ಅಚ್ಚುಕಟ್ಟಿಗೆ ಮತ್ತೊಂದು ಹೆಸರು ನಮ್ಮಮ್ಮ ಎಂದರೆ ತಪ್ಪಾಗಲಾರದು. ಇವರು ಪುಟ್ಟ ಮನೆಯಲ್ಲೇ ಎಲ್ಲವನ್ನೂ ಒಪ್ಪವಾಗಿಟ್ಟುಕೊಳ್ಳುತ್ತಿದ್ದರು. ನಮ್ಮ ಹೊಸ ಬಟ್ಟೆಗಳನ್ನೆಲ್ಲಾ ಅದರಲ್ಲೂ ಜರಿ ಲಂಗ ಮತ್ತು ರೇಷಿಮೆ ಸೀರೆಗಳನ್ನು ಬಿಳಿಯ ಮಕಮಲ್ ಪಂಚೆಯಲ್ಲಿ ಮಡಿಚಿ, ಅದನ್ನು ಓರಣವಾಗಿ ಗೋದ್ರೆಜ್‌ ಬೀರುವಿನಲ್ಲಿಡುತ್ತಿದ್ದಳು. ಹೊಸ ಬಟ್ಟೆಗಳನ್ನಿಡುನ ಪರಿ ಇದಾದರೆ ಪ್ರತಿದಿನ ತೊಡುವ ಬಟ್ಟೆಗಳನ್ನು ಮರದ ಬೀರುವಿನಲ್ಲಿ ನೀಟಾಗಿ ಮಡಿಚಿ ಜೋಡಿಸಿಡುತ್ತಿದ್ದರು. ಒಟ್ಟಿನಲ್ಲಿ ನಾವಿದ್ದ ಮನೆ ಪುಟ್ಟದಾದರೂ ಒಪ್ಪ ಓರಣಕ್ಕೇನೂ ಕಡಿಮೆ ಇರಲಿಲ್ಲ. ಇವೆಲ್ಲಾ ಮನೆಯಲ್ಲಿ ಪದಾರ್ಥಗಳನ್ನಿಡಲು ಯಾವುದೇ ಹೆಚ್ಚಿನ ಬೀರುಗಳಲ್ಲದಿರುವ ಕಾಲದ ಕಥೆ.

ಆದರೆ ಕಾಲ ಬದಲಾಗಿದೆ. ಮನೆ ಕಟ್ಟುವಾಗಲೇ ಪದಾರ್ಥಗಳನ್ನಿಡಲು, ಬಟ್ಟೆಗಳನ್ನಿಡಲು ಪಾದರಕ್ಷೆಯಿಂದ ಹಿಡಿದು ಫೈಲುಗಳು. ಪುಸ್ತಕಗಳು ಎಲ್ಲಕ್ಕೂ ಸ್ಥಳವನ್ನು ಮೊದಲೇ ಯೋಚಿಸಲಾಗಿರುತ್ತದೆ. ನಿವೇದಿತಾಳ ಮನೆ ಒಪ್ಪ ಓರಣಕ್ಕೆ ಒಳ್ಳೆಯ ಉದಾಹರಣೆ. ಮನೆಯ ಸಾಮಾನುಗಳನ್ನಿಡಲು ಸರಿಯಾದ ಸ್ಥಳವಿದ್ದಾಗ ಮನೆಯ ಸೌಂದರ್ಯಕ್ಕೆ ಕುಂದು ಬರುವುದಿಲ್ಲ. ಒಳಾಂಗಣ ವಿನ್ಯಾಸಕಾರರು ಎಲ್ಲಕ್ಕೂ ಅನುವು ಮಾಡಿರುತ್ತಾರೆ. ಪ್ರತಿಯೊಂದು ಕೋಣೆಗೂ ಅಗತ್ಯವಿರುವಷ್ಟು ಸ್ಟೋರೇಜ್‌ ಸ್ಥಳವನ್ನು ಮೀಸಲಿರಿಸಲಾಗಿರುತ್ತದೆ.

ಹಿಂದೆ ಒಂದು ಕೋಣೆಯ ಮಧ್ಯದಲ್ಲಿ ಮಂಚವನ್ನಿರಿಸಿದರೆ ಅದರ ಒಂದು ಪಕ್ಕಕ್ಕೆ ಗೋಡೆಗೆ ಆನಿಸಿದಂತೆ ವಾರ್ಡ್‌ರೋಬ್ಸ್ ನ್ನು ಮಾಡಿಸಲಾಗುತ್ತಿತ್ತು. ಅದರಲ್ಲೂ ವಿಭಾಗಗಳು ಹೆಂಗಸರಿಗಾದರೆ, ಅವರ ಆಭರಣಗಳನ್ನಿಡಲು ಪ್ರತ್ಯೇಕ ವಿಭಾಗಗಳು ಈ ರೀತಿ ರೂಪಿಸಾಲಾಗುತ್ತಿತ್ತು. ಇವುಗಳ ಪಕ್ಕಕ್ಕೆ ಶೃಂಗಾರ ಪ್ರಸಾಧನಗಳನ್ನಿಡಲು ಒಂದು ಡ್ರಾಯರ್‌ ಮತ್ತು ಅದರ ಮೇಲ್ಭಾಗಕ್ಕೆ ಒಂದು  ಕನ್ನಡಿಯನ್ನು ಇರಿಸಿ. ಸಿಂಗರಿಸಿಕೊಳ್ಳುವಾಗ ಕುಳಿತುಕೊಳ್ಳಲು ಒಂದು ಪುಟ್ಟ ಸ್ಟೂಲ್ ಇರಿಸಿದ್ದರೆ, ಸಿಂಗರಿಸಿಕೊಳ್ಳುವುದಕ್ಕೆ ಅವರು ಕುಳಿತುಕೊಳ್ಳಲು ಅನುಕೂಲವಾಗಿರುತ್ತಿತ್ತು. ಅರ್ಥಾತ್‌ ಪ್ರತಿಯೊಂದು ಕೋಣೆಯಲ್ಲೂ ವಾರ್ಡ್‌ರೋಬ್‌ ಮತ್ತು ಒಂದು ಡ್ರೆಸ್ಸಿಂಗ್‌ ಟೇಬಲ್ ಇರುತ್ತಿತ್ತು. ಹೀಗಾಗಿ ಯಾವುದೇ ವಸ್ತುಗಳು ಹೊರಗೆ ಚೆಲ್ಲಾಪಿಲ್ಲಿಯಾಗಿದ್ದು ಕೋಣೆಯ ಅಂದಕ್ಕೆ ಕುಂದು ಬರುತ್ತಿರಲಿಲ್ಲ.

ಈ ಆಧುನಿಕ ಕಾಲದಲ್ಲಿ ನಿವೇಶನ ವಿಶಾಲವಾಗಿದ್ದರೆ ಅದು ನಿಮಗೆ ಜಾಕ್‌ ಪಾಟ್‌ ಇದ್ದಂತೆ. ಇಲ್ಲಾದರೂ ಇರುವ ನಿವೇಶನಕ್ಕೆ ಅನುಗುಣವಾಗಿಯೇ ಎಲ್ಲವನ್ನೂ ರೂಪಿಸಲಾಗುತ್ತದೆ. ನಿಮ್ಮ ಮಲಗುವ ಕೋಣೆ ಅರ್ಥಾತ್‌ ಬೆಡ್‌ರೂಮಿನ ಮಧ್ಯಭಾಗದಲ್ಲಿ ಮಂಚವನ್ನಿರಿಸಿ ಮಿಕ್ಕೆಲ್ಲೆಡೆಯೂ ನಿಮಿಗಿಷ್ಟ ಬಂದಂತೆ ಅಲಂಕರಿಸಬಹುದು. ಆಕರ್ಷಕ ರೀತಿಯಲ್ಲಿ ನಿಮ್ಮ ಮಕ್ಕಳ ವಿಭಿನ್ನ ಫೋಟೋಗಳನ್ನು ತೂಗುಹಾಕಬಹುದು. ಕೋಣೆಯ ಒಂದು ಮೂಲೆಗೆ ಒಂದು ಹೂವಿನಕುಂಡ ಇಲ್ಲವಾದಲ್ಲಿ ಅಲಂಕಾರಿಕ ಒಣ ಹೂಗಳ ದೊಡ್ಡ ವಾಸ್‌. ಅದರ ಪಕ್ಕ ಒಂದು ಸುಂದರ ಬೆತ್ತದ ಪೆಟ್ಟಿಗೆ ಅಥವಾ ಬುಟ್ಟಿ. ಅದು ನೋಡಲಷ್ಟೇ ಅಲ್ಲ ಅದರಲ್ಲಿ ಒಗೆದ, ಇಸ್ತ್ರಿಗೆ ಹೋಗುವ ಬಟ್ಟೆಗಳನ್ನಿರಿಸಲಾಗುತ್ತದೆ. ಕೋಣೆಯ ಒಂದು ಭಾಗಕ್ಕೆ ಲಾಕ್‌ ಇನ್‌ ವಾರ್ಡ್‌ರೋಬ್‌. ಅಂದರೆ ಕೋಣೆಯ ಮಧ್ಯದ ಗೋಡೆಗೆ ದೊಡ್ಡ ಹೊಳೆಯು ಕನ್ನಡಿ. ಅದರ ಅಕ್ಕಪಕ್ಕ ಗೋಡೆಗಳಲ್ಲಿ ನಿಮ್ಮ ವಸ್ತ್ರಗಳನ್ನಿರಿಸಲು, ಶೂಗಳನ್ನಿಡಲು ಸ್ಥಳವನ್ನು ರೂಪಿಸಲಾಗುತ್ತದೆ. ಇದು ನಿಮ್ಮ ಅಟ್ಯಾಟ್ಡ್ ಬಾತ್‌ ರೂಮ್ ಪಕ್ಕದಲ್ಲೇ ಇರುವುದರಿಂದ ನೀವು ಸ್ನಾನ ಮಾಡಿಕೊಂಡು ಬಂದು ನಿಮ್ಮನ್ನು ಪೂರ್ಣವಾಗಿ ಅಲಂಕರಿಸಿಕೊಂಡೇ ಕೋಣೆಗೆ ಬರಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ