ಹೊಸದಾಗಿ ಮದುವೆಯಾಗಿತ್ತು. ಬದುಕಿನ ಬಗ್ಗೆ ಆಶಾಭಾವ ತುಂಬಿದ ನೂರಾರು ಕನಸುಗಳು. ರಾಜೇಶ್‌ ಮತ್ತು ಸುನೀತಾ ಹನಿಮೂನ್‌ಗೆಂದು ಊಟಿಗೆ ಹೊರಡುವ ತಯಾರಿ ನಡೆಸಿದರು. ಊಟಿಗೆ ಹೋದ ಮೇಲೆ ಸುನೀತಾ ಗಂಡನ ಎದೆಗೊರಗಿ, ``ನಾವು ಎಲ್ಲವನ್ನೂ ಮರೆತು ದಿನವಿಡೀ ಸುತ್ತಾಡೋಣ.... ನಮ್ಮ  ಪ್ರೇಮಲೋಕದಲ್ಲಿ ಆನಂದವಾಗಿ ವಿಹರಿಸೋಣ....'' ಎಂದು ಉಲಿದಳು.

ಸುನೀತಾಳ ಮಾತುಗಳಿಗೆ ರಾಜೇಶ್‌ ಒಪ್ಪಿಗೆ ಸೂಚಿಸುತ್ತಾ, ``ಹ್ಞೂಂ.... ಇಲ್ಲಿ ನಾನೇ ರಾಜ ನೀನೇ ರಾಣಿ! ನಮ್ಮನ್ನು ಅಡ್ಡಿಪಡಿಸುವವರು ಯಾರು? ನಾನು ನೀನಾಗಿ... ನೀನು ನಾನಾಗಿ..... ಹಾಯಾಗಿ ಇದ್ದುಬಿಡೋಣ,'' ಎಂದು ಅವಳನ್ನು ರಮಿಸಿದ.

ಅವರು ಹೋಟೆಲ್‌ನಲ್ಲಿ ಇರುವವರೆಗೂ ಎಲ್ಲ ಸರಿಯಾಗಿ ಇರುತ್ತಿತ್ತು. ಆದರೆ ಅವರು ಹೊರಗೆಲ್ಲಾದರೂ ಸುತ್ತಾಟಕ್ಕೆಂದು ಹೊರಟರೆ, ರಾಜೇಶನ ಕೈಯೇನೋ ಸುನೀತಾಳ ಕೈ ಹಿಡಿದು ಮಾತನಾಡುತ್ತಿದ್ದರೂ, ಅವನ ಕಂಗಳು ಸದಾ ಬೀದಿಯಲ್ಲಿ ಹಾದುಹೋಗುತ್ತಿದ್ದ ಇತರ ಹುಡುಗಿಯರ ಕಡೆಯೇ ಇರುತ್ತಿತ್ತು. ಅವನ ಮನಸ್ಸು ಎದುರಿಗೆ ಕಾಣುವ ಹೆಣ್ಣಿನ ಅಂದ ಹೀರುವುದರಲ್ಲಿ ತಲ್ಲೀನವಾಗಿರುತ್ತಿತ್ತು. ತಾನಿನ್ನೂ ಅವನ ಹೊಸ ಹೆಂಡತಿಯಾದ್ದರಿಂದ ತಕ್ಷಣ ಅವಳು ಸಂಕೋಚ ಬದಿಗೊತ್ತಿ ಆ ಬಗ್ಗೆ ಏನೂ ಮಾತನಾಡದಾದಳು.

ಗಂಡಸರ ದುರಭ್ಯಾಸ

ಮಧುಚಂದ್ರ ಮುಗಿಸಿ ತವರಿಗೆ ಮೊದಲ ಬಾರಿ ಬಂದ ಸುನೀತಾ, ತನ್ನ ಅತ್ತಿಗೆ ಪ್ರಭಾಮಣಿ ಬಳಿ ಗಂಡನ ಈ ಕೆಟ್ಟ ನಡವಳಿಕೆ ಕುರಿತು ಹೇಳಿದಳು. ಅದಕ್ಕೆ ಆಕೆ ನಗುತ್ತಾ, ``ಅಯ್ಯೋ ಹುಚ್ಚು ಹುಡುಗಿ.... ಇಷ್ಟು ಸಣ್ಣ ವಿಷಯವನ್ನು ಆಳವಾಗಿ ಚಿಂತಿಸುತ್ತಾ ಮಧುಚಂದ್ರದ ಮಜಾ ಕೆಡಿಸಿಕೊಂಡೆಯಾ? ಪರಸ್ತ್ರೀಯರನ್ನು ಕಂಡಾಗ ಅವರನ್ನು ನುಂಗಿಬಿಡುವಂತೆ ನೋಡುವುದು ಹಲವು ಗಂಡಸರ ದುರಭ್ಯಾಸವಾಗಿದೆ. ಒಂದು ಹಂತದ ನಂತರ ಈ ಹುಚ್ಚು ತಾನಾಗಿ ಬಿಟ್ಟುಹೋಗುತ್ತದೆ,'' ಎಂದು ವಿವರಿಸಿದಳು.

ಅದೇ ತರಹ ಅವಳ ಗೆಳತಿ ಸರಿತಾ ಸಹ ಹೇಳಿದಳು, ``ನಿಮ್ಮ ಅತ್ತಿಗೆ ಸರಿಯಾಗೇ ಹೇಳಿದ್ದಾರೆ. ರತಿರೂಪಿ ಹೆಂಡತಿಯೇ ಪಕ್ಕದಲ್ಲಿದ್ದರೂ ಕೆಲವು ಗಂಡಸರು ಪರಸ್ತ್ರೀಯರತ್ತ ಇಣುಕಿ ನೋಡುವುದನ್ನು ಬಿಡುವುದಿಲ್ಲ.''

ಇದೇ ತರಹ ಅವಳ ಇನ್ನೊಬ್ಬ ಗೆಳತಿ ರಶ್ಮಿ ಸೂಕ್ಷ್ಮವಾಗಿ ಉತ್ತರಿಸಿದಳು, ``ಈ ವಿಷಯದಲ್ಲಿ ನನ್ನ ಗಂಡನದು ತುಂಬಾನೇ ಜಾಸ್ತಿ ಅನ್ನೋಂಥ ಚಾಳಿ. ನಾನಂತೂ ಸದಾ ಅವರ ಮೇಲೆ ಒಂದು ಕಣ್ಣಿಟ್ಟಿರುತ್ತೇನೆ. ಆದರೂ ಅವಕಾಶ ಸಿಕ್ಕಿದಾಗ ಅವರು ಕಣ್ಣು ತಂಪು ಮಾಡಿಕೊಳ್ಳವುದೇ ಇರುವುದಿಲ್ಲ.''

ಪರಸ್ತ್ರೀ ಕಂಡಾಗ ತಪ್ಪದ ಆಕರ್ಷಣೆ

ಈ ವಿಚಾರವಾಗಿ ಬಹುತೇಕ ಪತ್ನಿಯರನ್ನು ಮಾತನಾಡಿಸಿದಾಗ, ಬಹಳಷ್ಟು ಮಂದಿ ತಾವು ಎದುರಿಗಿದ್ದಾಗಲೇ ಗಂಡ ಬೇರೆ ಹೆಂಗಸರನ್ನು, ಮುಖ್ಯವಾಗಿ ಅವಿವಾಹಿತ ತರುಣಿಯರನ್ನು ನುಂಗುವಂತೆ ದಿಟ್ಟಿಸುತ್ತಿರುತ್ತಾರೆ ಎಂದು ದೂರುತ್ತಾರೆ.

ಸುಂದರಿಯಾದ ಹೆಂಡತಿ ಪಕ್ಕದಲ್ಲಿ ಕುಳಿತಿದ್ದಾಗಲೂ ಸಹ, ಪತಿರಾಯ ಅವಳ ಜೊತೆ ಮಾತನಾಡುತ್ತಲೇ ಮಧ್ಯೆ ಮಧ್ಯೆ ಆ ಕಡೆ ಸುಳಿದಾಡುವ ಕನ್ಯಾಮಣಿಗಳತ್ತ ಕಳ್ಳನೋಟ ಹರಿಸದೆ ಇರಲಾರ. ಆದರೆ ಗಂಡಸರು ಹೀಗೆ ಮಾಡುವುದಾದರೂ ಏಕೆ?

ಈ ಕುರಿತಾಗಿ ಕೆಲವು ಗಂಡಸರನ್ನು ಈ ಬಗ್ಗೆ ವಿಚಾರಿಸಿದಾಗ, ಹೆಚ್ಚಿನ ಗಂಡಸರ ಮನಸ್ಸು ಬೇರೆ ಹುಡುಗಿಯರ ಬಗ್ಗೆ ಚಂಚಲವಾಗಿರುತ್ತದೆಯೇ, ಇದು ಎಷ್ಟರ ಮಟ್ಟಿಗೆ ನಿಜ ಎಂದು ಕೇಳಿದಾಗ, ಬಹಳಷ್ಟು ಮಂದಿ ಬೇರೆ ಬೇರೆ ರೀತಿಯಲ್ಲಿ ಅದನ್ನು ಒಪ್ಪಿಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ