ಬಹಳಷ್ಟು ಸಿಂಗಲ್ ವುಮನ್ಸ್ ತಮ್ಮನ್ನು ತಾವು ಸೂಪರ್‌ ವುಮನ್‌ ಎಂದು ಭಾವಿಸುತ್ತಾರೆ. ಇಡೀ ದಿನ ಕೆಲಸ ಮಾಡುವುದು ಹಾಗೂ ಮಗುವಿನ ಯೋಗಕ್ಷೇಮ ನೋಡಿಕೊಳ್ಳುವುದರ ಜೊತೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಥವಾ ಮನೆಯಲ್ಲಿ ಯಾವಾಗಲೂ ಸಿದ್ಧ ಆಹಾರವನ್ನೇ ಸರ್ವ್ ‌ಮಾಡಬೇಕು ಅಥವಾ ಮಗುವಿನ ಪ್ರತಿಯೊಂದು ಅವಶ್ಯಕತೆಗಳನ್ನು ತಕ್ಷಣವೇ ಈಡೇರಿಸಬೇಕು ಎನ್ನುವುದಾಗಿರುತ್ತದೆ. ಆದರೆ ಅಷ್ಟೊಂದೆಲ್ಲ ಮಾಡುವುದು ಕಷ್ಟದ ಕೆಲಸ.

ಜೀವನ ಸಹಜವಾಗಿ ನಡೆದುಕೊಂಡು ಹೋಗಲು ಕಾಲಕಾಲಕ್ಕೆ ನೀವು ನಿಮ್ಮ ಗುರಿಯನ್ನು ನಿರ್ಧರಿಸುವತ್ತ ಬನ್ನಿ. ಆ ಗುರಿಗಳು 1 ದಿನ, 1 ವಾರ, 1 ತಿಂಗಳು ಅಥವಾ ಹಲವು ವರ್ಷ ಯಾವುದೇ ಆಗಿರಬಹುದು. ಅವು ಆರ್ಥಿಕ, ಸಾಮಾಜಿಕ, ಭಾವನಾತ್ಮಕ ಅಥವಾ ಕೌಟುಂಬಿಕ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಇರಬಹುದು.

ಸಿಂಗಲ್ ಮದರ್‌ ಅಥವಾ ಏಕಾಂಗಿ ತಾಯಿಗೆ ತನ್ನದೇ ಶಕ್ತಿ ಸಾಮರ್ಥ್ಯದ ಮೇಲೆ ಮಗುವಿನ ಪಾಲನೆಪೋಷಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಧೈರ್ಯದಿಂದ ಕಾರ್ಯಪ್ರವೃತ್ತರಾದರೆ, ತಮ್ಮ ಉದ್ದೇಶದಲ್ಲಿ ಯಶಸ್ವಿಯಾಗುವುದರ ಜೊತೆಗೆ ಬೇರೆಯವರಿಗೂ ಪ್ರೇರಣಾದಾಯಿ ವ್ಯಕ್ತಿಯಾಗಬಹುದು. ಅದು ಈ ರೀತಿಯಲ್ಲಿ......

ಕೆಲಸ ಮಗುವಿನ ಜೊತೆಗಿನ ಸಂಬಂಧ

ನೀವು ನಿಮ್ಮ ಆಫೀಸಿನ ಹ್ಯಾಪಿ ಅವರ್ಸ್ ಗೆಳತಿಯ ಬರ್ಥ್‌ ಡೇ ಪಾರ್ಟಿ, ಯಾವುದೇ ಸಿದ್ಧತೆ ಇಲ್ಲದೆ ಡೇಟ್‌ನಂತಹ ಸಂದರ್ಭಗಳಲ್ಲಿ ಮಗು ಅಥವಾ ಒಡೆದುಹೋದ ಹೃದಯದ ಕಾರಣದಿಂದ ಬ್ಯಾಕ್‌ ಸೀಟ್‌ಗೆ ಬಿಟ್ಟು ಹೋಗುತ್ತೀರಾ? ಅದೇ ರೀತಿಯಲ್ಲಿ ಯಾವಾಗಲಾದರೊಮ್ಮೆ ಡಾಕ್ಟರ್‌ ಅಪಾಯಿಂಟ್‌ಮೆಂಟ್‌ ಅಥವಾ ಬ್ಯೂಟಿ ಪಾರ್ಲರ್‌ಗೆ ಹೋಗುವುದನ್ನು ಕೂಡ ಏಕಾಂಗಿ ತಾಯಿ ಆಗಿರುವ ಕಾರಣದಿಂದ ನೀವು ದೈಹಿಕವಾಗಿ ಅಥವಾ ಮಾನಸಿಕವಾಗಿ ಮಗುವಿನ ಜೊತೆ ಇರುವುದು ಅನಿವಾರ್ಯವಾಗುತ್ತದೆ. ಆದರೆ ಆ ಕಾರಣದಿಂದ ಸಮಾಜದಿಂದ ದೂರ ಇರುವುದು ಹಾಗೂ ನಿಮ್ಮ ಅಗತ್ಯಗಳನ್ನು ದೂರ ಸರಿಸುವುದು ಸಮಂಜಸವಲ್ಲ.

ಎಂದಾದರೊಮ್ಮೆ ನಿಮ್ಮ ತಾಯ್ತನದ ಹೊಣೆಗಾರಿಕೆಯಿಂದ ಮುಕ್ತರಾಗಿ ಸ್ವಲ್ಪ ಹೊತ್ತು ನಿಮಗಾಗಿಯೇ ಕಳೆಯುವುದು ಅತ್ಯವಶ್ಯ. ಏಕೆಂದರೆ ನಿಮ್ಮ ಎನರ್ಜಿಯ ಬ್ಯಾಟರಿ ರಿಚಾರ್ಜ್‌ ಆಗುತ್ತಿರಬೇಕು ಹಾಗೂ ಅತ್ಯುತ್ತಮ ರೀತಿಯಲ್ಲಿ ನಿಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವಂತಾಗಬೇಕು.

ನಿಮ್ಮ ಸಕಾರಾತ್ಮಕತೆಯನ್ನು ಕಾಯ್ದುಕೊಂಡು ಹೋಗಿ ಹಾಗೂ ಜೀವನದಲ್ಲಿ ಮುಂದೆ ಸಾಗುವ ದಾರಿಯನ್ನು ಮುಕ್ತವಾಗಿಟ್ಟುಕೊಳ್ಳಿ. ಜನರ ಜೊತೆ ಬೆರೆಯುತ್ತ ಇರಿ ಹಾಗೂ ಜನರ ನಡುವೆ ತಲೆ ಎತ್ತಿ ಓಡಾಡುವಂತಾಗ ಬೇಕು. ನೀವು ಬಚ್ಚಿಟ್ಟುಕೊಳ್ಳುವುದರಿಂದ ಅಥವಾ ದುಃಖಿತರಾಗುವುದರಿಂದ ಏನೂ ಪ್ರಯೋಜನವಿಲ್ಲ.

ಕಮ್ಯೂನಿಟೀಸಿನ ಬೆಂಬಲ ಹುಡುಕಿ : ಸಿಂಗಲ್ ಮದರ್‌ ತನ್ನನ್ನು ತಾನು ಏಕಾಂಗಿ, ದುಃಖಿತಳೆಂದು ಭಾವಿಸುತ್ತಾಳೆ. ತಾನು ಏಕಾಂಗಿಯೆಂದು ಆಕೆಗೆ ಅನಿಸುತ್ತಿರುತ್ತದೆ. ಆದರೆ ಈ ಭಾವನೆ ಸೂಕ್ತವಲ್ಲ ನೀವು ಸಿಂಗಲ್ ಮದರ್ಸ್ ಗೆ ಸಂಬಂಧಪಟ್ಟ ಕಮ್ಯುನಿಟೀಸ್‌ ಅಂದರೆ ಪೇರೆಂಟ್ಸ್ ವಿದ್ಯುಕ್ತ ಪಾರ್ಟ್‌ನರ್ಸ್‌, ಸಿಂಗಲ್ ಮಾಮ್ಸ್ ಕನೆಕ್ಟ್ ಆರ್ಗನೈಜೇಶನ್‌ನಂತಹ ಸಂಸ್ಥೆಗಳ ಸದಸ್ಯರಾಗಬಹುದು. ಅಕ್ಕಪಕ್ಕದವರು ನಿಮ್ಮ ಹಾಗೆಯೇ ಇವರು ಸಿಂಗಲ್ ಮದರ್ಸ್‌ ನಿಮ್ಮ ಸಪೋರ್ಟ್‌ ಸಿಸ್ಟಮ್ ಆಗಬಹುದು. ನೀವು ಆನ್‌ಲೈನ್‌ನಲ್ಲಿ ಯಾವುದಾದರೂ ಕಮ್ಯುನಿಟಿಯ ಮ್ಯಾಚರ್‌ಆಗಿ ಸಪೋರ್ಟ್‌ ಪಡೆಯಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ