ಸೆಕ್ಸ್ ನಲ್ಲಿ ಮುಕ್ತತೆ ಅತ್ಯಗತ್ಯ. ಇದನ್ನು ಎಷ್ಟು ಮನದಲ್ಲೇ ಅದುಮಿಡುತ್ತೇವೋ ಅದು ಅಷ್ಟೇ ಹೊರಹೊಮ್ಮಿ ಬರಲು ಪ್ರಯತ್ನಿಸುತ್ತದೆ. ಹೀಗಾಗಿ ಲಾಕ್‌ ಡೌನ್‌ ಕಳೆದು ಎಲ್ಲ ಫ್ರೀ ಆಯ್ತು ಎನಿಸಿದರೂ, ಕೊರೋನಾ ಮಾರಿಯ ಕಾಟವಂತೂ ತಪ್ಪಿಲ್ಲ.

ಹೀಗಾಗಿ ಸೆಕ್ಸ್ ಮುಂದುವರಿಸಲು ಅತ್ಯಗತ್ಯ ಆರೋಗ್ಯ ಕ್ರಮ ಕೈಗೊಳ್ಳಲೇಬೇಕು, ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಸೆಕ್ಸ್ ನಂತರ ಹಲವು ವಿಷಯಗಳ ಕಡೆ ನೀವು ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದರಲ್ಲಿ ಅತಿ ಮುಖ್ಯವಾದುದು ಸೆಕ್ಷುಯಲ್ ಐಸೋಲೇಶನ್. ಸಾಧಾರಾಣವಾಗಿ ನಮ್ಮ ದೇಶದಲ್ಲಿ ನಮ್ಮ ಗುಪ್ತಾಂಗಳ ಕುರಿತಾಗಿ ಬಹಿರಂಗವಾಗಿ ಮಾತನಾಡುವ ಪದ್ಧತಿಯೇ ಇಲ್ಲ. ಹಾಗಾಗಿ ಐಸೋಲೇಶನ್‌ ಕುರಿತಾಗಿ ಯೋಚಿಸುವ ಗೊಡವೆಯೇ ಇಲ್ಲ. ನಮ್ಮವರ ಗಮನ ಈ ಕಡೆ ಹೋಗುವುದೇ ಇಲ್ಲ, ಏಕೆಂದರೆ ಬಾಲ್ಯದಿಂದಲೇ ಈ ಬಗ್ಗೆ ನಾವು ಕೇಳಿರುವುದಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಹೀಗಾಗಿ ಈ ಕೊರೋನಾ ಮಹಾಭೀತಿ ಮಧ್ಯೆ ಸೆಕ್ಷುಯಲಿ ಐಸೋಲೇಟ್‌ ಆಗುವುದು ಅನಿವಾರ್ಯ. ಇಡೀ ವಿಶ್ವ ಕೊರೋನಾ ಕಬಂಧ ಬಾಹುಗಳಿಂದ ಇನ್ನೂ ಹೊರಬಂದಿಲ್ಲ. ಸೋಶಿಯಲ್ ಡಿಸ್ಟೆನ್ಸಿಂಗ್‌ ಈಗಲೂ ಅನಿವಾರ್ಯ. ಹೀಗಿರುವಾಗ ಸೆಕ್ಸ್ ಬೇಕೆನಿಸಿದಾಗ ವಹಿಸಬೇಕಾದ ಎಚ್ಚರಿಕೆಗಳೇನು?

ಲೈಂಗಿಕ ಸುಖ ಬಯಸಿದರೆ ಅದರಿಂದ ನಮಗೆ ಕೊರೋನಾ ಅಂಟಿಕೊಂಡೀತೇ ಎಂಬ ಭಯ ಯಾರನ್ನೂ ಬಿಟ್ಟಿಲ್ಲ. ಈ ಕುರಿತು ನೀವು ಚಿಂತಿಸಿರಬಹುದು, ಆದರೆ ಸಂಕೋಚದ ಕಾರಣ ಯಾರ ಬಳಿಯೂ ಚರ್ಚಿಸಲು ಸಾಧ್ಯವಿಲ್ಲ. ನುರಿತ ವೈದ್ಯರು ಈ ಕುರಿತು ದಂಪತಿಗಳಿಗೆ ನೀಡುವ ಸಲಹೆಗಳೇನು?

ರಿಲೇಶನ್‌ ಶಿಪ್‌ ಮೇಲೆ ಪರಿಣಾಮ

ನೀವು ಲೀವ್ ‌ಇನ್‌ ರಿಲೇಶನ್‌ ಶಿಪ್‌ನಲ್ಲಿ ಪಾರ್ಟ್‌ ನರ್‌ ಜೊತೆ ವಾಸಾಗಿದ್ದೀರೆಂದರೆ ಈ ವಿಷಯದಲ್ಲಿ ತುಸು ದೂರ ಇರುವುದೇ ಸರಿ. ನಿಮ್ಮಿಬ್ಬರಲ್ಲಿ ಯಾರಿಗೆ ಕೊರೋನಾದ ಲಕ್ಷಣ ಕಾಣಿಸಿಕೊಂಡರೂ, ನಿಮ್ಮನ್ನು ನೀವು ಸಂಗಾತಿಯಿಂದ ಐಸೋಲೇಟ್‌ (ದೂರ ಇರುವಿಕೆ) ಮಾಡಿಕೊಳ್ಳುವುದೇ ಸರಿ. ಇದರಿಂದಾಗಿ ಪಾರ್ಟ್‌ನರ್‌ ಬಗ್ಗೆ ತಪ್ಪು ತಿಳಿಯಬಾರದು. ಇದರಿಂದ ಇಬ್ಬರೂ ಸುರಕ್ಷಿತರು! ನೀವು ಸೌಖ್ಯವಾಗಿ ಉಳಿದಾಗ ಮಾತ್ರ ಸೆಕ್ಸ್ ಮಜಾ ಪಡೆಯಲು ಸಾಧ್ಯ.

ಕಿಸ್‌ಗೂ ಇರಲಿ ರೇಶನ್‌

IB137231-137231135952003-ER486022

ಈಗ ನೀವು ಸಂಗಾತಿಯನ್ನು ಕಿಸ್‌ ಮಾಡುವುದಕ್ಕೂ ಹಲವು ಸಲ ಯೋಚಿಸಬೇಕು. ಹಿಂದೆಲ್ಲ `ಕಿಸ್‌ ಈಸ್‌ ದಿ ಕೀ ಆಫ್‌ ಲವ್' ಎಂದೇ ಭಾವಿಸುತ್ತಿದ್ದರು. ಆದರೆ ಇದು ಈಗ ಭಯಂಕರ ರೋಗಕ್ಕೆ ನಾಂದಿಯೂ ಆದೀತು. ಇದರರ್ಥ ನೀವು ಸಂಗಾತಿಯನ್ನು ಚುಂಬಿಸಲೇಬಾರದು ಎಂದಲ್ಲ. ಕಿಸ್‌ ಮಾಡಿ, ಅದು ಸಾಂಕೇತಿಕವಾಗಿರಲಿ. ನಿಮ್ಮಲ್ಲಿ ಯಾರಿಗಾದರೂ ಕೆಮ್ಮು ಜ್ವರ ಲಕ್ಷಣಗಳಿದ್ದರೆ ಹಾಗೂ ಇತ್ತೀಚೆಗಷ್ಟೆ ನೀವು ಬೇರೆ ಯಾರನ್ನೋ ಸಂದರ್ಭವಶಾತ್‌ ಕಿಸ್‌ ಮಾಡಿದ್ದಲ್ಲಿ ಹಾಗೂ ಅವರಿಗೀಗ ಕೊರೋನಾ ಲಕ್ಷಣಗಳು ಕಾಣಿಸುತ್ತಿದ್ದಲ್ಲಿ, ನಿಮ್ಮನ್ನು ನೀವು ಸೆಲ್ಫ್ ಐಸೋಲೇಶನ್‌ಗೆ ಗುರಿಪಡಿಸಿಕೊಳ್ಳಬೇಕು. ನೀವು ಒಬ್ಬರ ಗುಪ್ತಾಂಗ ಮುಟ್ಟಿರುವಿರಾದರೆ ಖಂಡಿತಾ ಅವರನ್ನು ಚುಂಬಿಸಿರುತ್ತೀರಿ. ಈ ವೈರಸ್‌ ಜೊಲ್ಲಿನಿಂದ ಬಹುಬೇಗ ಹರಡುತ್ತದೆಂದು ನಿಮಗೆ ಚೆನ್ನಾಗಿ ಗೊತ್ತು. ಹೀಗಾಗಿ ಆ ನಂತರ ಆಪ್ತ ಸಂಗಾತಿಯನ್ನು ಕಿಸ್‌ ಮಾಡುವುದು ಅಪಾಯಕರವೇ ಸರಿ. ಹೀಗಾಗಿ ಯಾವ ಪಾರ್ಟ್‌ನರ್‌ ಜೊತೆ ನೀವು ವಾಸಾಗಿಲ್ಲವೇ ಅಂಥವರ ನಿಕಟ ಕಾಂಟ್ಯಾಕ್ಟ್ ಒಳ್ಳೆಯದಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ