ಮದುವೆಗೂ ಮುಂಚೆ ಪರಸ್ಪರರನ್ನು ಪಡೆದುಕೊಳ್ಳುವ ಅಪೇಕ್ಷೆಯಲ್ಲಿ ಪ್ರೇಮಿಗಳು ಸಮಾಜ ಮತ್ತು ಕುಟುಂಬದವರ ವಿರುದ್ಧ  ಹೋಗಲು ಕೂಡ ಹಿಂದೇಟು ಹಾಕುವುದಿಲ್ಲ. ಆಕಸ್ಮಿಕವಾಗಿ ಮದುವೆಯಾಗುತ್ತಿದ್ದಂತೆ ಅಥವಾ ವಯಸ್ಸಿನ ಯಾವುದೇ ಹಂತದಲ್ಲಿ ಪರಸ್ಪರರಿಂದ ಪ್ರತ್ಯೇಕಗೊಳ್ಳಲು ಏಕೆ ನಿರ್ಧಾರ ಕೈಗೊಳ್ಳಲಾಗುತ್ತದೆ? ಇದು ನಿಜಕ್ಕೂ ಖೇದದ ಸಂಗತಿ. ಏಕೆಂದರೆ ಹಳೆಯ ಕಾಲಕ್ಕೆ ತದ್ವಿರುದ್ಧ ಎಂಬಂತೆ ಇಂದಿನ ಆಧುನಿಕ ಮನೋಭಾವದ ಹೆಚ್ಚಿನ ಯುವಕ/ಯುವತಿಯರು ಸ್ವೇಚ್ಛೆಯಿಂದ ಮದುವೆ ಮಾಡಿಕೊಳ್ಳುತ್ತಿದ್ದಾರೆ. ತಂದೆತಾಯಿ ನೋಡಿದ ಹುಡುಗ ಅಥವಾ ಹುಡುಗಿಯನ್ನು ಅವರು ತಿರಸ್ಕರಿಸುತ್ತಿದ್ದಾರೆ. ಈ ಪ್ರೇಮ ವಿವಾಹಗಳು ಯಶಸ್ವಿಯಾಗದೇ ಇರಲು ಅನೇಕ ಕಾರಣಗಳಿವೆ :

ಪ್ರೇಮ ವಿವಾಹಗಳು ಸಿನಿಮಾಗಳ ಉಡುಗೊರೆ ಎನ್ನಬಹುದು. ಅಲ್ಲಿ ಸಂಗಾತಿಯನ್ನು ಹುಡುಕುವಾಗ ವಯಸ್ಸಿನ ಭೇದವಾಗಲಿ, ಜಾತಿಯ ಹಂಗಾಗಲಿ ಇರದು. ಯಾವ ವೇಗದಲ್ಲಿ ಪ್ರೀತಿಸಿ ಮದುವೆಯಾಗುವ ನಿರ್ಧಾರ ಕೈಗೊಳ್ಳಲಾಗುತ್ತದೋ, ಅದೇ ವೇಗದಲ್ಲಿ ವಿಚ್ಛೇದನ ಕೂಡ ಆಗಿಬಿಡುತ್ತದೆ. `ನೀನಿಲ್ಲದಿದ್ದರೆ ಮತ್ಯಾರೊ' ಎಂಬ ಧೋರಣೆ ಅವರದ್ದಾಗಿರುತ್ತದೆ. ಅದರ ಪ್ರಭಾವ ಜನಸಾಮಾನ್ಯರ ಮೇಲೂ ಆಗಿದೆ. ಸಿನಿಮಾ ನಾಯಕ ನಾಯಕಿಯರ ಜೀವನಶೈಲಿಯ ಪ್ರಭಾವ ಜನಸಾಮಾನ್ಯರ ಮೇಲೆ ಉಂಟಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಏಕೆಂದರೆ ಅವರು ಇವರಿಗೆ ಆದರ್ಶಪ್ರಾಯರಾಗಿದ್ದಾರೆ.

ಮುಂಬೈ ಹೈಕೋರ್ಟ್‌ 2012ರಲ್ಲಿ ಒಂದು ಪ್ರಕರಣದ ಕುರಿತಂತೆ ತೀರ್ಪು ನೀಡುತ್ತ, ಅರೇಂಜ್ಡ್ ಮ್ಯಾರೇಜ್‌ಗಳಿಗೆ ಹೋಲಿಸಿದರೆ, ಪ್ರೀತಿಸಿ ಮಾಡಿದ ಮದುವೆಗಳಲ್ಲಿ ವಿಚ್ಛೇದನಗಳ ಪ್ರಮಾಣ ಹೆಚ್ಚು ಎಂದು ಹೇಳಿತ್ತು. 1980ರ ಸಾಲಿನಲ್ಲಿ ಪ್ರೇಮ ವಿವಾಹಗಳಿಗೆ ಹೆಚ್ಚಿನ ಚಾಲನೆ ಸಿಕ್ಕಿತ್ತು. ಅದಕ್ಕೂ ಮುಂಚೆ ಮನಸ್ಸಿನಲ್ಲಿನ ಪ್ರಥಮ ಪ್ರೀತಿಯನ್ನು ಕುಟುಂಬದವರ ಮುಂದೆ ವ್ಯಕ್ತಪಡಿಸುವುದು ಬಹಳ ಕಷ್ಟವಿತ್ತು. ಹಾಗೆ ಹೇಳಿಕೊಳ್ಳುವ ಮುನ್ನವೇ ಬೇರೊಂದು ಕಡೆ ಮದುವೆ ಸೆಟಲ್ ಆಗಿ ಆ ಪ್ರೀತಿ ಅಲ್ಲೇ ಕೊನೆಯುಸಿರೆಳೆಯುತ್ತಿತ್ತು. ಪ್ರೀತಿ ಪ್ರೇಮದ ಮದುವೆಗಳು ಈಗಲೂ ನಗರ ಪ್ರದೇಶಗಳಿಗೆ ಹೆಚ್ಚು ಸೀಮಿತಗೊಂಡಿವೆ. ಸಣ್ಣ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಇದಕ್ಕೆ ಇನ್ನೂ ಅಷ್ಟೊಂದು ಮುಕ್ತ ಮಾನ್ಯತೆ ದೊರಕಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ಪ್ರೀತಿ ಮಾಡಿ ಮದುವೆಯಾದ ಹುಡುಗ ಅಥವಾ ಹುಡುಗಿಯನ್ನು ಹತ್ಯೆಗೈದ ಘಟನೆಗಳು ಕೂಡ ನಡೆದಿವೆ. ಅವರಿಗೆ ಮನೆಯ ಗೌರವ ಮುಖ್ಯವೇ ವಿನಾ ತಮ್ಮ ಹುಡುಗ ಅಥವಾ ಹುಡುಗಿಯ ಭಾವನೆ ಮುಖ್ಯವಾಗಿರುವುದಿಲ್ಲ.

ಯಾವ ಪ್ರೀತಿಯು ಮದುವೆಯಲ್ಲಿ ಪರಿರ್ತನೆಗೊಳ್ಳುತ್ತದೋ, ಅದು ವಾಸ್ತವದಲ್ಲಿ ಪ್ರೀತಿ ಆಗಿರದೆ, ದೈಹಿಕ ಆಕರ್ಷಣೆ ಆಗಿರುತ್ತದೆ. ಪ್ರೀತಿ ಮತ್ತು ವಿವಾಹ ಒಂದೇ ನಾಣ್ಯದ ಎರಡು ಮುಖಗಳು. ಪ್ರೇಮಿಯೊಬ್ಬ ಒಳ್ಳೆಯ ಗಂಡನಾಗುತ್ತಾನೆ ಅಥವಾ ಪ್ರೇಯಸಿಯೊಬ್ಬಳು ಒಳ್ಳೆಯ ಹೆಂಡತಿಯಾಗುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಮದುವೆಗೂ ಮುಂಚೆ ವ್ಯಕ್ತಿಯ ನಯವಿನಯದ ಗುಣಗಳಿಗೆ ಮನಸೋತು ಅಂಥವರೊಂದಿಗೆ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಆದರೆ ಭಾರತದಲ್ಲಿ ಮದುವೆಯ ಬಳಿಕ ಹೆಂಡತಿಗೆ ಗಂಡನ ಕುಟುಂಬದವರೆಲ್ಲರ ಜೊತೆ ಹೊಂದಾಣಿಕೆಯಿಂದ ಹೋಗಬೇಕಾಗುತ್ತದೆ. ಗಂಡನಾದವನಿಗೆ ಹೆಂಡತಿಯ ಜೊತೆಗೆ ಕುಟುಂಬದವರೆಲ್ಲರ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ.

ಪ್ರೇಮ ವಿವಾಹವೊಂದು ಯಾವಾಗ ಯಶಸ್ವಿಯಾಗುತ್ತದೆ ಎಂದರೆ, ಅದರ ಮೂಲ ಆಧಾರ ತ್ಯಾಗ, ಸಮರ್ಪಣೆ, ಹೊಂದಾಣಿಕೆಯಿಂದ ಕೂಡಿರಬೇಕು. ಆದರೆ ಇಂದಿನ ಯುವ ಪೀಳಿಗೆಯಲ್ಲಿ ಈ ಯಾವ ಗುಣಗಳೂ ಗೋಚರಿಸುವುದಿಲ್ಲ. ಹೀಗಾಗಿ ಮದುವೆಗೆ ಮುಂಚೆ ಕಂಡುಬಂದ ಹಗಲುಗನಸು ಮದುವೆಯ ಬಳಿಕ ನೆಲಸಮ ಆಗುವುದನ್ನು ನೋಡಿ ಬಂಡೇಳುತ್ತಾರೆ. ಅದರ ಮುಂದಿನ ಪರಿಣಾಮ ವಿಚ್ಛೇದನ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ