``ಗೀತಾ, ಹೊರಗೆ ಹೊರಟೆಯಾ? ಇದೀಗ ಲಾಕ್‌ ಡೌನ್‌ ಸಡಿಲವಾಗಿದ್ದರೂ ಎಷ್ಟೋ ಕಡೆ ಕಂಟೈನ್‌ಮೆಂಟ್‌, ಸೀಲ್ ‌ಡೌನ್ ಇನ್ನೂ ತಪ್ಪಿಲ್ಲ.... ಪೊಲೀಸರ ಗಸ್ತು ಇದ್ದೇ ಇದೆ,'' ಹೊರಗೆ ಹೊರಡಲೆಂದು ಸ್ಮಾರ್ಟ್‌ ಆಗಿ ಡ್ರೆಸ್‌ ಮಾಡಿಕೊಂಡು ಬಾಲ್ಕನಿಯಲ್ಲಿ ನಿಂತಿದ್ದ ಪಕ್ಕದ ಮನೆಯ ಗೀತಾಳನ್ನು ಕಂಡು ಪ್ರಶ್ನಿಸಿದಳು ಶೀಲಾ.

ಅಸಲಿಗೆ ಲಾಕ್‌ ಡೌನ್‌ ಘೋಷಣೆ ಆದಾಗಿನಿಂದ ಶೀಲಾ ತನ್ನ ನೈಟಿ ಗೆಟಪ್‌ ಬಿಟ್ಟು ಬೇರೆ ಡ್ರೆಸ್‌ ಬಗ್ಗೆ ಚಿಂತಿಸಲು ಹೋಗಲೇ ಇಲ್ಲ. ಮನೆಯಲ್ಲಿದ್ದುಕೊಂಡು, ವರ್ಕ್‌ ಫ್ರಮ್ ಹೋಮ್ ನಿಭಾಯಿಸುತ್ತಾ ಹಾಯಾಗಿರಲು ನೈಟಿಯೇ ಸುಲಭದ ಸಾಧನ ಎನ್ನುತ್ತಾಳೆ ಶೀಲಾ. ಕಾಟನ್ನಿನ ಹಗುರ, ಲೂಸ್‌, ಗಾಳಿಯಾಡುವ ನೈಟಿಗಳಲ್ಲಿ ಮನೆಯ ಕೆಲಸಗಳನ್ನು ಸರಸರ ಮಾಡಿ ಮುಗಿಸಲು ಸಲೀಸು. ಸುಸ್ತಾಯ್ತು ಎನಿಸಿದರೆ ಹಾಯಾಗಿ ಅದರಲ್ಲಿ ತುಸು ಮಲಗಬಹುದು. ಮತ್ತೆ ಮತ್ತೆ ಬಟ್ಟೆ ಬದಲಾಯಿಸಬೇಕೆನ್ನುವ ಜಂಜಾಟವಿಲ್ಲ. ಈ ಕೊರೋನಾ ಕಾಟದ ಮಧ್ಯೆ ಯಾವ ಅತಿಥಿಗಳೂ ಮನೆಗೆ ಬರುವ ಹಾಗಿಲ್ಲ, ಹೀಗಾಗಿ ಬೇಗ ಬೇಗ ಬೇರೆ ಡ್ರೆಸ್ ಬದಲಿಸಬೇಕೆನ್ನುವ ಗೊಡವೆಯೂ ಇಲ್ಲ. ನಾವು ಹೊರಗೆ ಹೋಗಬೇಕೆನ್ನುವ ಪ್ರಮೇಯವಿಲ್ಲ.

ಹೀಗಾಗಿ ಶೀಲಾ ಹಾಗೂ ವರ್ಕ್‌ ಫ್ರಮ್ ಹೋಮ್ ಗೆ ಅಂಟಿದ ಎಷ್ಟೋ ಹೆಂಗಸರು ನೈಟಿಯಲ್ಲೇ ಇಡೀ ದಿನ ಕಳೆದುಬಿಡುತ್ತಾರೆ. ಆದರೆ ಗೀತಾ ಹಾಗಲ್ಲ. ಬೆಳಗ್ಗೆ ಮನೆ ಕ್ಲೀನಿಂಗ್‌ ಮುಗಿಸಿ, ಸ್ನಾನ ಮಾಡಿ ಫ್ರೆಶ್‌ ಆದ ನಂತರ ನೀಟಾಗಿ ಪೂರ್ತಿ ಮೇಕಪ್ ಮಾಡಿಕೊಂಡು, ಆಫೀಸ್‌ಗೆ ಹೋಗುವವಳಂತೆ ಸಿದ್ಧಳಾಗಿ ನಿಂತ ಗೀತಾಳನ್ನು ಕಂಡು ಶೀಲಾ ಬೆರಗಾದಳು. ಹೀಗಾಗಿ ತನ್ನ ಬಾಲ್ಕನಿಯಿಂದಲೇ ವಿಚಾರಿಸಿದಳು.

``ಇಲ್ಲ.... ಇಲ್ಲ.... ಈ ಸಂದರ್ಭದಲ್ಲಿ ಎಲ್ಲಿಗೆ ಹೋಗೋದು? ಮನೆಯಲ್ಲಿ ಇರ್ತೀನಿ,'' ಎಂದಳು ಗೀತಾ.

``ಮತ್ತೆ ಹೀಗೆ ಟಿಪ್‌ ಟಾಪ್‌ ಆಗಿ ಡ್ರೆಸ್‌ ಮಾಡಿದ್ದಿ? ಈ ಡ್ರೆಸ್ಸಲ್ಲಿ ಒಳ್ಳೆ ಸ್ಮಾರ್ಟ್‌ ಆಗಿದ್ದಿ.... ಇವತ್ತು ಮನೆಗೆ ಯಾರಾದರೂ ಬರ್ತಾರೇನು? ಹೇಗೂ ಬಸ್ಸುಗಳು ಓಡಾಡುತ್ತಿವೆ.''

ಕಾರಣ ತಿಳಿಯದೆ ಶೀಲಾ ಸುಮ್ಮನೆ ಹೋಗುವವಳಲ್ಲ. ಮನೆಯಲ್ಲೇ ಇರುವುದು ಅಂತಾದ ಮೇಲೆ ಗೀತಾ ಇಷ್ಟೆಲ್ಲ ನೀಟಾಗಿ ಡ್ರೆಸ್ ಮಾಡಿಕೊಳ್ಳಬೇಕಾದ ಅಗತ್ಯವೇನಿತ್ತು?

``ಅರೆ.... ಯಾರೂ ಬರ್ತಿಲ್ಲಮ್ಮ. ಇನ್ನೇನು ಸ್ವಲ್ಪ ಹೊತ್ತಿಗೆ ನಮ್ಮ ಆಫೀಸ್‌ನ ಝೂಮ್ ಮೀಟಿಂಗ್‌ ಇದೆ. ಆನ್‌ಲೈನ್‌ ಸ್ಕೈಪ್ ಮೀಟಿಂಗ್‌ಗಳೂ ನಡೆಯುತ್ತಿರುತ್ತವೆ. ಅದಕ್ಕೆ ತುಸು ಡ್ರೆಸ್‌ ಮಾಡಿಕೊಂಡು ರೆಡಿ ಆಗಿದ್ದೀನಿ.''

``ಅರೆ.... ಅದಕ್ಕಾಗಿ ಕಷ್ಟಪಟ್ಟುಕೊಂಡು ಇಷ್ಟೆಲ್ಲ ತಯಾರಾಗಬೇಕಾದ ಅಗತ್ಯವೇನಿದೆ? ಬೇರೆ ಆಫೀಸ್‌ಗಳಂತೆ ನಿಮ್ಮ ಆಫೀಸಿನ ವರ್ಕ್‌ ಫ್ರಮ್ ಹೋಮ್ ಕಾಲ ಮುಗಿದು ನೀನು ಆಫೀಸಿಗೆ ಹೊರಟಿದ್ದೀಯಾ ಅಂದುಕೊಂಡೆ,''

ಶೀಲಾಳ ಕುತೂಹಲ ಇನ್ನೂ ಮುಗಿದಿರಲಿಲ್ಲ.

``ಆನ್‌ಲೈನ್‌ ಮೀಟಿಂಗ್‌ ಅಂದ್ರೆ ವಿಡಿಯೋ ಕಾನ್‌ಫರೆನ್ಸ್ ಇರುತ್ತದೆ. ಎಲ್ಲರ ಮುಖ, ಅವರ ಡ್ರೆಸ್‌ ಇತ್ಯಾದಿ ಗೊತ್ತಾಗುತ್ತದೆ. ಅಂದ ಮೇಲೆ ಸ್ವಲ್ಪವಾದ್ರೂ ನೀಟಾಗಿ ಇರಲೇಬೇಕಲ್ವ? ಇಲ್ಲದಿದ್ದರೆ ಆಫೀಸ್‌ ಫೀಲಿಂಗ್‌ ಬರೋದೇ ಇಲ್ಲ. ಮೀಟಿಂಗ್‌ನಲ್ಲಿ ಮನಸ್ಸೂ ಇರೋದಿಲ್ಲ. ಅದಕ್ಕಾಗಿ ಅಷ್ಟೇ ಈ ತಯಾರಿ, ಇನ್ನೇನೂ ವಿಶೇಷವಿಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ