ಪ್ರೀತಿಯ ಅನುಭೂತಿ ಬಹಳ ಗಾಢವಾಗಿರುತ್ತದೆ. ಸರಿಯಾಗಿ ನಿಭಾಯಿಸಿದರೆ ಪರವಾಗಿಲ್ಲ. ಇಲ್ಲದಿದ್ದರೆ ಶರೀರದಲ್ಲಿ ಮುಳ್ಳುಗಳು ಚುಚ್ಚಿದಂತಾಗುತ್ತದೆ.

ಒಂದು ಕಾಲದಲ್ಲಿ ಮಹಿಳೆಯರು ಬ್ರೇಕಪ್‌ ನಂತರ ಸಂಪೂರ್ಣವಾಗಿ ಕುಸಿದು ಹೋಗುತ್ತಿದ್ದರು. ಕೆಲವರು ಸಾಯಲೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಆದರೆ ಇಂದಿನ ಮಾಡರ್ನ್‌ ವುಮನ್‌ ಬ್ರೇಕಪ್‌ ನಂತರ ಕುಸಿಯುವುದಿಲ್ಲ. ಬದಲಾಗಿ ಬದುಕಿನ ರೀತಿಯನ್ನು ತಮಗೆ ತಕ್ಕಂತೆ ಬದಲಿಸಲು ಕಲಿತಿದ್ದಾರೆ.

ಅನೇಕ ಚಿತ್ರ ನಟಿಯರ ಬ್ರೇಕಪ್‌ ಮತ್ತು ಕೆರಿಯರ್‌ ಮುಗಿದುಹೋಗುವ ಬಗ್ಗೆ ನೋಡುತ್ತಿರುತ್ತೇವೆ. ಅವರು ಸಂಪೂರ್ಣವಾಗಿ ಹತಾಶೆಗೊಳ್ಳುತ್ತಾರೆ. ಅವರ ಗೆಳತಿಯರು ಅವರಿಗೆ ಮೇಕ್‌ ಓವರ್‌ನ ಸಲಹೆ ನೀಡುತ್ತಾರೆ.  ಆಗ ಅವರು ತಮ್ಮ ಲೈಫ್‌ ಸ್ಟೈಲ್‌ನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳುತ್ತಾರೆ. ಕೆಲವು ಉದಾಹರಣೆಗಳು ಇಲ್ಲಿವೆ.

ಬಿಪಾಶಾ ಬಸು

ಹಾಟ್‌ ಬಿಪಾಶಾ ಬಸು ಮತ್ತು ಡ್ಯಾಶಿಂಗ್‌ ಜಾನ್‌ ಅಬ್ರಹಾಂ ಬ್ರೇಕಪ್‌ ಸುದ್ದಿ ಬಂದಾಗ ಯಾರಿಗೂ ನಂಬಲಾಗಿರಲಿಲ್ಲ. ಒಂದು ಮೂಲದ ಪ್ರಕಾರ, ಜಾನ್‌ ಅಬ್ರಹಾಂರ ಮನೆಯವರಿಗೆ ಬಿಪಾಶಾರ ಬೋಲ್ಡ್ ನೆಸ್‌ ಇಷ್ಟವಾಗಿರಲಿಲ್ಲ. ಹೀಗಾಗಿ ಅವರು ಬಿಪಾಶಾರನ್ನು ತಮ್ಮ ಸೊಸೆಯನ್ನಾಗಿ ಸ್ವೀಕರಿಸಲಿಲ್ಲ.

ಮನೆಯವರ ಮಾತನ್ನು ಒಪ್ಪಿ ಜಾನ್‌ ಬಿಪಾಶಾರನ್ನು ತನ್ನ ಬದುಕಿನಿಂದ ದೂರ ಮಾಡಿದರು. ಆದರೆ ಇದರಿಂದ ಬಿಪಾಶಾ ಕುಸಿಯಲಿಲ್ಲ. ಈ ದುಃಖದಿಂದ ಚೇತರಿಸಿಕೊಂಡು ಅವರು ಸಂಪೂರ್ಣವಾಗಿ ತಮ್ಮ ಕೆರಿಯರ್‌ ಹೊಳೆಯುವಂತೆ ಮಾಡುವಲ್ಲಿ ವ್ಯಸ್ತರಾದರು.

ಕತ್ರೀನಾ ಕೈಫ್

ಕ್ಯಾಟ್‌ ತನ್ನ ಕೆರಿಯರ್‌ ರೂಪಿಸಿಕೊಳ್ಳಲು ಸಲ್ಮಾನ್‌ರನ್ನು ಆಶ್ರಯಿಸಿದರು. ಈ ಜೋಡಿ ಡೇಟಿಂಗ್‌ ಸಹ ಮಾಡಿತ್ತು. ಕ್ಯಾಟ್ ಆಗೆಲ್ಲಾ ತನ್ನ ಲುಕ್ಸ್ ಬಗ್ಗೆ ವಿಶೇಷ ಗಮನ ಕೊಡುತ್ತಿರಲಿಲ್ಲ. ಆದರೆ ಸಲ್ಲೂರಿಂದ ಬ್ರೇಕಪ್‌ ಆದ ನಂತರ ಅವರು ತಮ್ಮ ಫಿಗರ್‌ ಬಗ್ಗೆ ಗಮನಕೊಟ್ಟರು. ಬಳುಕುತ್ತ, ಒಯ್ಯಾರ ಮಾಡುತ್ತಾ ಕತ್ರೀನಾ ರಣಬೀರ್‌ ಕಪೂರ್‌ರನ್ನು ತನ್ನ ಪ್ರೇಮಿಯಾಗಿಸಿಕೊಂಡರು.

ಪ್ರೀತಿ ಝಿಂಟಾ

ಡಿಂಪಲ್ ಗರ್ಲ್ ಪ್ರೀತಿ ಝಿಂಟಾ ನೆಸ್‌ವಾಡಿಯಾರಿಂದ ಬ್ರೇಕಪ್‌ ಆದನಂತರ ಬಹಳ ಕಾಲ ಬಾಲಿವುಡ್‌ನಿಂದ ಸಂಬಂಧ ಕಡಿದುಕೊಂಡಿದ್ದರು. ನಂತರ ತಮ್ಮನ್ನು ಸಂಭಾಳಿಸಿಕೊಂಡು ಟಿ.ವಿ.ಯಲ್ಲಿ ಸಕ್ರಿಯರಾದರು. ಇದರ ಮಧ್ಯೆ ಅವರು ರಿಯಾಲಿಟಿ ಶೋ ಕೂಡಾ ಮಾಡಿದರು. ಇಂದು ನೀವು ಪ್ರೀತಿಯ ಬ್ರೇಕಪ್‌ ನಂತರದ ಹೇರ್‌ ಸ್ಟೈಲ್ ಹಾಗೂ ಡ್ರೆಸಿಂಗ್‌ ಸೆನ್ಸ್ ನೋಡಿದರೆ ಆಶ್ಚರ್ಯಪಡುವಿರಿ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಮತ್ತು ರಣಬೀರ್‌ ಕಪೂರ್‌ರ ಪ್ರೀತಿಯ ಬಗ್ಗೆ ಎಲ್ಲರೂ ಚರ್ಚಿಸುತ್ತಿದ್ದರು. ಆದರೆ ಈ ಜೋಡಿಯೂ ಬ್ರೇಕಪ್ ಆದ ಸುದ್ದಿ ಬಂದಾಗ ಇಡೀ ಬಾಲಿವುಡ್‌ ಆಶ್ಚರ್ಯಗೊಂಡಿತ್ತು. ಇವರಿಬ್ಬರ ಸಂಬಂಧ ಇರುವರೆಗೆ ದೀಪಿಕಾ ಸಿಂಪಲ್ ಲುಕ್‌ ಸೀರೆ ಮತ್ತು ಉದ್ದ ಕೂದಲಿನಲ್ಲಿ ಕಂಡುಬರುತ್ತಿದ್ದರು. ಬ್ರೇಕಪ್‌ ನಂತರ ದೀಪಿಕಾ ಸೀರೆ ಧರಿಸುವುದನ್ನೇ ಮರೆತುಬಿಟ್ಟರು. ಅವರು ತಮ್ಮ ಉದ್ದ ಕೂದಲನ್ನು ಕಟ್‌ ಮಾಡಿಸಿಕೊಂಡರು. ತಮ್ಮ ಡ್ರೆಸಿಂಗ್‌ ಸೆನ್ಸ್ ಗೆ ವಿಶೇಷ ಗಮನಕೊಟ್ಟರು. ಹೀಗೆ ಮಾಡಿದ ನಂತರ ಅವರು ಹೆಚ್ಚು ಸುಂದರವಾಗಿ, ಬೋಲ್ಡ್ ಆಗಿ ಕಾಣುತ್ತಿದ್ದಾರೆ.

ವಿದ್ಯಾ ಬಾಲನ್

ಶಾಹಿದ್‌ ಕಪೂರ್‌ ಮತ್ತು ವಿದ್ಯಾ ಬಾಲನ್‌ಬಗ್ಗೆ ಬಹಳ ಚರ್ಚೆಗಳಿದ್ದವು. ಇಬ್ಬರೂ `ಕಿಸ್ಮತ್‌ ಕನೆಕ್ಷನ್‌’ ಚಿತ್ರದಿಂದ ಹತ್ತಿರವಾದರು. ವಿದ್ಯಾ ತಮ್ಮ ಬಳುಕುವ, ಒಯ್ಯಾರ ಇತ್ಯಾದಿಗಳಿಂದ ಶಾಹಿದ್‌ರನ್ನು ಸೆಳೆದರು. ಆಗ ವಿದ್ಯಾ ಶಾರ್ಟ್‌ ಡ್ರೆಸ್‌ಗಳನ್ನು ಬಿಟ್ಟು ಸೀರೆ ಉಡತೊಡಗಿದರು. ಆದರೆ ಸ್ವಲ್ಪ ಸಮಯದಲ್ಲೇ ವಿದ್ಯಾರಿಗೆ ಶಾಹಿದ್‌ ಬೇಸರವಾಯಿತು. ಶಾಹಿದ್‌ರ ದುಃಖ ಮರೆಯಲು ಅವರು `ಡರ್ಟಿ ಪಿಕ್ಚರ್‌’ನಲ್ಲಿ ಬೋಲ್ಡ್ ಲುಕ್ಸ್ ನಲ್ಲಿ ಕಾಣಿಸಿಕೊಂಡರು. ಈಗ ವಿದ್ಯಾ ಮದುವೆಯಾಗಿ ಖುಷಿಯಾಗಿದ್ದಾರೆ.

ಕರೀನಾ ಕಪೂರ್

ಕರೀನಾ ಕಪೂರ್‌ ಮತ್ತು ಶಾಹಿದ್‌ ಕಪೂರ್‌ ಲವ್ ಸ್ಟೋರಿ ಸಹ ಯಾರಿಂದಲೂ ಅಡಗಿಸಲಾಗಲಿಲ್ಲ. ಈ ಕ್ಯೂಟ್‌ ಜೋಡಿಯನ್ನು ಅವರ ಫ್ಯಾನ್ಸ್ ಕೂಡ ಇಷ್ಟಪಟ್ಟರು. ಇವರಿಬ್ಬರೂ ಪರಸ್ಪರರಿಗಾಗಿಯೇ ಹುಟ್ಟಿದಂತಿದ್ದರು. ಈ ಜೋಡಿಯ ಲವ್ ಅಫೇರ್‌ ನೋಡಿ ಬಹುಬೇಗ ಇವರು ಮದುವೆಯಾಗುತ್ತಾರೆ ಅನ್ನಿಸುತ್ತಿತ್ತು. ಆದರೆ ಹಾಗಾಗಲಿಲ್ಲ. ಇಬ್ಬರ ನಡುವೆ ಬ್ರೇಕಪ್‌ ಗೋಡೆ ಎದ್ದಿತು. ಅದುವರೆಗೆ ಕರೀನಾಗೆ ತನ್ನ ಫಿಗರ್‌ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಆದರೆ ಬ್ರೇಕಪ್‌ ಆದ ಕೂಡಲೇ ಅವರು ಝೀರೋ ಫಿಗರ್‌ನಿಂದ ಎಲ್ಲರನ್ನೂ ಆಕರ್ಷಿಸಿದರು. ಈಗ ಅವರು ಸೈಫ್‌ರನ್ನು ಮದುವೆಯಾಗಿ ಖುಷಿಯಾಗಿದ್ದಾರೆ. ಇಂತಹ ಬ್ರೇಕಪ್‌ನ ಅನೇಕ ಉದಾಹರಣೆಗಳಿವೆ. ಮಹಿಳೆಯರು ತಮ್ಮನ್ನು ಆ ಆಘಾತದಿಂದ ಪಾರು ಮಾಡಿಕೊಂಡು ಹೊಸ ಉತ್ಸಾಹದಿಂದ ಜೀವಿಸುತ್ತಿದ್ದಾರೆ ಮತ್ತು ಉನ್ನತ ಹಂತ ತಲುಪಿದ್ದಾರೆ.

ಮೂಢನಂಬಿಕೆಗಳಿಂದ ದೂರವಿರಿ

ಮದುವೆಯನ್ನು ಭಾರತೀಯ ಸಮಾಜದಲ್ಲಿ ಏಳೇಳು ಜನುಮಗಳ ಬಂಧನವೊಂದು ತಿಳಿಯಲಾಗುತ್ತದೆ. ಬ್ರೇಕಪ್‌ ಸಂದರ್ಭದಲ್ಲಿ ಹಾಗೂ ಅದರ ನಂತರ ಜನ ಅದನ್ನು ಉಳಿಸಲು ತಪ್ಪು ದಾರಿಯಲ್ಲಿ ಹೋಗುತ್ತಾರೆ. ಹಾಗೆ ಮಾಡಬಾರದು.

ಅನೇಕರು ಈ ಸಂದರ್ಭದಲ್ಲಿ ಬಾಬಾಗಳು, ಸ್ವಾಮಿಗಳ ಬಳಿ ಹೋಗುತ್ತಾರೆ. ಅವರನ್ನು ನಂಬಿ ತಮ್ಮ ಹಣ ಹಾಗೂ ಸಮಯ ಎರಡನ್ನೂ ಹಾಳುಮಾಡಿಕೊಳ್ಳುತ್ತಾರೆ.

ಸಂಬಂಧವನ್ನು ಉಳಿಸಲು ಕೆಲವರು ದೇವಸ್ಥಾನ, ದರ್ಗಾಗಳಿಗೆ ಹೋಗಿ ಪೂಜೆ ಮಾಡಿಸಲು ಸಲಹೆ ನೀಡುತ್ತಾರೆ. ಅವರು ನಿಮ್ಮ ಶುಭ ಚಿಂತಕರಾಗಿರಬಹುದು. ಆದರೆ ಅವರು ನೀಡಿದ ಸಲಹೆ ಲಾಭಕರವಾಗಿರಬೇಕೆಂದಿಲ್ಲ. ನಿಮ್ಮ ಹಾಗೂ ನಿಮ್ಮ ಪಾರ್ಟ್‌ನರ್‌ಜೊತೆಗಿನ ಸಂಬಂಧ ಕಾಪಾಡಿಕೊಳ್ಳುವುದು ಅಥವಾ ಮುರಿಯುವುದು ಪರಸ್ಪರ ತಿಳಿವಳಿಕೆ, ಸಂಬಂಧಗಳು ಮತ್ತು ಇತರ ಘಟನೆಗಳನ್ನು ಅವಲಂಬಿಸಿರುತ್ತದೆಯೇ ಹೊರತು ಯಾವುದೇ ದೇವರ ಕೃಪೆಯನ್ನಲ್ಲ.

ಅನೇಕ ಮಹಿಳೆಯರು ಮಾರುಕಟ್ಟೆಯಲ್ಲಿ ಸಿಗುವ ತಾಯಿತಗಳು, ಯಂತ್ರಗಳನ್ನು ನಂಬಿ ಅವರು ಕೇಳಿದಷ್ಟು ಹಣ ಕೊಟ್ಟು ಖರೀದಿಸುತ್ತಾರೆ. ಆದರೆ ಅವು ಮಾನವೀಯ ಸಂಬಂಧಗಳನ್ನು ಉಂಟು ಮಾಡಲು ಅಥವಾ ಹಾಳು ಮಾಡಲು ಶಕ್ತವಾಗಿಲ್ಲ.

ಅನೇಕ ಶ್ರದ್ಧಾವಂತ ಮಹಿಳೆಯರು ಈ ಸಂದರ್ಭದಲ್ಲಿ ಉಪವಾಸ ಅಥವಾ ಪ್ರಾರ್ಥನೆಗಳ ಮೂಲಕ ಸಂಬಂಧಗಳನ್ನು ಕಾಪಾಡಲು ಪ್ರಯತ್ನಿಸುತ್ತಾರೆ. ಆದರೆ ಹಾಗೆ ಉಪವಾಸವಿದ್ದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅವರ ಸಂಬಂಧಗಳ ಮೇಲಲ್ಲ.

ಬಾಬಾಗಳ ವ್ಯೂಹದಲ್ಲಿ ಸಿಲುಕಿ ಅನೇಕ ಮಹಿಳೆಯರು ದೊಡ್ಡ ಕಷ್ಟಕ್ಕೆ ಸಿಲುಕುತ್ತಾರೆ. ಮೂಢನಂಬಿಕೆಗೆ ಕುಮ್ಮಕ್ಕು ಕೊಡುವ ಈ ಜನ ಮಹಿಳೆಯರಿಂದ ಹಣ ಕೀಳುವುದಲ್ಲದೆ, ಅವರ ಲೈಂಗಿಕ ಶೋಷಣೆಯನ್ನೂ ಮಾಡುತ್ತಾರೆ. ಇಂಥವರ ಬಗ್ಗೆ ಜಾಗರೂಕರಾಗಿರಿ.

ಇಂದು ಮಹಿಳೆಯರಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದು ಮತ್ತು ಪುರುಷರಿಗಿಂತ ಕೀಳೆಂದು ತಿಳಿಯದಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ತಮ್ಮ ಬ್ರೇಕಪ್‌ ಸಂದರ್ಭದಲ್ಲಿ ಯಾವ ಧಾರ್ಮಿಕ ಸಂಸ್ಥೆಗಳು ಹಾಗೂ ಜನರಿಂದ ಸಲಹೆ ಪಡೆಯುತ್ತಾರೋ, ಅಲ್ಲಿ ಪುರುಷರ ಅಧಿಪತ್ಯವೇ ಇರುತ್ತದೆ. ಅವು ನಿಮ್ಮ ಪತಿಯ ಬಗ್ಗೆ ಭಕ್ತಿ ಹೊಂದಿರಬೇಕೆಂದು ಕಲಿಸುತ್ತದಲ್ಲವೇ, ಆತ್ಮಗೌರವದಿಂದ ಬೇರೆಯಾಗುವ ಸಾಹಸದ ಬಗ್ಗೆ ಕಲಿಸುವುದಿಲ್ಲ. ಒಂದುವೇಳೆ ಹಾಳಾಗುತ್ತಿರುವ ಸಂಬಂಧವನ್ನು ನೀವು ಈ ವಿಧಾನಗಳಿಂದ ರಕ್ಷಿಸಲು ಪ್ರಯತ್ನಿಸಿದರೆ ನಿಮ್ಮ ಸಂಗಾತಿ ನಿಮ್ಮನ್ನು ಮಾನಸಿಕವಾಗಿ ಇನ್ನಷ್ಟು ಹಿಂಸಿಸುತ್ತಾರೆ. ಇದು ನಿಮ್ಮ ಭವಿಷ್ಯದ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಹೀಗಾಗಿ ಇವನ್ನು ಹಾಗೂ ನಿಮ್ಮನ್ನು ಗುರುತಿಸುವ ಅಗತ್ಯವಿದೆ.

–  ಪಿ. ಗೀತಾ

ವೈದ್ಯರ ಸಲಹೆ

ರಿಲೇಶನ್‌ಶಿಪ್‌ನಲ್ಲಿ ಲಾಸ್ಟ್ ಎಕ್ಸ್ ಪೀರಿಯನ್ಸ್ ಒಂದು ನ್ಯಾಚುರಲ್ ಫೀಲಿಂಗ್‌ ಆಗಿದ್ದು ಯಾರಿಗೆ ಬೇಕಾದರೂ ಆಗಬಹುದು. ಇದರಿಂದ ಪಾರಾಗಲು ನಿಮ್ಮ ಜೀವನವನ್ನು ಈ ವಿಷಯಗಳಿಂದ ಪ್ರಭಾವಿತಗೊಳಿಸಬೇಡಿ. ನಿಮ್ಮಿಂದಾಗಿ ಏನಾದರೂ ಆಯಿತೆಂದು ಯೋಚಿಸುವುದು ತಪ್ಪು. ಯಾವುದೇ ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಉದಾಹರಣೆಗೆ ನೀವು ಓದಲು ಅಥವಾ ಆಫೀಸಿಗೆ ಹೋದರೆ ನಿಮ್ಮ ಓದು ಅಥವಾ ಕೆಲಸಕ್ಕೆ ಈ ವಿಷಯಗಳಿಂದ ಪ್ರಭಾವ ಉಂಟಾಗದಂತೆ ನೋಡಿಕೊಳ್ಳಿ. ಮಾತುಕಥೆ ನಿಲ್ಲಿಸಬೇಡಿ. ಮೊದಲಿನಂತೆಯೇ ವ್ಯವಹರಿಸಿ. ಅಗತ್ಯ ಬಿದ್ದರೆ ಮನೋವೈದ್ಯರ ಬಳಿ ಸಲಹೆ ಪಡೆಯಿರಿ. ಹೀಗೆ ಮಾಡಿದರೆ ನೀವು ಅದರಿಂದ ಪಾರಾಗಬಹುದು.

ಡಾ. ಸಮೀರ್

ಸಂಬಂಧಗಳನ್ನು ಉಳಿಸಿಕೊಳ್ಳಿ

ಕಷ್ಟದ ಪರಿಸ್ಥಿತಿಯಲ್ಲಿ ಸಾಗುತ್ತಿರುವ ಮಹಿಳೆಯರು ಡಿಪ್ರೆಶನ್‌ಗೆ ಗುರಿಯಾಗುತ್ತಾರೆ. ಅಂತಹ ಸಮಯದಲ್ಲಿ ಅವರು ಮಾಡರ್ನ್ ವುಮನ್‌ರಂತೆ ಯಾವಾಗಲೂ ಸ್ಟ್ರಾಂಗ್‌ ಆಗಿರಬೇಕು.

ಡಾ. ಶಿಲ್ಪಾ

Tags:
COMMENT