ಒಟ್ಟು ಕುಟುಂಬದಲ್ಲಿ ಇರುವುದರಿಂದ ಲಾಭಗಳೇ ಹೆಚ್ಚು. ತಾಯಿ ತಂದೆಯಾದವರು ಮಗ ಸೊಸೆಯ ಒತ್ತಡಭರಿತ ಜೀವನದಲ್ಲಿ ಬಹಳಷ್ಟು ಸಮನ್ವಯತೆ ಸಾಧಿಸಿ ಮುನ್ನಡೆಯಬೇಕು.

ತನುಜಾಳ ಮದುವೆ ಅವಿಭಕ್ತ ಕುಟುಂಬದ ವರನ ಜೊತೆಗೆ ಆಗಿತ್ತು. ಆರಂಭದಲ್ಲಿ ಎಲ್ಲ ಸರಿಯಾಗಿಯೇ ಇತ್ತು. ಆದರೆ ಕೆಲವು ತಿಂಗಳುಗಳ ಬಳಿಕ ತನುಜಾಳಿಗೆ ಅಲ್ಲಿ ಉಸಿರುಗಟ್ಟಿದಂತೆ ಅನಿಸತೊಡಗಿತು. ಎಲ್ಲಿಗಾದರೂ ಹೋಗುವುದಿದ್ದರೆ ಅತ್ತೆ ಮಾವನ ಅನುಮತಿ ಪಡೆಯಬೇಕಿತ್ತು. ಯಾವುದೇ ಕೆಲಸ ಮಾಡುವ ಮೊದಲು ಅವರನ್ನು ಕೇಳದೇ ಮಾಡಬಾರದು, ಈ ಎಲ್ಲ ಸಂಗತಿಗಳಿಂದ ತನುಜಾಳ ಮನಸ್ಸಿನಲ್ಲಿ ಒಂದು ರೀತಿಯ ಸಾತ್ವಿಕ ಕ್ರೋಧ ಬರುತ್ತಿತ್ತು. ಗಂಡ ಪುನೀತ್‌ ಗೆ ಈ ಬಗ್ಗೆ ತಿಳಿಸಿದಾಗ ಆತ ನಾವು ಇದೆಲ್ಲವನ್ನೂ ಅಮ್ಮ ಅಪ್ಪನ ಗೌರವಕ್ಕಾಗಿ ಪಾಲಿಸುತ್ತಿದ್ದೇವೆ ಎಂದು ಹೇಳುತ್ತಿದ್ದ. ಅದು ತನುಜಾಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.

ತನುಜಾ ಎಂ.ಎನ್‌.ಸಿಯಲ್ಲಿ ಮ್ಯಾನೇಜರ್‌ ಹುದ್ದೆಯಲ್ಲಿದ್ದಳು. ತನ್ನ ಅತ್ತೆ ಮಾವನ ಕಾರಣದಿಂದ ಲೇಟ್‌ ನೈಟ್‌ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ.

ಬಟ್ಟೆಗಳಲ್ಲಿ ಹೆಚ್ಚಾಗಿ ಸೂಟ್‌ ಅಥವಾ ಅದಕ್ಕೂ ಮಿಗಿಲೆಂದರೆ ಜೀನ್ಸ್ ಕುರ್ತಾ ಧರಿಸುತ್ತಿದ್ದಳು. ತನ್ನ ಸಹೋದ್ಯೋಗಿಗಳು ಪ್ರತಿಯೊಂದು ಬಗೆಯ ಡ್ರೆಸ್‌ ಧರಿಸುವುದು ಹಾಗೂ ಲೇಟ್‌ ನೈಟ್‌ ಪಾರ್ಟಿಗಳಲ್ಲಿ ಎಂಜಾಯ್‌ ಮಾಡುತ್ತಿದ್ದುದನ್ನು ಅವಳಿಗೆ ತನ್ನ ಸ್ಥಿತಿಯ ಬಗ್ಗೆ ಬಹಳ ಕೋಪ ಬರುತ್ತಿತ್ತು. ತನುಜಾ ಪುನೀತ್‌ ನಿಂದ ಮೊದಲನೇ ವರ್ಷದ ವಿವಾಹದ ಉಡುಗೊರೆಯ ರೂಪದಲ್ಲಿ ತನಗಾಗಿ ಒಂದು ಹೊಸ ಮನೆಯ ಬೇಡಿಕೆಯಿಟ್ಟಳು.

ಅತ್ತ ತನುಜಾಳ ಗಂಡ ಹಾಗೂ ಅತ್ತೆ ಮಾವನಿಗೆ ತನುಜಾ ಹೀಗೇಕೆ ಇಚ್ಛಿಸುತ್ತಿದ್ದಾಳೆ ಎಂದು ತಿಳಿಯದಾಗಿತ್ತು. ಅವಳಿಗೆ ಸಾಕಷ್ಟು ತಿಳಿವಳಿಕೆ ಹೇಳಿದ ಬಳಿಕ ಅವಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕದೇ ಇದ್ದಾಗ, ಪುನೀತ್‌ ಹೊಸದೊಂದು ಫ್ಲ್ಯಾಟ್ ಖರೀದಿಸಿದ.

ತನುಜಾ ಕೆಲವು ದಿನಗಳವರೆಗೆ ಬಹಳ ಖುಷಿಯಿಂದಿದ್ದಳು. ಅವಳು ತನ್ನ ಫ್ಲ್ಯಾಟ್‌ ನ್ನು ತನ್ನದೇ ಆದ ರೀತಿಯಲ್ಲಿ ಅಲಂಕರಿಸಿದಳು. ತನಗಿಷ್ಟವಾದ ಅದೆಷ್ಟೋ ಬಟ್ಟೆಗಳನ್ನು ಶಾಪಿಂಗ್‌ ಮಾಡಿದಳು. ಆದರೆ ಒಂದು ತಿಂಗಳು ಕಳೆಯುವಷ್ಟರಲ್ಲಿ ಆಫೀಸ್‌ ಹಾಗೂ ಮನೆ ಎರಡನ್ನೂ ಸಂಭಾಳಿಸುತ್ತಾ ಸುಸ್ತಾಗಿ ಹೋದಳು. ಅತ್ತೆ ಮಾವನ ಮನೆಯಲ್ಲಿದ್ದಾಗ ಎಲ್ಲ ಕೆಲಸಗಳು ಸಕಾಲಕ್ಕೆ ಹಾಗೂ ಸಮರ್ಪಕವಾಗಿ ಆಗುತ್ತಿದ್ದವು. ಈಗ ಮನೆ ಸದಾ ಅಸ್ತವ್ಯಸ್ತವಾಗಿರುತ್ತಿತ್ತು.

ತನುಜಾ ಗಾಢವಾಗಿ ಯೋಚಿಸಿದಳು. ಲೇಟ್‌ ನೈಟ್‌ ಪಾರ್ಟಿಗೆ ಹೋಗಲು ಅಥವಾ ಸಹೋದ್ಯೋಗಿಗಳನ್ನು, ಸ್ನೇಹಿತೆಯರನ್ನು ಮನೆಗೆ ಆಹ್ವಾನಿಸುವ ಬಗ್ಗೆ, ಬಟ್ಟೆಗಳನ್ನು ಧರಿಸುವ ಬಗ್ಗೆ ಅತ್ತೆ ಬಳಿ ಕೇಳಿರಲೇ ಇಲ್ಲ. ಆಕೆಯ ಮನಸ್ಸಿನಲ್ಲಿ ಅತ್ತೆ ಮಾವನ ಬಗ್ಗೆ ಅದೊಂದು ರೀತಿಯ ಭಾವನೆ ಮನೆ ಮಾಡಿಬಿಟ್ಟಿತ್ತು. ಆ ಕಾರಣದಿಂದ ಆಕೆ ಎಂದೂ ಅವರ ಹತ್ತಿರ ಸಹ ಸುಳಿದಿರಲಿಲ್ಲ. ಈಗ ಯಾವ ಮುಖ ಹೊತ್ತು ಅವರ ಬಳಿ ಹೋಗುತ್ತಾಳೆ?

ಈ ಒಂದು ಉದಾಹರಣೆಯನ್ನು ಗಮನಿಸಿದರೆ, ನಿಮಗೊಂದು ಸಂಗತಿ ಗಮನಕ್ಕೆ ಬರುತ್ತದೆ. ಅವಳು ಮನಸ್ಸಿನಲ್ಲಿಯೇ ಒಂದು ನಿರ್ಧಾರ ಮಾಡಿಬಿಟ್ಟಿದ್ದಳು. ತಾನು ಅತ್ತೆ ಮಾವ ಹೇಗೆ ಬಯಸುತ್ತಾರೋ ಹಾಗೆಯೇ ಇರಬೇಕೆಂದು. ಆದರೆ ಅವಳೆಂದೂ ತನ್ನ ಅತ್ತೆ ಮಾವನ ಮುಂದೆ ಈ ವಿಷಯದ ಬಗ್ಗೆ ಮಾತನಾಡಿರಲೇ ಇಲ್ಲ. ಇನ್ನೊಂದೆಡೆ ಪುನೀತ್‌ ಕೂಡಾ ತನುಜಾಳ ಅಂತರ್ಮನದಲ್ಲಿದ್ದ ಆ ಭಯವನ್ನು ಅರಿತುಕೊಳ್ಳಲು ಪ್ರಯತ್ನ ಮಾಡಲಿಲ್ಲ. ಇಂದಿನ ಹೆಂಡತಿಯರೇ ಹಾಗೆ ಎಂದು ಅಂದುಕೊಳ್ಳುತ್ತಾ ತನ್ನ ಅಮ್ಮ ಅಪ್ಪನ ಮನೆ ಬಿಟ್ಟು ಹೊಸ ಫ್ಲ್ಯಾಟ್‌ ಗೆ ಶಿಫ್ಟ್ ಆಗಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ