ಮಹಾನಗರಗಳಲ್ಲಿ ಮಕ್ಕಳಿಗಾಗಿ ಹೋಂಕೇರ್, ಪ್ರೀ ನರ್ಸರಿ, ಪ್ಲೇಹೋಮ್, ಕಿಂಡರ್‌ಗಾರ್ಟನ್‌ ಹೆಸರುಗಳಲ್ಲಿ ಅನೇಕ ಸಂಸ್ಥೆಗಳು, ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶಗಳಲ್ಲಿ ಅಗತ್ಯವೆನಿಸುತ್ತವೆ. ಉದ್ಯೋಗಸ್ಥ ತಂದೆತಾಯಿ ಆಫೀಸಿನ ಸಮಯದಲ್ಲಿ ತಮ್ಮ ಮಕ್ಕಳನ್ನು ಇಂತಹ ಕಡೆ ಬಿಟ್ಟುಹೋಗುತ್ತಾರೆ.

ಹೆಚ್ಚುತ್ತಿರುವ ಆಧುನಿಕ ಅಗತ್ಯಗಳು, ನೆರೆಹೊರೆಯರ ಒಡನಾಟ ಇಲ್ಲದಿರುವುದು, ಒಡೆಯುತ್ತಿರುವ ಒಟ್ಟು ಕುಟುಂಬಗಳು ಇವುಗಳ ನಡುವೆ ಈ ಆಯ್ಕೆಯೇ ಉತ್ತಮ. ಮಕ್ಕಳ ಪಾಲನೆ, ಪೋಷಣೆ, ಸ್ನೇಹ ವರ್ತನೆ, ಮಾತುಕಥೆಯ ಶಿಕ್ಷಣ ಇತ್ಯಾದಿಗಳನ್ನು ಹಣ ಪಡೆದು ಅಲ್ಲಿ ನಿರ್ವಹಿಸಲಾಗುತ್ತದೆ. ತಂದೆ ತಾಯಿ ತಮ್ಮ ಮಕ್ಕಳು ಒಳ್ಳೆಯ ಪರಿಸರದಲ್ಲಿ ಪೋಷಣೆ ಪಡೆದು ಬದುಕಿನ ಪ್ರಾರಂಭಿಕ ಪಾಠ ಕಲಿಯುತ್ತಾರೆಂದು ನಿಶ್ಚಿಂತರಾಗಿರುತ್ತಾರೆ.

ಪೋಷಕರು ಎಚ್ಚರದಿಂದಿರಬೇಕು

ಸಂಚಾಲಕರು ಕೇಳಿದಷ್ಟು ಹಣ ತೆತ್ತ ನಂತರ ಈ ನಿಶ್ಚಿಂತತೆ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ವಾಸ್ತವದಲ್ಲಿ ಈ ನಿಶ್ಚಿಂತತೆಯನ್ನೇ ಒಪ್ಪಿಕೊಳ್ಳುವುದೇ? ಹೀಗೆ ಮಾಡುವ ಪೋಷಕರು ಅನೇಕ ಬಾರಿ ಎಚ್ಚರಿಕೆ ಮತ್ತು ತರ್ಕದಿಂದ ವರ್ತಿಸುವ ಸ್ಥಿತಿ ಕಳೆದುಕೊಳ್ಳುತ್ತಿದ್ದಾರೆ. ಏನಾದರೂ ತೊಂದರೆಯಾದಾಗ ಪೋಷಕರು ಹಾಗೂ ಅವರ ಮಕ್ಕಳ ಕೋಮಲ ಮನಸ್ಸಿಗೆ ಬಹಳ ಆಘಾತವಾಗುತ್ತದೆ.

ಬೆಂಗಳೂರಿನ  ಒಬ್ಬ ದಂಪತಿಗೂ ಇದೇ ರೀತಿ ನಿಶ್ಚಿಂತತೆ ಇತ್ತು. ಘಟಿಸಿದ ವಿಚಾರದ ಬಗ್ಗೆ ಅವರು ಇಂದಿನವರೆಗೂ ಪಶ್ಚಾತ್ತಾಪ ಪಡುತ್ತಿದ್ದಾರೆ. ಪ್ರೀತಿ ಮತ್ತು ಅಜಯ್‌ (ಹೆಸರು ಬದಲಾಯಿಸಿದೆ) ಇಬ್ಬರೂ ಒಂದು ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ 4 ವರ್ಷದ ಒಬ್ಬ ಮಗಳಿದ್ದಳು. ಪ್ರಾರಂಭದ ಪೋಷಣೆಯ ನಂತರ ಅವರು ಮಗಳನ್ನು ಪ್ಲೇ ಹೋಮ್ಗೆ ಸೇರಿಸಲು ನಿರ್ಧರಿಸಿದರು. ಅವರು ಒಂದು ದೊಡ್ಡ ಸೊಸೈಟಿಯಲ್ಲಿದ್ದ ಕ್ರೆಶ್‌ಗೆ ಮಗಳನ್ನು ಸೇರಿಸಿದರು. ಅವರು ಹೋಗಿ ಆಡಳಿತ ವರ್ಗದವರನ್ನು ಮಾತನಾಡಿಸಿದಾಗ ತಿಂಗಳಿಗೆ ನಾಲ್ಕೂವರೆ ಸಾವಿರ ರೂ. ಫೀಸ್‌. ಅಲ್ಲಿನ ಸಂಚಾಲಕರು ಮಗುವನ್ನು ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ಮನೆಯಂತಹುದೇ ವಾತಾವರಣ, ಊಟ, ತಿಂಡಿ, ಸ್ನೇಹಭರಿತ ಮಾತುಕಥೆ, ಒಟ್ಟಿನಲ್ಲಿ ಮಕ್ಕಳನ್ನು ಎಲ್ಲ ರೀತಿಯಿಂದಲೂ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ತಂದೆ ತಾಯಿ ಆಫೀಸ್‌ ಕೆಲಸ ಮುಗಿಸಿ ಬರುವವರೆಗೆ ಮಕ್ಕಳ ಬಗ್ಗೆ ಶಾಲೆಯ ಸಂಚಾಲಕರಿಗೆ ಎಲ್ಲ ರೀತಿಯ ಜವಾಬ್ದಾರಿ ಇರುತ್ತದೆ ಎಂದು ತಿಳಿಯಿತು. ಈ ದಂಪತಿಗಳು ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಗಳನ್ನು ಬೆಳಗ್ಗೆ ಅಲ್ಲಿ ಬಿಟ್ಟು ಆರಾಮವಾಗಿ ಉದ್ಯೋಗಕ್ಕೆ ಹೋಗುವುದು. ಅದರಿಂದ ಮಗಳಿಗೂ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದುಕೊಂಡು ತಂದೆ ತಾಯಿ ಮಗಳನ್ನು ಅಲ್ಲಿ ಬಿಡಲು ಶುರು ಮಾಡಿದರು.

ಕೆಲವು ತಿಂಗಳುಗಳ ನಂತರ ಪ್ರೀತಿಗೆ ಮಗಳ ಆರೋಗ್ಯ ಹದಗೆಡುತ್ತಿರುವಂತೆ ಅನುಭವವಾಯಿತು. ಈಗ ಅವಳು ಪ್ಲೇ ಹೋಮ್ ಹೆಸರು ಹೇಳಿದರೆ ಅಳತೊಡಗಿದಳು. ಒಂದು ದಿನ ಆರೋಗ್ಯ ಬಿಗಡಾಯಿಸಿತು. ಅವರು ಸೂಕ್ಷ್ಮವಾಗಿ ಗಮನಿಸಿದಾಗ ಮಗಳ ಶರೀರದ ಮೇಲೆ ಕೆಲವು ಕೊಳಕು ಗುರುತುಗಳಿದ್ದವು. ಅವರು ಅದರ ಬಗ್ಗೆ ಮಗಳನ್ನು ಕೇಳಿದಾಗ ಅವಳು ಅಳುತ್ತಾ ಅದೆಲ್ಲನ್ನೂ ಸ್ಕೂಲಿನ ತಾತಾ ಮಾಡಿದ್ದು ಎಂದಳು. ಅದನ್ನು ಕೇಳಿ ಪ್ರೀತಿಗೆ ಆಶ್ಚರ್ಯವಾಯಿತು. ತಮ್ಮ ಮಗಳೊಂದಿಗೆ ಈ ರೀತಿಯಾಗಿ ಕೊಳಕು ವ್ಯವಹಾರ ನಡೆಸುತ್ತಾರೆಂದು ಅವಳು ಕನಸು ಕಂಡಿರಲಿಲ್ಲ. ಗಂಡ ಕಂಪನಿಯ ಕೆಲಸಕ್ಕೆ ವಿದೇಶಕ್ಕೆ ಹೋಗಿದ್ದರು. ಪ್ರೀತಿ ಅವರು ಬಂದ ನಂತರ ಎಲ್ಲ ವಿಷಯಗಳನ್ನೂ  ಹೇಳಿದರು.  ಕಡೆಗೆ ಶಾಲೆಯ ವ್ಯವಸ್ಥಾಪಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಫೈಲ್ ಮಾಡಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ