ಡೆಸ್ಟಿನೇಶನ್‌ ವೆಡಿಂಗ್‌ ಅಂದರೆ ಮಜಾ ಮತ್ತು ರೋಮಾಂಚನ ನೀಡುವ ವೆಡಿಂಗ್‌. ಇಂದು ಸೆಲೆಬ್ರಿಟೀಸ್‌ ಆಗಲಿ ಅಥವಾ ಸಾಮಾನ್ಯ ಜನರಾಗಲಿ. ಎಲ್ಲರೂ ತಮ್ಮ ವಿವಾಹದ ಕ್ಷಣಗಳನ್ನು ಸಂತೋಷಕರ ಮತ್ತು ಸ್ಮರಣೀಯಗೊಳಿಸಲು ಡೆಸ್ಟಿನೇಶನ್‌ ವೆಡಿಂಗ್‌ನ್ನು ಆಯ್ಕೆ ಮಾಡುತ್ತಾರೆ.

ಕಳೆದ ವರ್ಷ ಸಿನಿಮಾ ತಾರೆ ಅನುಷ್ಕಾ ಶರ್ಮ ಮತ್ತು ಕ್ರಿಕೆಟರ್‌ ವಿರಾಟ್‌ ಕೊಹ್ಲಿಯ ಡೆಸ್ಟಿನೇಶನ್‌ ವೆಡಿಂಗ್‌ ಬಗ್ಗೆ ಜನರು ಕುತೂಹಲಿಗಳಾಗಿದ್ದರು. ಇಟಲಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ವಧೂವರರು ತಮ್ಮ ಆಪ್ತ ಬಂಧು-ಮಿತ್ರರ ಸಮ್ಮುಖದಲ್ಲಿ ಫೇರಿಟೇಲ್‌‌ನ ರೀತಿಯಲ್ಲಿ ಸಪ್ತಪದಿ ತುಳಿದು ಸಂಭ್ರಮಿಸಿದರು. ಅದರ ನಂತರ ನಡೆದ ಪ್ರಖ್ಯಾತ ಸಿನಿಮಾ ತಾರೆ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ರ ಡೆಸ್ಟಿನೇಶನ್‌ ವೆಡಿಂಗ್‌ ಸಹ ದೇಶಾದ್ಯಂತ ಮನೆ ಮಾತಾಯಿತು. ಈ ಜೋಡಿ ಕೂಡ ಇಟಲಿಯಲ್ಲಿ ವಿವಾಹ ಕಾರ್ಯ ನೆರವೇರಿಸಿತು. ನಂತರ ಬೆಂಗಳೂರು, ಮುಂಬೈಗಳಲ್ಲಿ ರಿಸೆಪ್ಶನ್‌ ಏರ್ಪಡಿಸಿದರು.

ಲಕ್ಷುರಿ ವೆಡಿಂಗ್‌ ಕನ್ಸಲ್ಟೆಂಟ್‌ ಆಗಿರುವ ಆಶ್ಮೀನ್‌ ಮುಂಜಾಳ್‌ ತಮ್ಮ ಮಗಳ ಜೊತೆಗೂಡಿ ಸ್ಟಾರ್ಸ್ ಟ್ರಕ್‌ ವೆಡಿಂಗ್‌ ಎಂಬ ವೆಡಿಂಗ್‌ ವೆಂಚರ್‌ ಪ್ರಾರಂಭಿಸಿದ್ದಾರೆ.

ವೆಡಿಂಗ್‌ ಡಿಸೈನರ್‌ ಆಶ್ಮೀನ್‌ ಮುಂಜಾಳ್‌ ಹೇಳುತ್ತಾರೆ, “ಡೆಸ್ಟಿನೇಶನ್‌ ವೆಡಿಂಗ್‌ ಅಂದರೆ ತಮ್ಮ ಮನೆ ಮತ್ತು ಊರಿನಿಂದ ಕನಿಷ್ಠ ಪಕ್ಷ 100 ಮೈಲಿ ದೂರದಲ್ಲಿ, ಯಾವುದಾದರೊಂದು ಸುಂದರ ಸ್ಥಳದಲ್ಲಿ ವಿವಾಹ ಕಾರ್ಯಕ್ರಮವನ್ನು ನಡೆಸುವುದು ಎಂದರ್ಥ. ಇಲ್ಲಿ ವಧೂವರರು ಆರಿಸಿದ ತಮ್ಮ ಕೆಲವು ಬಂಧುಮಿತ್ರರೊಡಗೂಡಿ 3-4 ದಿನಗಳು ಕ್ವಾಲಿಟಿ ಟೈಮ್ ಕಳೆಯುತ್ತಾರೆ. ಈ ಮೂಲಕ ಅವರು ತಾವು ಎಂದೋ ಕಂಡಿದ್ದ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.”

ಥೀಮ್ ಆಧಾರಿತವಾದ ಡೆಸ್ಟಿನೇಶನ್‌ ವೆಡಿಂಗ್‌ : ಡೆಸ್ಟಿನೇಶನ್‌ ವೆಡಿಂಗ್‌ ಯಾವುದಾದರೊಂದು ವಿಶೇಷ ಥೀಮ್ ಮೇಲೆ ಆಧಾರಿತವಾಗಿರುತ್ತದೆ. ವಿವಾಹದ ವಿಭಿನ್ನ ಕಾರ್ಯಕ್ರಮಗಳಿಗೆ ಬೇರೆ ಬೇರೆ ಥೀಮ್ ಗಳನ್ನು ಆರಿಸಿಕೊಳ್ಳಬಹುದು. ಕೆಲವು ಮುಖ್ಯ ಥೀಮ್ ಗಳೆಂದರೆ…. ಹವಾಯಿ ಥೀಮ್, ಬಾಲಿವುಡ್‌ ಥೀಮ್, ಅರಸರ ಮತ್ತು ಮೊಘಲರ ಥೀಮ್, ಫೇರಿಟೇಲ್‌ ಥೀಮ್, ಜಂಗ್‌ ಬುಕ್‌ ಥೀಮ್, ವಾಟರ್‌ ಕೋರ್‌ ಮತ್ತು ರೆಡ್‌ ಕಾರ್ಪೆಟ್‌  ಥೀಮ್.

ಲೊಕೇಶನ್‌ನ ಆಯ್ಕೆ : ನಿಮ್ಮ ಊರಿನ ಹತ್ತಿರದ ಲೊಕೇಶನ್‌ನ್ನು ಬೇಕಾದರೆ ಆರಿಸಿಕೊಳ್ಳಬಹುದು ಅಥವಾ ನಿಮ್ಮ ಬಜೆಟ್‌ಗೆ ತಕ್ಕಂತೆ ಗೋವಾ, ಕೇರಳ, ಆಗ್ರಾ, ಜಯಪುರ, ಉದಯಪುರ ಇತ್ಯಾದಿ ಅಥವಾ ವಿದೇಶೀ ಲೊಕೇಶನ್‌ಗಳಾದ ಮೆಕ್ಸಿಕೊ, ಹವಾಯ್, ಯೂರೋಪ್‌, ದುಬೈನಂತಹ ಡ್ರೀಮ್ ಪ್ಲೇಸೆಸ್‌ ಆಯ್ಕೆ ಮಾಡಬಹುದು. ಆಶ್ಮೀನ್‌ ಪ್ರಕಾರ ಡೆಸ್ಟಿನೇಶನ್‌ ವೆಡಿಂಗ್‌ಗಾಗಿ ನಿಮ್ಮ ಜೇಬನ್ನು ಅತಿಯಾಗಿ ಸಡಿಲಿಸಬೇಕಿಲ್ಲ. ನಿಮ್ಮ ಬಜೆಟ್‌ಗೆ ತಕ್ಕಂತೆ ನಿಮಗೆ ಬೇಕಾದ ರೀತಿಯಲ್ಲಿ ವಿವಾಹ ಕಾರ್ಯಕ್ರಮ ರೂಪಿಸಬಹುದು.

2 ಲಕ್ಷದೊಳಗಿನ ಬಜೆಟ್‌ : ಅನಾವಶ್ಯಕ ಖರ್ಚನ್ನು ತಪ್ಪಿಸಿ ನೀವು ಕಡಿಮೆ ಬಜೆಟ್‌ ನಲ್ಲಿಯೂ ರೋಮಾಂಚಕರ ವಿವಾಹದ ಆನಂದವನ್ನು ಅನುಭವಿಸಬಹುದು.

ಅವೆನ್ಯೂ : ಹತ್ತಿರದಲ್ಲಿರುವ ಬ್ಯಾಂಕ್ವೆಟ್‌ ಹಾಲ್‌, ಫಾರ್ಮ್ ಹೌಸ್‌, ವಿಲ್ಲಾ ಆಯ್ಕೆಗಳಿದ್ದು, ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಬಹುದು. ಬೇಸಿಗೆ ಕಾಲದಲ್ಲಿ, ಸಾಯಂಕಾಲ ಓಪನ್‌ ಏರಿಯಾದಲ್ಲಿ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಿದರೆ ಹಿತಕರವಾಗಿರುತ್ತದೆ,

ಡೆಕೋರೇಶನ್‌ : ನಿಜವಾದ ಹೂಗಳ ಬದಲು ನಕಲಿ ಹೂ ಬಳ್ಳಿಗಳನ್ನು ಡೆಕೋರೇಶನ್‌ಗೆ ಬಳಸಬಹುದು. ಪೇಪರ್‌ ವಾಲ್‌, ಗ್ಲಾಸ್‌ ಫ್ಲವರ್‌, ಆರ್ಟಿಫಿಶಿಯಲ್ ಪ್ಲಾಂಟ್‌ ಇತ್ಯಾದಿಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಅಲಂಕಾರ ಮಾಡಬಹುದು.

ಕೇಟರಿಂಗ್‌ : ನಿಮಗೆ ಇಷ್ಟವಾದ ಮೆನು ಸಿದ್ಧಪಡಿಸಿ ಕೇಟರಿಂಗ್‌ ಆರ್ಡರ್‌ ಮಾಡಬಹುದು. ವೆಲ್ ‌ಕಮ್ ಡ್ರಿಂಕ್‌ನಿಂದ ಹಿಡಿದು ತಾಂಬೂಲದವರೆಗೆ ಕೇಟರಿಂಗ್‌ ಸರ್ವೀಸ್‌ನವರು ಎಲ್ಲವನ್ನೂ ಅಣಿ ಮಾಡಿಕೊಡುತ್ತಾರೆ.

ಡೋಲು ಮತ್ತು ಡೀಜೆ : ಡೀಜೆಯನ್ನು ಕರೆಸಬೇಕೆಂದರೆ ಖರ್ಚಿನ ಬಾಬತ್ತು ಎಂದು ಯೋಚಿಸಬೇಕಿಲ್ಲ. ಕಡಿಮೆ ಹಣದಲ್ಲಿಯೂ ಸಾಧ್ಯವಾಗುತ್ತದೆ. ರಾಜಸ್ಥಾನಿ ಥೀಮ್ ಆರಿಸಿದರೆ ತಮಟೆ ತಾಳಗಳ ಜೊತೆಗೆ ಒಳ್ಳೆಯ ಸಂಗೀತ ಸಿಗುತ್ತದೆ. ಇದರಲ್ಲಿ ಕೊರಿಯೊಗ್ರಫಿಯ ಅಗತ್ಯ ಅಷ್ಟಾಗಿ ಇರುವುದಿಲ್ಲ.

ಥೀಮ್ : ರಾಜಸ್ಥಾನಿ ಥೀಮ್ ಆರಿಸಿದರೆ ಖರ್ಚು ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಇದರಲ್ಲಿ ಅತಿಥಿಗಳು ಕುಳಿತುಕೊಳ್ಳಲು ಸೋಫಾ, ಚೇರ್ಸ್ ಗೆ ಬದಲಾಗಿ ಮಣೆ ಮತ್ತು ಉಯ್ಯಾಲೆಗಳನ್ನು ಬಳಸಲಾಗುತ್ತದೆ. ಅತಿಥಿಗಳಿಗೆ ಬೇಕಾಗುವ ಪೇಟ, ಸೀರೆ, ಲಹಂಗಾಗಳು ಬಾಡಿಗೆಗೆ ಸಿಗುತ್ತವೆ. ಜೈಪುರಿ ಥೀಮ್ ನಲ್ಲಿ ವಧು ಧರಿಸುವ ನೆರಿಗೆಯುಳ್ಳ ಲಹಂಗಾ ದುಬಾರಿ ಏನಲ್ಲ. ಅದಕ್ಕೆ ಬೇಕಾದ ಆರ್ಟಿಫಿಶಿಯಲ್ ಆಭರಣಗಳು ದೊರೆಯುತ್ತವೆ.

ವೀಡಿಯೊಗ್ರಫಿ : ವಿವಾಹ ಕಾರ್ಯಕ್ರಮದ ನೆನಪನ್ನು ಅಳಿಸದಂತೆ ಇರಿಸಲು ವಿಡಿಯೋಗ್ರಾಫರ್‌ ಮತ್ತು ಕ್ಯಾಮರಾಮನ್‌ ಬೇಕೇಬೇಕು. ಸಿಂಪಲ್ ವೀಡಿಯೊಗ್ರಫಿಯ ಮೂಲಕ ಈ ಕೆಲಸವನ್ನು ಕಡಿಮೆ ಖರ್ಚಿನಲ್ಲಿ ಮಾಡಬಹುದಾಗಿದೆ. ಹೀಗೆ ಪ್ರೀಶೂಟ್‌ ಖರ್ಚನ್ನೂ ತಪ್ಪಿಸಬಹುದು.

30 ಲಕ್ಷ ಬಜೆಟ್‌

ನಿಮ್ಮ ಬಜೆಟ್‌ 30 ಲಕ್ಷ ರೂಪಾಯಿ ಆಗಿದ್ದರೆ ನಿಮಗೆ ವಿಭಿನ್ನ ಆಯ್ಕೆಗಳು ಇರುತ್ತವೆ. ಹೀಗೆ ನಿಮ್ಮ ಪ್ರತಿಯೊಂದು ಬಯಕೆಯನ್ನೂ ಪೂರೈಸಿಕೊಳ್ಳಬಹುದು.

ಅವೆನ್ಯೂ : ಮಹಾನಗರಗಳಾದ ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ ಮೊದಲಾದ ಕಡೆಗಳಲ್ಲಿ ಫಾರ್ಮ್ ಹೌಸ್‌ ಅಥವಾ ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲಿ ಸುಮಾರು 200 ಜನರಿಗೆ ಬುಕಿಂಗ್‌ ಮಾಡಬಹುದು.

ಥೀಮ್ : ದಕ್ಷಿಣದ ಥೀಮ್, ಮುಘಲ್ ಥೀಮ್, ವಿಕ್ಟೋರಿಯನ್‌ ಥೀಮ್, ಇಟಾಲಿಯನ್‌ ಥೀಮ್ ಮುಂತಾದವುಗಳಲ್ಲಿ ಆಯ್ಕೆ ಮಾಡಿಕೊಂಡು ಲ್ಯಾವಿಶ್‌ ಅರೇಂಜ್‌ಮೆಂಟ್‌ನ ಆನಂದವನ್ನು ಅನುಭವಿಸಬಹುದು. ಥೀಮ್ ಗೆ ತಕ್ಕಂತೆ ಊಟವನ್ನೂ ಸರ್ವ್ ಮಾಡಲಾಗುವುದು.

ಬೇರೆ ಬೇರೆ ಕಾರ್ಯಕ್ರಮಗಳಿಗೆ ಬೇರೆ ಬೇರೆ ಥೀಮ್ ಇರಿಸಬಹುದು. ಮ್ಯಾಜಿಕ್‌ ಅಲ್ಲಾವುದೀನ್‌ ನೈಟ್‌, ಬಾಲಿವುಡ್‌ ನೈಟ್‌, ಓಂ ಶಾಂತಿ ಓಂ, ಇಟಾಲಿಯನ್‌, ಹಾಯಿಯನ್‌. ಏಂಜಲ್ಸ್ ಅಂಡ್‌ ಡೆವಿಲ್ಸ್ ಮೊದಾಲಾದ ಥೀಮ್ ಗಳ ಆನಂದವನ್ನೂ ಅನುಭವಿಸಬಹುದು. ವಧೂವರರ ಡ್ರೆಸ್‌ನ್ನು ಜೋಧಾ ಅಕ್ಬರ್‌ ಅಥವಾ ಇತರೆ ರಾಜ ದಂಪತಿ ಸ್ಟೈಲ್‌ನಲ್ಲಿ ಸಿದ್ಧಪಡಿಸಬಹುದು.

ಕೇಟರಿಂಗ್‌ : ಲಗ್ಷೂರಿ ವೆಡಿಂಗ್‌ಗಾಗಿ ಹಣ ಚೆಲ್ಲಲು ಸಿದ್ಧರಿದ್ದರೆ ಥೈಲ್ಯಾಂಡ್‌, ಮರೀಶಿಯಸ್‌, ದುಬೈ, ಮೆಕ್ಸಿಕೊ, ಇಟಲಿ, ಸ್ವಿಡ್ಝರ್‌ಲ್ಯಾಂಡ್‌ ಮೊದಲಾದ ಸ್ಥಳಗಳಲ್ಲಿ  ಲ್ಯಾವಿಶ್‌ ಅರೇಂಜ್‌ಮೆಂಟ್‌ ಮಾಡಿಸಿ ನಿಮ್ಮ ಮನದಾಸೆಯನ್ನು ಪೂರೈಸಿಕೊಳ್ಳಬಹುದು.

ಇಂತಹ ವಿವಾಹಗಳಲ್ಲಿ ಸಿಂಗರ್ಸ್, ಟೆಲಿವಿಶನ್‌ ಸ್ಟಾರ್ಸ್, ಬಾಲಿವುಡ್‌ ಸ್ಟಾರ್ಸ್, ಮಾಡೆಲ್ಸ್ ಮುಂತಾದ ಸೆಲೆಬ್ರಿಟೀಸ್‌ನ್ನು ಗೆಸ್ಟ್ ಅಥವಾ ಪರ್ಫಾರ್ಮರ್‌ ಆಗಿ ಕರೆಸಬಹುದು.

ಸೆಕ್ಯುರಿಟಿಯಿಂದ ಗೆಸ್ಟ್ ಹ್ಯಾಂಡ್ಲಿಂಗ್‌, ವಿಡಿಯೋಗ್ರಫಿ, ಪ್ರೀವೆಡಿಂಗ್‌ ಶೂಟ್‌, ಮೀಡಿಯಾದಲ್ಲಿ ಪ್ರಚಾರ, ಮೊದಲಾದ ಎಲ್ಲ ಜವಾಬ್ದಾರಿಗಳನ್ನು ವೆಡಿಂಗ್‌ ಪ್ಲಾನರ್‌ ನಿರ್ವಹಿಸುತ್ತಾರೆ.

ಯುನಿಕ್‌ ವೆಡಿಂಗ್‌ ಟ್ರಿಪ್ಸ್ ನಿಮ್ಮ ವಿವಾಹ ವಿಶಿಷ್ಟವಾಗಿ ಸದಾ ನೆನಪಿನಲ್ಲಿ ಉಳಿಯುವಂತಾಗಬೇಕೇ? ಅದಕ್ಕಾಗಿ ಮ್ಯಾರೇಜ್‌ ಎಕ್ಸ್ ಪರ್ಟ್ಸ್  ಕೆಲವು ಸುಲಭ ವಿಧಾನಗಳನ್ನು ಸೂಚಿಸುತ್ತಾರೆ.

ರಚನಾತ್ಮಕ ಆಮಂತ್ರಣ ಪತ್ರಿಕೆ : ವಿನೂತನ ಆಮಂತ್ರಣ ಪತ್ರಿಕೆ ಇಂದಿನ ಕಾಲದ ಬೇಡಿಕೆಯಾಗಿದೆ. ಮೃದುವಾದ ಕಾಗದದ ಗೋಲ್ಡನ್‌ ಕಾರ್ಡ್‌ ಇಂದು ಹಳೆಯ ಫ್ಯಾಷನ್‌ ಆಗಿದೆ. ಇದರಲ್ಲಿ ಕಪಲ್‌ನ ಹೆಸರಲ್ಲದೆ ಮತ್ತೇನೂ ವಿಶೇಷ ಇರದು. ನಿಮ್ಮ ಆಮಂತ್ರಣ ಪತ್ರಿಕೆಯು ರಚನಾತ್ಮಕವಾಗಿರಲಿ. ಅದರಲ್ಲಿ ನಿಮ್ಮ ಬಗ್ಗೆ ಮಾಹಿತಿ ಇರಲಿ. ನಿಮ್ಮ ಭಾವಿ ಬಾಳ ಸಂಗಾತಿಯ ವೈಶಿಷ್ಟ್ಯವೇನು ಎಂಬುದನ್ನು ನಮೂದಿಸಿ. ಕಾರ್ಡ್‌ನಲ್ಲಿ ಒಂದು ಪ್ರೀತಿಯ ಕವಿತೆಯನ್ನು ಸೇರಿಸಿ ಆಕರ್ಷಕಗೊಳಿಸಿ.

ಫೋಟೊ ಫ್ರೇಮ್ಸ್ : ನೀವು ವಿವಾಹವಾಗುವ ಸ್ಥಳದ ಎಲ್ಲೆಡೆಯೂ ನಿಮ್ಮ ಫೋಟೊ ಫ್ರೇಮ್ಸ್ ತೂಗುಹಾಕಬಹುದು. ಬಾಲ್ಯದಿಂದ ಇಂದಿನವರೆಗಿನ ನಿಮ್ಮಿಬ್ಬರ ಫೋಟೋಗಳು ಎಲ್ಲರ ಕಣ್ಸೆಳೆಯುವುದರಲ್ಲಿ ಸಂದೇಹವಿಲ್ಲ.

ಅತಿಥಿಗಳ ಸ್ವಾಗತ : ಅತಿಥಿಗಳು ವಿವಾಹ ಸ್ಥಳಕ್ಕೆ ಪ್ರವೇಶಿಸುವಾಗ ಅವರ ಲುಕ್ಸ್ ಮತ್ತು ಡ್ರೆಸ್‌ಗೆ ಸರಿ ಹೊಂದುವಂತಹ ಮ್ಯೂಸಿಕ್‌ ಹಾಕಿಸಿ ಅವರಿಗೆ ಸಂತೋಷವನ್ನುಂಟು ಮಾಡಿ.

ವಿವಾಹ ಮಂಟಪ : ವಿವಾಹ ಮಂಟಪ ವಿಶೇಷವಾಗಿರಲಿ. ಅದಕ್ಕೆ ಪ್ಲೇರ್‌ ಲುಕ್‌ ನೀಡಬಹುದು ಅಥವಾ ಮಂಟಪದ ಕಂಬಗಳಿಗೆ ಕಪಲ್‌ನ ಫೋಟೋಗಳನ್ನು ಹಾಕಬಹುದು.

ಮೆಹಂದಿ : ಮೆಹಂದಿ ಕಾರ್ಯಕ್ರಮ ವಿಶೇಷವಾಗಿರಲಿ. ಸಾಂಪ್ರದಾಯಿಕ ಮೆಹಂದಿಯ ಜೊತೆಗೆ ಅತಿಥಿಗಳಿಗೆ ನೇಲ್‌ ಆರ್ಟ್‌, ಹ್ಯಾಂಡ್‌ ಆರ್ಟ್‌ ಮತ್ತು ಮೆಹಂದಿಯ ಡಿಸೈನ್‌ ಮಾಡಿಸಿ.

ಡ್ರೆಸ್‌ : ಮದುವೆಯಲ್ಲಿ ಕಾಂಜೀವರಂ ಸೀರೆ ಸಾಮಾನ್ಯ. ಅದನ್ನು ನೀವು ಸ್ವಲ್ಪ ವಿನೂತನಗೊಳಿಸಿ. ಅದಕ್ಕೆ ಎಂಬ್ರಾಯಿಡರಿ ವರ್ಕ್‌ ಮಾಡಿಸಿ. ಅದರ ಜೊತೆಗೆ ವಿಶಿಷ್ಟ ಡಿಸೈನ್‌ ವರ್ಕ್‌ ಮಾಡಿಸಿದ ಬ್ಲೌಸ್‌ ಧರಿಸಿ.

ಕಲರ್‌ ಥೀಮ್ : ನಿಮ್ಮ ಮದುವೆಗೆ ಒಂದು ಥೀಮ್ ಮತ್ತು ಕಲರ್‌ ಆರಿಸಿ. ಅತಿಥಿಗಳಿಗೂ ಸಹ ಒಂದು ವಿಶೇಷವಾದ ಕಲರ್‌ ಅಥವಾ ಸ್ಟೈಲ್‌ನ ಡ್ರೆಸ್‌ ಧರಿಸಿ ಬರುವಂತೆ ಸೂಚಿಸಬಹುದು.

ಅಲಂಕಾರ : ವಿಶೇಷವಾದ ಅಲಂಕಾರದ ಏರ್ಪಾಟು ಮಾಡಿಸಿ. ಕಂದೀಲಿನಂತೆ ತೂಗಾಡುವ ಹೂಗುಚ್ಛದಲ್ಲಿ ಒಳಗೆ ಮಿನುಗುವ ಬಲ್ಬುಗಳು ವಿವಾಹ ಸ್ಥಳಕ್ಕೆ ವಿಶಿಷ್ಟ ಶೋಭೆ ನೀಡುತ್ತವೆ.

– ಗಿರಿಜಾ ಶಂಕರ್‌

ಸಮ್ಮರ್‌ ವೆಡಿಂಗ್‌ ಟಿಪ್ಸ್

ವಿವಾಹ ಕಾರ್ಯಕ್ಕೆ ಬೇಸಿಗೆ ಕಾಲ ಸೂಕ್ತವಾಗಿರುತ್ತದೆ. ಜನರು ಈ ಕಾಲದಲ್ಲಿ ಸಮಾರಂಭವನ್ನು ಎಂಜಾಯ್‌ ಮಾಡುತ್ತಾರೆ. ಆದರೆ ಬೇಸಿಗೆಯಲ್ಲಿ ವಿವಾಹ ಕಾರ್ಯ ನಡೆಸಲು ಕೆಲವು ಸಮಸ್ಯೆಗಳು ಎದುರಾಗುತ್ತವೆ. ಈ ಸಮಯದಲ್ಲಿ ವಿವಾಹವನ್ನು ಪ್ಲಾನ್‌ ಮಾಡುವ ಮೊದಲು ಈ ಕೆಲವು ವಿಷಯಗಳ ಬಗ್ಗೆ ಗಮನಹರಿಸಿ.

– ವೆಡಿಂಗ್‌ಗೆ ಇನ್‌ಡೋರ್‌ ಮತ್ತು ಔಟ್‌ಡೋರ್‌ ಎರಡೂ ಸ್ಥಳಗಳಲ್ಲಿ ಅರೇಂಜ್‌ಮೆಂಟ್ಸ್ ಮಾಡಿಸಬಹುದು. ಉದಾಹರಣೆಗೆ ಅರಿಶಿನ, ಎಣ್ಣೆ ಶಾಸ್ತ್ರದಂತಹ ಸಾಂಪ್ರದಾಯಿಕ ವಿಧಿಗಳಿಗೆ ಇನ್‌ಡೋರ್‌ ಅರೇಂಜ್‌ಮೆಂಟ್‌ ಆಗಬೇಕು. ಆದರೆ ಮೆಹಂದಿಯಂತಹ ಕಾರ್ಯಕ್ರಮಗಳಿಗೆ ಔಟ್‌ಡೋರ್‌ ಚೆನ್ನಾಗಿರುತ್ತದೆ. ಪೂಲ್ ಸೈಡ್‌ ಅಥವಾ ಲಾನ್‌ನ ಮುಕ್ತ ವಾತಾವರಣದಲ್ಲಿ ಮೆಹಂದಿ, ಸಂಗೀತ್‌ ಕಾರ್ಯಕ್ರಮಗಳು ವಿಶೇಷ ಆನಂದವನ್ನು ನೀಡಬಲ್ಲವು.

– ಬೇಸಿಗೆಯಲ್ಲೂ ಒಮ್ಮೊಮ್ಮೆ ಮಳೆ ಬೀಳುವ ಸಂಭವವಿರುವುದರಿಂದ ಬ್ಯಾಕ್‌ ಅಪ್‌ ಪ್ಲಾನ್‌ ಇರಬೇಕು.

– ಬೇಸಿಗೆಯಲ್ಲಿ ಗಾಢ ಬಣ್ಣಗಳ ಬಳಕೆ ಬೇಡ. ಪೇಸ್ಟಲ್, ಯೆಲ್ಲೋ, ಕೋರಲ್‌ನಂತಹ  ಕಲರ್ಸನ್ನು ಹೆಚ್ಚು ಬಳಸಿ.

– ಫ್ಲವರ್‌ ಅರೇಂಜ್‌ಮೆಂಟ್‌ಗೆ ಬೇಗನೆ ಬಾಡದಿರುವಂತಹ ಆರ್ಕಿಡ್‌, ಲಿಲೀ, ಮೊದಲಾದ ಹೂಗಳನ್ನು ಆರಿಸಿ.

– ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನ ತಾಪ ಬಲು ಹೆಚ್ಚು. ಆದ್ದರಿಂದ ಕಾರ್ಯಕ್ರಮಕ್ಕೆ ಈ ವೇಳೆಯನ್ನು ಆರಿಸಬೇಡಿ. ಲೇಟ್‌ ಈವ್ನಿಂಗ್‌ನ ಸಮಯ ಸೂಕ್ತವಾಗಿದ್ದು, ಕಾರ್ಯಕ್ರಮವನ್ನು ಚೆನ್ನಾಗಿ ಎಂಜಾಯ್‌ ಮಾಡಲು ಸಾಧ್ಯವಾಗುತ್ತದೆ.

– ಅಂಬ್ರೆಲಾ ಕವರ್‌ ಸಿಟ್ಟಿಂಗ್‌, ಟೆಂಟ್‌ ಇತ್ಯಾದಿ ಅರೇಂಜ್‌ಮೆಂಟ್ಸ್ ಇರಲಿ.

– ಅತಿಥಿಗಳಿಗೆ ನೀವು ಕೊಡುವ ಗಿಫ್ಟ್ ಗಳು ಉಪಯುಕ್ತವಾದವುಗಳಾಗಿರಲಿ. ಸನ್‌ಗ್ಲಾಸೆಸ್‌, ಸ್ಟೈಲಿಶ್‌ ಫ್ಯಾನ್‌, ಮಕ್ಕಳಿಗೆ ಕಲರ್‌ ಫುಲ್ ಕ್ಯಾಪ್‌ ಮುಂತಾದವು ಪ್ರಯೋಜನಕ್ಕೆ ಬರುತ್ತವೆ.

– ಸಮಾರಂಭಕ್ಕೆ ಚಾಕಚಕ್ಯತೆಯ ಪ್ಲಾನಿಂಗ್‌ ಮಾಡಿ. ಪ್ಲೇ ಆಫ್‌ ಈವೆಂಟ್ಸ್ ಮತ್ತು ರಿಫ್ರೆಶ್‌ಮೆಂಟ್‌ ಟೈಮ್ ಬಗ್ಗೆ ವಿಶೇಷ ಗಮನ ನೀಡಿ. ಇಡೀ ದಿನದ ಎಡೆಬಿಡದ ಕಾರ್ಯಕ್ರಮಗಳಿದ್ದರೆ ಅತಿಥಿಗಳು ಬಳಲುತ್ತಾರೆ.

– ಅತಿಯಾದ ಲ್ಯಾವಿಶ್‌ ಫುಡ್‌ ಬದಲು ಲೈಟ್‌ ಅಂಡ್‌ ರಿಫ್ರೆಶಿಂಗ್‌ ಆಗಿರುವಂತಹ ಸ್ನ್ಯಾಕ್ಸ್ ಏರ್ಪಡಿಸಿ. ಫ್ರೂಟ್‌ ಚಾಟ್‌, ಐಸ್‌ಕ್ರೀಮ್, ರಿಫ್ರೆಶಿಂಗ್‌ ಕಾಕ್‌ಟೇಲ್ ಇತ್ಯಾದಿ ತಿನಿಸುಗಳು ಒಳ್ಳೆಯ ಆಯ್ಕೆಯಾಗುತ್ತವೆ.

Tags:
COMMENT