ನಾನು 20 ವರ್ಷದ ಯುವತಿ. ಮದುವೆಯಾಗಿ 6 ತಿಂಗಳಾಯಿತು. ಈಗ ತವರುಮನೆಯಲ್ಲಿರುವೆ. ಮದುವೆಯ ಬಳಿಕ ಪ್ರಸ್ತದಂದು ನನಗೆ ರಕ್ತಸ್ರಾವವಾಯಿತು. ವಿಪರೀತ ನೋವು ಕೂಡ ಉಂಟಾಯಿತು. ನನ್ನ ಪತಿಗೆ 30 ವರ್ಷ. ಅವರಿಗೆ ಹೆಚ್ಚು ವಯಸ್ಸಾಗಿರುವ ಕಾರಣದಿಂದ ನನಗೆ ಅಷ್ಟೊಂದು ನೋವಾಯಿತೆ? ನಾನು ಬೇರಾರಿಗೂ ಈ ಪ್ರಶ್ನೆ ಕೇಳಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಬಳಿ ಕೇಳುತ್ತಿರುವೆ. ದಯವಿಟ್ಟು ಈ ನನ್ನ ಸಮಸ್ಯೆಗೆ ಉತ್ತರಿಸಿ.

ಪ್ರಸ್ತದ ದಿನದಂದು ಮೊದಲ ಬಾರಿ ಸಮಾಗಮ ನಡೆಸಿದಾಗ ರಕ್ತಸ್ರಾವ ಹಾಗೂ ನೋವು ಉಂಟಾಗುವುದು ಸಹಜ. ಗಂಡನಿಗೆ ವಯಸ್ಸು ಹೆಚ್ಚಾಗಿರುವುದು ಇದಕ್ಕೆ ಕಾರಣವಲ್ಲ. ಹೀಗಾಗಿ ಮನಸ್ಸನ್ನು ಪೂರ್ವಾಗ್ರಹ ಪೀಡಿತರಾಗಿಸಿಕೊಳ್ಳಬೇಡಿ. ಸಮಾಗಮ ಪ್ರತಿಸಲ ಕಷ್ಟಕರವಾಗಿರುವುದಿಲ್ಲ. ಗಂಡಹೆಂಡತಿ ತನುಮನದಿಂದ ಸಮಾಗಮ ಪ್ರಕ್ರಿಯೆಯಲ್ಲಿ ಲೀನರಾದರೆ ಸಮಾಗಮ ಖುಷಿದಾಯಕವಾಗಿಯೇ ಇರುತ್ತದೆ. ಮಾರುಕಟ್ಟೆಯಲ್ಲಿ ಈ ಕುರಿತಂತೆ ಡಾ. ಅನುಪಮಾ ನಿರಂಜನ, ಡಾ. ಅನ್ನಪೂರ್ಣಮ್ಮ, ಡಾ. ಲೀಲಾತಿ ದೇವದಾಸ್‌ ಮುಂತಾದವರ ಅನೇಕ ಪುಸ್ತಕಗಳು ಲಭ್ಯವಿದ್ದು ಉತ್ತಮ ಪುಸ್ತಕ ಕೊಂಡು ನಿಮ್ಮ ಲೈಂಗಿಕ ಜ್ಞಾನ ಹೆಚ್ಚಿಸಿಕೊಳ್ಳಬಹುದು.

ನಾನು 24 ವರ್ಷದ ಮಹಿಳೆ. 2 ಮಕ್ಕಳು ಕೂಡ ಇವೆ. ಕಳೆದ 1 ವರ್ಷದಿಂದ ನಾನು ಗಂಡನಿಂದ (ನನಗಿಂತ 13 ವರ್ಷ ದೊಡ್ಡವರು) ಬೇರೆ ಇದ್ದೇನೆ. ಮಕ್ಕಳು ಕೂಡ ಗಂಡನ ಜೊತೆಗೇ ಇದ್ದಾರೆ. ಈ ಮಧ್ಯೆ ನಮ್ಮ ಸಂಬಂಧಿಕರ ಯುವಕನೊಬ್ಬ ನನ್ನ ಜೀವನದಲ್ಲಿ ಬಂದ. ನಮ್ಮಿಬ್ಬರ ನಡುವೆ ಅದೆಷ್ಟು ಪ್ರೀತಿ ಉಂಟಾಯಿತೆಂದರೆ, ನಾವಿಬ್ಬರೂ ರಿಜಿಸ್ಟರ್ಡ್‌ ಮದುವೆ ಕೂಡ ಮಾಡಿಕೊಂಡೆವು. ಆದರೆ ನಾವಿಬ್ಬರೂ ಜೊತೆಯಲ್ಲಿ ವಾಸಿಸುತ್ತಿಲ್ಲ. ನಾನು ತಾಯಿಯ ಜೊತೆಗೆ ಇದ್ದೇನೆ. ನಾವು ನಮ್ಮ ಮದುವೆಯ ಸಂಗತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಜನ ಏನೆನ್ನುತ್ತಾರೊ ಎಂಬ ಹೆದರಿಕೆ ನನಗೆ. ನನಗೆ ನನ್ನ ಮಕ್ಕಳನ್ನು ಬಿಡಲೂ ಆಗುತ್ತಿಲ್ಲ, ಇತ್ತ ಕಡೆ ಪ್ರೀತಿಯನ್ನು ಸಹಿತ.

ನಿಮ್ಮ ಇಬ್ಬರು ಮಕ್ಕಳು ಮೊದಲಿನಿಂದಲೇ ಗಂಡನ ಬಳಿ ವಾಸಿಸುತ್ತಿದ್ದಾರೆ. ಅಂದರೆ ನೀವು ಅವರನ್ನು ಮೊದಲೇ ಬಿಟ್ಟುಬಿಟ್ಟಿರುವಿರಿ. ನಿಮಗೆ ಅವರ ಬಗ್ಗೆ ನಿಜವಾಗಿಯೂ ಚಿಂತೆ ಇದ್ದಿದ್ದರೆ ನೀವು ಹೀಗೆ ಅವರನ್ನು ನಡುನೀರಿನಲ್ಲಿ ಬಿಟ್ಟು ಆತುರಾತುರದಲ್ಲಿ ಮರುಮದುವೆಯಾಗುತ್ತಿರಲಿಲ್ಲ. ನಿಮ್ಮ ಸಂಬಂಧಿಕರ ಯುವಕನೊಂದಿಗೆ ರಿಜಸ್ಟರ್ಡ್‌ ಮದುವೆಯಾಗಿ ಜನರು ಏನನ್ನುತ್ತಾರೊ ಎಂಬ ಅಳುಕಿನಿಂದ ತಾಯಿಯ ಮನೆಯಲ್ಲೇ ಉಳಿದಿರುವಿರಿ. ಈ ಭಯ ನಿಮಗೆ ಮದುವೆಗೆ ಮುಂಚೆಯೇ ಇರಬೇಕಿತ್ತು.

ನೀವೀಗ ಮರುಮದುವೆ ಮಾಡಿಕೊಂಡಿರುವುದರಿಂದ ನಿಮ್ಮ ಹೊಸ ಗಂಡನೊಂದಿಗೇ ಇರಿ. ನಿಮ್ಮ ತಾಯಿಗೆ ಏಕೆ ಹೊರೆಯಾಗಿರುವಿರಿ? ಇನ್ನು ಮಕ್ಕಳ ಬಗ್ಗೆ ಹೇಳಬೇಕೆಂದರೆ, ಅವರು ನಿಮ್ಮ ಮಾಜಿ ಪತಿಯೊಂದಿಗೆ ನಿಶ್ಚಿಂತೆಯಿಂದಿದ್ದಾರೆ. ನೀವು ಸ್ವಾರ್ಥಿಯಾಗಿ ಕೇವಲ ನಿಮ್ಮ ಹಿತವನ್ನಷ್ಟೇ ಗಮನಿಸಿದಿರಿ, ಈಗ ಹಿಂತಿರುಗಿ ನೋಡಿದರೆ ಏನೂ ದಕ್ಕಲಾರದು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ