ಇಂದಿನ ಧಾವಂತದ ದಿನಗಳಲ್ಲಿ ವಿವಾಹಿತರ ಜೀವನದಿಂದ ಸೆಕ್ಸ್ ಮರೆಯಾಗುತ್ತಿದೆ. ಈ ಸಮಸ್ಯೆ ದಿನಗಳೆದಂತೆ 1 ಕ್ಕೆ 2, 2ಕ್ಕೆ 4ರಂತೆ ಹೆಚ್ಚುತ್ತಾ ಹೊರಟಿದೆ. ಹೆಸರಾಂತ ಕಾದಂಬರಿ `ಹೌ ಟು ಗೆಟ್‌ ದಿ ಮೋಸ್ಟ್ ಔಟ್‌ ಆಫ್‌ ದಿ ಸೆಕ್ಸ್ 'ನ ಲೇಖಕ ಡೇವಿಡ್‌ ರುಬೆನ್‌ರ ಪ್ರಕಾರ, `ದಾಂಪತ್ಯದಲ್ಲಿ ಸೆಕ್ಸ್ ಸಾಮರಸ್ಯ ಸರಿಯಾಗಿದ್ದರೆ ಎಲ್ಲ ಸರಿಯಾಗಿದೆ ಎಂದರ್ಥ.' ಒಂದು ವೇಳೆ ಗಂಡಹೆಂಡತಿಯ ನಡುವೆ ಅದರ ಉಪಸ್ಥಿತಿ ಇರದೇ ಇದ್ದರೆ ಯಾವುದೂ ಸರಿಯಿಲ್ಲ ಎಂದರ್ಥ.

27 ವರ್ಷದ ಮಾಯಾ ತ್ಯಾಗಿಯವರ ಜೀವನಕ್ಕೂ ಈ ಸಮೀಕರಣ ಅನ್ವಯಿಸುತ್ತದೆ. ಕೆಲವು ತಿಂಗಳುಗಳ ಹಿಂದಷ್ಟೇ ಆದ ಈ ವಿವಾಹವು ಮೀಡಿಯಾ ಪ್ರೊಫೆಶನ್‌ಗಳ ಜೀವನದಲ್ಲಿ ಬಹಳಷ್ಟು ಅಲ್ಲೋಲ ಕಲ್ಲೋಲವನ್ನುಂಟು ಮಾಡಿತು. ಏಕೆಂದರೆ ಮಾಯಾಳ ಪತಿ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚು ಸಮರ್ಪಿತರಾಗಿದ್ದರು. ಹೀಗಾಗಿ ಅವರ ಖಾಸಗಿ ಜೀವನದ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿದೆ. ಅವರು ದಿನ ಮನೆಗೆ ಬರುವುದು ತುಂಬ ತಡವಾಗಿ. ಅದೂ ಕೂಡ ಸಾಕಷ್ಟು ದಣಿದು ಬಂದಿರುತ್ತಾರೆ. ಹೀಗಾಗಿ ಅವರಿಗೆ ಸಮಾಗಮ ಚಟುವಟಿಕೆಗೂ ಮನಸ್ಸಿರುವುದಿಲ್ಲ.

ಈ ಕುರಿತಂತೆ ಮಾಯಾ ಹೀಗೆ ಹೇಳುತ್ತಾರೆ, ``ಆರಂಭದಲ್ಲಿ ನಮಗೆ ಇದು ದೊಡ್ಡ ಸಮಸ್ಯೆ ಆಗಿರಲಿಲ್ಲ. ನಾವು ಜೊತೆಗೆ ಇದ್ದಾಗೆಲ್ಲ ಸಮಾಗಮ ಕ್ರಿಯೆ ನಡೆಯುತ್ತಿತ್ತು. ಆ ಜೀವನಶೈಲಿ ನನಗೆ ಅಷ್ಟೇನೂ ಕೆಟ್ಟದಾಗಿ ಕಂಡಿರಲಿಲ್ಲ. ಆದರೆ ಕ್ರಮೇಣ ನಮ್ಮ ಲೈಂಗಿಕ ಸಂಬಂಧದಲ್ಲಿ ಬಹಳ ದಿನಗಳ ಅಂತರ ಉಂಟಾಗತೊಡಗಿತು. ಬಳಿಕ ಆ ಅಂತರ ಹೆಚ್ಚುತ್ತಲೇ ಹೋಯಿತು. ನನ್ನ ಪತಿಗೆ ಈಗ ಅದರ ಬಗ್ಗೆ ಮಹತ್ವವೇ ಇಲ್ಲದಂತಾಗಿಬಿಡುತ್ತದೆ. ಈಗ ಹೆಚ್ಚೆಂದರೆ ತಿಂಗಳಿಗೊಮ್ಮೆ ಕೂಡುತ್ತೇವೆ. ಅದು ಕೂಡ ಅವರು ಮನಸ್ಸಿಲ್ಲದ ಮನಸ್ಸಿನಿಂದ ಹತ್ತಿರ ಬರುತ್ತಾರೆ. ಅಷ್ಟೇ ಬೇಗನೇ ದೂರ ಸರಿಯುತ್ತಾರೆ,'' ಎಂದು ನಿಡುಸುಯ್ಯುತ್ತಾರೆ.

ಮೊದಲ ರಾತ್ರಿಯೇ ವಿಚ್ಛೇದನ

ಕೆಲವೊಂದು ಪ್ರಕರಣಗಳು ಹೇಗಿವೆ ಎಂದರೆ ಆ ಜೋಡಿಗಳಿಗೆ ಮೊದಲ ರಾತ್ರಿಯಲ್ಲಿಯೇ ಸಮಸ್ಯೆ ಶುರುವಾಗುತ್ತದೆ. ಸುನಿಲ್ ಮತ್ತು ರಶ್ಮಿ ನಡುವೆ ಕೂಡ ಹೀಗೆಯೇ ಆಯಿತು. ಅವರು ಮದುವೆಯಾಗುವ ಮುಂಚೆಯೇ ಒಳ್ಳೆಯ ಸ್ನೇಹಿತರಾಗಿದ್ದರು. ಹೀಗಾಗಿ ಅವರ ನಡುವೆ ಅಪರಿಚಿತತೆ ಪರಿಪೂರ್ಣವಾಗಿ ನಿವಾರಣೆಯಾಗಿತ್ತು. ಆದರೆ ಮೊದಲ ಬಾರಿ ಅವರು ಸಮಾಗಮ ನಡೆಸಿದ ಬಳಿಕವೇ ಅವರ ಸಮಸ್ಯೆ ಶುರುವಾಯಿತು.

29 ವರ್ಷದ ಸುನಿಲ್‌ ಆ ರಾತ್ರಿ ತನ್ನ ಪ್ರೀತಿಯ ಎಲ್ಲೆಯನ್ನು ಮೀರಲು ಬಯಸಿದ್ದ. ಆದರೆ ಅವನ ಸ್ನೇಹಿತೆಯಾಗಿ ಪತ್ನಿಯಾಗಿದ್ದ ರಶ್ಮಿ ಮಾತ್ರ ತಮ್ಮ ಪವಿತ್ರ ಸ್ನೇಹವನ್ನು ಮುರಿಯಲು ಇಚ್ಛಿಸುತ್ತಿರುಲಿಲ್ಲ. ರಶ್ಮಿಯ ನಕಾರ ಭಾವದಿಂದ ಅವರು ರಾತ್ರಿ ಸಮಾಗಮ ನಡೆಸಲು ಆಗಲಿಲ್ಲ. ಪ್ರತಿದಿನ ಇದೇ ಮರುಕಳಿಸತೊಡಗಿತು. ಗಂಡ ಒತ್ತಾಯಿಸುವುದು ಹೆಂಡತಿ ನಿರಾಕರಿಸುವುದು ಮಾಡುತ್ತಾ ಇದ್ದರೆ ಇಬ್ಬರ ನಡುವೆ ಜಗಳ ಖಚಿತ. ಕೆಲವು ತಿಂಗಳುಗಳ ಬಳಿಕ ಸುನಿಲ್‌ ವಿಚ್ಛೇದನಕ್ಕಾಗಿ ಅರ್ಜಿ ಕೊಟ್ಟ. ಅವನು ರಶ್ಮಿಯಿಂದ ಬೇರೆಯಾಗುವ ಬಗ್ಗೆ ತನ್ನ ಗೆಳೆಯರ ಮುಂದೆ ಹೇಳಿದಾಗ, ``ವಿಚ್ಛೇದನ ತೆಗೆದುಕೊಳ್ಳುವುದು ಬೇಡ. ಧೈರ್ಯದಿಂದಿರು.... ಉದಾಸನಾಗಬೇಡ. ನಿನ್ನ ಜೊತೆಗೆ ಹೆಂಡತಿಯ ರೂಪದಲ್ಲಿ ಬಹಳ ಒಳ್ಳೆಯ ಸ್ನೇಹಿತೆಯಿದ್ದಾಳೆ. ನೀನು ಅವಳ ಮುಂದೆ ಏನೆಲ್ಲವನ್ನು ಹಂಚಿಕೊಳ್ಳಬಹುದು. ಅಂದಹಾಗೆ ಸೆಕ್ಸ್ ಕೆಲವು ವರ್ಷಗಳ ಬಳಿಕ ನಮ್ಮಿಂದ ದೂರವಾಗಿಬಿಡುತ್ತದೆ,'' ಎಂದು ವಿವಾಹಿತ ಸ್ನೇಹಿತರು ಅವನಿಗೆ ಬುದ್ಧಿ ಹೇಳಿದರು. ಈ ಎಲ್ಲ ತೊಂದರೆ ತಾಪತ್ರಯಗಳ ನಡುವೆಯೂ ಸುನಿಲ್ ತನ್ನ ಹೆಂಡತಿಯನ್ನು ಸಿನಿಮಾ, ಎಕ್ಸಿಬಿಷನ್‌, ಹೋಟೆಲ್‌, ಮದುವೆ, ಪಾರ್ಟಿಗಳು ಹೀಗೆ ಎಲ್ಲೆಂದರಲ್ಲಿ ಜೊತೆ ಜೊತೆಗೆ ಕರೆದೊಯ್ಯುತ್ತಾನೆ. ವಿಶೇಷ ಸಂದರ್ಭಗಳಲ್ಲಿ ಪರಸ್ಪರ ಉಡುಗೊರೆ ಕೂಡ ಕೊಡುತ್ತಾರೆ. ರಶ್ಮಿ ತನ್ನ ಗಂಡನ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾಳೆ. 3 ವರ್ಷಗಳ ಬಳಿಕ ಈಗ ಅವರ ಜೀವನದಲ್ಲಿ ಸೆಕ್ಸ್ ಕೂಡ ಇದೆ. ಪ್ರೀತಿಯಂತೂ ಧಾರಾಳವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ