ಇತ್ತೀಚಿನ ವರ್ಷಗಳಲ್ಲಿ ಯುವ ಜನರು ತಮ್ಮೆಲ್ಲ ಸಂಬಂಧಗಳನ್ನು ಬದಿಗೊತ್ತಿ ಗೆಳೆಯ ಗೆಳತಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಸ್ನೇಹ ಸಂಬಂಧ ಅದ್ವಿತೀಯವಾಗಿರುತ್ತದೆ ಎಂಬುದೇನೊ ನಿಜ. ಅದನ್ನು ಸರಿಯಾಗಿ ನಿಭಾಯಿಸಿದರೆ ಅದು ಜೀವನಪರ್ಯಂತ ಉಳಿಯುತ್ತದೆ. ಆದರೆ ಖೇದದ ಸಂಗತಿಯೆಂದರೆ, ನಾವು ನಮ್ಮ ಸುತ್ತಮುತ್ತ ಇರುವ ಕೆಲವು ಮುಖಗಳನ್ನು ಸ್ನೇಹಿತರನ್ನಾಗಿಸಿಕೊಳ್ಳುತ್ತಿದ್ದೇವೆ. ಅದೆಲ್ಲ ಟೈಮ್ ಪಾಸ್‌ಗಾಗಿ. ಅದರಿಂದಾಗಿ ನಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಮರೆತು, ನಮ್ಮವರನ್ನು ಬಿಟ್ಟುಕೊಡುತ್ತಿದ್ದೇವೆ.

ಅಶ್ವಿನಿ ತನ್ನ ಮಗನ ಹುಟ್ಟುಹಬ್ಬದ ಪಾರ್ಟಿಗಾಗಿ ಯಾರು ಯಾರನ್ನು ಕರೆಯಬೇಕೆಂದು ಪಟ್ಟಿ ಸಿದ್ಧಪಡಿಸುತ್ತಿದ್ದಳು. ಅವಳು ಸಿದ್ಧಪಡಿಸಿದ ಸಂಬಂಧಿಕರ ಪಟ್ಟಿ ನೋಡಿ ಮಗ, ``ಅಮ್ಮಾ, ಇಷ್ಟೊಂದು ಜನರನ್ನು ಕರೆದು ಏನ್‌ ಮಾಡ್ತೀಯಾ? ನಾನು ಈ ಸಲ ನನ್ನ ಗೆಳೆಯರ ಜೊತೆ ಬರ್ಥ್‌ಡೇ ಆಚರಿಸಿಕೊಳ್ಳೀನಿ. ಸಂಬಂಧಿಕರು ಯಾರೂ ಬರುವುದೇ ಬೇಡ,'' ಎಂದ.

``ಗೆಳೆಯರನ್ನು ನಾವು ಪ್ರತಿ ವರ್ಷ ಕರೆದೇ ಕರೆಯುತ್ತೇವೆ. ಈ ಸಲವೂ ಕರೆಯುತ್ತಿದ್ದೇವೆ. ಆದರೆ ನೀನು ಸಂಬಂಧಿಕರನ್ನು ಕರೆಯುವುದು ಬೇಡ ಅನ್ನುತ್ತಿರುವೆ ಏಕೆ?''

ಅಶ್ವಿನಿ ಆಶ್ಚರ್ಯದಿಂದ ಕೇಳಿದಳು, ಅದಕ್ಕೆ ಮಗ, ``ಅಮ್ಮಾ ಆ ಸಂಬಂಧಿಕರು ನಿಮ್ಮವರು. ಅವರ ನಡುವೆ ನನಗೆ ಬೇಸರ ಅನಿಸುತ್ತೆ. ಹೀಗಾಗಿ ಈ ಸಲ ನಾನು ಕೇವಲ ಗೆಳೆಯರ ಉಪಸ್ಥಿತಿಯಲ್ಲಿ ಯಾವುದಾದರೂ ರೆಸ್ಟೋರೆಂಟ್‌ ಅಥವಾ ಮಾಲ್‌ನಲ್ಲಿ ಬರ್ಥ್‌ಡೇ ಆಚರಿಸಿಕೊಳ್ತೀನಿ,'' ಎಂದು ವಿವರಿಸಿದ.

ಸ್ನೇಹಿತರು ನನ್ನವರು ಸಂಬಂಧಿಕರು ನಿಮ್ಮವರು ಮಗ ಸುಹಾಸನ ಬಾಯಿಂದ ಈ ತೆರನಾದ ಮಾತು ಕೇಳಿ ಅಶ್ವಿನಿಗೆ ಮಾತೇ ನಿಂತುಹೋದಂತೆ ಆಯಿತು. ಸಂಬಂಧಿಕರಂತೂ ನನಗೆ ಸಂಬಂಧಿಸಿಲ್ಲ. ನಿನಗೆ ಸಂಬಂಧಿಸಿದವರು ಎಂಬ ಮಾತು ಅವಳ ಕಿವಿಯಲ್ಲಿ ಬಹಳ ಹೊತ್ತಿನವರೆಗೂ ಗುಂಯ್‌ಗುಡುತ್ತಲೇ ಇತ್ತು. ಮಕ್ಕಳ ಪ್ರಪಂಚ ಅವರ ಸ್ನೇಹಿತರಿಗಷ್ಟೇ ಸೀಮಿತವಾಗಿಬಿಟ್ಟಿದೆಯಾ ಎಂದು ಅವಳು ಯೋಚಿಸಲಾರಂಭಿಸಿದಳು. ಮಕ್ಕಳಿಗೆ ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಅತ್ತಿಗೆಯಂತಹ ಸಂಬಂಧಗಳಿಂದ ಏನೂ ಪ್ರಯೋಜನ ಇಲ್ಲವೇ? ಅವರು ನಮಗಷ್ಟೇ ಸಂಬಂಧಿಕರೇ? ಮಕ್ಕಳಿಗೆ ಏನೂ ಅಲ್ಲವೇ?

ಬೆಂಗಳೂರಿನ ನಿರ್ಮಲಾ ತನ್ನ ಮನೆಯಲ್ಲಿದ್ದ ಅಕ್ಕನ ಮಗಳು ಚಂದ್ರಿಕಾಗೆ, ``ಈ ಸಲ ಹೊಸ ವರ್ಷಕ್ಕೆ ನೀನು ಅಮ್ಮನ ಮನೆಗೆ ತೀರ್ಥಹಳ್ಳಿಗೆ ಹೋಗುವ ಪ್ಲಾನ್‌ ಮಾಡ್ತಿದಿಯಾ ಹೇಗೆ?'' ಎಂದು ಕೇಳಿದಳು. ಅದಕ್ಕೆ ಅವಳು, ``ಇಲ್ಲ, ಜನವರಿ ಮೊದಲನೇ ವಾರ ನನ್ನ ಗೆಳತಿಯ ಬರ್ಥ್‌ಡೇ ಇದೆ. ಅವಳ ಹುಟ್ಟುಹಬ್ಬ ಆಚರಿಸಲು ನಾವು ಊಟಿಯ ಹೋಟೆಲ್‌ನಲ್ಲಿ ಸೇರ್ತಿದೀವಿ. ನಾನು ಹೊಸ ವರ್ಷಕ್ಕೆ ರಜೆ ತಗೊಂಬಿಟ್ರೆ, ಗೆಳತಿಯ ಹುಟ್ಟುಹಬ್ಬದ ಪಾರ್ಟಿಗೆ ಹೋಗಲು ರಜೆ ಸಿಗೋದಿಲ್ಲವಲ್ಲ.''

ಅಕ್ಕನ ಮಗಳು ಹೇಳಿದ ಮಾತನ್ನು ಕೇಳಿ ನಿರ್ಮಲಾಗೆ ಕೋಪವೇನೋ ಬಂತು. ಆದರೆ ಅವಳು ಏನನ್ನೂ ಮಾತನಾಡಲಿಲ್ಲ. ಅವಳಿಗೆ ತನ್ನ ಅಕ್ಕಭಾವನ ಚಿತ್ರ ಕಣ್ಮುಂದೆ ಹಾದುಹೋಯ್ತು. ಮಗಳು ಬರಬಹುದೆಂದು ಅವರು ಕಾಯುತ್ತಿದ್ದರು. ಮಗಳು ಈ ಸಲ ಮನೆಗೆ ಬರುವುದಿಲ್ಲವೆಂದು ಹೇಳಿದರೆ ಅವರಿಗೆ ಅದೆಷ್ಟು ನಿರಾಶೆ ಆಗಬಹುದು.

ವಿರೋಧಾಭಾಸ ಏಕೆ?

ಯುವ ಜನತೆಯಷ್ಟೇ ಸಂಬಂಧಗಳಿಂದ ದೂರ ಉಳಿಯುತ್ತಿಲ್ಲ. ಮಹಿಳೆಯರು ಹಾಗೂ ಪುರುಷರು ಕೂಡ ಸಂಬಂಧಗಳನ್ನು ದೂರ ಇಟ್ಟು ಸ್ನೇಹಿತ ಸ್ನೇಹಿತೆಯರಿಗೆ ಪ್ರಾಶಸ್ತ್ಯ ಕೊಟ್ಟಿದ್ದಾರೆ. ನಾನು ನೆರೆಮನೆಯರ ಮದುವೆಯ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ನಾನು ಅವರ ಗೆಳತಿಯರು ಹಾಗೂ ಪರಿಚಿತರನ್ನಷ್ಟೇ ಕಂಡೆ. ಅವರ ಸಂಬಂಧಿಕರು ಯಾರೂ ಅಲ್ಲಿ ಕಂಡು ಬರಲಿಲ್ಲ. ನಾನು ಅವರಿಗೆ ನಿಮ್ಮ ಸಂಬಂಧಿಕರೊಬ್ಬರೂ ಕಾಣ್ತಿಲ್ಲವಲ್ಲ ಎಂದು ಕೇಳಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ