ಚಳಿಗಾಲ ರೋಮಾನ್ಸ್ ನ ಕಾಲವಾಗಿರುತ್ತದೆ. ಈ ಕಾಲದಲ್ಲಿ ಸಮಾಗಮದ ಭಾವನೆ ಉತ್ತುಂಗದಲ್ಲಿರುತ್ತದೆ. ಬಾಹ್ಯ ವಾತಾವರಣದಲ್ಲಿ ತಾಪಮಾನ ಕುಗ್ಗುತ್ತಿದ್ದಂತೆಯೇ ದೇಹದೊಳಗಿನ ತಾಪಮಾನ ಏರುಗತಿಯಲ್ಲಿರುತ್ತದೆ. ತನ್ನ ಪ್ರೀತಿಯ ಸಂಗಾತಿ ಜೊತೆ ಬೆರೆಯುವ ಇಚ್ಛೆ ತೀವ್ರಗೊಳ್ಳುತ್ತದೆ. ಗದಗುಟ್ಟುವ ಚಳಿಯಲ್ಲಿ ಪ್ರತಿಯೊಬ್ಬ ದಂಪತಿಗಳು ಪರಸ್ಪರರ ಬಾಹುಗಳಲ್ಲಿ ಬಿಸಿಯ ಅನುಭವ ಪಡೆಯಲು ತವಕಿಸುತ್ತಾರೆ. ಸಮಾಗಮ ಪ್ರಕ್ರಿಯೆ ತನ್ನದೇ ಆದ ವಿಶಿಷ್ಟ ಅನುಭವವಾಗಿದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ಕಲ್ಪನೆಯಲ್ಲಿ ರೊಮಾನ್ಸ್ ನಡೆಸುತ್ತಾರೆ. ಕೆಲವರಿಗೆ ತಮ್ಮ ಬೆಡ್ ರೂಮ್ ನಲ್ಲಿ ಹೆಚ್ಚು ಆನಂದ ದೊರೆತರೆ, ಮತ್ತೆ ಕೆಲವರಿಗೆ ನಿಸರ್ಗದ ನಡುವೆ ಹೋಗಬೇಕೆನಿಸುತ್ತದೆ. ಇನ್ನು ಕೆಲವರು ಬಿಸಿ ನೀರಿನ ಬಾಥ್ ಟಬ್ ನಲ್ಲಿ ಆನಂದ ಹೊಂದಲು ಇಚ್ಛಿಸುತ್ತಾರೆ.
ಚಳಿಗಾಲ ಕೇವಲ ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಪಕ್ಷಿಗಳಲ್ಲೂ ಗಂಡು ಹೆಣ್ಣಿನ ನಡುವೆ ಒಡನಾಟ ಹೆಚ್ಚಿಸುತ್ತದೆ. ತಜ್ಞರು ಕೂಡ ಚಳಿಗಾಲವನ್ನು ಸಮಾಗಮಕ್ಕಾಗಿ ಹೇಳಿ ಮಾಡಿಸಿದ ಸುಮಧುರ ಕಾಲ ಎಂದು ಹೇಳುತ್ತಾರೆ. ಈ ಹವಾಮಾನದಲ್ಲಿ ಸಮಾಗಮ ಚಟುವಟಿಕೆಯಿಂದ ಅನೇಕ ರೋಗಗಳಿಂದ ಮುಕ್ತಿ ದೊರಕುತ್ತದೆ. ಅಷ್ಟೇ ಅಲ್ಲ, ದೈಹಿಕ ಸೌಂದರ್ಯ ಕೂಡ ಹೆಚ್ಚುತ್ತದೆ. ಅಂದಹಾಗೆ ಈ ಕಾಲದಲ್ಲಿ ಪುರುಷರು ಸಾಕಷ್ಟು ಮೂಡ್ ನಲ್ಲಿರುತ್ತಾರೆ. ಹೊರಗಡೆ ಚಳಿಗಾಳಿಯಿಂದ ಬಂದು ಸಮಾಗಮ ನಡೆಸುವುದು ಕೆಟ್ಟ ವಿಚಾರವೇನೂ ಅಲ್ಲ. ಹೊರಗಡೆಯ ಚಳಿಗಾಳಿಯನ್ನು ಎದುರಿಸಿ ಬಂದ ಪುರುಷನಿಗೆ ಲೈಂಗಿಕೇಚ್ಛೆ ಹೆಚ್ಚುತ್ತದೆ. ಹೀಗಾಗಿ ಚಳಿಗಾಲದಲ್ಲಿ ಪುರುಷರು ಸಾಕಷ್ಟು ರೊಮ್ಯಾಂಟಿಕ್ ಮೂಡ್ ನಲ್ಲಿರುವಂತೆ ಕಂಡುಬರುತ್ತಾರೆ. ಇಂಥ ಸ್ಥಿತಿಯಲ್ಲಿ ನೀವು ಈ ಚಳಿಗಾಲವನ್ನು ಸುಮಧುರವಾಗಿಸಿಕೊಳ್ಳಲು ಸ್ವತಃ ನಿಮ್ಮಲ್ಲಿ ಹಾಗೂ ಬೆಡ್ ರೂಮಿನಲ್ಲಿ ಅಷ್ಟಿಷ್ಟು ಬದಲಾವಣೆ ಮಾಡಿಕೊಳ್ಳುವುದು ಅತ್ಯವಶ್ಯ. ಅದಕ್ಕಾಗಿ ಕೆಲವು ಕಿವಿಮಾತುಗಳು ಇಲ್ಲಿವೆ :
ಬಿಸಿ ನೀರಿನ ಆನಂದ
ಮಲಗುವ ಮುನ್ನ ಬಾಥ್ ಟಬ್ ನಲ್ಲಿ ಸಾಧಾರಣ ಬೆಚ್ಚಗಿನ ನೀರಿನಲ್ಲಿ 3-4 ಹನಿ ಯೂಡಿಕ್ಲೋರಿನ್, ಶ್ರೀಗಂಧ ಅಥವಾ ರೋಸ್ ವಾಟರ್ ಮಿಶ್ರಣ ಮಾಡಿಕೊಂಡು ಗಂಡ ಹೆಂಡತಿ ಇಬ್ಬರೂ ಜೊತೆ ಜೊತೆಗೆ ಸ್ನಾನದ ಆನಂದ ಪಡೆಯಬೇಕು. ಬೇಕೆಂದರೆ ನೀವು ಬೆಡ್ ರೂಮಿನಲ್ಲಿ ಸುವಾಸನೆ ಬೀರುವ ಕ್ಯಾಂಡಲ್ ಕೂಡ ಹಚ್ಚಬಹುದು. ಇದು ನಿಮ್ಮ ಸಂಗಾತಿಯಲ್ಲಿ ಉತ್ಕಟೇಚ್ಛೆಯನ್ನು ಹುಟ್ಟುಹಾಕುತ್ತದೆ. ಪ್ರೀತಿಯ ಈ ಹೊಸ ವಿಧಾನ ನಿಮ್ಮ ಸಂಬಂಧದಲ್ಲಿ ಹೊಸ ಹುರುಪು ತುಂಬುತ್ತದೆ. ಬಿಸಿ ನೀರಿನ ಸ್ನಾನದಿಂದ ದೇಹವಂತೂ ತಾಜಾತನದ ಅನುಭವ ಪಡೆದುಕೊಳ್ಳುತ್ತದೆ. ಜೊತೆಗೆ ದೇಹದ ರಕ್ತ ಸಂಚಾರ ವೇಗ ಪಡೆದುಕೊಳ್ಳುತ್ತದೆ. ಬಿಸಿನೀರಿನ ಟಬ್ ನಲ್ಲಿ ಸಂಗಾತಿಯ ಬಾಹುಗಳಲ್ಲಿ ಬಂಧಿಯಾಗುವುದು ಸಮಾಗಮಕ್ಕೆ ಉತ್ತಮ ಮುನ್ನುಡಿ ಬರೆಯುತ್ತದೆ.
ಫರ್ ನ ಮೃದು ಸ್ಪರ್ಶ
ಹಳೆಯ ನೈಟಿಗೆ ಗುಡ್ ಬೈ ಹೇಳಿ ಈ ಚಳಿಗಾಲದಲ್ಲಿ ಮೃದು ಫರ್ ನ ನೈಟಿ ಅಥವಾ ಗೌನ್ ಧರಿಸಿ. ಇದು ನಿಮ್ಮ ಬಯಕೆಯನ್ನು ಇನ್ನಷ್ಟು ಹೆಚ್ಚಿಸುತ್ತದಲ್ಲದೆ, ಸಂಗಾತಿಯ ಇಚ್ಛೆಯನ್ನು ಬಲಗೊಳಿಸುತ್ತದೆ. ಅದರ ಸ್ಪರ್ಶ ಸಂಗಾತಿಗೆ ಉತ್ತೇಜನ ಭರಿಸುತ್ತದೆ.