ಶುಭಾಂಗಿ ಉದ್ಯೋಗಕ್ಕೆ ರಾಜೀನಾಮೆ ಕೊಡಬೇಕಾಗಿ ಬಂತು. ಏಕೆಂದರೆ ಆಕೆ ಗರ್ಭಿಣಿಯಾಗಿದ್ದಳು. ವೈದ್ಯರು ಅವಳಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿದರು. ಅಂದಹಾಗೆ ಕೆಲವು ಕಂಪನಿಗಳು ಗರ್ಭಿಣಿಯರನ್ನು ಉದ್ಯೋಗದಲ್ಲಿ ಇರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಜವಾಬ್ದಾರಿಗಳು ಹೆಚ್ಚಾಗಿರುವ ಕಾರಣದಿಂದ ಅವರು ಕೆಲಸ ಕಾರ್ಯಗಳನ್ನು ಸರಿಯಾಗಿ ನಿಭಾಯಿಸಲು ಆಗುವುದಿಲ್ಲ ಎನ್ನುವುದು ಸಂಸ್ಥೆಗಳ ಮುಖ್ಯಸ್ಥರ ಅನಿಸಿಕೆಯಾಗಿರುತ್ತದೆ. ಅಂದಹಾಗೆ ಮಹಿಳೆಯರು ಎರಡೂ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲು ಕಲಿತುಕೊಂಡಿರುತ್ತಾರೆ. ಆದರೂ ಫ್ಯಾಮಿಲಿ ಪ್ಲಾನಿಂಗ್‌ ಅವರ ಕೆರಿಯರ್‌ ನಡುವೆ ಬಾಧೆಯಾಗಿ ಪರಿಣಮಿಸುತ್ತದೆ. ಇದೇ ಹೆದರಿಕೆ ಅವರನ್ನು ಫ್ಯಾಮಿಲಿ ಪ್ಲಾನಿಂಗ್‌ ಬಗ್ಗೆ ಯೋಚಿಸುಂತೆ ಮಾಡುತ್ತಿದೆ.

ಸರ್ವೆ ಏನು ಹೇಳುತ್ತದೆ?

ಲಂಡನ್‌ ಬಿಸ್‌ನೆಸ್‌ ಸ್ಕೂಲಿನ ಹೊಸ ಸಮೀಕ್ಷೆಯ ಪ್ರಕಾರ, 70%ರಷ್ಟು ಮಹಿಳೆಯರು ಕೆರಿಯರ್‌ನಿಂದ ಬ್ರೇಕ್‌ ಪಡೆದು ಚಿಂತಿತರಾಗಿದ್ದಾರೆ. ಅವರಿಗೆ ಕೆರಿಯರ್‌ನಿಂದ ಬ್ರೇಕ್‌ ಪಡೆಯುವುದೆಂದರೆ ಮಾತೃತ್ವಕ್ಕಾಗಿ ರಜೆ ಪಡೆಯುವುದು ಹಾಗೂ ಮಕ್ಕಳ ಯೋಗಕ್ಷೇಮಕ್ಕಾಗಿ ಕಾರ್ಯಸ್ಥಳದಿಂದ ದೂರ ಇರುವುದಾಗಿದೆ.

ಕಳೆದ ವರ್ಷ ಲೇಬರ್‌ ಪಾರ್ಟಿಯ ಸಂಶೋಧನೆಯ ಪ್ರಕಾರ, 50 ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಹೆರಿಗೆ ರಜೆಯಿಂದ ಮರಳುತ್ತಿದ್ದಂತೆ ಅವರನ್ನು ನೌಕರಿಯಿಂದ ತೆಗೆದು ಹಾಕಲಾಯಿತು.

ಪ್ರತಿಭೆಗಳನ್ನು ಕಳೆದುಕೊಳ್ಳುವ ಕಂಪನಿಗಳು

ಈಗ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಹೊರಹೊಮ್ಮಿಸುತ್ತಿದ್ದಾರೆ. ತಾವು ಏಕಾಂಗಿಯಾಗಿ ಎಲ್ಲವನ್ನು ಮಾಡಿ ತೋರಿಸಬಲ್ಲೇ ಎಂಬುದನ್ನು ಅವರು ಸಾಬೀತು ಮಾಡಿ ತೋರಿಸಿದ್ದಾರೆ. ಮನೆಗಷ್ಟೇ ಸೀಮಿತವಾಗಿದ್ದ ಇಮೇಜ್‌ನ್ನು ಬದಲಿಸಿಕೊಂಡಿದ್ದೇವೆ ಎಂಬುದನ್ನು ಅವರು ಕೆಲಸದ ಮೂಲಕ ಬಿಂಬಿಸುತ್ತಿದ್ದಾರೆ. ಅಂತಹ ಕೆಲವು ಪ್ರಸಿದ್ಧ ವ್ಯಕ್ತಿಗಳ ಉದಾಹರಣೆ ಗಮನಿಸಿ :

ಇಂದಿರಾ ನೂಯಿ

ಪೆಪ್ಸಿಕೊ ಕಂಪನಿಯ ಸಿಇಓ ಹಾಗೂ ಪ್ರೆಸಿಡೆಂಟ್‌ ಆಗಿದ್ದಾರೆ. ತಮ್ಮ ವಿಶಿಷ್ಟ ಸಾಧನೆಯಿಂದ ಅವರು ಗೌರವ ಪಡೆದುಕೊಂಡಿದ್ದಾರೆ.

ಚಂದಾ ಕೋಚರ್

ಐಸಿಐಸಿಐ ಬ್ಯಾಂಕಿನ ಸಿಇಓ ಆಗಿದ್ದರು. ತಮ್ಮ ಸಾಧನೆಗಳಿಂದ ಮೇಲೆ ಬಂದರು. ಆದರೆ ಅನೇಕ ಹಗರಣಗಳ ಕಾರಣದಿಂದ ಅವರು ಪದತ್ಯಾಗ ಮಾಡಬೇಕಾಗಿ ಬಂತು. ಅದಕ್ಕೂ ಮುಂಚೆ ಅವರು ಐಸಿಐಸಿಐ ಬ್ಯಾಂಕ್‌ಗೆ ಭಾರತದಲ್ಲಿ ಬೆಸ್ಟ್ ಬ್ಯಾಂಕ್‌ ರೀಟೇಲ್ ನ ಅವಾರ್ಡ್‌ ದೊರಕಿಸಿ ಕೊಟ್ಟಿರುವುದು ಮಹತ್ವದ್ದು.

ಮಿತಾಲಿ ರಾಜ್

ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಹೊಡೆದ ದಾಖಲೆ ಹೊಂದಿದ್ದಾರೆ. ನಾಯಕಿಯಾಗಿ ಅವರ ಸಾಧನೆ ಅಪ್ರತಿಮ. ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದ. ಒಂದು ವೇಳೆ ನಾವು ಮಹಿಳೆಯರನ್ನು ಕಡಿಮೆ ಎಂದು ಭಾವಿಸಿದ್ದರೆ ಅವರು ಈ ರೀತಿಯ ಸಾಧನೆ ಮಾಡುತ್ತಿದ್ದರೇ ಇಲ್ಲಿ ಏಳುವ ಮುಖ್ಯ ಪ್ರಶ್ನೆಯೆಂದರೆ, ಕಂಪನಿಗಳು ಇಷ್ಟೊಂದು ಪ್ರತಿಭಾವಂತ ಉದ್ಯೋಗಿಗಳನ್ನು ಏಕೆ ಕಳೆದುಕೊಳ್ಳುತ್ತಿವೆ? ತಾಯಿಯಾದ ಬಳಿಕ ಅವರು ಮಕ್ಕಳ ಜವಾಬ್ದಾರಿ ನಿಭಾಯಿಸುತ್ತ ಕಂಪನಿಯಲ್ಲಿ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ ಎನ್ನುವುದು ಕಂಪನಿಗಳ ಅಭಿಪ್ರಾಯವಾಗಿದೆ. ಆದರೆ ಈ ಅಭಿಪ್ರಾಯ ಸುಳ್ಳು. ಅವರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಬಲ್ಲರು. ಕಂಪನಿಗಳು ಅವರಿಂದ ಈ ಅವಕಾಶವನ್ನು ಕಸಿದುಕೊಂಡು ಅವರನ್ನು ಮನೆಗೇ ಸೀಮಿತಗೊಳಿಸುತ್ತವೆ. ಕಂಪನಿಗಳು ತಮ್ಮ ಯೋಚನೆಯನ್ನು ಬದಲಿಸಿಕೊಳ್ಳಬೇಕು. ಆಗಲೇ ದೇಶ ಪ್ರಗತಿ ಕಾಣಲು ಸಾಧ್ಯವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ