ಮದುವೆ ಆಗಲಿರುವ, ಜಸ್ಟ್ ಮ್ಯಾರೀಡ್ ಹುಡುಗಿಯರಿಗೆ ಅದರಲ್ಲೂ ಎಲ್ಲ ಪತ್ನಿಯರಿಗೂ ಸಾಮಾನ್ಯವಾಗಿ ತಮ್ಮ ಮನಸ್ಸಿನ ಮಾತನ್ನು ಏಕೆ ಹೇಳಬೇಕಾಗಿದೆ ಎಂದರೆ, ಮೊದಲು ನಾನು ನೀನು ಎನ್ನುತ್ತಿದ್ದವರು ಬಳಿಕ ಕೈಕೈ ಮಿಲಾಯಿಸುವ, ಮಾತಿನ ಬಾಣಗಳ ಸುರಿಮಳೆ ಒಂದೆರಡು ವರ್ಷಗಳ ಬಳಿಕ ನೋಡಲು ಸಿಗುತ್ತಿತ್ತು. ಆದರೆ ಈಗ ಹಾಗಲ್ಲ, 4-5 ತಿಂಗಳಿನಲ್ಲಿಯೇ ನೋಡಲು ಸಿಗುತ್ತಿದೆ. ಇದು ಅಡ್ವಾನ್ಸ್ಡ್ ಜಮಾನಾ, ಎಲ್ಲ ಈಗ ಫಾಸ್ಟ್!
ಗಂಡಂದಿರಿಂದ ನಮಗೆ ಸಾಕಷ್ಟು ಸಮಸ್ಯೆ ಆಗುತ್ತದೆ. ಅವರಿಂದ ಮಾತುಗಳು ಹೊರ ಹೊಮ್ಮುತ್ತಲೇ ಇರುತ್ತವೆ. ಒಂದು ಸಲ ನಾವೇಕೆ ನಮ್ಮ ಮನಸ್ಸಿನ ಮಾತು ಹೇಳಿಕೊಳ್ಳಬಾರದು?
ಮದುವೆಯಾಗಿದೆ ಸರಿ, ಎಲ್ಲರದ್ದೂ ಆಗಿಯೇ ಆಗುತ್ತದೆ. ಹಾಗೆಂದು ನಿಮ್ಮನ್ನು ನೀವು ಪೃಥ್ವಿಯೆಂದು ಭಾವಿಸಿ, ಗಂಡನನ್ನು ಸೂರ್ಯ ಎಂದು ತಿಳಿದು ಅವನ ಸುತ್ತ ಸುತ್ತುತ್ತಿರಬೇಡಿ. ಅವನ ಸೌರಮಂಡಲದಲ್ಲಿ ಮತ್ತಾವುದೋ ಗ್ರಹ ಚಂದ್ರನಂತಹ ಉಪಗ್ರಹ ಸುತ್ತುತ್ತಿದೆಯೆಂದು ಸಂದೇಹ ತಾಳಲು ಹೋಗಬೇಡಿ. ಯಾವಾಗಲೂ ಅವನ ಆಸುಪಾಸು ಇರುವುದು, ಅವನಿಗೆ ಅಸಹನೀಯ ಎನಿಸುವಷ್ಟರ ಮಟ್ಟಿಗೆ ತೊಂದರೆ ಮಾಡಬೇಡಿ. `ಗಿವ್ ಹಿಮ್ ಎ ಬ್ರೇಕ್' ನಿಮಗೂ ಒಂದು ಕಡೆ ಜಾಗ ರಿಸರ್ವ್ ಮಾಡಿಕೊಳ್ಳಿ.
ಸಂಬಂಧಿಕರನ್ನು ಹಳೆಯ ಗೆಳತಿಯರನ್ನು ಬಿಟ್ಟು ಬರುವ ದುಃಖ ನಿಮಗಿಂತ ಬೇರಾರಿಗೆ ಅದರ ಅರಿವು ಆಗಲು ಸಾಧ್ಯ? ಅದೇ ರೀತಿ ನಿಮ್ಮ ಪತಿಯ ಹಳೆಯ ಗೆಳೆಯರ ಹಾಗೂ ಈಗಿನ ಸ್ನೇಹಿತರ ಸಂಪರ್ಕ ಕಟ್ ಮಾಡಿಕೊ ಎಂದು ಹೇಳುವುದೂ ತಪ್ಪಾಗುತ್ತದೆ. ನೀವು ಮನೆ ಬಿಟ್ಟು ಬಂದಿರುವ ಪ್ರತೀಕಾರ ತೆಗೆದುಕೊಳ್ಳುದು ಏಕೆ? `ನೀವು ನನಗೆ ಸಮಯವನ್ನೇ ಕೊಡುವುದಿಲ್ಲ' ಎನ್ನುವುದರ ಅರ್ಥ `ನೀವು ನನಗಷ್ಟೇ ಟೈಮ್ ಕೊಡಿ,' ಎಂದಲ್ಲ. ಇಲ್ಲದಿದ್ದರೆ ಸದಾ ನಿರಾಶೆ ಅನುಭವಿಸುತ್ತಿರಬೇಕಾಗುತ್ತದೆ.
ಯಾವ ಕೆಲಸವನ್ನು ಮನೆಗೆಲಸದವರು ಹಾಗೂ ಇತರೆ ಸದಸ್ಯರು ಮಾಡುತ್ತಿದ್ದಾರೊ, ಅದೇ ಕೆಲಸವನ್ನು ಒತ್ತಾಯ ಪೂರ್ಕವಾಗಿ ಅವರಿಂದ ಕಿತ್ತುಕೊಂಡು ನಾನು ಚೆನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಹೇಳುವುದು ಜಾಣತನದ ನಿರ್ಧಾರವಲ್ಲ. ಅತ್ತೆಯನ್ನು ಒಲಿಸಿಕೊಳ್ಳುವ ಯಾವುದೇ ಯೋಜನೆ ನಿಮಗಿರದಿದ್ದರೆ, ಈ ಕೆಳಕಂಡ ಉಪಾಯಗಳನ್ನು ಅನುಸರಿಸಿ. ಏಕೆಂದರೆ ಪುರುಷರು ಸಾಮಾನ್ಯವಾಗಿ ಈ ರೀತಿಯ ಸಂದರ್ಭದಲ್ಲಿ ಮೌನ ಆಗಿರುತ್ತಾರೆ. ನೀವು ನಿರೀಕ್ಷಿಸಿದ ರೀತಿಯಲ್ಲಿ ಅವರು ಪ್ರಶಂಸೆ ವ್ಯಕ್ತಪಡಿಸದೇ ಹೋದರೆ ನಿಮಗೆ ಸ್ವಲ್ಪ ಬೇಜಾರಾಗುವುದು ಸಹಜ. ಯಾವುದೇ ಕೆಲಸವಿಲ್ಲದೆಯೇ ದಣಿವು ಹಾಗೂ ಕೆಲಸದ ಒತ್ತಡ ಎನಿಸುತ್ತದೆ.
ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಎಷ್ಟು ಕಡಿಮೆ ಅಪೇಕ್ಷೆಯೊ ಅಷ್ಟು ಸುಖಿ ಜೀವನ. ನಿರೀಕ್ಷೆಯಿಲ್ಲದೆ ಏನಾದರೂ ದೊರೆತರೆ ಅದನ್ನು ಬೋನಸ್ ಎಂದು ಭಾವಿಸಿ.
ನಿಮ್ಮನ್ನು ಸದಾ ಖುಷಿಯಿಂದಿಡಬೇಕೆನ್ನುವ ಗುತ್ತಿಗೆಯನ್ನು ಗಂಡನಿಗೆ ಕೊಡಬೇಡಿ. ಅದೇ ರೀತಿ ನೀವು ದುಃಖಿಯಾಗಿರಲು ಗಂಡನೇ ಕಾರಣ ಎಂಬ ಆಪಾದನೆಯನ್ನು ಅವನ ಮೇಲೆ ಹೊರಿಸಬೇಡಿ. ನಿಮ್ಮ ಖುಷಿಯನ್ನು ನೀವೇ ಹುಡುಕಿ. ನಿಮ್ಮ ಹವ್ಯಾಸಗಳನ್ನು ಬಲಿ ಕೊಡಬೇಡಿ. ನಿಮ್ಮ ಪ್ರತಿಭೆಗೆ ತುಕ್ಕು ಹಿಡಿಯಲು ಅವಕಾಶ ಕೊಡಬೇಡಿ. ಸದಾ ಬಿಜಿಯಾಗಿದ್ದರೆ, ಖುಷಿಯಿಂದಿದ್ದರೆ, ಅವನೂ ಕೂಡ ಖುಷಿಯಿಂದಿರುತ್ತಾನೆ. ನೀವು ಖುಷಿಯಿಂದಿದ್ದರೆ, ಅವನು ತಾನೂ ಖುಷಿಯೆಂದು ಭಾವಿಸುತ್ತಾನೆ. ನಾನು ಹೇಗೆ ಕಾಣುತ್ತಿದ್ದೇನೆ, ನಾನು ಹೇಗೆ ಅಡುಗೆ ಮಾಡುತ್ತಿದ್ದೇನೆ, ಪತಿಗೆ ನನ್ನ ಬಗೆಗೆ ಆಸಕ್ತಿ ಕಡಿಮೆ ಆಗುತ್ತಿಲ್ಲ ತಾನೆ, ಹೀಗೆ ಬಹಳಷ್ಟು ಮಹಿಳೆಯರು ಯೋಚಿಸುತ್ತಿರುತ್ತಾರೆ. ಪುರುಷರಿಗೆ ಇನ್ನೂ ಅದೆಷ್ಟೋ ಬಗೆಯ ದುಃಖಗಳು ಇರುತ್ತವೆ.