ಭಾರತದಲ್ಲಿ ವಿಚ್ಛೇದನದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿವೆ. 10 ವರ್ಷಗಳ ಹಿಂದಿನತನಕ 1000 ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ವಿಚ್ಛೇದನ ಪಡೆಯುತ್ತಿದ್ದ. ಆದರೆ ಈಗ 1000ಕ್ಕೆ 13ಕ್ಕಿಂತ ಹೆಚ್ಚಾಗಿದೆ. ವಿಚ್ಛೇದನ ಅರ್ಜಿ ಸಲ್ಲಿಕೆಯ ಪ್ರಮಾಣದಲ್ಲಿ ಭಾರಿ ಹೆಚ್ಚಳ ಉಂಟಾಗಿರುವುದು ಗಮನಕ್ಕೆ ಬರುತ್ತಿದೆ. ಬೆಂಗಳೂರು, ಮುಂಬೈ, ಕೋಲ್ಕತಾ, ಚೆನ್ನೈ, ಲಖ್ನೌದಂತಹ ದೊಡ್ಡ ದೊಡ್ಡ ನಗರಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಿರುವುದು ಕಂಡುಬರುತ್ತವೆ. ಈ ನಗರಗಳಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸುವವರ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ.

2004ರಲ್ಲಿ ಮುಂಬೈನಲ್ಲಿ 11,667 ವಿಚ್ಛೇದನದ ಪ್ಪಕರಣಗಳು ದಾಖಲಾಗಿದ್ದವು. 2010ರಲ್ಲಿ ಇದರ ಪ್ರಮಾಣ 5248 ಇತ್ತು. ಅದೇ ರೀತಿ 2014ರಲ್ಲಿ ಲಖ್ನೌ ಹಾಗೂ ದೆಹಲಿಯಲ್ಲಿ ಇದರ ಪ್ರಮಾಣ 8347 ಮತ್ತು 2000 ಇತ್ತು. 2010ರಲ್ಲಿ ಇದರ ಪ್ರಮಾಣ 2388 ಹಾಗೂ 920 ಇತ್ತು.

ವಿಚ್ಛೇದನದ ಪ್ರಕರಣಗಳಲ್ಲಿ ಈ ಪ್ರಮಾಣದ ಹೆಚ್ಚಳ ಹಾಗೂ ದಂಪತಿಗಳ ನಡುವೆ ಹೆಚ್ಚುತ್ತಿರುವ ಮನಸ್ತಾಪಕ್ಕೆ ಏನು ಕಾರಣ? ಸಂಬಂಧಗಳು ಏಕೆ ಗಟ್ಟಿಯಾಗಿ ಉಳಿಯುತ್ತಿಲ್ಲ? ಸಂಬಂಧಗಳ ವಯಸ್ಸನ್ನು ಕಿರಿದುಗೊಳಿಸುತ್ತಿರುವ ಆ ಕಾರಣಗಳಾದರೂ ಏನು?

ಈ ನಿಟ್ಟಿನಲ್ಲಿ ಅಮೆರಿಕದ ಮನೋತಜ್ಞ ಹಾಗೂ ಮ್ಯಾರೇಜ್‌ ಎಕ್ಸ್ ಪರ್ಟ್‌ ಜಾನ್‌ಗಾಟ್‌ಮ್ಯಾನ್‌ ತಮ್ಮ 40 ವರ್ಷಗಳ ಅಧ್ಯಯನ ಹಾಗೂ ಅನುಭವದ ಆಧಾರದ ಮೇಲೆ ಒಂದು ನಿಷ್ಕರ್ಷೆಗೆ ಬಂದರು. ಮುಖ್ಯವಾಗಿ 4 ಕಾರಣಗಳಿದ್ದು, ಅವುಗಳಿಂದಾಗಿ ದಂಪತಿಗಳಲ್ಲಿ ಮಾತುಕಥೆ ರಹಿತ ವಾತಾವರಣ ಸೃಷ್ಟಿಯಾಗುತ್ತದೆ. ಈ ಸ್ಥಿತಿ ಉತ್ಪನ್ನವಾದರೆ ಮುಂದಿನ 6 ವರ್ಷಗಳಲ್ಲಿ ಅವರ ವಿಚ್ಛೇದನಾಗುತ್ತದೆ.

ಟೀಕಾತ್ಮಕ ಧೋರಣೆ : ಅಂದಹಾಗೆ ಎಂದಾದರೊಮ್ಮೆ ಒಬ್ಬರು ಮತ್ತೊಬ್ಬರನ್ನು ಟೀಕಿಸುತ್ತಾರೆ. ಗಂಡಹೆಂಡತಿಯ ನಡುವೆ ಇದು ಸಾಮಾನ್ಯ. ಆದರೆ ಯಾವಾಗ ಅದು ವಿಕೋಪಕ್ಕೆ ಹೋಗುತ್ತದೆಂದರೆ, ಟೀಕೆ ಮಾಡುವ ವಿಧಾನ ಎಷ್ಟು ಕೆಟ್ಟದಾಗಿರುತ್ತದೆಂದರೆ, ಅದು ಟೀಕಿಸಲ್ಪಡುವ ವ್ಯಕ್ತಿಯ ಹೃದಯಕ್ಕೆ ನಾಟುವಂತಿರುತ್ತದೆ. ಎಂಥದೇ ಸ್ಥಿತಿಯಲ್ಲೂ ಒಬ್ಬರು ಇನ್ನೊಬ್ಬರನ್ನು ತಪ್ಪಿತಸ್ಥರು ಎಂದು ಸಾಬೀತು ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅವರ ಮೇಲೆ ಆರೋಪಗಳ ಸುರಿಮಳೆ ಗೈಯ್ಯುತ್ತಾರೆ. ಇಂತಹ ಸ್ಥಿತಿಯಲ್ಲಿ ಗಂಡಹೆಂಡತಿ ಅದೆಷ್ಟು ದೂರ ಹೋಗಿ ಬಿಡುತ್ತಾರೆಂದರೆ, ಅವರು ಪುನಃ ಹತ್ತಿರ ಬರುವುದು ಕಠಿಣವೆಂಬಂತೆ ಅನಿಸುತ್ತದೆ.

ತಿರಸ್ಕಾರದ ಧೋರಣೆ : ನಿಮ್ಮ ಮನಸ್ಸಿನಲ್ಲಿ ಸಂಗಾತಿಯ ಬಗೆಗೆ ಅಸಹನೀಯ ಹಾಗೂ ತಿರಸ್ಕಾರದ ಧೋರಣೆ ಬಂದುಬಿಟ್ಟಲ್ಲಿ  ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ ಎನಿಸುತ್ತದೆ. ತಿರಸ್ಕಾರ ಪ್ರದರ್ಶನವೆಂದರೆ ಸಂಗಾತಿಯನ್ನು ಕಡೆಗಣಿಸುವುದು, ಎಚ್ಚರಿಕೆ ಕೊಡುವುದು. ಹೀಗೆ ಎದುರಿನ ವ್ಯಕ್ತಿಗೆ ಮಹತ್ವವೇ ಇಲ್ಲ ಎಂಬಂತೆ ತೋರಿಸಿಕೊಡುವುದಾಗಿರುತ್ತದೆ. ಈ ರೀತಿಯ ವರ್ತನೆಗಳು ಸಂಬಂಧದ ಬೇರುಗಳಿಗೆ ನೋವು ನೀಡುತ್ತದೆ.

ಸ್ವರಕ್ಷಣೆಯ ಅಭ್ಯಾಸ : ಸಂಗಾತಿಯ ಮೇಲೆ ಆರೋಪ ಹೊರಿಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಧೋರಣೆ ಶೀಘ್ರವೇ ಸಂಬಂಧಕ್ಕೆ ಮುಳುವಾಗಿ ಪರಿಣಮಿಸಬಹುದು. ಗಂಡಹೆಂಡತಿ ಯಾವುದೇ ಸ್ಥಿತಿಯಲ್ಲಿ ಪರಸ್ಪರರಿಗೆ ಸಹಕಾರ ನೀಡಬೇಕೆಂದು ಅಪೇಕ್ಷಿಸಲಾಗುತ್ತದೆ. ಆದರೆ ಒಬ್ಬರು ಇನ್ನೊಬ್ಬರನ್ನು ವಿರೋಧಿಸುತ್ತ ಹೊರಟರೆ ಅವರ ಸಂಬಂಧವನ್ನು ಯಾರೊಬ್ಬರೂ ಕಾಪಾಡಲು ಆಗದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ