ತವರು ಮನೆ ಕೇವಲ ಒಂದು ಸಂಬಂಧವಲ್ಲ.  ಹೆಣ್ಣುಮಗಳ ಬದುಕಿನ ಭದ್ರತಾ ಕವಚ

ಇತ್ತೀಚೆಗೆ ನನ್ನ ಆತ್ಮೀಯ ಗೆಳೆಯನೊಬ್ಬರ ಮಗಳ ಮದುವೆಗೆ ಹೋಗುವ ಸಂದರ್ಭ ಒದಗಿತ್ತು. ನನ್ನ ಗೆಳೆಯ ಹೇಳಿಕೊಳ್ಳುವಷ್ಟು ಶ್ರೀಮಂತನಲ್ಲ. ಆದರೆ ಅವನ ಹೃದಯವಂತಿಕೆ, ಮಾನವೀಯತೆ ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳುವ ಗುಣವೇ ಅವನ ನಿಜವಾದ ಸಂಪತ್ತು. ಇತ್ತೀಚಿನ ದಿನಗಳಲ್ಲಿ ನಮ್ಮ ಸಂಪರ್ಕ ಹಿಂದಿನಷ್ಟು ಇರದಿದ್ದರೂ, ಸ್ನೇಹವನ್ನು ಮರೆಯದೆ ಮಗಳ ಮದುವೆಗೆ ಆಹ್ವಾನಿಸಿದ್ದರಿಂದ ಸಂತೋಷದಿಂದ ಹಾಜರಾದೆ. ಮದುವೆ ಮಂಟಪ ಸುಂದರವಾಗಿ ಅಲಂಕರಿಸಲಾಗಿತ್ತು. ಸಂಭ್ರಮ, ಸಡಗರ, ಬಂಧು-ಬಳಗ, ನಗು, ಸಂತೋಷ ಎಲ್ಲವೂ ಸೇರಿ ಒಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಧಾರೆ ಮುಗಿದ ನಂತರ ನವದಂಪತಿಗಳಿಗೆ ಆಶೀರ್ವದಿಸಿ, ಉಡುಗೊರೆ ನೀಡಿ ಊಟಕ್ಕೆ ಕುಳಿತೆವು.

ಅಷ್ಟರಲ್ಲಿ ಹಿರಿಯರೊಬ್ಬರು ಪ್ರತಿಯೊಬ್ಬರ ಬಳಿಗೂ ಬಂದು, ಎರಡೂ ಕೈ ಮುಗಿದು,“ಸರ್… ಸಂಕೋಚಪಡಬೇಡಿ. ಹೊಟ್ಟೆತುಂಬಾ ಊಟ ಮಾಡಿ. ಇನ್ನೂ ಬೇಕಾದರೆ ಕೇಳಿ ಹಾಕಿಸಿಕೊಳ್ಳಿ” ಎಂದು ಅತ್ಯಂತ ವಿನಯದಿಂದ ಕೇಳಿಕೊಳ್ಳುತ್ತಿದ್ದರು. ಅವರ ಮಾತು ಕೇಳಿದ ಕ್ಷಣಕ್ಕೆ ನನ್ನ ಮನಸ್ಸು ಏನೋ ಹೇಳಲಾರದ ಭಾವದಿಂದ ತುಂಬಿತು. ಇತ್ತೀಚಿನ ದಿನಗಳಲ್ಲಿ ಯಾವುದೇ ಮದುವೆ ಅಥವಾ ಸಮಾರಂಭಕ್ಕೆ ಹೋದರೂ ಇದೇ ರೀತಿಯ ಮಾತು ಕೇಳಿಬರುತ್ತದೆ. ಆದರೆ ಆ ಮಾತು ಕೇಳಿದಾಗಲೆಲ್ಲಾ ನನ್ನ ಮನಸ್ಸಿನಲ್ಲಿ ಎರಡು ಪ್ರಶ್ನೆಗಳು ಮೂಡುತ್ತವೆ. “ತನ್ನ ಮಗಳ ಮದುವೆಗಾಗಿ ಜೀವನಪೂರ್ತಿ ಬೆವರು ಸುರಿಸಿ ದುಡಿದು, ಕೆಲವೊಮ್ಮೆ ಸಾಲಮಾಡಿ, ತನ್ನ ಕನಸುಗಳನ್ನೇ ಬದಿಗಿಟ್ಟು ಊಟ ಮಾಡಿಸುತ್ತಿರುವ ತಂದೆಯ ಶ್ರಮಕ್ಕೆ ನಾನು  ಊಟ ಮಾಡಲು ನಿಜವಾಗಿಯೂ ಅರ್ಹನೇ?” ಅದೇ ರೀತಿಯಾಗಿ “ನಾಳೆ ನಮ್ಮ ಮಗಳ ಮದುವೆಯಲ್ಲೂ ಇದೇ ರೀತಿ ಕೈಮುಗಿದು ನಿಂತು ಅತಿಥಿಗಳಿಗೆ ಊಟ ಮಾಡಿ ಎಂದು ಕೇಳಬೇಕಾಗುತ್ತದೆಯೇ?” ಈ ಯೋಚನೆ ನನ್ನ ಮನಸ್ಸನ್ನು ಹಲವಾರು ಬಾರಿ ಕಾಡಿದೆ.

“ನಾನು ಹುಡುಗಿಯ ಸೋದರಮಾವ ಸರ್…”

ಆ ಹಿರಿಯರು ಎಲ್ಲರನ್ನೂ ಅತ್ಯಂತ ಆತ್ಮೀಯವಾಗಿ ವಿಚಾರಿಸಿಕೊಳ್ಳುತ್ತಿರುವುದನ್ನು ನೋಡಿ ಕುತೂಹಲದಿಂದ “ನೀವು ಹುಡುಗಿಗೆ ಏನಾಗಬೇಕು?” ಎಂದು ಕೇಳಿದ್ದಕ್ಕೆ, ಅವರು ಮೃದುವಾಗಿ ನಗುತ್ತಾ ಉತ್ತರಿಸಿದರು. “ನಾನು ಹುಡುಗಿಯ ಸೋದರಮಾವ ಸರ್.” ಎಂದಾಗ, ನನಗೆ ಸ್ವಲ್ಪ ಆಶ್ಚರ್ಯವಾಯಿತು. ಯಾಕೆಂದರೆ ಆ ಕುಟುಂಬದ ಬಹುತೇಕ ಸದಸ್ಯರು ನನಗೆ ಪರಿಚಿತರಾಗಿದ್ದರು. ಸ್ವಲ್ಪ ವಿಚಾರಿಸಿದಾಗ ಅವರು ನಗುತ್ತಾ ಹೇಳಿದರು.

“ಸರ್… ನಾನು ಈ ಮದುವೆಯ ಅಡುಗೆ ಕಾಂಟ್ರಾಕ್ಟರ್. ಹುಡುಗಿಯ ತಂದೆ ನನ್ನ ಆತ್ಮೀಯ ಸ್ನೇಹಿತ. ಹುಡುಗಿಯೂ ಚಿಕ್ಕಂದಿನಿಂದಲೇ ನನ್ನನ್ನು ‘ಮಾವ… ಮಾವ…’ ಎಂದೇ ಕರೆಯುತ್ತಾಳೆ. ಇಂದು ಅವರೆಲ್ಲರೂ ಮದುವೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರತರಾಗಿರುವುದರಿಂದ, ನಾನು ಮನೆಯಲ್ಲಿ ಸೋದರಮಾವನಂತೆ ಜವಾಬ್ದಾರಿ ತೆಗೆದುಕೊಂಡು ಎಲ್ಲರನ್ನೂ ವಿಚಾರಿಸಿಕೊಳ್ಳುತ್ತಿದ್ದೇನೆ.”

ಆ ಮಾತು ಕೇಳಿದ ಕ್ಷಣಕ್ಕೆ ನನ್ನ ಕಣ್ಣಲ್ಲಿ ನೀರು ತುಂಬಿತುಇಂದಿನ ಯಾಂತ್ರಿಕ ಬದುಕಿನ ಮಧ್ಯೆಯೂ ಸಂಬಂಧವನ್ನು ಕೇವಲ ರಕ್ತದಿಂದಲ್ಲ, ಹೃದಯದಿಂದ ಬದುಕುವ ಇಂತಹ ಜನರು ಇನ್ನೂ ಇದ್ದಾರೆ ಎಂಬ ಅರಿವು ಮನಸ್ಸನ್ನು ಸ್ಪರ್ಶಿಸಿತು.

ನಮ್ಮ ಸಂಸ್ಕೃತಿಯಲ್ಲಿ ಸೋದರಮಾವನಿಗೆ ಇಷ್ಟೊಂದು ಮಹತ್ವ ಏಕೆ?

ಈ ಒಂದು ಸಣ್ಣ ಘಟನೆ ನನ್ನನ್ನು ಬಹಳ ಆಳವಾದ ಚಿಂತನೆಗೆ ಕರೆದೊಯ್ದಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ