30 ವರ್ಷದ ಅನಿಲ್ ‌ಕಂಪನಿಯೊಂದರಲ್ಲಿ ಪ್ರಾಡಕ್ಟ್ ಮ್ಯಾನೇಜರ್‌ ಆಗಿದ್ದಾರೆ. ತಮ್ಮ ಮೊದಲ ಕ್ರಶ್‌ ಭಾವನೆಯ ಬಗ್ಗೆ ಹೀಗೆ ಹೇಳುತ್ತಾರೆ, ``ನಾನಾಗ 10ನೇ ತರಗತಿಯಲ್ಲಿದ್ದೆ. ಅವಳು ನನಗಿಂತ 1 ವರ್ಷ ಚಿಕ್ಕವಳು. ಅವಳು ಹೈಸ್ಕೂಲಿನ ಹುಡುಗಿಯರಲ್ಲಿಯೇ ಜನಪ್ರಿಯಳಾಗಿದ್ದಳು. ನಾನೂ ಕೂಡ ಅವಳನ್ನು ಸಾಕಷ್ಟು ಹೊಗಳುತ್ತಿದ್ದೆ. ನಾನು ಅವಳ ಬಗ್ಗೆ ಎಷ್ಟೊಂದು ಆಕರ್ಷಿತನಾಗಿದ್ದೆನೆಂದರೆ, ಅವಳ ಮುಖ ನೋಡದೆ ಇರಲು ನನಗೆ ಆಗುತ್ತಿರಲಿಲ್ಲ. ಅವಳಿಂದಾಗಿ ನಾನು ದಿನ ಬೇಗನೇ ಶಾಲೆಗೆ ಬರುತ್ತಿದ್ದೆ. ಅವಳೊಂದಿಗೆ ಡ್ಯಾನ್ಸ್ ಮಾಡಲು ನನಗೆ ಅವಕಾಶ ಸಿಕ್ಕಿತ್ತು. ಅದು ನನ್ನ ಮೊದಲ ಪ್ರೀತಿಯ ಆರಂಭವಾಗಿತ್ತು. ಆ ವಯಸ್ಸಿನ ಪ್ರೀತಿ ನಿಲ್ಲುವುದಿಲ್ಲ ಎನ್ನುತ್ತಾರೆ.

``ನನ್ನ ಜೀವನದಲ್ಲೂ ಹಾಗೆಯೇ ಆಯಿತು. ಅವಳನ್ನು ನಾನು ಬಹಳ ಪ್ರೀತಿಸುತ್ತೇನೆ ಎಂದುಕೊಂಡಿದ್ದೆ. ಆದರೆ ತಿಂಗಳಾಗುವಷ್ಟರಲ್ಲಿ ನನ್ನ ಹೃದಯದಿಂದ ಅವಳ ನೆನಪು ಹೊರಟುಹೋಯಿತು. ಆಗ ನನಗೆ ಇದು ಇನಾಫ್ಯಾಚ್ಯುಯೇಶನ್‌ಅಂದರೆ ಕೇವಲ ಆಸಕ್ತಿ, ಆಕರ್ಷಣೆ ಎಂದು ಗೊತ್ತಾಯಿತು.''

ತಜ್ಞರ ಪ್ರಕಾರ, ಇನ್‌ ಫ್ಯಾಚ್ಯುಯೇಶನ್‌ ತೀವ್ರತೆ ಪಡೆದುಕೊಂಡು ಸ್ವಲ್ಪ ಸಮಯದ ಮಟ್ಟಿಗೆ ಪ್ರಶಂಸೆಯ ಭಾವನೆ ಹೊಂದಿರುತ್ತದೆ. ಅದನ್ನು `ಕ್ರಶ್‌' ಎಂದೂ ಹೇಳಲಾಗುತ್ತದೆ.

ಮನೋತಜ್ಞೆ ಹಾಗೂ ಕೌನ್ಸಿಲರ್‌ ಅಂಕಿತಾ  ಹೀಗೆ ಹೇಳುತ್ತಾರೆ, ``ನಿಮಗೆ ಆ ವ್ಯಕ್ತಿಯ ಜೊತೆ ಇರಲು ತೀವ್ರ ಇಚ್ಛೆ ಉಂಟಾಗುತ್ತದೆ. ಆ ವ್ಯಕ್ತಿ ನಿಮ್ಮ ವಿಚಾರ ನಿಮ್ಮ ನಿದ್ರೆ, ದಿನಚರಿ ಹಾಗೂ ಊಟತಿಂಡಿಯ ಅಭ್ಯಾಸಗಳನ್ನು ಕೂಡ ಪ್ರಭಾವಿತಗೊಳಿಸಬಹುದು.''

ಇನ್‌ ಫ್ಯಾಚ್ಯುಯೇಶನ್‌ ಎನ್ನುವುದು ಬ್ರೇನ್‌ ಕೆಮಿಸ್ಟ್ರಿ ಮೇಲೆ ಪ್ರಭಾವ ಬೀರುತ್ತದೆ. ಒಂದೆಡೆ ಪುರುಷ ತೆಳ್ಳಗೆ, ಸ್ಮಾರ್ಟ್‌ ಆಗಿರುವ ಮಹಿಳೆಯ ಬಗ್ಗೆ ಆಕರ್ಷಿತನಾಗಬಹುದು. ಆಧುನಿಕ ಸಂಬಂಧದಲ್ಲಿ ಹಲವು ಬದಲಾವಣೆಗಳಾಗಿವೆ. ಅಂಕಿತಾ ಈ ಬಗ್ಗೆ ಹೇಳುವುದು ಹೀಗೆ, ``ಇನ್‌ ಫ್ಯಾಚ್ಯುಯೇಶನ್‌ ನಲ್ಲಿ ನನಗೆ ಒಮ್ಮೊಮ್ಮೆ ಪ್ರೀತಿಯಾಗಿದೆ ಎನಿಸುತ್ತದೆ. ಆದರೆ ಹಾಗೇನೂ ಅಲ್ಲ. ಅದು ಯಾವಾಗಲಾದರೂ ಅಂತ್ಯಗೊಳ್ಳಬಹುದು.''

ಗುರುತಿಸುವುದು ಹೇಗೆ?

ವಿಶೇಷಜ್ಞರು ಇನ್‌ ಫ್ಯಾಚ್ಯುಯೇಶನ್‌ ನ್ನು ಗುರುತಿಸುವುದು ಹಾಗೂ ಅದರಿಂದ ಹೇಗೆ ಹೊರಬರಬೇಕು ಎನ್ನುವುದರ ಬಗ್ಗೆ ಟಿಪ್ಸ್ ಕೊಟ್ಟಿದ್ದಾರೆ. 27 ವರ್ಷದ ದೀಪಿಕಾ ಹೀಗೆ ಹೇಳುತ್ತಾರೆ, ``ಕಾಲೇಜಿನಲ್ಲಿ ನನಗೆ ಓರ್ವ ಪ್ರತಿಭಾವಂತ, ಕ್ರಿಯೇಟಿವ್‌, ವ್ಯಕ್ತಿ ಬಗ್ಗೆ ಆಸಕ್ತಿ ಹುಟ್ಟಿತು. ಅವನ ಜೊತೆ ಸಂಬಂಧ ಇಟ್ಟುಕೊಳ್ಳಲು ನಾನು ಬಯಸಿದ್ದೆ. ಆದರೆ ಅವನು ನನ್ನ ಮೇಲೆ ಡಾಮಿನೇಟ್‌ ಮಾಡಲು ಶುರು ಮಾಡಿದೆ. ಅವನೊಂದಿಗೆ ಮಾತುಕತೆ ನಡೆಸಿದಾಗ ನಾನು  ಅಂದುಕೊಂಡಂತೆ ಅವನಲ್ಲಿ ಅಂತಹ ವಿಶೇಷತೆ ಏನಿಲ್ಲ ಎಂದು ಮನವರಿಕೆಯಾಯಿತು. ಹೀಗಾಗಿ ನಾನು ಕ್ರಮೇಣ ಅವನಿಂದ ದೂರವಾಗುತ್ತ ಬಂದೆ, ಅವನು ನನ್ನನ್ನು ಸಂಪರ್ಕಿಸಲು ಅದೆಷ್ಟೋ ಸಲ ಪ್ರಯತ್ನ ಮಾಡಿದ. ಆದರೆ ನನಗೆ ಅವನ ಬಗ್ಗೆ ಆಸಕ್ತಿ ಸಂಪೂರ್ಣ ಹೊರಟು ಹೋಗಿತ್ತು.''

ಕನ್ಸಲ್ಟೆಂಟ್‌ ಹಾಗೂ ಮನೋತಜ್ಞ ರವಿ ಹೀಗೆ ಹೇಳುತ್ತಾರೆ, ``ನಮ್ಮ ಮೆದುಳಿನಲ್ಲಿ ಕೆವಲ ಪ್ಲೇಜರ್‌ ಸೆಂಟರ್ಸ್‌ ನಿಂದ ಡೋಪಾಮೈನ್‌ ಹೆಚ್ಚಾಗಿ ಉತ್ಪತ್ತಿಯಾಗುವುದರಿಂದ ತಮ್ಮ ಕ್ರಶ್‌ ಬಗ್ಗೆ ಅತೀ ಪ್ರೀತಿ ಹುಟ್ಟಲಾರಂಭಿಸುತ್ತದೆ. ಅದೇ ಸಮಯದಲ್ಲಿ ಸೆರೋಟೋನಿನ್‌ ನ ಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ. ಅದು ಫೀಲ್ ಗುಡ್‌ ಹಾರ್ಮೋನ್‌. ಅದರ ಪರಿಣಾಮ ಎಂಬಂತೆ ನಮ್ಮ ಭಾವನೆಗಳಲ್ಲಿ ಏರಿಳಿತ ಉಂಟಾಗುತ್ತದೆ. ಕ್ರಶ್‌ ನಲ್ಲಿ ಯಾವ ಪ್ರತಿಕ್ರಿಯೆ ಹೊರಹೊಮ್ಮುತ್ತಿರುತ್ತೊ ಅದೇ ರೀತಿ ನಮ್ಮ ಮೂಡ್‌ ಇರುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ