ಏಳುವಾಗಲೇ ಕೊಂಚ ತಡವಾಗಿತ್ತು. ಅದೇ ಆತಂಕದಲ್ಲಿದ್ದಾಗ ಕರೆಂಟ್‌ ಸಹ ಕೈ ಕೊಟ್ಟ ಕಾರಣ ನೀರೂ ಕಾದಿರಲಿಲ್ಲ. ಇನ್ನು ಮಗುವನ್ನೆಬ್ಬಿಸಿ ಶಾಲೆಗೆ ರೆಡಿ ಮಾಡಿಸಬೇಕು. ಪತಿಗೆ ಮಧ್ಯಾಹ್ನ ಊಟಕ್ಕೆ ಡಬ್ಬಿ, ಬೆಳಗಿನ ತಿಂಡಿ ಎಲ್ಲದರ ನಡುವೆ ತಾನೂ ಆಫೀಸಿಗೆ ತಯಾರಾಗಬೇಕು. ಅವಳಲ್ಲಿ ಕ್ಷಣಕ್ಷಣಕ್ಕೂ ಒತ್ತಡ ಹೆಚ್ಚುತ್ತಿತ್ತು. ಅದೇ ಒತ್ತಡದಿಂದಿದ್ದಾಗಲೇ ಮಗುವನ್ನು ಎಬ್ಬಿಸಿ ತಿಂಡಿ ತಯಾರಿಸಿ ಡಬ್ಬಿಗೆ ತುಂಬಿದ್ದಳು. ಅಷ್ಟರಲ್ಲಿ ಮಗು ಅದೇನೋ ನೆಪದಲ್ಲಿ ವರಾತ ತೆಗೆಯಿತು. ಕಛೇರಿಗೆ ತಡವಾಗುತ್ತಿದೆ ಎಂಬ ಆತಂಕ. ಕೆಲಸದ ಒತ್ತಡದಿಂದ ಇದ್ದವಳಿಗೆ ಅಷ್ಟೇ ಸಾಕಾಯಿತು. ಕೈಯಲ್ಲಿದ್ದ ಡಬ್ಬಿಯನ್ನು ರೊಯ್ಯನೆ ಎಸೆದಳು. ಅದರಲ್ಲಿದ್ದ ತಿಂಡಿ ನೆಲದ ಮೇಲೆ ಚೆಲ್ಲಿತು. ಮನೆ ಗಲೀಜಾಯಿತು. ಇನ್ನು ಅದನ್ನು ಸ್ವಚ್ಛ ಮಾಡುತ್ತಾ ಕೂರಲು ಸಮಯವಿಲ್ಲ. ಹಾಗೇ ಗಲೀಜಾಗಿ ಬಿಟ್ಟು ಹೋಗಲೂ ಸಾಧ್ಯವಿಲ್ಲ ಎನ್ನುವಂತಾಗಿ ಅವಳು ಇನ್ನಷ್ಟು ಒತ್ತಡಕ್ಕೆ ಸಿಲುಕಿದಳು. ಇಷ್ಟರ ಮಧ್ಯೆ ಅಮ್ಮನ ಕೋಪವನ್ನು ಕಂಡ ಮಗು ತನ್ನ ಹಠವನ್ನು ನಿಲ್ಲಿಸಿ ಮೌನವಾಗಿತ್ತು.

ಇದು ಒಂದು ಉದಾಹರಣೆ ಮಾತ್ರ. ಸಾಮಾನ್ಯವಾಗಿ ಉದ್ಯೋಗಕ್ಕಾಗಿ ತೆರಳುವ ಪ್ರತಿ ಮಹಿಳೆಯೂ ಎದುರಿಸುವ ಪರಿಸ್ಥಿತಿ ಇದಾಗಿರುತ್ತದೆ.

ಉದ್ಯೋಗಸ್ಥ ಮಹಿಳೆ ತಾನು ಮನೆಯಲ್ಲಿ ಗೃಹಿಣಿಯಾಗಿ, ತಾಯಿಯಾಗಿ ಕಛೇರಿಯಲ್ಲಿ ಉದ್ಯೋಗಿಯಾಗಿ ನಾನಾ ವಿಧದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇಂತಹ ವೈವಿಧ್ಯಮಯ ಸನ್ನಿವೇಶಗಳಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಆಕೆ ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಿಂದ ಮಹಿಳೆಗೆ ಬಿಡುಗಡೆ ಇದೆಯಾ? ಅವಳು ಇದನ್ನು ಎದುರಿಸಿಯೂ  ನಾನಾ ಕ್ಷೇತ್ರಗಳಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದಾಳೆ ಎನ್ನುವುದು ಮಹತ್ವದ ಸಂಗತಿ.

ಸ್ವಲ್ಪ ವಿರಾಗಿ ನೋಡೋಣ. ಮೊದಲನೆಯದಾಗಿ, ಮಹಿಳೆಯೊಬ್ಬಳು ಉದ್ಯೋಗಕ್ಕೆ ಸೇರಲು ನಾನಾ ಕಾರಣಗಳಿರುತ್ತವೆ. ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿದ್ದಲ್ಲಿ, ಕಾರಣಾಂತರಗಳಿಂದ ಪತಿಯಿಂದ ದೂರ ಉಳಿದು ಸ್ವಾವಲಂಬಿಯಾಗಿ ಬದುಕಬೇಕಾದಲ್ಲಿ ಮಹಿಳೆ ಉದ್ಯೋಗಕ್ಕೆ ಸೇರಿಕೊಳ್ಳುತ್ತಾಳೆ. ಹೀಗೆ ಉದ್ಯೋಗಕ್ಕೆ ಸೇರಿದ ಮಹಿಳೆ ನಾನಾ ವಿಧವಾದ ಕಷ್ಟಗಳನ್ನು ಸಹಿಸಬೇಕಾಗುತ್ತದೆ. ಅದು ಪತಿ ಅಥವಾ ಮನೆಮಂದಿಯ ಅನುಮಾನ ಪೂರಿತ ದೃಷ್ಟಿಯಿಂದ ಹಿಡಿದು ಕಛೇರಿ ಮೇಲಧಿಕಾರಿಗಳ ಕಿರುಕುಳದವರೆಗೂ ಇರಬಹುದು. ಇನ್ನು ಕಾಲ್ ಸೆಂಟರ್‌/ ಬಿಪಿಓಗಳಲ್ಲಿ ರಾತ್ರಿ ಪಾಳಿಗಳಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಷ್ಟಗಳು ಎದುರಾಗುತ್ತವೆ.

ಕಾಲ್ ‌ಸೆಂಟರ್‌ಗಳು ವರ್ಷದ ಎಲ್ಲಾ ದಿನಗಳಲ್ಲೂ ಕೆಲಸ ನಿರ್ವಹಿಸುತ್ತವೆ. ಇಂತಹ ಸ್ಥಳಗಳಲ್ಲಿ ಹಲವು ಪಾಳಿಗಳಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಂಡು ಕೆಲಸ ಮಾಡುತ್ತವೆ. ಇವರಲ್ಲಿ ಮಹಿಳೆಯರೂ ರಾತ್ರಿ ಪಾಳಿಯಲ್ಲಿ ದುಡಿಯಬೇಕಾಗುತ್ತದೆ.

ರಾತ್ರಿ ಪಾಳಿ ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ಸಹೋದ್ಯೋಗಿಗಳಿಂದ, ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗಬಹುದು. ಇಂತಹ ಸಮಯದಲ್ಲಿ ಆಕೆ ಪ್ರತಿಭಟಿಸಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಹಾಗೇ ಸುಮ್ಮನಿದ್ದರೆ ತನ್ನ ಜೀವನವೇ ದುರಂತವಾಗುತ್ತದೆ ಎಂಬ ಸಂದಿಗ್ಧ ಸ್ಥಿತಿಯನ್ನು ತಲುಪಬೇಕಾಗುತ್ತದೆ. ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಹೆಚ್ಚಿನ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗಾಗಿ ಖಾಸಗಿ ಸಂಸ್ಥೆಯ ಕ್ಯಾಬ್‌ಗಳ ವ್ಯವಸ್ಥೆ ಮಾಡಿರುತ್ತವೆ. ಬಹುತೇಕವಾಗಿ ಮಹಿಳೆಯರಿಗೆ ಪ್ರತ್ಯೇಕ ಕ್ಯಾಬ್‌ ವ್ಯವಸ್ಥೆ ಇರುವುದಿಲ್ಲ. ಹೀಗಾದಲ್ಲಿ ಎಂದಾದರೊಮ್ಮೆ ಒಂಟಿ ಮಹಿಳೆ ಕ್ಯಾಬ್‌ನಲ್ಲಿ ಸಿಕ್ಕಾಗ ಅವಳ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ