ಉ : ತ್ವಚೆಯ ಮೇಲೆ ರೆಡ್ ಸ್ಪಾಟ್ ಉಂಟಾಗಲು ಹಲವು ಕಾರಣಗಳಿರಬಹುದು. ಇದು ಇನ್ ಫೆಕ್ಷನ್, ಅಲರ್ಜಿ ಅಥವಾ ಊತದಿಂದ ಆಗಿರಬಹುದು. ರೆಡ್ ಸ್ಪಾಟ್ ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಂಡರೂ ರೆಡ್ ಸ್ಪಾಟ್ ಚಿಂತೆಗೆ ಕಾರಣವಾಗದಿರಬಹುದು. ಆದರೆ ಇದು ಲ್ಯೂಕೆಮಿಯಾ ಅಂದರೆ ಬ್ಲಡ್ ಕ್ಯಾನ್ಸರ್ ನ ಸಂಕೇತ ಕೂಡ ಆಗಿರಬಹುದು. ಇವು ಒಮ್ಮೊಮ್ಮೆ ಆಕಸ್ಮಿಕವಾಗಿ ಕಾಣಿಸಿಕೊಂಡು ಬಹುಬೇಗ ಕಣ್ಮರೆಯಾಗಬಹುದು. ನೀವು ಯಾರಾದರೂ ಚರ್ಮರೋಗ ತಜ್ಞರ ಬಳಿ ತೋರಿಸಿಕೊಳ್ಳಿ. ಹಾಗೊಮ್ಮೆ ಅಲರ್ಜಿ ಡ್ರೈ ಸ್ಕಿನ್ ಅಥವಾ ಆ್ಯಕ್ನೆಯಿಂದ ತ್ವಚೆಯ ಮೇಲೆ ಕೆಂಪು ಕಲೆ ಉಂಟಾಗಿದ್ದರೆ ಜೇನುತುಪ್ಪದ ಲೇಪನ ಸಾಕಷ್ಟು ನಿರಾಳತೆ ದೊರಕಿಸಿಕೊಡುತ್ತದೆ. ಜೇನುತುಪ್ಪವನ್ನು ನೈಸರ್ಗಿಕ ಔಷಧಿ ಎಂದು ಭಾವಿಸಲಾಗುತ್ತದೆ. ಆದರೆ ಸನ್ ಬರ್ನ್ ಸಮಸ್ಯೆಯಿದ್ದಾಗ ಜೇನುತುಪ್ಪ ಲೇಪಿಸಬಾರದು.
ಪ್ರ : ನನ್ನ ವಯಸ್ಸು 21. ನಾನು ಇತ್ತೀಚೆಗೆ ಲೈಟ್ ಮೇಕಪ್ ಮಾಡಿಕೊಳ್ಳಲು ಇಚ್ಛಿಸುತ್ತೇನೆ. ಇದರ ಸರಿಯಾದ ವಿಧಾನ ತಿಳಿಸಿ.
ಉ : ಮೇಕಪ್ ಮಾಡಿಕೊಳ್ಳುವ ಮೊದಲು ನಿಮ್ಮ ಮುಖ ಪರಿಪೂರ್ಣವಾಗಿ ಸ್ವಚ್ಛವಾಗಿದೆಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ಟೋನರ್ ನ್ನು ಬಳಸುವುದರಿಂದ ಮೇಕಪ್ ಹರಡುವುದಿಲ್ಲ. ವೈಟ್ ಮೇಕಪ್ ಮಾಡಿಕೊಳ್ಳುವಾಗ ಕಾಜಲ್ ನ್ನು ಅವಶ್ಯವಾಗಿ ಬಳಸಿ ಹಾಗೂ ಗಾಢ ವರ್ಣಗಳ ಶ್ಯಾಡೋ ಲೇಪಿಸುವುದರಿಂದ ದೂರ ಇರಿ. ಒಂದು ವೇಳೆ ಲೇಪಿಸಿಕೊಳ್ಳಲೇಬೇಕಿದ್ದರೆ ನ್ಯೂಟ್ರಲ್ ಕಲರ್ ನ್ನು ಬಳಸಿ ಲೈಟ್ ಕಲರಿನ ಲಿಪ್ ಸ್ಟಿಕ್ ನ್ನು ಗ್ಲಾಸ್ ಜೊತೆಗೆ ಲೇಪಿಸುವುದು ಸೂಕ್ತವಾಗಿರುತ್ತದೆ. ನೀವು ಗ್ಲಿಸ್ಟರ್ ನ್ನು ಬಳಸಬೇಡಿ. ಹಗಲಿನಲ್ಲಿ ಬಿಸಿಲು ಹಾಗೂ ಉಷ್ಣತೆಯ ಕಾರಣದಿಂದ ನಿಮ್ಮ ಮೇಕಪ್ ಹಾಳಾಗಬಹುದು. ಹೀಗಾಗಿ ಯಾವಾಗಲೂ ವಾಟರ್ ಪ್ರೂಫ್ ಪ್ರಾಡಕ್ಟ್ ಗಳನ್ನೇ ಬಳಸಿ. ಮೇಕಪ್ ಮಾಡಿಕೊಳ್ಳುವ 20 ನಿಮಿಷಗಳ ಮೊದಲು ಸನ್ ಸ್ಕ್ರೀನ್ ಲೇಪಿಸಿಕೊಳ್ಳುವುದನ್ನು ಮರೆಯಬೇಡಿ.
ಪ್ರ : ವಯಸ್ಸು 34. ನಾನು 1 ವರ್ಷ ಮೊದಲು ಹೇರ್ ರೀಬಾಂಡಿಂಗ್ ಮಾಡಿಸಿಕೊಂಡಿದ್ದೆ. ಈಗ ನನ್ನ ಕೂದಲು ಪುನಃ ಶುಷ್ಕಗೊಳ್ಳುತ್ತಿದೆ? ಎಷ್ಟು ಸಲ ಹೇರ್ ರೀಬಾಂಡಿಂಗ್ ಮಾಡಿಸಿಕೊಳ್ಳಬಹುದು ತಿಳಿಸಿ.
ಉ : ಇತ್ತೀಚೆಗೆ ಜಪಾನಿ ಥರ್ಮಲ್ ಪ್ರಕ್ರಿಯೆ ಸ್ಟ್ರೇಟನಿಂಗ್ ಕೂದಲುಗಳನ್ನು ಬಿಡಿಸಿಕೊಳ್ಳುವ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಅದರಲ್ಲಿ ರೀಬಾಂಡಿಂಗ್ ಪ್ರಕ್ರಿಯೆಯ ಪ್ರಭಾವ 1 ವರ್ಷದ ತನಕ ಇರುತ್ತದೆ. ಅದರ ಪರಿಣಾಮವನ್ನು ಹೊಸದಾಗಿ ಬೆಳೆದ ಕೂದಲಿನ ಮೇಲೂ ಕಾಣಬಹುದು. ರೀಬಾಂಡಿಂಗ್ ಇದು ಕೂದಲನ್ನು ಸುಧಾರಣೆ ಮಾಡುವ ದುಬಾರಿ ಪ್ರಕ್ರಿಯೆಯಾದರೂ ಪರಿಣಾಮಕಾರಿ ವಿಧಾನವಾಗಿದೆ.