ಈ ಸಲ ಯುಗಾದಿ ಹಬ್ಬಕ್ಕಾಗಿ, ಈ ರೀತಿ ಹೊಸ ಬಗೆಯ ಪೇಂಟಿಂಗ್ ಮಾಡಿಸಿ, ನಿಮ್ಮ ಗೃಹಾಲಂಕಾರಕ್ಕೆ ನವನವೀನ ಟಚ್ ನೀಡಿ.
ಇತ್ತೀಚೆಗೆ ನಗರ ಜೀವನದಲ್ಲಿ ಎಲ್ಲೆಲ್ಲೂ ಫ್ಲಾಟ್ಸ್ ನಲ್ಲಿ ವಾಸ ಮಾಮೂಲಿ ಎನಿಸಿದೆ. ಹಿಂದಿನಂತೆ ಗೋಡೆಗೆ ಏನೋ ಒಂದು ಬಳಿದು ಪೇಂಟಿಂಗ್ ಆಯ್ತು ಎಂದುಕೊಳ್ಳುವಂತಿಲ್ಲ. ಬದಲಿಗೆ ಪ್ರತಿ ವರ್ಷ ಯಾವುದಾದರೊಂದು ಹಬ್ಬಕ್ಕೆ ಟ್ರೆಂಡ್ ಗೆ ತಕ್ಕಂತೆ ಅಲಂಕರಿಸಿದರೆ ಅದು ಆಧುನಿಕ ಟಚ್ ನೀಡಿದಂತಾಗುತ್ತದೆ.
ಗೃಹಾಲಂಕಾರದ ಹೊಳಪು ಎದ್ದು ತೋರುವುದೇ ಗೃಹಿಣಿಯ ಜಾಣ್ಮೆ, ಚಾಕಚಕ್ಯತೆಯಲ್ಲಿ. ಈ ನಿಟ್ಟಿನಲ್ಲಿ ಒಂದು ಹೊಸ ಅವಕಾಶ ಒದಗಿಸಿದೆ, ನ್ಯೂಡ್‌ಬ್ರೌನ್ ಟೋನ್, ಇದು ಡೆಕೋರ್ ಟ್ರೆಂಡ್ಸ್ ನ ಒಂದು ಮಹತ್ವಪೂರ್ಣ ಭಾಗವಾಗಿದ್ದು, ಇಂಟೀರಿಯರ್ ಡಿಸೈನ್ಸ್ ನ ಟ್ರೆಂಡ್ಸ್ ಗೆ ಹೊಸ ಲುಕ್ಸ್ ನೀಡುತ್ತದೆ.
ಐಡಿಯಲ್ ಇಂಟೀರಿಯರ್ ಸ್ಟೈಲ್ : ಎವರ್ ಗ್ರೀನ್ ಸೌಂದರ್ಯವನ್ನು ತನ್ನದಾಗಿಸಿಕೊಳ್ಳುವ ಈ ಬಣ್ಣ ಮುಂದಿನ ವರ್ಷಗಳಲ್ಲಿ ಇಂಟೀರಿಯರ್ ಡಿಸೈನ್ಸ್ ನ ಟ್ರೆಂಡ್ಸ್ ನಲ್ಲಿ ಎತ್ತಿದ ಕೈ ಆಗಲಿದೆ. ಈ ಶೇಡ್ಸ್ ನ್ಯಾಚುರಲ್ ಫೀಲ್ ನೀಡುವುದಷ್ಟೇ ಅಲ್ಲ, ಮಣ್ಣಿನಲ್ಲಿ ಬಳಿದಂತೆ ಫಿನಿಶ್ ನೀಡಿ, ಜೀವಂತವಾಗಿಡುತ್ತದೆ. ಈ ಶೇಡ್ಸ್ ನಿಂದ ಮನೆಯವರಿಗೆ ಹೆಚ್ಚು ಬೆಚ್ಚನೆಯ ಅನುಭವ ತುಂಬುತ್ತದೆ, ಇದರಿಂದ ಪ್ರತಿಯೊಂದು ತರಹದ ಇಂಟೀರಿಯರ್ಸ್ ಗೆ ಇದು ಆದರ್ಶವಾಗಲಿದೆ.
ನ್ಯೂಡ್‌ಬ್ರೌನ್ ಟೋನಿನ ಆಕರ್ಷಣೆ : ಈ ಶೇಡ್ಸ್ 2026ರ ಡೆಕೋರ್ ಟ್ರೆಂಡ್ಸ್ ನ ಒಂದು ಮಹತ್ವಪೂರ್ಣ ಭಾಗವಾಗಲಿದೆ. ಇದು ಪ್ರಕೃತಿಯಿಂದ ಪ್ರೇರಿತವಾಗಿ ಮನಸ್ಸಿಗೆ ಶಾಂತಿ, ಸಮಾಧಾನಗಳ ಭಾವ ತುಂಬುತ್ತದೆ. ಲೈಟ್ ಬೇಜ್‌ಸಾಫ್ಟ್ ಪಿಂಕಿನಿಂದ ಹಿಡಿದು ಸಮೃದ್ಧ ಕ್ಯಾರೆಮಲ್ ಗಾಢ ಚಾಕಲೇಟ್ ವರೆಗಿನ ಟೋನ್ ಗಳಿದ್ದು, ಆಳ ದಟ್ಟ ಬೆಳಕಿಗೆ ಪೂರಕ ಅಂಶಗಳನ್ನು ಸಹಜವಾಗಿ ಮೈಗೂಡಿಸಿಕೊಂಡಿರುತ್ತವೆ.
ಇವುಗಳ ಡಿಫರೆಂಟ್ ಕಲರ್, ಟೆಕ್ಸ್ ಚರ್‌ಮೆಟೀರಿಯಲ್ಸ್ ಜೊತೆ ಎಫರ್ಟ್ ಲೆಸ್ ಕೋ ಆರ್ಡಿನೇಶನ್ ಗುಣಗಳಿಂದಾಗಿ, ಯಾವುದೇ ಶುಭ ಸಮಾರಂಭ ಅಥವಾ ಯುಗಾದಿ ದೀಪಾವಳಿಗಳಂಥ ಪ್ರಮುಖ ಹಬ್ಬಗಳಿಗೆ ಮನೆಗೆ ಪೇಂಟ್ ಮಾಡಿಸಲು ಇದನ್ನೇ ಜನ ಪ್ರಥಮ ಆಯ್ಕೆಯಾಗಿ ಸ್ವೀಕರಿಸುವಂತಾಗಿದೆ.
ಸುಖಾನುಭವ ಹಾಗೂ ಉನ್ನತ ಲೈಫ್ ಸ್ಟೈಲ್ ಗೆ ಪೂರಕವಾಗುವ ಬೆಟರ್ ಆಯ್ಕೆಗಳು : ಬಿರ್ಲಾ ಓಪಸ್ ಪೇಂಟ್ಸ್ ನ ಕನ್ಸ್ಯೂಮರ್ ಎಕ್ಸ್ ಪಿರಿಯೆನ್ಸ್ ಹೆಡ್ ಶ್ರೀಕಾಂತ್ ರ ಪ್ರಕಾರ, ಹೊಸ ಶೇಡ್ಲ್ ನ ಕಲರ್ ಪ್ಯಾಲೆಟ್ ನಲ್ಲಿ ನ್ಯೂಡ್ ಶೇಡ್ಸ್ ಪ್ರಮುಖವಾಗಿದ್ದು, ಇಂಟೀರಿಯರ್ ನಲ್ಲಿ ಸುಖಾನುಭವ ಹಾಗೂ ಉನ್ನತ ಲೈಫ್ ಸ್ಟೈಲ್ ಗೆ ಅತ್ಯುತ್ತಮ ಆಯ್ಕೆಗಳಾಗಿವೆ. ಲೈಟ್ ಪೀಚ್ ನಿಂದ ಹಿಡಿದು ಮಣ್ಣಿನ ಬಣ್ಣದವರೆಗಿನ, ಬೂದು ಬಣ್ಣ ಸೇರಿಸಿಕೊಂಡು ಈ ಶೇಡ್ಸ್ ಗೋಡೆಗಳು, ಫರ್ನೀಚರ್, ಆ್ಯಕ್ಸೆಂಟ್ ಪೀಸ್ ಗಳಲ್ಲಿ ಬಳಕೆಗೊಳ್ಳಲೂ ಪರ್ಫೆಕ್ಟ್ ಎನಿಸುತ್ತವೆ. ಬೇಕಾದರೆ ಇವನ್ನು ಬೇರೆ ಬೇರೆಯಾಗಿ ಅಥವಾ ಪದರ ಪದರಗಳಾಗಿ ಪೇರಿಸಿಯೂ ಬಳಸಿಕೊಳ್ಳಬಹುದು.
ಟ್ರೆಂಡ್ಸ್ ಗಳಲ್ಲಿ ಶಾಮೀಲು : ಬೂದು, ಮಣ್ಣಿನಂತಹ ಬಣ್ಣಗಳು ಸಹ ಈ ವರ್ಷ ಪ್ರಮುಖ ಟ್ರೆಂಡ್ಸ್ ಆಗಿ ಶಾಮೀಲಾಗುತ್ತವೆ, ಇವು ಮನೆಗಳ ಗೃಹಾಲಂಕಾರಕ್ಕೆ ಉತ್ತಮ ಬ್ಯಾಲೆನ್ಸ್ ಎನಿಸಿವೆ. ಟೋಸ್ಟೆಡ್ ಆಲ್ಮಂಡ್‌ಕೋಲ್ಡ್ ಕಾಪರ್ ಪಾಟ್ಸ್ ನಂಥ ದಟ್ಟ ಬ್ರೌನ್ ಶೇಡ್ಸ್, ಸ್ಟೈಲ್‌ಕ್ಲಾಸ್ ನ ಸಮರ್ಪಕ ಮಿಶ್ರಣ ಎನಿಸುತ್ತವೆ. ಈ ಬಹೂಪಯೋಗಿ ಬಣ್ಣಗಳ ಪ್ರಯೋಗವನ್ನು ಫರ್ನೀಚರ್, ಕ್ಯಾಬಿನೆಟ್ಸ್ ಫೀಚರ್ಸ್ ಸಾಲ್ ಇತ್ಯಾದಿ ಎಲ್ಲಕ್ಕೂ ಮಾಡಬಹುದಾಗಿದೆ. ಇದರಿಂದ ಅವು ಪ್ರತಿ ಡಿಸೈನಿನ ಸ್ಟೈಲ್ ಜೊತೆ ಬ್ಯೂಟಿಫುಲ್ ಆಗಿ ಹೊಂದಿಕೊಳ್ಳುತ್ತವೆ. ನಿಮ್ಮ ಆಯ್ಕೆ ಬೋಲ್ಡ್ ಸ್ಟೇಟ್ ಮೆಂಟ್ ಮಾಡುವುದಿರಲಿ ಯಾ ಲೈಟ್ ಕಲರ್ಸ್ ನ ಬ್ಯಾಲೆನ್ಸ್ ಇರಲಿ, ಈ ಶೇಡ್ಸ್ ನೈಸರ್ಗಿಕ ಸೌಂದರ್ಯದಿಂದ ಪ್ರೇರಿತಗೊಂಡು, ಮನೆಗೆ ಬಂದ ಅತಿಥಿಗಳ ಪ್ರಶಂಸೆ ಗಿಟ್ಟಿಸುವುದರಲ್ಲಿ ಹಿಂದುಳಿಯುವುದಿಲ್ಲ.
ಮೋನೋಕ್ರೊಮ್ಯಾಟಿಕ್ ಸ್ಕೀಮ್ಸ್ : ಇವು 2026ರಲ್ಲಿ ಪ್ರಮುಖ ಟ್ರೆಂಡ್ ಆಗಿ ಗುರುತಿಸಲ್ಪಡುತ್ತವೆ. ಇಲ್ಲಿ ನ್ಯೂಡ್‌ಬ್ರೌನ್ ಶೇಡ್ಸ್ ನ್ನು ಪದರಗಳಾಗಿಸಿ, ಕನಿಷ್ಠ ಆದರೆ ಪ್ರಭಾವಶಾಲಿ ಡಿಸೈನ್ಸ್ ರೂಪಿಸಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಸೀಶೆಲ್ ಟೆಕ್ಸ್ ಚರ್ ಪೇಂಟ್ ಇಂಟೀರಿಯರ್ ಗೆ ಒಂದು ವಿಶೇಷ ಟಚ್ ನೀಡಬಹುದಾಗಿದೆ. ಇದು ಸಾಗರ ತೀರದ ಕೋಮಲ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಪ್ರೇರಿತ. ಇದರ ಲೈಟ್ ಫ್ಯಾರ್ಮ್ಯಾಟ್ ಯಾವುದೇ ಜಾಗಕ್ಕಾದರೂ ಹೊಂದಿಕೊಂಡು ಸೌಹಾರ್ದ ವಾತಾವರಣ ಮೂಡಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದರಿಂದ ಇಡೀ ಮನೆಗೆ ಅದ್ಭುತ ಕಳೆ ಬರುತ್ತದೆ.
ಸ್ಟೇಟ್ ಮೆಂಟ್ಸ್ ಸಾಲ್ ನ ಆಕರ್ಷಣೆ : ಸ್ಟೇಟ್ ಮೆಂಟ್ಸ್ ಸಾಲ್ ಸಹ ಈ ವರ್ಷ ಗೃಹಾಲಂಕಾರದ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಲಿದೆ. ಇಲ್ಲಿಯೂ ನ್ಯೂಡ್‌ಬ್ರೌನ್ ಟೋನ್ ಜೊತೆ ಡೆಪ್ತ್ ವುಳ್ಳ ಟೆಕ್ಸ್ ಚರ್ ಪ್ರಧಾನವಾಗಲಿದೆ. ಅದರಲ್ಲೂ ಮುಖ್ಯವಾಗಿ ಸ್ಯಾಂಡ್ ಡ್ಯೂನ್ ಟೆಕ್ಸ್ ಚರ್ ಪೇಂಟ್ ಒಂದು ಬೊಂಬಾಟ್ ಆಯ್ಕೆ ಎನಿಸುತ್ತದೆ. ಇದರ ಕಾಳುಗಳಂಥ, ಮರಳು ಮರಳಾದ ಫಿನಿಶ್ ಮೋಸ್ಟ್ ಬ್ಯೂಟಿಫುಲ್ ಎನಿಸುತ್ತದೆ. ಇದರಿಂದ ಇಂಟೀರಿಯರ್ಸ್ ನಲ್ಲಿ ರೋಮಾಂಚನ ಹಾಗೂ ಸ್ಥಿರತೆಯ ಮಿಶ್ರಣ ಕಂಡುಬರಲಿದೆ. ಇದನ್ನು ಹಾಟ್ ನ್ಯೂಡ್ ಯಾ ಡಾರ್ಕ್ ಬ್ರೌನ್ ಟೋನ್ ಜೊತೆ ಬೆರೆಸಿ, ಬೊಂಬಾಟ್ ಫೀಚರ್ಸ್ ವುಳ್ಳ ಫಿನಿಶ್ ಆಗಿ ರೆಡಿ ಮಾಡಬಹುದು, ಇದು ಯಾವುದೇ ಡೆಕೋರ್ ಸ್ಟೈಲ್ ನ್ನು ಅತ್ಯುತ್ತಮ ರೀತಿಯಲ್ಲಿ ಪ್ರಸ್ತುತಪಡಿಸಲಿದೆ.
– ಪ್ರಭಾ ಮಾಧವ್





