ನಿಮ್ಮ ಸಂಗಾತಿ ಮೊಬೈಲ್ ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದರೆ, ಕುಟುಂಬದಲ್ಲಿ ಅವನ ಹಸ್ತಕ್ಷೇಪ ಕಡಿಮೆಯಾಗಿದ್ದರೆ ಮಾಹಿತಿ ನಿಮಗೆ ಉಪಯುಕ್ತ ಆಗಬಹುದು.......!

ನಿಮ್ಮ ಸಂಗಾತಿ ನಿರಂತರ ಫೋನ್‌ ನಲ್ಲಿಯೇ ಇರುತ್ತಿದ್ದರೆ, ಒಮ್ಮೆ ಒಂದು ಕೋಣೆಯಲ್ಲಿ, ಇನ್ನೊಮ್ಮೆ ಮತ್ತೊಂದು ಕೋಣೆಯಲ್ಲಿ ಹೋಗಿ ಚಾಟಿಂಗ್‌ ಮಾಡುತ್ತಿದ್ದರೆ, ನಿಮಗೆ ಅವನ ಬಗ್ಗೆ ಎಷ್ಟೇ ವಿಶ್ವಾಸವಿದ್ದರೂ, ಅವನ ಕೃತ್ಯಗಳ ಬಗ್ಗೆ ನಿಮಗೆ ಆಕ್ಷೇಪವಿದ್ದರೆ, ನೀವು ಅಲರ್ಟ್‌ ಆಗಲೇಬೇಕು. ಏಕೆಂದರೆ ಇವುಗಳಲ್ಲಿ ನೀವು ಕೆಲವು ಸಂಗತಿಗಳ ಬಗ್ಗೆ ಗಮನಕೊಡಬೇಕು.

ಅವನು ತನ್ನ ಫೋನ್‌ ನಿಂದ ಕಾಲ್ ‌ಮತ್ತು ಮೆಸೇಜ್‌ ಗಳನ್ನು ಡಿಲೀಟ್‌ ಮಾಡುತ್ತಿಲ್ಲ ತಾನೇ? ಅವನ ಫೋನ್‌ ಹೊಸದರಂತೆ ಇಲ್ಲ ತಾನೇ? ಅದರಲ್ಲಿ ಯಾವುದೇ ಮೆಸೇಜ್‌ ಡಿಲೀಟ್ಸ್, ಕಾಲ್ಸ್ ಡಿಲೀಟ್‌ ಇಲ್ಲ ಅಂದರೆ ಅ ಡಿಲೀಟ್‌ ಮಾಡಲ್ಪಟ್ಟಿವೆ ಇದು ಮೋಸ ಮಾಡುವ ಒಂದು ಪ್ರಬಲ ಸಂಕೇತ.

ಸಾಮಾನ್ಯವಾಗಿ ಚೀಟಿಂಗ್‌ ಮಾಡುವ ಪುರುಷರು ತಮ್ಮ ಅಫೇರ್ಸ್ ನ ಹೆಸರು ಅಥವಾ ನಂಬರ್‌ ನ್ನು ವಿಭಿನ್ನ ರೀತಿಯಲ್ಲಿ ಇಡುತ್ತಾರೆ.

ನಿಮ್ಮ ಸಂಗಾತಿ ಫೋನ್‌ ನಲ್ಲಿ ಮಾತನಾಡುವಾಗ ಅಥವಾ ಚಾಟಿಂಗ್‌ ಮಾಡುವಾಗ ನಿಮ್ಮಿಂದ ಅಂತರ ಕಾಯ್ದುಕೊಳ್ಳಲು ನೋಡುತ್ತಿದ್ದಾನೆಯೇ? ನೀವು ಅವನ ಸಂಗಾತಿ. ಕುಟುಂಬ ಅಥವಾ ಕೆಲಸ ಯಾವುದೇ ತೆರನಾದ ವಿಷಯವನ್ನು ನಿಮ್ಮಿಂದ ಬಚ್ಚಿಡುವ ಅಗತ್ಯ ಉಂಟಾಗಬಾರದು.

ನಿಮ್ಮಿಂದ ಬಚ್ಚಿಡುವ ಒಂದು ಕಾರಣ ಕೂಡ ಸಂಗಾತಿ ನಿಮಗಾಗಿ ಒಂದು ಅಚ್ಚರಿದಾಯಕ ಯೋಜನೆ ರೂಪಿಸುತ್ತಿರಬಹುದು. ಆ ಬಗ್ಗೆ ಸಂದೇಹಪಡುವ ಮೊದಲು ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.

ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಯಾವುದೊ ಅಫೇರ್‌ ನಲ್ಲಿ ಆಸಕ್ತಿಯಿರುವ ವ್ಯಕ್ತಿಗೆ ಮನೆಯಿಂದ ಹೊರಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಚಾಟಿಂಗ್‌, ಆನ್‌ ಲೈನ್‌ ಡೇಟಿಂಗ್‌ ಲಿಂಕ್ಸ್, ಸೀಕ್ರೆಟ್‌ ಅಡ್ರೆಸೆಸ್‌ ಇವು ಎಮೋಷನ್‌ ಅಫೇರ್ಸ್ ಗೆ ಒತ್ತು ಕೊಟ್ಟಿವೆ. ಸಂಗಾತಿ ಹೆಚ್ಚು ಹೊತ್ತು ಆನ್‌ ಲೈನ್‌ ನಲ್ಲಿ ಇರುತ್ತಾನೆಂದರೆ ನೀವು ಒಂದಿಷ್ಟು ಅಲರ್ಟ್‌ ಆಗುವುದು ಸೂಕ್ತ.

ನಿಮ್ಮ ಸಂಗಾತಿ ಆಫೀಸಿನಿಂದ ಬಂದ ಬಳಿಕ ನಿಮ್ಮ ಜೊತೆ ಒಂದು ಕಪ್‌ ಚಹಾ ಕುಡಿಯಲು ಕೂಡ ಸಮಯ ಮೀಸಲಿಡುತ್ತಿಲ್ಲ ಹಾಗೂ ಚಾಟಿಂಗ್‌ ನಲ್ಲಿ ಮಗ್ನನಾಗುತ್ತಾನೆಂದರೆ ನೀವು ಆ ಬಗ್ಗೆ ಅವಶ್ಯವಾಗಿ ಮಾತನಾಡಿ.

ಸರ್ ಪ್ರೈಸಿಂಗ್‌ ಸೀಕ್ರೆಸಿ ಒಂದು ಚಿಂತೆಯ ವಿಷಯವಾಗಬಹುದು. ಅದಕ್ಕೂ ಮುಂಚೆ ನಿಮ್ಮಿಬ್ಬರ ಸಂಬಂಧ ಮುಕ್ತ ಹಾಗೂ ಪ್ರಾಮಾಣಿಕತೆಯಿಂದ ಕೂಡಿದ್ದಾಗಿರಬಹುದು.

cheting-ke-jariye

ನಿಮ್ಮ ಸಂಗಾತಿ ಫೋನ್‌ ರಿಂಗ್‌ ಆಗುತ್ತಲೇ ಅಥವಾ ಮೆಸೇಜ್‌ ಬರುತ್ತಿದ್ದಂತೆಯೇ ಅಲರ್ಟ್‌ ಆದರೆ ಅಥವಾ ಬೇರೆ ರೂಮಿಗೆ ಹೋದರೆ, ನೀವಿಲ್ಲದಿದ್ದಾಗ ಫೋನ್‌ ಪರಿಶೀಲನೆ ಮಾಡುತ್ತಿದ್ದರೆ ಏನೊ ನಡೆಯಬಾರದ್ದು ನಡೆಯುತ್ತಿದೆ ಎಂದರ್ಥ.

ಅವನ ಫೋನ್‌ ನಿಮ್ಮ ಕೈಯಲ್ಲಿದ್ದಾಗ ಅವನಿಗೆ ಆತಂಕ, ಹೆದರಿಕೆ ಉಂಟು ಮಾಡುತ್ತಿದ್ದರೆ, ಅದು ಏನೊ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಯಾರ ಮುಂದೆಯೂ ಏನನ್ನು ಬಚ್ಚಿಡಬೇಕಾದ ಅಗತ್ಯವಿಲ್ಲದಿದ್ದಾಗ ಅವನು ನರ್ವಸ್ ಆಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ