ಕೆಲವು ತಿಂಗಳುಗಳ ಹಿಂದೆ ಮೆಟ್ರೋ ಹಾಗೂ ಬೇರೆ ಕೆಲವು ನಗರಗಳಲ್ಲಿ ವಾಸಿಸುವ 1200 ಮಹಿಳೆಯರ ಕುರಿತು `ಮಾಮ್ಸ್ ಪ್ರೆಸೊ' ಎಂಬ ಕಂಪನಿ ಸಮೀಕ್ಷೆಯೊಂದನ್ನು ಪ್ರಕಟಿಸಿತು. ಈ ಸಮೀಕ್ಷೆಯಿಂದ ತಿಳಿದು ಬಂದ ಸಂಗತಿ ಎಂದರೆ, ಶೇ.70ರಷ್ಟು ತಾಯಂದಿರು ತಮ್ಮ ಜೀವನದ ಬಗ್ಗೆ ಖುಷಿಯಿಂದಿಲ್ಲ. ಶೇ.59ರಷ್ಟು ಮಾತೆಯರು ತಮ್ಮ ವೈವಾಹಿಕ ಜೀವನದ ಬಗ್ಗೆ ಅತೃಪ್ತಿಯಿಂದಿದ್ದರೆ, ಶೇ.73ರಷ್ಟು ತಾಯಂದಿರಿಗೆ ತಾವು ತಮ್ಮ ಮಕ್ಕಳ ದೃಷ್ಟಿಯಲ್ಲಿ ಒಳ್ಳೆಯ ತಾಯಿ ಆಗಲಿಲ್ಲ ಎಂಬ ಬಗ್ಗೆ ಖೇದವಿದೆ.

ಮಾತೃತ್ವದ ಪಯಣ ಅದೆಷ್ಟು ಕಷ್ಟಕರ ಎಂಬುದರ ಬಗ್ಗೆ ಒಮ್ಮೆ ಯೋಚಿಸಿ. 9 ತಿಂಗಳ ಕಾಲ ಹೊಟ್ಟೆನೋವು, ಎದೆ ಉರಿ, ಅದೆಷ್ಟೋ ಸಲದ ವಾಂತಿ, ಬೆನ್ನುನೋವು, ಕಾಲುಗಳಲ್ಲಿ ಊತ, ಮಲಬದ್ಧತೆ, ವೆರಿಕೋಸ್‌ ವೇನ್ಸ್ ನಂತಹ ತೊಂದರೆಗಳು, ಕೊನೆಯಲ್ಲಿ ದೀರ್ಘಾವಧಿಯ ಹೆರಿಗೆ ನೋವು, ಇಷ್ಟೆಲ್ಲ ಸಹಿಸಿಕೊಂಡ ಬಳಿಕವೇ ಮಹಿಳೆಯೊಬ್ಬಳು ತಾಯಿಯಾಗುವ ಅರ್ಹತೆ ಪಡೆದುಕೊಳ್ಳುತ್ತಾಳೆ. ಆಕೆ ಮಕ್ಕಳಿಗೆ ಜನ್ಮ ನೀಡುತ್ತಾಳೆ, ಗಂಡನಿಗೆ ತಂದೆಯಾಗುವ ಗೌರವ ತಂದುಕೊಡುತ್ತಾಳೆ. ತಾಯಿಯಾದ ಬಳಿಕ ಆಕೆ ಮಗುವಿನ ಜೊತೆ ರಾತ್ರಿಯಿಡೀ ಎಚ್ಚರದಿಂದ ಇರಬೇಕಾಗುತ್ತದೆ. ತನ್ನ ಹೊಟ್ಟೆಯ ಬಗ್ಗೆ ಕಾಳಜಿ ವಹಿಸದೆ ಮಗುವಿಗೆ ಕಾಲಕಾಲಕ್ಕೆ ಹಾಲುಣಿಸುತ್ತಾಳೆ, ಡೈಪರ್‌ ಬದಲಿಸುತ್ತಾಳೆ. ಮಗುವಿಗೆ ಪ್ರೀತಿಯಿಂದ ಸ್ನಾನ ಮಾಡಿಸುತ್ತಾಳೆ. ಇಷ್ಟೆಲ್ಲ ಮಾಡುವ ಒಬ್ಬ ತಾಯಿಯ ಖುಷಿಯ ಬಗ್ಗೆ ಅದೆಷ್ಟು ಜನರಿಗೆ ಕಾಳಜಿ ಇರುತ್ತದೆ.

ಅಮ್ಮಂದಿರಿಗೇಕೆ ಅಸಮಾಧಾನ?

ಅಂದಹಾಗೆ 20-25 ವರ್ಷಗಳ ಹಿಂದೆ ಅವಿಭಕ್ತ ಕುಟುಂಬಗಳೇ ಹೆಚ್ಚಿನ ಪ್ರಮಾಣದಲ್ಲಿ ಇದ್ದವು. ಕುಟುಂಬದಲ್ಲಿ ಮಕ್ಕಳ ಯೋಗಕ್ಷೇಮಕ್ಕಾಗಿ ಯಾರಾದರೂ ಒಬ್ಬರಾದರೂ ಇರುತ್ತಿದ್ದರು. ಇಂದಿನ ತಂತ್ರಜ್ಞಾನದ ವಿಕಾಸದ ಯುಗದಲ್ಲಿ ಕುಟುಂಬಗಳು ಸಹ ಚಿಕ್ಕದಾಗಿಬಿಟ್ಟಿವೆ. ಹೀಗಾಗಿ ಅಮ್ಮನ ಸವಾಲುಗಳು ಮತ್ತು ಜವಾಬ್ದಾರಿಗಳು ಕೂಡ ಹೆಚ್ಚಾಗಿವೆ. ಮನೆಯಲ್ಲಿ ಹೆಚ್ಚು ಓದಿದ ವ್ಯಕ್ತಿ ಅಪ್ಪನೇ ಆಗಿರಬಹುದು ಅಥವಾ ಅಮ್ಮ ಹೊರಗೆ ಕೆಲಸಕ್ಕೆ ಹೋಗುತ್ತಿರಬಹುದು. ಆದರೆ ಮಕ್ಕಳಿಗೆ ಓದಿಸುವ, ಹೋಮ್ ವರ್ಕ್‌ ಮಾಡಿಸುವ ಕೆಲಸ ಮಾತ್ರ ಅಮ್ಮನದ್ದೇ ಆಗಿರುತ್ತದೆ. ಮಕ್ಕಳ ಬಗೆಗಿನ ಎಷ್ಟೋ ಸಂಗತಿಗಳು ಅಮ್ಮನನ್ನು ಆತಂಕಕ್ಕೆ ದೂಡುತ್ತವೆ. ಮಕ್ಕಳಿಗೆ ಇಂಟರ್‌ ನೆಟ್‌ ನ ಹೆಚ್ಚೆಚ್ಚು ಬಳಕೆ, ಊಟತಿಂಡಿ ತಿನ್ನುವ ಬಗ್ಗೆ ನಿರಾಕರಣೆ. ಒಂದುವೇಳೆ ಮಹಿಳೆ ಉದ್ಯೋಗಸ್ಥೆಯಾಗಿದ್ದರೆ, ಆಕೆ ಕುಟುಂಬ ಹಾಗೂ ಉದ್ಯೋಗದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಆಕೆ ಕಾರ್ಯಸ್ಥಳದಲ್ಲಿ ಲಿಂಗ ಅಸಮಾನತೆಯನ್ನು ಎದುರಿಸಬೇಕಾಗಿ ಬರುತ್ತದೆ. ಸಹೋದ್ಯೋಗಿಗಳು ಯೋಚಿಸುವುದೇ ಬೇರೆ, ಆಕೆ ಅಮ್ಮನಾಗಿದ್ದರೆ ತನ್ನ ಕೆಲಸಕಾರ್ಯಗಳನ್ನು ಸರಿಯಾಗಿ ನಿಭಾಯಿಸುವುದಿಲ್ಲ ಎಂದು. ಇದೇ ಸ್ಥಿತಿ ಪ್ರತಿ ಕುಟುಂಬದಲ್ಲೂ ಇರುತ್ತದೆ. ಅತ್ತೆ ಮಾವ, ನಾದಿನಿ ಮೈದುನ ಇವರೆಲ್ಲರಿಂದ ಒಂದು ರೀತಿ ಒತ್ತಡದಲ್ಲಿರುವುದು, ಅವರು ಹೇಳಿದಂತೆ ಕೇಳಬೇಕಾದದ್ದು, ಮನೆಯ ಎಲ್ಲ ಜವಾಬ್ದಾರಿಗಳನ್ನು ತನ್ನ ಹೆಗಲಿಗೆ ತೆಗೆದು ಕೊಂಡೂ ಕೂಡ ಆಕೆಗೆ ಒಳ್ಳೆಯ ದರ್ಜೆ ಸಿಗದಿರುವುದು ಅವಳಿಗೆ ಅತೃಪ್ತಿ ತರುತ್ತದೆ.

`ಪೆಪ್ಸಿಕೊ'ದ ಸಿಇಓ ಇಂದಿರಾ ನೂಯಿ ಸಂದರ್ಶನವೊಂದರಲ್ಲಿ, ``ನನ್ನ ಮದುವೆಯಾಗಿ 34 ವರ್ಷಗಳೇ ಆಗಿಹೋಗಿವೆ. ನನಗಿಬ್ಬರು ಪುತ್ರಿಯರಿದ್ದಾರೆ. ಪ್ರತಿದಿನ ಮುಂಜಾನೆ ಪತ್ನಿಯ ಪಾತ್ರ ನಿಭಾಯಿಸಬೇಕಾ ಅಥವಾ ತಾಯಿಯ ಪಾತ್ರ ನಿಭಾಯಿಸಬೇಕಾ ಎಂದು ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ