ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ಉಷಾ ಮದುವೆಯ ಬಳಿಕ ಒತ್ತಡಕ್ಕೆ ಸಿಲುಕಿದಳು. ಇದಕ್ಕೆ ಮುಖ್ಯ ಕಾರಣ ಆಕೆಯ ಗಂಡನ ಮನೆಯಲ್ಲಿ ಬೆಂಡೆಕಾಯಿ ಪಲ್ಯ ಮಾಡಲಾಗುತಿತ್ತು. ಆಕೆಗೆ ಅದು ಎಳ್ಳಷ್ಟೂ ಇಷ್ಟವಿರಲಿಲ್ಲ. ಎರಡನೇ ಸಮಸ್ಯೆಯೆಂದರೆ, ಆಕೆ ಮೊದಲು ತನ್ನ ಮನೆಯಲ್ಲಿ ಹಸುವಿನ ಹಾಲು ಉಪಯೋಗಿಸುತ್ತಿದ್ದಳು. ಗಂಡನ ಮನೆಯಲ್ಲಿ ಎಮ್ಮೆ ಹಾಲು ಉಪಯೋಗಿಸುತ್ತಿದ್ದರು.

ಈ ವಿಷಯ ಎಷ್ಟು ವಿಕೋಪಕ್ಕೆ ಹೋಯಿತೆಂದರೆ, ಆಕೆ ತನ್ನ ಗಂಡನಿಗೆ ವಿಚ್ಛೇದನ ಕೊಡುವಷ್ಟರ ಮಟ್ಟಿಗೆ ವಿಚಾರ ಮಾಡುತ್ತಿದ್ದಳು. ಈ ಎಲ್ಲ ಕಾರಣಗಳಿಂದ ಆಕೆಗೆ ನಿದ್ರೆಯೇ ಬರುತ್ತಿರಲಿಲ್ಲ. ಸದಾ ಗಾಬರಿಯಲ್ಲಿಯೇ ಇರುತ್ತಿದ್ದಳು. ಇದರಿಂದಾಗಿ ಆಕೆಗೆ ಕೆಲಸದಲ್ಲಿ ಗಮನವೇ ಇರುತ್ತಿರಲಿಲ್ಲ. ಇಂತಹ ಅನೇಕ ಸಮಸ್ಯೆಗಳು ಬರತೊಡಗಿದಾಗ ಆಕೆ ಮನೋರೋಗ ತಜ್ಞರ ಬಳಿ ಹೋದಾಗ ಆಕೆಯ ಸಮಸ್ಯೆಗೆ ಪರಿಹಾರ ದೊರಕಿತು.

ಮಹಿಳೆಯರಲ್ಲಿ ಒತ್ತಡ ಹೆಚ್ಚು

ಪುರುಷರಿಗಿಂತ ಮಹಿಳೆಯರಲ್ಲಿ ಒತ್ತಡದ ಪ್ರಮಾಣ ಹೆಚ್ಚು ಎನ್ನುವುದು ಹಲವು ವರದಿಗಳಿಂದ ತಿಳಿದುಬಂದಿದೆ. ಅದರ ಅನುಪಾತ 2:1 ಇರುತ್ತದೆ. ಈ ಕುರಿತಂತೆ ಸಮೀಕ್ಷೆಗಳಿಂದ ತಿಳಿದುಬಂದ ಸಂಗತಿಯೆಂದರೆ ಶೇ.87ರಷ್ಟು ಮಹಿಳೆಯರು ಭಾರತದಲ್ಲಿ ಒತ್ತಡಗ್ರಸ್ಥರಾಗಿರುತ್ತಾರೆ.

ಈ ಕುರಿತಂತೆ ಮುಂಬೈನ ಫೋರ್ಟಿಸ್‌ ಆಸ್ಪತ್ರೆಯ ಡಾ. ಪರಮೇಶ್‌ ಹೀಗೆ ಹೇಳುತ್ತಾರೆ, ಮಹಿಳೆಯರಲ್ಲಿ ಒತ್ತಡ ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಕಾರಣ ಅವರ ದೈಹಿಕ ರಚನೆ. `ಅಡಾಲೆಸೆನ್ಸ್ ಪೀರಿಯಡ್‌' ಅಂದರೆ ಋತುಚಕ್ರ ಶುರುವಾಗುವ ಅವಧಿ, ಆ ಬಳಿಕ ಪೋಸ್ಟ್ ಪಾರ್ಟಮ್ ಡಿಪ್ರೆಶನ್‌ (ಸನ್ನಿ) ಮತ್ತು ಮೂರನೇ ಅವಸ್ಥೆ ಮುಟ್ಟಂತ್ಯದ ಬಳಿಕ ಉಂಟಾಗುತ್ತದೆ. ಈ ಎಲ್ಲ ಅಸ್ಥೆಗಳಲ್ಲಿ ಮಹಿಳೆಯರು ಒತ್ತಡಕ್ಕೆ ಸಿಲುಕುತ್ತಾರೆ ಮತ್ತು ಮೇಲಿಂದ ಮೇಲೆ ಉಂಟಾಗುವ ಹಾರ್ಮೋನು ಬದಲಾವಣೆ ಅವರ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಇದರ ಹೊರತಾಗಿ ಬದಲಾಗುತ್ತಿರುವ ಜೀವನಶೈಲಿ ಅಂದರೆ ಇಂದು ಮಹಿಳೆಯರು ಆಫೀಸು ಹಾಗೂ ಮನೆ ಎರಡನ್ನೂ ನಿರ್ವಹಿಸಬೇಕಾಗುತ್ತದೆ. ಈ ಕಾರಣದಿಂದ ಅವರಲ್ಲಿ `ಡಬಲ್ ಸ್ಟ್ರೆಸ್‌' ಉಂಟಾಗುತ್ತದೆ. ಇದಕ್ಕೆ ಸಕಾಲಕ್ಕೆ ಚಿಕಿತ್ಸೆ ಪಡೆದರೆ ಒತ್ತಡಕ್ಕೆ ಸಿಲುಕುವುದರಿಂದ ತಪ್ಪಿಸಿಕೊಳ್ಳಬಹುದು.

ಒತ್ತಡದ ಮುಖ್ಯ ಲಕ್ಷಣಗಳು

ಸದಾ ಒತ್ತಡ ಮತ್ತು ಸಿಡಿಮಿಡಿತನದ ಅನುಭೂತಿ ಉಂಟಾಗುವುದು.

ಯಾವುದೇ ಕೆಲಸದ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಆಗದೇ ಇರುವುದು, ಕೆಲಸದಲ್ಲಿ ಮನಸ್ಸು ನಿಲ್ಲದೇ ಇರುವುದು.

ಜೀವನದ ಬಗ್ಗೆ ನಕಾರಾತ್ಮಕ ಯೋಚನೆ, ಆಹಾರದಲ್ಲಿ ಬದಲಾವಣೆ, ಆತ್ಮಹತ್ಯೆಯ ಬಗ್ಗೆ ಯೋಚನೆ.

ತೂಕ ಹೆಚ್ಚುವುದು ಇಲ್ಲಿ ಕಡಿಮೆಯಾಗುವಿಕೆ, ಏಕಾಗ್ರತೆಯ ಕೊರತೆ ಮತ್ತು ನಿದ್ರಾಹೀನತೆಗೆ ತುತ್ತಾಗುವುದು.

ಡಾ. ಪರಮೇಶ್‌ ಪ್ರಕಾರ, ಇಂದಿನ ಮಹಿಳೆಯರಲ್ಲಿ ಸಹನಶೀಲತೆಯ ಕೊರತೆ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಹಣಕಾಸು ವಿಷಯಕ್ಕೆ ಸಂಬಂಧಪಟ್ಟಂತೆ ಅವರು ಸ್ವಾವಲಂಬಿಗಳಾಗಿರುವುದು. ಮೊದಲು ಮಹಿಳೆಯರು ಮನೆಯಲ್ಲಿದ್ದುಕೊಂಡು ಮಕ್ಕಳು ಮತ್ತು ಕುಟುಂಬದವರನ್ನಷ್ಟೇ ನಿರ್ವಹಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಅವರು ಮನೆ ಹಾಗೂ ಹೊರಗೆ ಎರಡನ್ನೂ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಇಂತಹದರಲ್ಲಿ ಒತ್ತಡವನ್ನು ಕಡಿಮೆಗೊಳಿಸಲು ಕುಟುಂಬ ಹಾಗೂ ಸಮಾಜದ ಯೋಚನೆಯನ್ನು ಬದಲಿಸುವುದು ಅವಶ್ಯಕವಾಗಿದೆ.

ಒತ್ತಡದಿಂದ ಹೀಗೆ ರಕ್ಷಿಸಿಕೊಳ್ಳಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ