ಇಲಿಯಾನಿಸ್‌ನ ನಾರ್ಥ್‌ ವೆಸ್ಟರ್ನ್‌ ಯೂನಿವರ್ಸಿಟಿಯ ಥೆರಪಿಸ್ಟ್ ಪಾಮೆಲಾ ಶ್ರೊಕ್‌ ಪ್ರಕಾರ, ಹೆಚ್ಚಿನ ಪುರುಷರು ತಮ್ಮ ಪತ್ನಿಯ ಸೆಕ್ಶುಯಲ್ ಪ್ರಾಥಮಿಕತೆಗಳು ಮತ್ತು ಇಚ್ಛೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಈ ವಿಷಯದ ಬಗ್ಗೆ ಪತ್ನಿಯರ ಮನಸ್ಸಿನ ಭಾವನೆಗಳನ್ನು ತಿಳಿಯಲು ಪಾಮೆಲಾ ಪ್ರಯತ್ನಪಟ್ಟರು. ಆಗ ಅವರಿಗೆ ಪತ್ನಿಯರು ತಮ್ಮ ಪತಿ ಹೇಳಬಯಸುವ, ಆದರೆ ಹೇಳಲಾರದ ಕೆಲವು ಸೆಕ್ಸ್ ಸೀಕ್ರೆಟ್ಸ್ ಅರಿವಾದವು.

ಮಹಿಳೆಯರಿಗೆ ಇಂಟರ್‌ಕೋರ್ಸ್‌ನಿಂದಲೇ ತೃಪ್ತಿಯಾಗದು : ಮಹಿಳೆಯರಿಗೆ ಆನಂದದಾಯಕ ಸೆಕ್ಸ್ ಎಂದರೆ ಕೇವಲ ಇಂಟರ್‌ಕೋರ್ಸ್‌ ಅಲ್ಲ. ಬದಲಾಗಿ ಪತಿಯೊಂದಿಗೆ ಕಳೆ ದಿನದ ಇತರ ವೇಳೆಯ ಒಳ್ಳೆಯ ಫೀಲಿಂಗ್ಸ್ ಮತ್ತು ಅನುಭವಗಳೂ ಮುಖ್ಯವಾಗಿರುತ್ತವೆ. ದಿನವಿಡೀ ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಪತಿ, ರಾತ್ರಿ ಮನೆಗೆ ಹಿಂದಿರುಗಿದ ನಂತರ ಊಟ ಮಾಡಿ, ಟಿ.ವಿ ನೋಡಿ ನಂತರ ಹಾಸಿಗೆಗೆ ಬರುತ್ತಿದ್ದಂತೆ ಪತ್ನಿಯನ್ನು ಆಕ್ರಮಿಸಿಕೊಳ್ಳುವ ಪರಿ ಪತ್ನಿಯರಿಗೆ ಕೊಂಚ ಇಷ್ಟವಾಗುವುದಿಲ್ಲ. ಇದರಿಂದ ಪತ್ನಿಗೆ ತಾನೊಂದು ಭೋಗದ ವಸ್ತುವೆಂಬಂತೆ ಭಾಸವಾಗುತ್ತದೆ ಮತ್ತು ಪತಿ ಸ್ವಾರ್ಥಿಯೆಂಬ ಭಾವನೆ ಮೂಡುತ್ತದೆ.

ಪ್ರತಿಯೊಬ್ಬ ಪತ್ನಿ ಬಯಸುವುದೆಂದರೆ ಪತಿ ತನ್ನನ್ನು ಹಾಸಿಗೆಯಲ್ಲಿ ಮಾತ್ರವಲ್ಲದೆ, ಹಾಸಿಗೆಯ ಹೊರಗೂ ಪ್ರೀತಿಸಲಿ, ಗಮನಿಸಲಿ. ಪ್ರೀತಿಯಿಂದ ಮಾತನಾಡಲಿ. ವಿಷಯಗಳನ್ನು ಶೇರ್‌ ಮಾಡಿಕೊಳ್ಳಲಿ, ತನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿ ಎಂದು.

ಸಮಾಜ ಶಾಸ್ತ್ರಜ್ಞೆ ಡಾಲಿಯಾ ಚಕ್ರವರ್ತಿ ಹೀಗೆ ಹೇಳುತ್ತಾರೆ, ``ಪತ್ನಿಯರು ತಮ್ಮ ಜೀವನದ ಪ್ರತಿಯೊಂದು ಘಟನೆಯನ್ನೂ ಒಂದಕ್ಕೊಂದು ಜೋಡಿಸುತ್ತಾರೆ. ಆದರೆ ಪತಿಯರ ಅಭಿಪ್ರಾಯವೆಂದರೆ ಸ್ಟ್ರೆಸ್‌ ಮತ್ತು ಜಗಳಗಳನ್ನು ಸೆಕ್ಸ್ ನೊಂದಿಗೆ ಜೋಡಿಸಬಾರದು. ಆ ಸಮಯದಲ್ಲಿ ಅವುಗಳನ್ನು ಪಕ್ಕಕ್ಕಿರಿಸಬೇಕು. ವಾಸ್ತವವೆಂದರೆ ಸೆಕ್ಸ್ ನ ನಿಜವಾದ ಆನಂದವಿರುವುದು ಪ್ರೀತಿ, ಸಾಮೀಪ್ಯ ಮತ್ತು ಮಾನಸಿಕ ಹೊಂದಾಣಿಕೆಯಲ್ಲಿ. ಆಗ ಮಾತ್ರ ಸೆಕ್ಸ್ ಫೀಲಿಂಗ್‌ ಉತ್ತೇಜನಕಾರಿಯಾಗಿರುತ್ತದೆ.

ಪತಿ ತನ್ನ ಪತ್ನಿಗೆ ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ಕೊಡುವುದು, ಹೊರಗೆ ಕರೆದೊಯ್ಯುವುದು, ಸಂಸಾರದ ಬಗ್ಗೆ ಗಮನ ನೀಡುವುದು, ಪತ್ನಿಗೆ ಸ್ಪೆಷಲ್ ಫೀಲಿಂಗ್‌ ಉಂಟು ಮಾಡಿ ಮನೆಯಲ್ಲಿ ಸಂತೋಷ ತುಂಬುವುದು, ಇಂತಹದನ್ನು ಮಾಡಿದಾಗ ಸೆಕ್ಸ್ ನ ಆನಂದ ಅನೇಕ ಪಟ್ಟು ಹೆಚ್ಚುತ್ತದೆ.

ಮಹಿಳೆಯರನ್ನು ಟರ್ನ್‌ ಆನ್‌ ಮಾಡಲು ಪ್ರೀತಿಪೂರ್ವಕ ಮಾತು ಅಗತ್ಯ : ರಾತ್ರಿ ಊಟದ ವೇಳೆಯಲ್ಲಿ ಮಧುರವಾದ, ರೊಮ್ಯಾಂಟಿಕ್‌ ಮಾತುಗಳು, ತಮಾಷೆ, ಹಾಸ್ಯ ಪ್ರಸಂಗಗಳ ವಿಷಯ ಇವು ಪತ್ನಿಯರ ಮನಸ್ಸಿನಲ್ಲಿ ಸಂತಸ ಉಕ್ಕಿಸಿ ಒಳ್ಳೆಯ ಮೂಡ್‌ ಉಂಟಾಗುತ್ತದೆ. ಇದೇ ರೀತಿ ಸೆಕ್ಸ್ ನ ಸಂದರ್ಭದಲ್ಲಿ ಅವಳ ಹೆಸರನ್ನು ಹೇಳುತ್ತಾ ಪ್ರೀತಿಯಿಂದ ಮಾತನಾಡುವುದು, ಪ್ರಶಂಸೆ ಮಾಡುವುದು, ಇವುಗಳಿಂದ ಪತ್ನಿಯು ಉತ್ತೇಜಿತಳಾಗುತ್ತಾಳೆ. ಸೆಕ್ಸ್ ಥೆರಪಿಸ್ಟ್ ರ ಪ್ರಕಾರ, ``ಮಹಿಳೆಯರು ಶಾರೀರಿಕ ಸಂಬಂಧಕ್ಕಿಂತ ಹೆಚ್ಚಾಗಿ ಮಾನಸಿಕ ಉತ್ತೇಜನ ಮತ್ತು ಮಾನಸಿಕ ಸಂಬಂಧಗಳನ್ನು ಮನಃಪೂರ್ಕವಾಗಿ ಆನಂದಿಸುತ್ತಾರೆ.''

ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ ಮೆಡಿಕಲ್ ಸ್ಕೂಲ್‌ನ ಸೈಕಾಲಜಿಸ್ಟ್ ಲೋನಿ ಬಾರ್ಬತ್‌ ಹೀಗೆ ಹೇಳುತ್ತಾರೆ, ``ಮನೆ ಮತ್ತು ಆಫೀಸಿನ ಕೆಲಸ, ಪತಿ ಮತ್ತು ಮಕ್ಕಳ ಜವಾಬ್ದಾರಿ... ಇವುಗಳ ನಡುವೆ ತೊಳಲಾಡುವ ಪತ್ನಿಗೆ ಅಗತ್ಯವಾದುದೆಂದರೆ ಸಹಾನುಭೂತಿ ಮತ್ತು ಪ್ರೀತಿಪೂರ್ವಕ ಮಾತುಗಳು. ಪತಿ ತನ್ನೊಂದಿಗೆ ರೊಮ್ಯಾಂಟಿಕ್‌ ಮಾತುಗಳನ್ನು ಆಡಲಿ ಎಂದು ಪ್ರತಿಯೊಬ್ಬ ಪತ್ನಿಯೂ ಬಯಸುತ್ತಾಳೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ