ನಿಮ್ಮ ಮುಖ ಚಿಕ್ಕದಾಗಿ, ಉದ್ದವಾಗಿ ಅಥವಾ ಚೌಕಾಕಾರವಾಗಿದೆಯೇ? ಸನ್‌ಗ್ಲಾಸ್‌ ಖರೀದಿಸುವಾಗ ಇದರ ಬಗ್ಗೆ ಯೋಚಿಸಿದ್ದೀರಾ? ಹಾಗೆ ಯೋಚಿಸುವ ಅಗತ್ಯವಿದೆಯೇ?

ಅಂದಹಾಗೆ ಸೂರ್ಯನ ಹಾನಿಕಾರಕ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು ಹಾಗೂ ಅವುಗಳ ಸೌಂದರ್ಯ ಹೆಚ್ಚಿಸಲು ಮತ್ತು ಕಣ್ಣುಗಳ ಸುತ್ತಮುತ್ತ ಸೂಕ್ಷ್ಮನೆರಿಗೆಗಳನ್ನು ಅಡಗಿಸುವಲ್ಲಿ ಸನ್‌ಗ್ಲಾಸ್‌ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಕೆಲವರು ಸನ್‌ಗ್ಲಾಸ್‌ನ್ನು ಫ್ಯಾಷನ್‌ ಓಟದಲ್ಲಿ ಮುಂದಿರಲು, ಕೆಲವರು ತಮ್ಮ ಕಣ್ಣುಗಳ ಸುರಕ್ಷತೆಗಾಗಿ ಬಳಸುತ್ತಾರೆ.

ದೃಷ್ಟಿದೋಷ ಇರುವವರು, ಫೋಟೋ ಕ್ರೋಮಿಕಲ್ ಲೆನ್ಸ್ ನ ಸನ್‌ಗ್ಲಾಸ್‌ ಆರಿಸಿಕೊಳ್ಳುತ್ತಾರೆ. ಅದರಿಂದ ಅವರ ದೃಷ್ಟಿ ಸುಧಾರಿಸುತ್ತದೆ ಹಾಗೂ ಕಣ್ಣುಗಳನ್ನು ಸೂರ್ಯನ ಅಲ್ಟ್ರಾ ವಯ್ಲೆಟ್‌ ಕಿರಣಗಳಿಂದ ರಕ್ಷಿಸಿಕೊಳ್ಳಬಹುದು. ಹಾಗೆಯೇ ಸೈಕ್ಲಿಂಗ್ ಮತ್ತು ರಾಫ್ಟಿಂಗ್‌ ಪ್ರೇಮಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಸನ್‌ಗ್ಲಾಸ್‌ ಆರಿಸಿಕೊಳ್ಳುತ್ತಾರೆ.

ನೀವು ಯಾವುದೇ ಫ್ರೇಮ್ ಆರಿಸಿಕೊಳ್ಳಿ, ಆದರೆ ನಿಮ್ಮ ಸೌಲಭ್ಯಕ್ಕೆ ಯಾವುದೇ ರಾಜಿ ಮಾಡಿಕೊಳ್ಳಬೇಡಿ. ಉಪಯುಕ್ತವಾದ ಫ್ರೇಮ್ ಬಗ್ಗೆ ಗಮನ ಇಟ್ಟುಕೊಂಡು ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಫ್ರೇಮ್ ಆರಿಸಿಕೊಳ್ಳಬೇಕು.

ಮುಖಕ್ಕೆ ಅನುರೂಪವಾಗಿ ನಟಿ ರಾಣಿ ಮುಖರ್ಜಿಯರಂತಹ ಗುಂಡು ಮುಖದವರಿಗೆ ಆಯತಾಕಾರದ ಫ್ರೇಮ್ಸ್ ಶ್ರೇಷ್ಠವಾಗಿರುತ್ತದೆ. ಗುಂಡುಮುಖದ ಉದ್ದ ಹಾಗೂ ಅಗಲ ಸಮಾನವಾಗಿರುತ್ತದೆ. ಆಯತಾಕಾರದ ಫ್ರೇಮ್ ಅವರ ಮುಖವನ್ನು ಉದ್ದವಾಗಿ ಕಾಣಿಸುತ್ತದೆ. ಈ ಫ್ರೇಮ್ ಮುಖಕ್ಕೆ ಸರಿಯಾದ ಕಾಂಟ್ರಾಸ್ಟ್ ಆಗಿದ್ದು, ಮುಖಕ್ಕೆ ಸುಂದರ ಲುಕ್‌ ಕೊಡುತ್ತದೆ. ಗುಂಡು ಮುಖದವರು ಕೋನವಿರುವ ಫ್ರೇಮ್ ಕೊಂಡರೆ ಮುಖ ವಿಭಿನ್ನವಾಗಿ ಕಂಡುಬರುತ್ತದೆ.

ಆಯತಾಕಾರದ ಮುಖದವರಿಗೆ ಏವಿಯೇಟರ್‌ ಫ್ರೇಮ್ ಉತ್ತಮ. ಮುಖ ಉದ್ದವಾಗಿರುವುದರಿಂದ ಏವಿಯೇಟರ್‌ ಫ್ರೇಮ್ ಉದ್ದ ಮುಖವನ್ನು ಚಿಕ್ಕದಾಗಿ ಕಾಣಿಸುತ್ತದೆ. ಅಂತಹ ಮುಖವುಳ್ಳವರು ಆಯತಾಕಾರದ ಸನ್‌ಗ್ಲಾಸ್‌ ಧರಿಸಬಾರದು. ಅದರಿಂದ ಅವರ ಮುಖ ಇನ್ನಷ್ಟು ಉದ್ದವಾಗಿ ಕಾಣುತ್ತದೆ.

ಚೌಕಾಕಾರದ ಮುಖದವರು ಚಿಕ್ಕದಾದ ಅಂಡಾಕಾರದ ಫ್ರೇಮ್ ನ ಸನ್‌ಗ್ಲಾಸ್‌ ಧರಿಸಬೇಕು. ಅದು ಕಾಂಟ್ರಾಸ್ಟ್ ಲುಕ್ ಕೊಡುತ್ತದೆ. ಅದರಿಂದ ನಿಮ್ಮ ಮುಖದ ಆಕಾರ ಸೌಮ್ಯವಾಗಿ ಕಾಣುತ್ತದೆ.

ಹೃದಯಾಕಾರದ ಮುಖದವರು ಅಂದರೆ ಅಗಲವಾದ ಹಣೆಯುವಳ್ಳರಿಗೆ ಚಿಕ್ಕ ಫ್ರೇಮ್ ಬಹಳ ಚೆನ್ನಾಗಿರುತ್ತದೆ. ಅಂತಹವರು ಏವಿಯೇಟರ್‌ ಅಥವಾ ಶೇಡ್ಸ್ ಇರುವ ಫ್ರೇಮ್ ಉಪಯೋಗಿಸಬಾರದು. ಅದರಿಂದ ಅವರ ಮುಖದ ಆಕಾರ ಇನ್ನಷ್ಟು ಸ್ಪಷ್ಟವಾಗಿ ಕಾಣುತ್ತದೆ. ಎಲ್ಲಕ್ಕಿಂತ ಒಳ್ಳೆಯ ಆಯ್ಕೆಯೆಂದರೆ ತೆಳುಬಣ್ಣದ ಫ್ರೇಮ್ ಉಪಯೋಗಿಸುವುದು. ಏಕೆಂದರೆ ಅದರಿಂದ ಆ ವ್ಯಕ್ತಿಯ ಮುಖ ತೆಳ್ಳಗಾದ ಭ್ರಮೆ ಉಂಟಾಗುತ್ತದೆ. ಹೃದಯಾಕಾರದ ಮುಖದವರು ಕ್ಲಾಸಿಕ್‌ ಲೈನ್‌ ಶ್ರೇಣಿಯ ಕೆಮಾನಾ ಸನ್‌ಗ್ಲಾಸ್ ಧರಿಸಿದರೆ ಸುಂದರವಾಗಿ ಕಾಣುತ್ತಾರೆ.

ಅಂಡಾಕಾರದ ಮುಖವುಳ್ಳರಿಗೆ ಫ್ರೇಮ್ ಆರಿಸಿಕೊಳ್ಳುವುದು ಸಮಸ್ಯೆಯಾಗುವುದಿಲ್ಲ. ಅವರಿಗೆ ಬಹಳಷ್ಟು ಆಯ್ಕೆಗಳಿವೆ. ಅಂಡಾಕಾರದ ಮುಖದವರಿಗೆ ಶೇಡ್ಸ್ ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಸುಲಭ. ಅಂತಹ ಮುಖಕ್ಕೆ ಎಲ್ಲ ರೀತಿಯ ಸನ್‌ಗ್ಲಾಸ್‌ಗಳು ಒಪ್ಪುತ್ತವೆ. ಏಕೆಂದರೆ ಅಂತಹ ಮುಖ ಸಮತೋಲಿತವಾಗಿ ಸಮಾನ ಅನುಪಾತದಲ್ಲಿ ಎರಕ ಹೊಯ್ಯಲ್ಪಟ್ಟಿರುತ್ತದೆ. ಆದಾಗ್ಯೂ ಇಂತಹ ಮುಖದವರಿಗೆ ಪ್ರಥಮ ಆದ್ಯತೆಯಾಗಿರುತ್ತದೆ.

ಪ್ರಿಸ್ಕ್ರಿಪ್ಶನ್ಸನ್ಗ್ಲಾಸ್

ದೃಷ್ಟಿದೋಷಕ್ಕೆ ಪರಿಹಾರ ಬಯಸುವವರಿಗೆ ಈಗ ಟೆಕ್ನಾಲಜಿಯ ಸೌಲಭ್ಯದಿಂದ ಸೂಕ್ತವಾದ ಸನ್‌ಗ್ಲಾಸ್‌ನಿಂದ ವಂಚಿತರಾಗಬೇಕಾದ ಅಗತ್ಯವಿಲ್ಲ.

ಉರಿಬಿಸಿಲಿನಲ್ಲಿ ಎಂದಾದರೂ ಮೋಜು ಮಾಡಲು ಅಥವಾ ಏನಾದರೂ ಕೆಲಸ ಮಾಡಲು ನಿಮಗೆ ಅವಕಾಶ ಸಿಕ್ಕಾಗ ಇಂತಹ ಸನ್‌ಗ್ಲಾಸ್‌ನ ಅಗತ್ಯವಿರುತ್ತದೆ. ಅದು ಸುಡು ಬಿಸಿಲಿನಲ್ಲಿ ನಿಮ್ಮ ಕಣ್ಣಿಗೆ ತಂಪು ಕೊಡುತ್ತದೆ.

ದೃಷ್ಟಿದೋಷಕ್ಕಾಗಿ ಕನ್ನಡಕ ಧರಿಸುವವರು ಸನ್‌ಗ್ಲಾಸ್‌ನ ಅನುಕೂಲದಿಂದ ವಂಚಿತರಾಗುತ್ತಾರೆ. ಏಕೆಂದರೆ ಅವರು ಸನ್‌ಗ್ಲಾಸ್ ಉಪಯೋಗಿಸುವಂತಿಲ್ಲ. ದೃಷ್ಟಿದೋಷವುಳ್ಳರಿಗೆ ಕನ್ನಡಕವಿಲ್ಲದೆ ವಾಹನ ಚಲಾಯಿಸಲು ಅಥವಾ ರಸ್ತೆಯಲ್ಲಿ ತಿರುಗಾಡುವುದು ಅಪಾಯಕಾರಿಯಾಗಿದೆ. ದೃಷ್ಟಿದೋಷಕ್ಕೆ ಕನ್ನಡಕ ಧರಿಸುವವರು ಸುಡು ಬಿಸಿಲಿನಿಂದ ಪಾರಾಗಲು ಹಾಗೂ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಾಗಿ ಸನ್‌ಗ್ಲಾಸ್‌ ಉಪಯೋಗಿಸಬಾರದೇ? ಹಾಗೇನೂ ಇಲ್ಲ. ಈಗ ದೃಷ್ಟಿದೋಷವುಳ್ಳವರಿಗೂ ಇಂತಹ ಪ್ರಿಸ್ಕ್ರಿಪ್ಶನ್‌

ಸನ್‌ಗ್ಲಾಸ್‌ ಸುಲಭವಾಗಿ ಲಭ್ಯವಿದೆ. ಅದರಲ್ಲಿ ದೃಷ್ಟಿ ಸುಧಾರಿಸು ಹಾಗೂ ಬಿಸಿಲಿನಿಂದ ಕಣ್ಣುಗಳನ್ನು ರಕ್ಷಿಸುವ ಸಾಮರ್ಥ್ಯವಿದೆ.

ದೃಷ್ಟಿದೋಷಕ್ಕೆ ಕನ್ನಡಕ ಧರಿಸುವ ಅನೇಕರು ಈ ಎರಡೂ ಉದ್ದೇಶಗಳಿಗೆ ಪರಂಪರಾಗತ ಲೆನ್ಸ್ ಗಳನ್ನು ಉಪಯೋಗಿಸುತ್ತಾರೆ.

ಅವರು ಬೇರೆ ಬೇರೆ ಹವಾಮಾನಕ್ಕೆ ತಕ್ಕಂತೆ ಕನ್ನಡಕ ಬದಲಾಯಿಸುವ ಅಗತ್ಯವಿಲ್ಲ. ಆದರೆ ಪರಾಂಪರಾಗತ ಲೆನ್ಸ್ ಒಮ್ಮೊಮ್ಮೆ  ಅಡ್ಜಸ್ಟ್ ಆಗುವುದಿಲ್ಲ. ಪ್ರಿಸ್ಕ್ರಿಪ್ಶನ್‌ ಸನ್‌ಗ್ಲಾಸ್‌ ವಿಶೇಷ ಟೆಕ್ನಾಲಜಿಯ ಸನ್‌ಗ್ಲಾಸ್‌ ಕೂಡ ಆಗಿರುತ್ತದೆ.

ಹಿಂದೆ ಸನ್‌ಗ್ಲಾಸ್‌ನ್ನು ಹೆಚ್ಚಿನ ಜನ ಫ್ಯಾಷನ್‌ ಆ್ಯಕ್ಸೆಸರೀಸ್‌ ಎಂದುಕೊಳ್ಳುತ್ತಿದ್ದರು. ಈಗ ಕಣ್ಣುಗಳ ಆರೋಗ್ಯ ಹಾಗೂ ರಕ್ಷಣೆಗಾಗಿಯೂ ಸನ್‌ಗ್ಲಾಸ್‌ ಧರಿಸುವುದು ಚಾಲನೆಯಲ್ಲಿದೆ. ಅದು ಸೂರ್ಯನ ಅಲ್ಟ್ರಾ ವಯ್ಲೆಟ್‌ ಕಿರಣಗಳಿಂದ ನಮ್ಮ ಕಣ್ಣುಗಳಿಗೆ ರಕ್ಷಣೆ ಕೊಡುತ್ತದೆ.

ಪಿ. ಪರಿಮಳಾ

Tags:
COMMENT