ಇತ್ತೀಚಿನ ವರ್ಷಗಳಲ್ಲಿ ಮದುವೆಯಾದ 2-3 ವರ್ಷಗಳಲ್ಲಿಯೇ ವಿಚ್ಛೇದನದ ಪ್ರಕರಣಗಳು ಹೆಚ್ಚುತ್ತ ಹೊರಟಿವೆ. ಮನೋತಜ್ಞರು ಹಾಗೂ ಸಮಾಜಶಾಸ್ತ್ರಜ್ಞರ ಪ್ರಕಾರ, ವಿವಾಹ ನಿಶ್ಚಿತಾರ್ಥ ಹಾಗೂ ಮದುವೆಯ ನಡುವಿನ 2-3 ತಿಂಗಳಲ್ಲಿ ಹಾಗೂ ವಿವಾಹವಾದ ಆರಂಭಿಕ 3 ತಿಂಗಳಲ್ಲಿ ಭಾವಿ ದಂಪತಿಗಳು ಅಥವಾ ವಿವಾಹ ಬಂಧನಕ್ಕೊಳಗಾದ ದಂಪತಿಗಳ ನಡುವೆ ಕಂಫರ್ಟೆಬಿಲಿಟಿ ತಿಳಿದುಬರುತ್ತದೆ. ಭಾವಿ ಅಥವಾ ವಿವಾಹ ಬಂಧನಕ್ಕೊಳಗಾದ ದಂಪತಿಗಳ ನಡುವಿನ ಈ `ಗೋಲ್ಡನ್‌ ಪೀರಿಯಡ್‌'ನಲ್ಲಿ ಪರಸ್ಪರ ಹೇಗೆ ಮಾತನಾಡುತ್ತಾರೆ, ಪರಸ್ಪರರ ಜೊತೆ ಹೇಗೆ ವರ್ತಿಸುತ್ತಾರೆ, ಇದರ ಮೇಲೆಯೇ ಸಂಬಂಧದ ಯಶಸ್ಸು ಅಥವಾ ವೈಫಲ್ಯತೆ ನಿಂತಿರುತ್ತದೆ.

ತಜ್ಞರ ಪ್ರಕಾರ, ಈ ಕೆಳಕಂಡ ಸಂಗತಿಗಳು ಈ ಸಂಬಂಧ ಹೆಚ್ಚು ದಿನ ಉಳಿಯುವಂಥದ್ದಲ್ಲ, ಒಂದು ವೇಳೆ ಉಳಿದರೂ ಅದರಲ್ಲಿ ಕಹಿ ಹೊರತುಪಡಿಸಿ ಬೇರೇನೂ ಇರದು ಎಂಬುದನ್ನು ಒತ್ತಿ ಹೇಳುತ್ತಾರೆ.

ವ್ಯಕ್ತಿತ್ವವನ್ನು ಕೀಳಾಗಿ ಪರಿಗಣಿಸುವುದು : ಸೈಕೊಥೆರಪಿಸ್ಟ್ ಹಾಗೂ ಲೇಖಕಿ ರಾಡ್‌ಮೆನ್‌ರ ಪ್ರಕಾರ, ಭಾವಿ ಪತಿ ಅಥವಾ ಪತ್ನಿ ಪರಸ್ಪರರ ವ್ಯಕ್ತಿತ್ವವನ್ನು ಕೀಳಾಗಿ ಪರಿಗಣಿಸುವುದು ಅಥವಾ ಅವರ ವ್ಯಕ್ತಿತ್ವವನ್ನು ಗೌರವಿಸದೇ ಇರುವುದು ಈ ಮುಂತಾದ ಲಕ್ಷಣಗಳು ಸಂಬಂಧಕ್ಕೆ ಒಳ್ಳೆಯದಲ್ಲ ಎಂದು ಭಾವಿಸಲಾಗುತ್ತದೆ. ಇಂತಹ ಜೋಡಿಗಳು ಜೀವನವಿಡೀ ದುರ್ವರ್ತನೆ ತೋರಿಸುತ್ತಿರುತ್ತವೆ. ಸಂಗಾತಿ ಮೇಲಿಂದ ಮೇಲೆ ಈ ರೀತಿಯ ಕೆಟ್ಟ ವರ್ತನೆ ತೋರಿಸುತ್ತಿದ್ದರೆ, ಸಂಗಾತಿಯ ಜೊತೆಗೆ ಬಾಳ್ವೆ ನಡೆಸುವುದು ಕಷ್ಟ ಎನಿಸುತ್ತದೆ. ಅವರ ಮನಸ್ಸಿನಲ್ಲಿ ಕೀಳರಿಮೆ ಮನೆ ಮಾಡುತ್ತದೆ. ಇದರ ಪರಿಣಾಮ ಎಂಬಂತೆ ಮನೆಯಲ್ಲಿ ಆಗಾಗ ಜಗಳಗಳಾಗುತ್ತವೆ.

ಯೋಚನೆ ಹವ್ಯಾಸ ವ್ಯತ್ಯಾಸವಾಗಿರುವುದು: ಹುಡುಗರು ಮತ್ತು ಹುಡುಗಿಯರು ಬೇರೆ ಬೇರೆ ವಿಷಯಗಳಲ್ಲಿ ವಿಭಿನ್ನ ಅಭಿಪ್ರಾಯ ಹೊಂದಿರುತ್ತಾರೆ. ಹವ್ಯಾಸಗಳು, ಪೋಷಾಕುಗಳ ಬಗೆಗಿನ ಆಸಕ್ತಿ, ಯೋಚನೆಗಳು ಬೇರೆಬೇರೆಯಾಗಿರುವುದರಿಂದ ಸಣ್ಣ ಪುಟ್ಟ ತಕರಾರುಗಳು ಸಹಜವೆ. ಆದರೆ ಅವೇ ಹೆಚ್ಚುತ್ತ ಹೋದರೆ ಕ್ರಮೇಣ ಮನಸ್ತಾಪ ಮತ್ತು ಜಗಳಗಳಲ್ಲಿ ಪರಿವರ್ತನೆ ಆಗಬಹುದು. ಹುಡುಗಿ ಅಗತ್ಯಕ್ಕಿಂತ ಹೆಚ್ಚು ಮಾಡರ್ನ್‌ ಆಗಿ ಬಿಂದಾಸ್‌ ಆಗಿದ್ದರೆ ಅದು ಹುಡುಗನಿಗೆ ಕಿರಿಕಿರಿ ಎನಿಸಬಹುದು. ಹುಡುಗನ ಸರಳ ಜೀನಶೈಲಿ ಅವನನ್ನು ಪೆದ್ದ, ಏನೂ ಗೊತ್ತಿಲ್ಲದವರ ಗುಂಪಿಗೆ ಸೇರಿಸಬಹುದು. ಹುಡುಗ/ಹುಡುಗಿ ಇಬ್ಬರಲ್ಲಿ ಒಬ್ಬರು ಮಾಂಸಾಹಾರಿ ಹಾಗೂ ಸಸ್ಯಾಹಾರಿ ಆಗಿದ್ದಲ್ಲಿ ಸಂಸಾರದ ದಾರಿ ಕಷ್ಟಕರವಾಗಿ ಪರಿಣಮಿಸಬಹುದು. ರಾಜಕೀಯ ಕುರಿತಾದ ಯೋಚನೆ ಹಾಗೂ ಮತಬೇಧ ಕೂಡ ಇಕ್ಕಟ್ಟಿನ ಸ್ಥಿತಿಗೆ ತಂದೊಡ್ಡಬಹುದು.

ಪರಸ್ಪರರಿಗೆ ಸ್ಪೇಸ್‌ ಕೊಡದಿರುವುದು : ಮನೋತಜ್ಞ ಡಾ. ಅಮರ್‌ ಹೀಗೆ ಹೇಳುತ್ತಾರೆ, ಹುಡುಗ ಮತ್ತು ಹುಡುಗಿ ಮದುವೆ ಬಂಧನದಲ್ಲಿ ಸಿಲುಕುವ ನಿರ್ಧಾರ ಕೈಗೊಂಡಾಗ, ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು, ಪರಸ್ಪರರ ಮೇಲೆ ಹಕ್ಕು ಚಲಾಯಿಸುವುದು ಸಾಮಾನ್ಯ ಸಂಗತಿಗಳಾಗಿವೆ. ಆದರೆ ಒಬ್ಬ ಹುಡುಗ/ಹುಡುಗಿ ಪರಸ್ಪರರ ನಿಮಿಷ ನಿಮಿಷದ ಲೆಕ್ಕ ಕೇಳತೊಡಗಿದರೆ, ದಿನವಿಡೀ ತಮಗೆ ತಾವೇ ಮಾತನಾಡಿಕೊಳ್ಳುವುದು ಮತ್ತು ತಮ್ಮ ಮೇಲೆಯೇ ಗಮನ ಕೇಂದ್ರೀಕರಿಸುವ ಅಪೇಕ್ಷೆ ಹೊಂದಿದ್ದಲ್ಲಿ, ಹಾಗೊಮ್ಮೆ ಅದು ಈಡೇರದೇ ಹೋದಲ್ಲಿ, ಪರಸ್ಪರ ದೋಷಾರೋಪಣೆ, ಜಗಳದ ಸ್ಥಿತಿ ಉಂಟಾಗುತ್ತಿದ್ದಲ್ಲಿ, ಆ ಸಂಬಂಧ ದೀರ್ಘಕಾಲ ಮುಂದುವರಿಯುವುದು ಕಠಿಣ. ಎಷ್ಟೋ ಸಲ ಕಂಡುಬಂದ ಸಂಗತಿ ಎಂದರೆ, ಹುಡುಗ ಕೇಳುವ ಪ್ರಶ್ನೆಗಳಿಗೆ ಹುಡುಗಿ ಗಲಿಬಿಲಿಗೊಳ್ಳುತ್ತಾಳೆ. ಹುಡುಗ ಹುಡುಗಿಗೆ, ``ಎಲ್ಲಿದ್ದೆ, ಏನ್ಮಾಡ್ತಿದ್ದೆ? ಫೋನ್‌ ಏಕೆ ಮಾಡಲಿಲ್ಲ?'' ಎಂದು ಕೇಳಿದಾಗ, ನೀವು ತೋಚಿದಂತೆ ಉತ್ತರ ಕೊಟ್ಟರೆ ಸತ್ಯಾಸತ್ಯತೆ ಪರೀಕ್ಷಿಸಲು ಅವರು ಕ್ರಾಸ್‌ ವೆರಿಫಿಕೇಶನ್‌ ಮಾಡಬಹುದು. ಇದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ