`ಪ್ರೀತಿ ಸುಲಭದ ಸಂಗತಿಯಲ್ಲ,' ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ತಂದೆ ತಾಯಿ, ಸಂಬಂಧಿಕರು, ಸಮಾಜ, ಜಾತಿ, ಧರ್ಮ ಈ ಎಲ್ಲದರ ಗೋಡೆಯನ್ನು ಹಾರಿ ಪ್ರೇಮಿಗಳು ಒಂದಾಗುವುದು ಸುಲಭ ಅಲ್ಲ. ಆದರೆ ಈ ಎಲ್ಲ ಅಡೆತಡೆಗಳನ್ನು ಪಾರು ಮಾಡಿ ಯಾರು ಒಂದಾಗುತ್ತಾರೋ, ತಮ್ಮ ಗುರಿ ಸಾಧಿಸಿಬಿಡುತ್ತಾರೊ ಅವರು ನಾವು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಕುಟುಂಬದ ಜವಾಬ್ದಾರಿ ಅವರ ಹೆಗಲಿಗೆ ಒತ್ತಡ ಹೇರುತ್ತಾ ಹೋದಂತೆ, ಅವರಿಗೆ ಮದುವೆ ಎನ್ನುವುದು ಒಂದು ಬಂಧನ ಎಂಬಂತೆ ಭಾಸವಾಗುತ್ತದೆ. ಆಗ ಅವರಿಗೆ ಮದುವೆಗೂ ಮೊದಲ ದಿನಗಳೇ ಚೆನ್ನಾಗಿದ್ದವು ಎಂದು ಅನಿಸಲಾರಂಭಿಸತೊಡಗುತ್ತದೆ.

ಮುನಿಸಿಕೊಳ್ಳುವುದು, ರಮಿಸುವುದು, ಪರಸ್ಪರರ ಮುಂದೆ ಪ್ರೀತಿ ವ್ಯಕ್ತಪಡಿಸುವುದು ಇವೆಲ್ಲ ಅವರಿಗೆ ವ್ಯರ್ಥ ಸಂಗತಿಗಳು ಎನಿಸುತ್ತವೆ. ಮದುವೆಯಾದ 3-4 ವರ್ಷಗಳಲ್ಲಿ ಅವರ ವೈವಾಹಿಕ ಜೀವನ ರೋಮಾಂಚಕತೆಯನ್ನು ಕಳೆದುಕೊಂಡುಬಿಡುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ಜಗಳ ಮಾಡಿಕೊಳ್ಳುತ್ತಾರೆ. ಅಂದಹಾಗೆ, ಜಗಳ ಕೂಡ ಪ್ರೀತಿಯ ಒಂದು ಭಾಗವೇ ಹೌದು. ಪ್ರೀತಿಯಲ್ಲಿ ಅಷ್ಟಿಷ್ಟು ಮುನಿಸು, ಕೋಪ ಎಲ್ಲವೂ ಇರುತ್ತದೆ. ಆದರೆ ಇದೆಲ್ಲ ಮಿತಿ ಮೀರಿದಾಗ ವಿಷಯ ವಿಚ್ಛೇದನದ ತನಕ ತಲುಪುತ್ತದೆ.

ಪ್ರಿಯಾ ಹಾಗೂ ಸನತ್‌ ನಡುವೆಯೂ ಇದೇ ರೀತಿ ಆಯಿತು. ಕುಟುಂಬ ಹಾಗೂ ಸಮಾಜವನ್ನು ಧಿಕ್ಕರಿಸಿ ಇಬ್ಬರೂ ಒಂದಾದರು. ಜೀವನದಲ್ಲಿ ಹೊಸ ರಂಗು ತುಂಬಿದರು. ಕ್ರಮೇಣ ಅವರ ಪ್ರೀತಿಯ ರಂಗು ಇಳಿಯತೊಡಗಿತು. ತಮ್ಮ ಸಂಬಂಧ ಅವರಿಗೆ ಬೇಸರ ಹುಟ್ಟಿಸತೊಡಗಿತು. ಪ್ರೀತಿಗೀತಿ ಅವರಿಗೆ ವ್ಯರ್ಥ ಎನಿಸತೊಡಗಿತು. ಪ್ರೀತಿ ಮಾಡುವವರೆಗೆ ಎಲ್ಲವೂ ಸರಿಯಿತ್ತು. ಆದರೆ ಮದುವೆ ಮಾಡಿಕೊಂಡು ತಾವು ತಪ್ಪು ಮಾಡಿದೆವು ಎನಿಸಲಾರಂಭಿಸಿತು.

ಸಂಬಂಧದಲ್ಲಿ ರೊಮ್ಯಾನ್ಸ್ ಜಾಗೃತಗೊಳಿಸಿ

ಮದುವೆಗೂ ಮುನ್ನ ಇಬ್ಬರು ಪ್ರೇಮಿಗಳೂ ಪರಸ್ಪರರಿಗಾಗಿ ಜೀವ ಕೊಡಲು ಕೂಡ ಸಿದ್ಧರಿರುತ್ತಾರೆ. ಇಬ್ಬರಿಗೂ ಪರಸ್ಪರರ ಒಂದೊಂದು ಮಾತು ಕೂಡ ಖುಷಿ ಕೊಡುತ್ತದೆ. ಆದರೆ ಮದುವೆಯ ಬಳಿಕ ಈ ಎಲ್ಲ ಸಂಗತಿಗಳು ಬೋರ್‌ ಹೊಡೆಸುತ್ತವೆ. ಇದು ಪ್ರತಿಯೊಬ್ಬ ದಂಪತಿಗಳ ಜೀವನದಲ್ಲಿ ಘಟಿಸುವಂಥದ್ದು. ಆದರೆ ಇದರರ್ಥ ಜಗಳವಾಡಿ ನೀವು ಬೇರೆ ಆಗಬೇಕು ಎಂದಲ್ಲ, ನಂತರ ಪಶ್ಚಾತ್ತಾಪ ಪಡಬೇಕು ಎಂದೂ ಅಲ್ಲ, ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸಂಬಂಧವನ್ನು ಪುನಃ ರೊಮ್ಯಾಂಟಿಕ್‌ ಆಗಿಸಬಹುದು.

ದಾಂಪತ್ಯದಲ್ಲಿ ಹೊಸ ಶಕ್ತಿ ತುಂಬುವುದು ಕಷ್ಟದ ಸಂಗತಿಯಲ್ಲ. ಅದಕ್ಕಾಗಿ ಅಷ್ಟಿಷ್ಟು ಬದಲಾವಣೆ ಹಾಗೂ ತಿಳಿವಳಿಕೆ ಬೇಕು. ಇದರಿಂದ ನಿಮ್ಮ ಸಂಗಾತಿಗೆ ಖುಷಿ ದೊರೆಯುವುದಲ್ಲದೆ, ನಿಮ್ಮ ಸಂಬಂಧದಲ್ಲೂ ಹೊಸತನ ಮರುಕಳಿಸುತ್ತದೆ. ನಿಮ್ಮ ಪ್ರೀತಿಯ ತೋಟ ಮತ್ತೆ ಹೊಸತನದಿಂದ ಕಂಗೊಳಿಸಬಹುದು. ಸಂಬಂಧಗಳು ಆಗುವುದೇ ನಿಭಾಯಿಸಲೆಂದೇ ಹೊರತು, ಚಿಕ್ಕಪುಟ್ಟ ಮಾತುಗಳಿಗೆ ಸಂಬಂಧ ಮುರಿದುಕೊಳ್ಳುವುದಕ್ಕಲ್ಲ. ಗಂಡಹೆಂಡತಿ ಇಬ್ಬರೂ ಈ ಸಂಗತಿಯನ್ನು ಅರಿತುಕೊಳ್ಳುವುದು ಅತ್ಯವಶ್ಯ.

ಮದುವೆಯ ಬಳಿಕ ಪ್ರತಿಯೊಬ್ಬ ದಂಪತಿಗಳ ಜವಾಬ್ದಾರಿ ಹೆಚ್ಚುತ್ತದೆ. ಕೆಲಸದ ಒತ್ತಡದಿಂದ ನೀವು ಪರಸ್ಪರರಿಗಾಗಿ ಹೆಚ್ಚು ಸಮಯ ಕೊಡಲು ಆಗುವುದಿಲ್ಲ. ಆದರೆ ಇದರರ್ಥ ನಿಮ್ಮ ಸಂಗಾತಿ ಮೊದಲಿನಂತೆ ಇಲ್ಲ ಎಂದು ಭಾವಿಸಬಾರದು. ಗಂಡಹೆಂಡತಿ ಎಷ್ಟೇ ಬಿಜಿಯಾಗಿದ್ದರೂ ಪರಸ್ಪರಿಗಾಗಿ ಸಮಯ ಕೊಡಬೇಕು. ಪ್ರತಿದಿನ ಸಾಧ್ಯವಾಗದಿದ್ದರೂ, ವಾರಕ್ಕೆ 1 ಸಲವಾದರೂ ಹೊರಗೆ ಹೋಗಿಬನ್ನಿ. ಸ್ಪರ್ಶ, ಅಪ್ಪುಗೆ, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಇವೆಲ್ಲ ನಿಮ್ಮ ಸಂಬಂಧದಲ್ಲಿ ಹೊಸತನದ ಮೆರುಗು ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ