ಇಂಚಿಯೋನ್‌ ಏಷ್ಯಾ ಕ್ರೀಡಾಕೂಟದಲ್ಲಿ ಸೀಮಾ ಪೂನಿಯಾ ಡಿಸ್ಕಸ್‌ ಎಸೆತದಲ್ಲಿ ಚಿನ್ನದ ಪದಕ ಪಡೆದ ಬಳಿಕ ಒಂದು ಮಾತು ಎಲ್ಲೆಡೆ ಕೇಳಿಬಂತು. ಅದೇನೆಂದರೆ,  ಅಥ್ಲೆಟಿಕ್ಸ್ ನಲ್ಲಿ ಭಾರತೀಯ ಮಹಿಳೆಯರ ಯಶಸ್ಸಿನ ಹಿಂದೆ ಅವರ ಪತಿಯಂದಿರ ಸಹಕಾರ ಏನಾದರೂ ಇರಬಹುದಾ? ಅದಕ್ಕೂ ಮಹತ್ವದ ಸಂಗತಿಯೆಂದರೆ, ಭಾರತೀಯ ಮಹಿಳಾ ಕ್ರೀಡಾಪಟು ಕೋಚ್‌ ಆಗಿ ತನ್ನ ಪತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಈಗ ಹೊಸ ಸಂಗತಿಯೇನೂ ಅಲ್ಲ.

ಸೀಮಾ ಪೂನಿಯಾ ಅವರ ಯಶಸ್ಸಿನ ಹಿಂದೆ ಅವರ ಪತಿ ಅಂಕುಶ್‌ ಪೂನಿಯಾ ಅವರ ಪರಿಶ್ರಮ ಅಡಗಿದೆ. ಇದಕ್ಕೂ ಮುಂಚೆ ಕೃಷ್ಣಾ ಪೂನಿಯಾ ಹಾಗೂ ಅಂಜು ಬಾಬ್ಬಿ ಜಾರ್ಜ್‌ ಅವರು ಯಶಸ್ಸಿನ ಉತ್ತುಂಗ ತಲುಪಲು ಇಬ್ಬರಿಗೂ ಕೋಚ್‌ ಆಗಿದ್ದ ಅವರವರ ಪತಿಯಂದಿರ ಕಠಿಣ ಶ್ರಮ ಹಾಗೂ ನಿರಂತರ ಮೇಲ್ವಿಚಾರಣೆ ಕಾರಣ. ಇದಕ್ಕೂ ಮುಂಚೆ 70ರ ದಶಕದಲ್ಲಿ ಜಾಜಾ ಹಾಗೂ ನರೇಶ್‌ ಜೋಡಿ ಪ್ರಸಿದ್ಧವಾಗಿದೆ.

ಮೇರಿ ಕೋಮ್ ಅವರ ಯಶಸ್ಸಿನಲ್ಲೂ ಪತಿಯ ಅದ್ಭುತ ಸಹಕಾರ ಇತ್ತು. ಬಾಕ್ಸರ್‌ ಸರಿತಾ ಅವರ ಪತಿ ಥೋಯ್ಬಾ ಸಿಂಗ್‌ಇಂಚಿಯೋನ್‌ನಲ್ಲಿ ತಪ್ಪು ನಿರ್ಧಾರದಿಂದ ಅದೆಷ್ಟು ವ್ಯಥಿತರಾಗಿದ್ದರೆಂದರೆ, ಅಂಪೈರ್‌ಗಳಿಗೆ ಕೆಟ್ಟ ಶಬ್ದಗಳನ್ನು ಕೂಡ ಬಳಸಿಬಿಟ್ಟರು.

krishna-pooniya-1

ಈ ಎಲ್ಲ ಪತಿಯರು ತಮ್ಮ ಪತ್ನಿಯರನ್ನು ಎಷ್ಟು ಸಾಧ್ಯವೋ, ಅಷ್ಟು ಎತ್ತರಕ್ಕೆ ತಲುಪಿಸಲು ನಿರಂತರ ಪ್ರಯತ್ನಶೀಲರಾಗಿದ್ದಾರೆ. ಆದರೆ ಪತ್ನಿ 24 ಗಂಟೆ ತನ್ನ ಸೇವೆ ಮಾಡುತ್ತಿರಬೇಕೆಂದು ಅವರೆಂದೂ ಬಯಸುವುದಿಲ್ಲ. ಭಾರತೀಯ ಧ್ವಜದೊಂದಿಗೆ ತನ್ನ ಪತ್ನಿಯನ್ನು ಕಾಣಬೇಕೆಂಬುದೇ ಅವರ ಅಂತರಾಳದ ಬಯಕೆಯಾಗಿರುತ್ತದೆ. ಇದೆಷ್ಟು ರೋಮಾಂಚನ ಉಂಟು ಮಾಡುವ ವಿಷಯಲ್ಲವೇ?

ಆಶ್ಚರ್ಯದ ಸಂಗತಿಯೆಂದರೆ, ಯಾವ ಒಂದು ದೇಶದಲ್ಲಿ ಕ್ರೀಡೆಯ ಬಗ್ಗೆ ನಕಾರಾತ್ಮಕ ಧೋರಣೆ ಇರುತ್ತದೋ, ಅಂತಹ ಕಡೆ ಇಂತಹ ಅದ್ಭುತ ಸಾಮರ್ಥ್ಯದ ಪ್ರತಿಭೆಗಳು ಹೊರಹೊಮ್ಮುತ್ತವೆ. ಮನೆಯಿಂದ ಹಿಡಿದು ಸ್ಕೂಲಿನ ತನಕ ಎಲ್ಲೆಲ್ಲೂ ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಕ್ರೀಡಾಂಗಣಗಳ ಬಗೆಗಿನ ಮೋಹ ಕಡಿಮೆಯಾಗುತ್ತಿದ್ದು, ಮಕ್ಕಳಿಗೆ ಗಾಡಿ, ಮೊಬೈಲ್‌‌‌ಗಳ ವ್ಯಾಮೋಹ ಹೆಚ್ಚುತ್ತಿದೆ. ಅಂತಹ ಸ್ಥಿತಿಯಲ್ಲೂ ಕೆಲವು ಕ್ರೀಡಾ ಪ್ರತಿಭೆಗಳು ಹೊರಹೊಮ್ಮುತ್ತಾರೆಂದರೆ, ಇದಕ್ಕೆ ಕ್ರೀಡಾಪಟು ಹಾಗೂ ಕುಟುಂಬದವರ ಕ್ರೀಡಾ ಪ್ರೀತಿ ಕಾರಣ ಎನ್ನಬಹುದು.

ಯಶಸ್ಸಿನ ಪಾಲುದಾರರು

ಇತ್ತೀಚೆಗೆ `ಮೇರಿ ಕೋಮ್' ಎಂಬ ಸಿನಿಮಾ ಬಂದಿತ್ತು. ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್ ಅವರ ಜೀವನ ಚರಿತ್ರೆಯನ್ನಾಧರಿಸಿ ಈ ಚಲನಚಿತ್ರ ತೆಗೆಯಲಾಗಿತ್ತು. ನಿಜಕ್ಕೂ ದಂಪತಿಗಳಿಗೆ ಅದೊಂದು ಪ್ರೇರಣಾದಾಯಕ ಚಲನಚಿತ್ರ.

ಒಂದು ವಾಸ್ತವ ಸಂಗತಿಯಂದರೆ ಮೇರಿ ಕೋಮ್ ಅವರಿಗೆ ಬಾಕ್ಸಿಂಗ್‌ ರಿಂಗ್‌ನ ಒಳಗಿನಂತೆ ಹೊರಗಿನ ಜಗತ್ತೇ ಹೆಚ್ಚು ಸವಾಲಿನಿಂದ ಕೂಡಿತ್ತು. ಕೆರಿಯರ್‌ಗಾಗಿ ತಮ್ಮವರನ್ನು ರಾಜೀ ಮಾಡಿಸುವುದು, ಮದುವೆ, ಗರ್ಭಾವಸ್ಥೆ ಮತ್ತು ತಾಯ್ತನದಂತಹ ಸಂಗತಿಗಳು ಅವರಿಗೆ ಹೆಚ್ಚು ಚಾಲೆಂಜ್‌ ಆಗಿದ್ದವು. ಸಾಮಾನ್ಯ ಜೀವನದ ಈ ಸವಾಲುಗಳು ಯಾವುದೇ ಒಬ್ಬ ಮಹಿಳೆಗೆ ತನ್ನ ಕನಸುಗಳನ್ನು ನನಸು ಮಾಡಲು ಅವಕಾಶ ಕೊಡುವುದಿಲ್ಲ. ಮೇರಿ ಕೋಮ್ ಎಲ್ಲ ಸವಾಲುಗಳನ್ನು ಲೀಲಾಜಾಲವಾಗಿ ಎದುರಿಸಿ ಅದರಲ್ಲಿ ಗೆದ್ದರು. ಈ ಎಲ್ಲ ಸಂಗತಿಗಳು ಅವರನ್ನು `ಐಕಾನ್‌' ಆಗಿ ಮಾಡಿದವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ