ನಾನು 22ರ ತರುಣಿ. ನನ್ನ ಮುಖದಲ್ಲಿ ಮೊಡವೆಗಳಾಗಿವೆ. ನಾನು ಯಾವ ರೀತಿಯ ಫೇಶಿಯಲ್ ಮಾಡಿಸಿದರೆ ಚೆನ್ನ?ಮೊಡವೆಗಳಿರುವ ಮುಖಕ್ಕೆ ಫೇಶಿಯಲ್ ಮಾಡಿಸಬೇಕೆಂದರೆ, ಡೀಪ್‌ ಪೋರ್‌ ಕ್ಲೆನ್ಸಿಂಗ್‌ ಒಳ್ಳೆಯದು. ಇದು ಚರ್ಮಕ್ಕೆ ತಗುಲಿದ ಇನ್‌ಫೆಕ್ಷನ್‌ನ್ನು ದೂರ ಮಾಡುತ್ತದೆ. ಈ ವಿಧಾನದಲ್ಲಿ ಹೈ ಫ್ರೀಕ್ವೆನ್ಸಿ ಟ್ರೀಟ್‌ಮೆಂಟ್‌ಗಾಗಿ ಆ್ಯಂಟಿ ಸೆಪ್ಟಿಕ್‌ ಮಾಸ್ಕ್ ಸಹ ಧರಿಸಬೇಕಾಗುತ್ತದೆ. ಇದರಲ್ಲಿ ಚರ್ಮಕ್ಕೆ ಡೀಪ್‌ ಹೈಡ್ರೇಶನ್‌ ಸಹ ಒದಗಿಸಲಾಗುತ್ತದೆ. ಇದರಿಂದ ಚರ್ಮ ಎಷ್ಟೋ ಬೇಗ ಸುಧಾರಿಸುತ್ತದೆ. ಇಷ್ಟು ಮಾತ್ರವಲ್ಲದೆ, ಮೊಡವೆಗಳಿರುವ ಮುಖಕ್ಕೆ ಮೈಕ್ರೊಡರ್ಮ ಅಬ್ರೆಶನ್‌ ಸಹ ಮಾಡಿಸಬೇಕು. ಇದರಿಂದ ಚರ್ಮಕ್ಕೆ ಹಾನಿ ಮಾಡುವ ಬ್ಲ್ಯಾಕ್‌ ಹೆಡ್ಸ್/ವೈಟ್‌ ಹೆಡ್ಸ್ ತಂತಾನೇ ದೂರವಾಗುತ್ತದೆ.

ನಾನು 36ರ ಮಹಿಳೆ. ನನ್ನ ಕಂಗಳ ಕೆಳಗೆ ಕಪ್ಪು ಉಂಗುರುಗಳು (ಡಾರ್ಕ್‌ ಸರ್ಕಲ್ಸ್) ಹೆಚ್ಚಾಗತೊಡಗಿವೆ, ಇದರಿಂದ ನಾನು ಆತಂಕಗೊಂಡಿದ್ದೇನೆ. ಇದನ್ನು ನಿವಾರಿಸಲು ಏನಾದರೂ ಉಪಾಯ ತಿಳಿಸುವಿರಾ?

ಸೌತೆಕಾಯಿಯ ಸಿಪ್ಪೆ ಹೆರೆದು ಹೋಳಾಗಿಸಿ. ಇದಕ್ಕೆ ಕ್ಯಾರೆಟ್‌ ತುರಿ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ತುಸು ನಿಂಬೆ ರಸ ಬೆರೆಸಿ, ಮುಖದಲ್ಲಿ ಕಪ್ಪು ಉಂಗುರಗಳಿರುವ ಕಡೆ, ಹಗಲಲ್ಲಿ ಬಿಡುವಿರುವಾಗ ಹಾಗೂ ರಾತ್ರಿ ಮಲಗುವ ಮುನ್ನಾ ಪ್ರತಿ ದಿನ ಮಾಡಬೇಕು. ಹೀಗೆ ಸತತ 15-20 ದಿನ ಮಾಡುವುದರಿಂದ ಹೆಚ್ಚಿನ ಲಾಭವಿದೆ. ಜೊತೆಗೆ ಮಧ್ಯೆ ಮಧ್ಯೆ ಆ್ಯಂಟಿ ರಿಂಕಲ್ಸ್ ಕ್ರೀಂ ಹಚ್ಚಿ ಮಲಗಬಹುದು. ಈ ಡಾರ್ಕ್‌ ಸರ್ಕಲ್ಸ್ ಇತರರಿಗೆ ಕಾಣದಂತೆ ಮಾಡಲು, ಮೇಕಪ್‌ ಮಾಡಿಕೊಳ್ಳುವಾಗ ಫೌಂಡೇಶನ್ ಕ್ರೀಮಿಗೆ ಬದಲಾಗಿ ಕನ್ಸೀಲರ್‌ ಉಪಯೋಗಿಸಿ. ಪ್ರತಿ ದಿನ 10-12 ಗ್ಲಾಸ್‌ ನೀರು ಕುಡಿಯಿರಿ. ನಿಮ್ಮ ಆಹಾರದಲ್ಲಿ ಮೊಳಕೆ ಕಟ್ಟಿದ ಕಾಳು, ತಾಜಾ ಹಸಿರು ತುಂಬಿದ ಸೊಪ್ಪು ತರಕಾರಿ ಬಳಸಿರಿ. ಸಲಾಡ್‌, ಕೋಸಂಬರಿ ಮೂಲಕ ಹೆಚ್ಚು ಹಸಿ ಪದಾರ್ಥ ಸೇವಿಸಿ. ಕಿತ್ತಳೆ, ಮೂಸಂಬಿ, ಕಲ್ಲಂಗಡಿ ಹಣ್ಣಿನಂಥ ಹೆಚ್ಚು ದ್ರವ ತುಂಬಿದ ಹಣ್ಣುಗಳನ್ನು ಸೇವಿಸಿ, ರಾತ್ರಿ ಕಣ್ತುಂಬ ನಿದ್ದೆ ಮಾಡಿ. ಸಾಧ್ಯವಾದಷ್ಟು ಟೆನ್ಶನ್‌ ಚಿಂತೆಗಳಿಂದ ದೂರವಿರಿ.

ನಾನು 31ರ ಹರೆಯದ ಮಹಿಳೆ. ಏಜಿಂಗ್‌ನ ಲಕ್ಷಣಗಳೇನು? ಆ್ಯಂಟಿ ಏಜಿಂಗ್‌ ಕ್ರೀಂ ಯಾವಾಗ ಹಚ್ಚಿಕೊಳ್ಳಲು ಶುರು ಮಾಡಬೇಕು?

ವಯಸ್ಸು ಹೆಚ್ಚುತ್ತಿದ್ದಂತೆ ಕ್ರಮೇಣ ಅದರ ಪ್ರಭಾವ ಚರ್ಮದ ಮೇಲೆ ದಟ್ಟವಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಚರ್ಮ ಶುಷ್ಕವಾಗಿ, ಸುಕ್ಕು ಕೂಡುತ್ತದೆ. ಚರ್ಮದಲ್ಲಿ ಮೃದುತನ ಹೋಗಿ, ನಿಧಾನವಾಗಿ ಒರಟಾಗತೊಡಗುತ್ತದೆ. ತೆಳುವಾಗುತ್ತಾ ಜೋತುಬೀಳ ತೊಡಗುತ್ತದೆ. ಇದರ ಪ್ರಭಾವ ಕಂಗಳ ಕೆಳಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ನಕ್ಕಾಗಿಲ್ಲ ಕೆನ್ನೆ ಬಳಿ ಆಳವಾದ ಗೀರುಗಳು ಕಾಣಿಸಬಹುದು. ಹಣೆಯಲ್ಲೂ ಸುಕ್ಕುಗಳು, ಮಡಿಕೆಯಾದ ಗೆರೆಗಳು ಕಾಣಿಸಬಹುದು. ಇದೇ ಏಜಿಂಗ್‌ ಅಥವಾ ವೃದ್ಧಾಪ್ಯದ ಮೊದಲ ಹಂತ. ಇದನ್ನು ಸಾಧ್ಯವಾದಷ್ಟು ತಡೆಗಟ್ಟಲು ಯತ್ನಿಸುವುದೇ ಆ್ಯಂಟಿ ಏಜಿಂಗ್‌. 26-27ರ ಹರೆಯದಿಂದಲೇ ಯುವತಿಯರು ಆ್ಯಂಟಿ ಏಜಿಂಗ್‌ ಕ್ರೀಂ ಹಚ್ಚಲು ಆರಂಭಿಸಬೇಕು. ಸಾಧ್ಯವಾದಷ್ಟೂ ಬಿಸಿಲು ಮಳೆ ಚಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಡಿ. ಬಿಸಿಲಲ್ಲಿ ಹೋಗಬೇಕಾದಾಗ ಮರೆಯದೆ ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮುನ್ನ ಅಗತ್ಯವಾಗಿ ಮಾಯಿಶ್ಚರೈಸಿಂಗ್‌ ಕ್ರೀಂ ಹಚ್ಚಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ