ಶೀಲಾ ಒಬ್ಬ ಹೌಸ್‌ ವೈಫ್‌. ಅವಳ ಸಮಸ್ಯೆ ಏನೆಂದರೆ, ಅವಳಿಗೆಂದೂ ಬಿಡುವೇ ಸಿಗುವುದಿಲ್ಲ. ಮನೆಗೆಲಸದವಳು ಸರಿಯಾಗಿ 9 ಗಂಟೆಗೆ ಬರುತ್ತಾಳೆ. ಆದರೆ ಅಲ್ಲಿಯವರೆಗೆ ಆಕೆ ಮನೆ ಸ್ವಚ್ಛಗೊಳಿಸಿ ಪಾತ್ರೆಗಳನ್ನು ಕೆಲಸದವಳಿಗೆ ಕೊಡಲು ಕೂಡ ಆಗುವುದಿಲ್ಲ. ಆದರೆ ಕೆಲಸದವಳು ಬಹಳ ನಿರಾಳವಾಗಿ ಎಲ್ಲ ಕೆಲಸಗಳನ್ನು ಮುಗಿಸಿ ಹೊರಟು ಹೋಗುತ್ತಿದ್ದಳು. ಮನೆಗೆಲಸಗಳಲ್ಲಿ ತೊಡಗಿಕೊಂಡಿರುವ ಶೀಲಾಗೆ ತನ್ನ ಇಡೀ ದಿನ ಹೇಗೆ ಕಳೆದುಹೋಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಶೀಲಾಳ ಹಾಗೆ ಬಹಳಷ್ಟು ಮಹಿಳೆಯರಿಗೆ ಮನೆಯಲ್ಲಿದ್ದುಕೊಂಡು ಮನೆಗೆಲಸಗಳನ್ನು ಮುಗಿಸುವುದು ಕಷ್ಟವಲ್ಲ ಎನಿಸುತ್ತದೆ. ಆದರೆ ಅವರೆಲ್ಲರಿಗೂ ಬೇಕಾಗುವುದು ಒಂದಿಷ್ಟು ವರ್ಕ್‌ ಮ್ಯಾನೇಜ್‌ ಮೆಂಟ್‌.

ಮೊಬೈಲ್ ನಲ್ಲಿ ಬಿಝಿ ಆಗಿರಬೇಡಿ

ಶೀಲಾ ತನ್ನ ಪತಿಗೆ ಈ ಕುರಿತಂತೆ ಹೇಳಿದಾಗ ಅವರು ಅವಳಿಗೆ ಮುಂಜಾನೆ ಹೊತ್ತಿನಲ್ಲಿ ಮೊಬೈಲ್ ‌ನಲ್ಲಿ ನಿನ್ನ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ ಎಂದರು. ಶೀಲಾಳಿಗೆ ಗಂಡನ ಮಾತು ಸರಿ ಎನಿಸಿತು. ಅಂದಹಾಗೆ, ಶೀಲಾ ಮುಂಜಾನೆ ಹೊತ್ತಿನಲ್ಲಿ  ಫೇಸ್‌ ಬುಕ್‌, ವಾಟ್ಸ್ ಆ್ಯಪ್‌ ಗಳಲ್ಲಿ ಸಂದೇಶಗಳನ್ನು ನೋಡುತ್ತ ಅವುಗಳಿಗೆ ಲೈಕ್ಸ್ ಕೊಡುವುದು, ಉತ್ತರ ಕೊಡುವುದರಲ್ಲಿ ಅದೆಷ್ಟು ಮಗ್ನಳಾಗುತ್ತಾಳೆಂದರೆ ಅವಳಿಗೆ ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ.

ಟೈಮ್ ಟೇಬಲ್ ಹಾಕಿಕೊಳ್ಳಿ

ಶ್ರೀಲತಾಳ ಮನೆಗೆ ಕೆಲಸದವಳು ಬರುವುದಿಲ್ಲ. ಆದರೂ ಅವಳ ಕೆಲಸ 12 ಗಂಟೆ ಹೊತ್ತಿಗೆ ಮುಗಿದು ಹೋಗುತ್ತದೆ. ಏಕೆಂದರೆ ಆಕೆ ಪ್ರತಿಯೊಂದು ಕೆಲಸಕ್ಕೂ ಸಮಯ ನಿಗದಿ ಮಾಡಿದ್ದಾಳೆ. ಅಂದರೆ ಯಾವ ಕೆಲಸ ಎಷ್ಟು ನಿಮಿಷದಲ್ಲಿ ಮುಗಿಸಬೇಕು ಎನ್ನುವುದು ಅವಳಿಗೆ ಗೊತ್ತಿರುತ್ತದೆ. ಟೈಮ್ ಟೇಬಲ್ ಪ್ರಕಾರ ಮಾಡಿದರೆ ಕೆಲಸ ಸಕಾಲಕ್ಕೆ ಮುಗಿಯುತ್ತದೆ. ಅದರಿಂದಾಗಿ ನೀವು ನಿಮಗಾಗಿ ಸಾಕಷ್ಟು ಸಮಯ ಮೀಸಲಿಟ್ಟುಕೊಳ್ಳಲು ಅನುಕೂಲವಾಗುತ್ತದೆ. ಬಿಡುವಿನ ವೇಳೆಯಲ್ಲಿ ನೀವು ಸಣ್ಣಪುಟ್ಟ ವ್ಯಾಪಾರ, ಹವ್ಯಾಸ ಶುರು ಮಾಡಿಕೊಳ್ಳಬಹುದು.

ಮುಂಜಾನೆ ಬೇಗ ಏಳಿ

ಬಹಳಷ್ಟು ಗೃಹಿಣಿಯರು ಮುಂಜಾನೆ ತಡವಾಗಿ ಏಳುತ್ತಾರೆ. ಮಕ್ಕಳನ್ನು ತರಾತುರಿಯಲ್ಲಿ ಸಿದ್ಧಗೊಳಿಸಿ ಶಾಲೆಗೆ ಕಳಿಸುತ್ತಾರೆ. ಇನ್ನೊಂದು ಸ್ವಲ್ಪ ಹೊತ್ತು ಮಲಗೋಣ ಎಂದು ಮಲಗುತ್ತಾರೆ. ಗಾಢ ನಿದ್ರೆ ಬಂದು ಏಳುವುದು ಮಧ್ಯಾಹ್ನವೇ ಆಗಿಬಿಡುತ್ತದೆ. ಹೀಗಾಗಿ ಇಡೀ ದಿನ ಕೆಲಸಗಳು ಮುಗಿಯುವುದೇ ಇಲ್ಲ. ಮುಂಜಾನೆ ಒಮ್ಮೆ ಎದ್ದ ಬಳಿಕ ಮತ್ತೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಬೇಡಿ.

ಹೆಚ್ಚಿನ ಕೆಲಸಕ್ಕೆ ಹೆಚ್ಚುವರಿ ಸಮಯ

SM376530

ದೈನಂದಿನ ಕೆಲಸಗಳ ಹೊರತಾಗಿ ಕೆಲವು ಕೆಲಸಗಳು ಗೃಹಿಣಿಯರಿಗೆ ಸವಾಲಿನಿಂದ ಕೂಡಿರುತ್ತವೆ. ಅನಿತಾ ದಿನ ಬೇಗನೇ ಎದ್ದು ತನ್ನೆಲ್ಲ ಕೆಲಸಗಳನ್ನು ಮುಗಿಸುತ್ತಾಳೆ. ಮಕ್ಕಳು ಮನೆಗೆ ಬರುವ ಮೊದಲೇ ಉಳಿದ ಹೆಚ್ಚುವರಿ ಸಮಯದಲ್ಲಿ ಆಕೆ ವಾರ್ಡ್‌ ರೋಬ್‌ ಸ್ವಚ್ಛತೆ, ಬಟ್ಟೆಗಳ ಇಸ್ತ್ರಿ, ಲೆಕ್ಕಪತ್ರ ಗಮನಿಸುತ್ತಾಳೆ. ಹೀಗಾಗಿ ಅವಳ ಮನೆ ಅಸ್ತವ್ಯಸ್ತವಾಗಿ ಕಂಡುಬರುವುದಿಲ್ಲ.

ಕೆಲಸ ವಹಿಸಿ ಕೊಡಿ

ಮನೆ ಕೇವಲ ನಿಮ್ಮದೊಬ್ಬರದೇ ಅಲ್ಲ. ಎಲ್ಲ ಕೆಲಸಗಳನ್ನು ನೀವಷ್ಟೇ ಮಾಡಬೇಕೆಂದಿಲ್ಲ. ಗಂಡ ಹಾಗೂ ಮಕ್ಕಳಿಗೆ ನೀಗುವಂತಹ ಕೆಲಸಗಳನ್ನು ಅವರಿಂದಲೇ ಮಾಡಿಸಿ. ಅವರಿಗೂ ಅಷ್ಟಿಷ್ಟು ಜವಾಬ್ದಾರಿ ಬರುತ್ತದೆ. ರಜೆಯ ದಿನದಂದೇ ಗೃಹಿಣಿಗೆ ಹೆಚ್ಚಿನ ಕೆಲಸದ ಒತ್ತಡ ಇರುತ್ತದೆ. ಆಗ ಗಂಡಮಕ್ಕಳ ನೆರವು ಪಡೆದರೆ ದಣಿವಿಲ್ಲದೆ ಎಲ್ಲ ಕೆಲಸಗಳನ್ನು ಮುಗಿಸಬಹುದು. ನೀವು ಕುಟುಂಬ ಸಮೇತ ರಜೆಯ ಆನಂದ ಪಡೆಯಲು ಸಾಧ್ಯವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ