ ನೀಡಬೇಕಾದ ಮಾಹಿತಿಗಳು :
- ಮಗಳ ಸ್ತನ ವಿಕಾಸಗೊಳ್ಳುತ್ತಿದ್ದಂತೆ, ತಕ್ಷಣ ಮಗಳಿಗೆ ಈ ವಯಸ್ಸಿನಲ್ಲಿ ಇದೆಲ್ಲ ಸಹಜ ಎಂದು ತಿಳಿ ಹೇಳಬೇಕು. ಅವಳಿಗೆ ಆಗ ತಕ್ಷಣ ಸ್ಪೋರ್ಟ್ಸ್ ಬ್ರಾ ಕೊಡಿಸಬೇಕು.
- ವಿಕಸಿತಗೊಳ್ಳುತ್ತಿರುವ ಸ್ತನ ಎಷ್ಟೋ ಸಲ ಹೆಣ್ಣುಮಕ್ಕಳನ್ನು ಮುಜುಗರಕ್ಕೆ ಸಿಲುಕಿಸುತ್ತದೆ. ಈ ಬದಲಾವಣೆಯನ್ನು ಅವರು ಸಹಜವಾಗಿ ಸ್ವೀಕರಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ದೈಹಿಕ ಅಂಗಾಂಗಗಳಲ್ಲಿನ ಬದಲಾವಣೆಯಿಂದ ಬೇರೆಯವರು ಏನಾದರೂ ಕಮೆಂಟ್ ಮಾಡಿದರೆ, ಈ ಕಿಶೋರಿಯರಿಗೆ ಕಸಿವಿಸಿ ಎನಿಸುತ್ತದೆ. ಜೊತೆಗೆ ವಿಕಸಿತಗೊಳ್ಳುತ್ತಿರುವ ಸ್ತನಗಳ ಆಕಾರ ಸಂಕೋಚಕ್ಕೆ ಗುರಿಯಾಗಿಸುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಮಗಳಿಗೆ ಕಪ್ಡ್ ಬ್ರಾ ಧರಿಸಲು ಸಲಹೆ ನೀಡಿ. ಇಂಥ ಬ್ರಾಗಳು ಸ್ತನಗಳ ಆಕಾರವನ್ನು ಪಾಯಿಂಟೆಡ್ ಆಗಿ ತೋರಿಸುವ ಬದಲು ಗೋಲಾಕಾರವಾಗಿ ತೋರಿಸುತ್ತವೆ. ಈ ಬ್ರಾಗೆ ಹೊಂದಿದಂತಿರುವ ಅಂಡರ್‌ವೇರ್ ಸಹ ಸ್ತನಕ್ಕೆ ಉತ್ತಮ ಸಪೋರ್ಟ್ ನೀಡುತ್ತದೆ.
- ಶಾಲೆಯಲ್ಲಿ ಬಹಳಷ್ಟು ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದರಲ್ಲಿ ದೈಹಿಕ ಸಾಮರ್ಥ್ಯ ಆಧರಿಸಿ ಮಾಡಬೇಕಾದ್ದು ಬಹಳಷ್ಟಿರುತ್ತದೆ. ಇದರಲ್ಲಿ ಈ ಹೆಣ್ಣುಮಕ್ಕಳು ಸಹ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗುತ್ತದೆ. ಅದಕ್ಕೆ ಮೊದಲು ತಾಯಿಯ ಕರ್ತವ್ಯ ಎಂದರೆ, ಬೆಳೆಯುತ್ತಿರುವ ಮಗಳಿಗೆ ಅವಳ ದೇಹದ ಮಾರ್ಪಾಡುಗಳ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಬೇಕು.