ಚಿನ್ನದ ಆಭರಣಗಳ ಬಗೆಗೆ ಮಹಿಳೆಯರ ಒಲವು ಮತ್ತು ನಿಲುವಿನ ಬಗ್ಗೆ ಯಾರಿಗೂ ಬಚ್ಚಿಡಲಾಗದು. ಒಬ್ಬರು ಇದನ್ನು ಪ್ರೀತಿ ಹಾಗೂ ಆತ್ಮೀಯತೆಯ ಪ್ರತೀಕ ಎಂದು ಭಾವಿಸುತ್ತಾರಾದರೆ, ಮತ್ತೆ ಕೆಲವರು ಅದನ್ನು ಹೂಡಿಕೆಯ ರೂಪದಲ್ಲಿ ಪರ್ಲ್ ನ ಪ್ರತೀಕ ಎಂದು ಕಾಣುತ್ತಾರೆ. ಇನ್ನು ಕೆಲವರು ಸುಖ ದುಃಖದ ಸಂಗಾತಿ ಎಂಬಂತೆ ಈ ಆಭರಣಗಳು ಮಹಿಳೆಯರ ಜೀವನದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿವೆ.
ದೇಶದ ಅನೇಕ ಪ್ಲಾಂಟ್‌ಗಳಲ್ಲಿ ಸಾವಿರಾರು ಕುಶಲ ಕಾರ್ಮಿಕರು ಆಧುನಿಕ ಯಂತ್ರಗಳ ಸಹಾಯದಿಂದ ಈ ಚಿನ್ನಾಭರಣಗಳನ್ನು ತಯಾರಿಸುವ ಪ್ರಕ್ರಿಯೆಯ ಬಗ್ಗೆ ನಿಮಗೆ ಗೊತ್ತೆ? ಒಂದು ಆಭರಣ ಹಲವು ಹಂತಗಳ ಪ್ರಕ್ರಿಯೆಗೊಳಪಟ್ಟು ನಿಮ್ಮ ಕೈಗೆ ತಲುಪುತ್ತದೆ. ತನಿಷ್ಕಾ ಜ್ಯೂವೆಲರಿ ಪಂತನಗರ ಪ್ಲಾಂಟ್ ಮುಖ್ಯಸ್ಥ ಎಂಡ್ಲೊ ಲಾರೆನ್ಸ್ ಈ ಪ್ರಕ್ರಿಯೆಯ ಬಗ್ಗೆ ತಿಳಿಸಿದರು.
ಎಲ್ಲಕ್ಕೂ ಮೊದಲು ಜ್ಯೂವೆಲರಿ ಡಿಸೈನರ್ ಯಾವುದೇ ಒಂದು ಆಭರಣದ ರೂಪುರೇಷೆ ಸಿದ್ಧಪಡಿಸಿ, ಕಾಗದದ ಮೇಲೆ ಅದರ ಡಿಸೈನ್ ಬಿಡಿಸಿಕೊಳ್ಳುತ್ತಾರೆ. ಬಳಿಕ ಕಂಪ್ಯೂಟರ್‌ನಲ್ಲಿ ಕ್ಯಾಡ್ ಡಿಸೈನ್ (ಕಂಪ್ಯೂಟರ್ ಏಡೆಡ್ ಡಿಸೈನ್) ಆಗಿ ಪರಿವರ್ತಿಸಲಾಗುತ್ತದೆ.
ಆ ಬಳಿಕ ಆ ಕ್ಯಾಡ್ ಡಿಸೈನ್‌ನ್ನು ಥ್ರೀಡಿ ಪ್ರಿಂಟರ್ ಮುಖಾಂತರ ಪ್ರಿಂಟ್ ಮಾಡಲಾಗುತ್ತದೆ. ಅದನ್ನು `ರೆಸಿನ್ ಪ್ರೋಟೊಟೈಪ್' ಎಂದು ಹೇಳಲಾಗುತ್ತದೆ.
ರೆಸಿನ್‌ನ್ನು ಲಿಕ್ವಿಡ್ ವೆಲ್ ಡಯೋನ ಅಚ್ಚಿನಲ್ಲಿ ಹಾಕಲಾಗುತ್ತದೆ. ಅದಕ್ಕೂ ಮುಂಚೆ ಬೆಳ್ಳಿಯ ಪ್ರೋಟೊಟೈಪ್ ಒಂದನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಅದನ್ನು `ಮಾಸ್ಟರ್' ಎಂದು ಕರೆಯಲಾಗುತ್ತದೆ. ಆ ಮಾಸ್ಟರ್‌ನ ನೆರವಿನಿಂದ ಸಿಲಿಕಾನ್‌ವೆ್ಡೂೕ್ ಕತ್ತರಿಸಿ, ಅದರಲ್ಲಿ ವ್ಯಾಕ್ಸ್ ನ್ನು ಇಂಜೆಕ್ಟ್ ಮಾಡಲಾಗುತ್ತದೆ.
ರಿಂಗ್ಸ್ ನಲ್ಲಿ ವಜ್ರದ ಹರಳನ್ನೇನಾದರೂ ಅಳವಡಿಸಬೇಕಿದ್ದರೆ, ಕುಶಲಕರ್ಮಿ ಮೈಕ್ರೋಸ್ಕೋಪ್‌ನ ನೆರವಿನಿಂದ ವ್ಯಾಕ್ಸ್ ಪೀಸ್ ನಲ್ಲಿ ಸೂಕ್ತ ಸ್ಥಳ ನಿಗದಿಪಡಿಸುತ್ತಾನೆ.
ಆ ಬಳಿಕ ಹಲವು ವ್ಯಾಕ್ಸ್ ನ ಆಭರಣಗಳನ್ನು ಒಂದು ವ್ಯಾಕ್ಸ್ ಟ್ರೀಯ ಆಧಾರದ ಮೇಲೆ ಜೋಡಿಸಲಾಗುತ್ತದೆ. ಬಳಿಕ ವ್ಯಾಕ್ಸ್ ಟ್ರೀಯನ್ನು ಗೋಲ್ಡ್ ಕಾಸ್ಟಿಂಗ್‌ಗಾಗಿ ಮತ್ತೊಂದು ವಿಭಾಗಕ್ಕೆ ಕಳಿಸಿಕೊಡಲಾಗುತ್ತದೆ. ಅಲ್ಲಿ `ವಾಸ್ಟ್ ವ್ಯಾಕ್ಸ್ ಕಾಸ್ಟಿಂಗ್' ವಿಧಾನದ ಮೂಲಕ ಗೋಲ್ಡ್ ಟ್ರೀ ಸಿದ್ಧಪಡಿಸಲಾಗುತ್ತದೆ.
ಗೋಲ್ಡ್ ಟ್ರೀ ಸಿದ್ಧಪಡಿಸಲು ಎಲ್ಲಕ್ಕೂ ಮೊದಲು ಅದನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ದ್ರಾವಣದಲ್ಲಿ ಹಾಕಲಾಗುತ್ತದೆ. 7-8 ನಿಮಿಷಗಳಲ್ಲಿ ಒಣಗಿ ಕಠೋರವಾಗುವ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ಹುದುಗಿದ ಈ ಟ್ರೀಯನ್ನು 16 ಗಂಟೆಗಳ ಕಾಲ 500-600 ಡಿಗ್ರಿ ತಾಪಮಾನದ ಭಟ್ಟಿಯೊಂದರಲ್ಲಿ ಬಿಸಿ ಮಾಡಲಾಗುತ್ತದೆ.
ಬಳಿಕ ಬಿಸಿ ಅಚ್ಚನ್ನು ಅಮೆರಿಕದಿಂದ ತರಿಸಲ್ಪಟ್ಟ ಜೆಟ್ ಎಂಜಿನ್‌ನ ಮೆಷಿನ್‌ನಲ್ಲಿ ಹಾಕಲಾಗುತ್ತದೆ. ಅಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಒಳಭಾಗದ ವ್ಯಾಕ್ಸ್ ಕರಗುತ್ತದೆ ಹಾಗೂ ಅದು ಖಾಲಿ ಅಚ್ಚಾಗಿಬಿಡುತ್ತದೆ. ಮೆಷಿನ್‌ನ ತಾಪಮಾನ 1090 ಡಿಗ್ರಿಯಾದಾಗ ಚಿನ್ನವನ್ನು ಆ ಯಂತ್ರದಲ್ಲಿ ಹಾಕಲಾಗುತ್ತದೆ.
ಹಳದಿ ವರ್ಣ ಚಿನ್ನದ ನೈಸರ್ಗಿಕ ಬಣ್ಣ. ಅದಕ್ಕೆ ಬಿಳಿ ಬಣ್ಣ ಬರುವಂತೆ ಮಾಡಲು ಅದರಲ್ಲಿ ಪೆಲೆಂಡಿಯಂ ಮತ್ತು ನಿಕಲ್ ನ್ನು ಮಿಶ್ರಣ ಮಾಡಾಲಾಗುತ್ತದೆ. ಪಿಂಕ್ ಬಣ್ಣ ಬರಬೇಕೆಂದರೆ, ಅದರಲ್ಲಿ ಶೇ.25ರ ತನಕ ತಾಮ್ರ ಮಿಶ್ರಣ ಮಾಡಲಾಗುತ್ತದೆ. ಈ ರೀತಿಯಲ್ಲಿ ವೈಟ್ ಗೋಲ್ಡ್ ರೋಸ್ ಗೋಲ್ಡ್ ಆಗಿ ಸಿದ್ಧವಾಗುತ್ತದೆ.