ಪ್ರ : ನಾನು 21 ವರ್ಷದ ಮಹಿಳೆ. ಕಣ್ಣುಗಳಿಗೆ ಎಷ್ಟು ಪ್ರಕಾರದ ಅಲರ್ಜಿ ಉಂಟಾಗುತ್ತದೆ? ಇವುಗಳಿಂದ ರಕ್ಷಿಸಿಕೊಳ್ಳುವ ಉಪಾಯಗಳ ಬಗ್ಗೆ ತಿಳಿಸಿ.

ಉ : ಮಳೆಗಾಲದಲ್ಲಿ ಕಣ್ಣುಗಳ ಸೋಂಕು ಅತ್ಯಂತ ಗಂಭೀರ ಹಾಗೂ ಅಪಾಯಕಾರಿ ಆಗಿರುತ್ತದೆ. ಕಣ್ಣುಗಳ ಸೋಂಕುಗಳಲ್ಲಿ ಅತ್ಯಂತ ಸಾಮಾನ್ಯವಾದವುಗಳೆಂದರೆ ಕಂಜಕ್ಟಿವೈಟಿಸ್‌ ಅಥವಾ ಐ ಫ್ಲೂ, ಕಾರ್ನಿಯಲ್ ಅಲ್ಸರ್‌ ಮುಂತಾದವು.

ಇವುಗಳಿಂದ ರಕ್ಷಿಸಿಕೊಳ್ಳುವ ಏಕೈಕ ಉಪಾಯವೆಂದರೆ ಸ್ವಚ್ಛತೆ. ಪ್ರತಿದಿನ ನಿಮ್ಮ ಕಣ್ಣುಗಳನ್ನು ಸ್ವಚ್ಛ ನೀರಿನಿಂದ ತೊಳೆಯಿರಿ. ಎದ್ದ ಬಳಿಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ತೆಗೆದ ಬಳಿಕ ಕಣ್ಣುಗಳನ್ನು ಹೆಚ್ಚು ಉಜ್ಜಬೇಡಿ. ಏಕೆಂದರೆ ಅದು ಕಾರ್ನಿಯಾಗೆ ಹಾನಿ ತಂದೊಡ್ಡಬಹುದು. ಪೌಷ್ಟಿಕ ಆಹಾರ ಸೇವನೆ ಹಾಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ನೀವು ಬಳಸುವ ಟವೆಲ್‌, ಕಾಂಟ್ಯಾಕ್ಟ್ ಲೆನ್ಸ್ ಮುಂತಾದವನ್ನು ಯಾರಿಗೂ ಬಳಸಲು ಕೊಡಬೇಡಿ. ಮನೆಯಿಂದ ಹೊರಗೆ ಹೋಗುವಾಗ ಗಾಗಲ್ಸ್ ಧರಿಸಲು ಮರೆಯಬೇಡಿ.

 

ಪ್ರ : ನನಗೆ 22 ವರ್ಷ. ಕೋವಿಡ್ಕಾರಣದಿಂದ ನನ್ನ ಕಾಲೇಜಿನವರು ಆನ್ಲೈನ್ಕ್ಲಾಸಸ್ನಡೆಸುತ್ತಿದ್ದಾರೆ. ಅದಕ್ಕಾಗಿ ನಾನು ಲ್ಯಾಪ್ಟಾಪ್ಬಳಸುತ್ತೇನೆ. ಜೊತೆಗೆ ನಡು ನಡುವೆ ಮನರಂಜನೆಗಾಗಿ ಮೊಬೈಲ್ ಕೂಡ ಬಳಸುತ್ತಿದ್ದೇನೆ. ಈಗ ನನಗೆ ಕಣ್ಣು ನೋವು ಅನಿಸುತ್ತಿರುತ್ತದೆ. ಸಮಸ್ಯೆಯಿಂದ ಹೊರಬರುವುದು ಹೇಗೆ?

ಉ : ನಿಮ್ಮ ವಿವರಣೆಯಿಂದ ನಿಮಗೆ ಡ್ರೈ ಐ ಸಿಂಡ್ರೋಮ್ ಸಮಸ್ಯೆ ಇದೆ ಎನ್ನುವುದು ಗೊತ್ತಾಗುತ್ತದೆ. ಲ್ಯಾಪ್ ಟಾಪ್‌ನ್ನು  ಬಹಳ ಹೊತ್ತು ನೋಡುತ್ತಾ ಇರುವುದರಿಂದ ಕಣ್ಣುಗಳಲ್ಲಿ ಶುಷ್ಕತನದ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದ ಕಣ್ಣುಗಳಲ್ಲಿ ಉರಿ, ತುರಿಕೆಯ ಸಮಸ್ಯೆ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕಣ್ಣನ್ನು ಉಜ್ಜಿಕೊಳ್ಳುತ್ತೇವೆ. ಆಗ ಸಮಸ್ಯೆ ಇನ್ನಷ್ಟು ಗಂಭೀರ ರೂಪ ಪಡೆದುಕೊಳ್ಳುತ್ತದೆ. ನೀವು ಈ ಸಮಸ್ಯೆಯಿಂದ ಹೊರಬರಲು ಲ್ಯಾಪ್‌ ಟಾಪ್‌ ಹಾಗೂ ಮೊಬೈಲ್ ‌ಬಳಕೆ ಕಡಿಮೆ ಮಾಡಿ. ಅಗತ್ಯವಿದ್ದಾಗ ಮಾತ್ರ ಅವನ್ನು ಬಳಸಿ. ಲ್ಯಾಪ್‌ ಟಾಪ್‌ಬಳಸುವಾಗ ಕಣ್ಣುಗಳನ್ನು ಆಗಾಗ ಮಿಟುಕಿಸುತ್ತಾ ಇರಿ. ಅದರ ಬ್ರೈಟ್ ನೆಸ್‌ ಕಡಿಮೆ ಮಾಡಿ. ಕೆಲಸ ಮುಗಿದ ಮೇಲೆ ಕಣ್ಣುಗಳನ್ನು ಮುಚ್ಚಿಕೊಂಡು ಅದರ ಮೇಲೆ ತಣ್ಣೀರಿನ ಪಟ್ಟಿ ಇಟ್ಟುಕೊಳ್ಳಿ. ಆಹಾರದ ಬಗ್ಗೆ ಗಮನಹರಿಸಿ ಹಾಗೂ ಹೆಚ್ಚೆಚ್ಚು ನೀರು ಕುಡಿಯುತ್ತಾ ಇರಿ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ