ಪ್ರೀತಿ, ಪ್ರೇಮ, ಲವ್ ನಂತಹ ಶಬ್ದಗಳನ್ನು ಕೇಳಿದಾಗ ಮನಸ್ಸಿನಲ್ಲಿ ವಿದ್ಯುತ್‌ ಸಂಚಾರ ಉಂಟಾಗುತ್ತದೆ. ಕಣ್ಣುಗಳಲ್ಲಿ ಕನಸು, ತುಟಿಗಳಲ್ಲಿ ಹಾಡು ಮೂಡುತ್ತದೆ. ಪ್ರತಿಯೊಬ್ಬರಿಗೂ ಸಂಗಾತಿಯನ್ನು ಪಡೆಯುವ ಇಚ್ಛೆ ಇರುತ್ತದೆ. ಈ ಇಚ್ಛೆಯಂತೆ ಕೆಲವರಿಗೆ ಸ್ಕೂಲ್ ‌ನಲ್ಲಿ ಓದುವಾಗ, ಕೆಲವರಿಗೆ ಕಾಲೇಜ್‌ನಲ್ಲಿ ಓದುವಾಗ ಸಂಗಾತಿ ಸಿಗುತ್ತಾರೆ.

ನಿಮಗೆ ಆಫೀಸಿನಲ್ಲೂ ಸಂಗಾತಿ ಸಿಗಬಹುದು. ಒಂದು ವೇಳೆ ಹಾಗೆ ಸಿಕ್ಕುಬಿಟ್ಟರೆ ಮೋಜೋ ಮೋಜು. ಆದರೆ ಆಫೀಸಿನಲ್ಲಿ ಪ್ರೀತಿ, ಪ್ರೇಮದ ಬಗೆಗಿನ ಮಾತುಗಳು, ತಮಾಷೆ ಇತ್ಯಾದಿ ನಿಮಗೆ ತೊಂದರೆ ತರಬಹುದು. ಅವರು ಜನರ ಕಣ್ಣುಗಳಿಗೆ ಬೀಳಬಾರದೆಂದುಕೊಂಡರೂ ಬಿದ್ದೇ ಬೀಳುತ್ತಾರೆ. ಒಂದು ವೇಳೆ ಯಾರಾದರೂ ನೋಡಿಬಿಟ್ಟರಂತೂ ಆ ವಿಷಯ ಇಡೀ ಆಫೀಸಿನಲ್ಲಿ ಕಾಡ್ಗಿಚ್ಚಿನಂತೆ ಹರಡಿಬಿಡುತ್ತದೆ. ಹೆಚ್ಚಿನ ಜನ ಇಂತಹ ಬಿಸಿಬಿಸಿ ಸುದ್ದಿಗಳ ನಿರೀಕ್ಷೆಯಲ್ಲಿರುತ್ತಾರೆ. ಫ್ರೆಂಡ್‌ಶಿಪ್‌ನ ಸುದ್ದಿ ಸಿಕ್ಕರೆ ಅವರ ಆತ್ಮೀಯರೂ ಮೋಜು ಪಡೆಯುತ್ತಾರೆ.

ಆಫೀಸಿನಲ್ಲಾದ ಫ್ರೆಂಡ್‌ಶಿಪ್‌ ಒಂದು ವೇಳೆ ಮದುವೆಯವರೆಗೆ ಮುಂದುವರಿದರೆ ಒಳ್ಳೆಯದೇ. ಇಲ್ಲದಿದ್ದರೆ ಪ್ರೊಫೆಶನಲ್ ಮತ್ತು ಪರ್ಸನಲ್ ಲೈಫ್‌ ಎರಡೂ ಪ್ರಭಾವಿತವಾಗುತ್ತವೆ. ಏಕೆಂದರೆ ಒಂದು ಬಾರಿ ಬ್ರೇಕ್‌ಅಪ್‌ ಆದರೆ ಆಫೀಸಿನಲ್ಲಿ ತಮಾಷೆಯ ವಸ್ತುವಾಗುತ್ತೀರಿ ಹಾಗೂ ಒಳಗೇ ಕುಗ್ಗಿ ಹೋಗುತ್ತೀರಿ.

ಆಫೀಸ್ಫ್ರೆಂಡ್ಶಿಪ್ಏಕೆ ಸರಿಯಲ್ಲ?

ಕೆಲಸದ ಮೇಲೆ ಗಮನ ಇರುವುದಿಲ್ಲ : ಆಫೀಸಿನಲ್ಲಿ ಯಾವುದೇ ರಿಲೇಶನ್‌ಶಿಪ್‌ನಲ್ಲಿ ಇಲ್ಲದೇ ಇರುವವರೆಗೆ ನಾವು ಸಂಪೂರ್ಣ ಪ್ರಾಮಾಣಿಕತೆ ಹಾಗೂ ತನ್ಮಯತೆಯಿಂದ ಕೆಲಸ ಮಾಡುತ್ತೇವೆ. ಆದರೆ ನಾವು ಪ್ರೀತಿಯ ಬಂಧನದಲ್ಲಿ ಸಿಕ್ಕಿಬಿಟ್ಟರೆ, ಕೆಲಸದಿಂದ ನಮ್ಮ ಗಮನ ದೂರಾಗುತ್ತದೆ. ನಮ್ಮ ಗಮನವೆಲ್ಲಾ ಪ್ರಿಯಕರ ಅಥವಾ ಪ್ರೇಯಸಿಯ ಮೇಲೆ ಇರುತ್ತದೆ. ಕೆಲಸದ ಬಗೆಗಿನ ಉದಾಸೀನತೆ ಸೀನಿಯರ್‌ಗಳ ದೃಷ್ಟಿಯಲ್ಲಿ ನಮ್ಮನ್ನು ಕೀಳಾಗಿಸುತ್ತದೆ. ಅದರ ನೇರ ಪರಿಣಾಮ ಪ್ರೊಫೆಶನಲ್ ಲೈಫ್‌ ಮೇಲೆ ಬೀಳುತ್ತದೆ.

ಆಫೀಸಿನಲ್ಲಿ ಪ್ರೀತಿಯ ಹುಚ್ಚಿಗೆ ಬಿದ್ದರೆ ಕೆಲಸದ ಮೇಲೆ ಗಮನ ಇರುವುದಿಲ್ಲ. ಜೊತೆಗೆ ಇಮೇಜ್‌ ಹಾಳಾಗುತ್ತದೆ. ಅದರ ಬಗ್ಗೆ ಮೀನಾಕ್ಷಿ ಹೀಗೆ ಹೇಳುತ್ತಾರೆ. ನಮ್ಮ ಆಫೀಸಿನಲ್ಲಿ ನನಗೆ ಒಳ್ಳೆಯ ಇಮೇಜ್‌ ಇತ್ತು. ನನ್ನ ವರ್ಕ್‌ ಪರ್ಫಾಮೆನ್ಸ್ ನಿಂದಾಗಿ ನಮ್ಮ ಬಾಸ್‌ನ ಫೇವರಿಟ್‌ ಆಗಿದ್ದೆ. ಒಂದು ದಿನ ಅಕೌಂಟ್ಸ್ ಡಿಪಾರ್ಟ್‌ಮೆಂಟ್‌ನ ರಾಹುಲ್‌ನೊಂದಿಗೆ ಭೇಟಿ ಆಯಿತು. ನಿಧಾನವಾಗಿ ನಾವಿಬ್ಬರೂ ಪರಸ್ಪರರತ್ತ ಆಕರ್ಷಿತರಾದೆವು. ನಮ್ಮ ಗೆಳೆತನ ಎಷ್ಟು ಗಾಢವಾಯಿತೆಂದರೆ ನಮಗೆ ಈಗ ಆಫೀಸ್‌ ಆಗಲಿ ಮನೆಯಾಗಲೀ ನೆನಪಾಗುತ್ತಿರಲಿಲ್ಲ. ನಮ್ಮ ಮೇಲೆ ಪ್ರೀತಿಯ ಭೂತ ಸವಾರಿ ಮಾಡಿತ್ತು. ಅದರ ಪರಿಣಾಮವಾಗಿ ನಮ್ಮನ್ನು ಎಷ್ಟು ಗೇಲಿ ಮಾಡಲಾಯಿತೆಂದರೆ ನಾವಿಬ್ಬರೂ ಆ ಕೆಲಸ ಬಿಡಬೇಕಾಯಿತು.

ವಾಟ್ಸ್ ಆ್ಯಪ್ಮೂಲಕ ಚ್ಯಾಟಿಂಗ್‌ : ಇಂದು ಮೆಸೇಜ್‌ ವೀಡಿಯೋಗಳಿಗಿಂತ ಅತ್ಯಂತ ಮಾಧ್ಯಮ ವಾಟ್ಸ್ ಆ್ಯಪ್‌ ಆಗಿದೆ. ಈ ಅಫ್ಲಿಕೇಶನ್‌ ಹೆಚ್ಚಾಗಿ ಯುವಕರ ಫೋನ್‌ನಲ್ಲಿ ಇರುತ್ತದೆ. ಹೀಗಿರುವಾಗ ಒಂದುವೇಳೆ ಆಫೀಸಿನಲ್ಲಿ ಪ್ರೇಯಸಿ ಅಥವಾ ಪ್ರಿಯಕರ ಇದ್ದರೆ, ಸ್ವಲ್ಪ ಸಮಯದ ನಂತರ ವಾಟ್ಸ್ಆ್ಯಪ್‌ ಮೂಲಕ `ಐ ಲವ್ ಯೂ' `ಐ ಮಿಸ್‌ ಯೂ' ಇತ್ಯಾದಿ ಮೆಸೇಜ್‌ಗಳನ್ನು ಕಳಿಸತೊಡಗುತ್ತಾರೆ. ಈ ಮೆಸೇಜ್‌ಗಳನ್ನು ಕಂಡು ಮನಸ್ಸು ಕೂಡಲೇ ಭೇಟಿಯಾಗಲು ಬಯಸುತ್ತದೆ. ಆಗ ಅತ್ಯಂತ ಮಹತ್ವದ ಕೆಲಸವಿದ್ದರೂ ಅದನ್ನು ಬಿಟ್ಟು ಅವರನ್ನು ಭೇಟಿಯಾಗಲು ಹೊರಡುತ್ತಾರೆ. ಆಗ ಕೆಲಸಕ್ಕೆ ಧಕ್ಕೆಯಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ