ಉತ್ತರ ಪ್ರದೇಶದ ಪ್ರಯಾಗ್‌ರಾಜ್-ಕೌಶಂಬಿ ಗಡಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ.

ಕಾರ್ಖಾನೆ ಬಳಿಯ ಮನೆಗಳಲ್ಲಿ ವಾಸಿಸುತ್ತಿದ್ದ 8 ಮಕ್ಕಳು ಸೇರಿದಂತೆ ಹನ್ನೊಂದು ಮಂದಿ ಸುಟ್ಟು ಕರಕಲಾಗಿದ್ದು, 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ಪ್ರಿಯಾಂಜಲಿ (5), ಪ್ರವೀಣ್​ ಸಿಂಗ್​ (13), ಜಾನ್ವಿ (12), ಆದಿತ್ಯ (12), ಆದಿತ್ಯಾ (8), ರವಿ (8), ಅಂಜು (32), ಗ್ಯಾನ್​ ಸಿಂಗ್​ (40), ವಿಕ್ರಮ್​ ಸರೋಜ್​ (35), ಅನ್ಷ್​ (6), ನಾನ (4) ಎಂದು ಗುರುತಿಸಲಾಗಿದೆ.  ಸ್ಫೋಟದ ತೀವ್ರತೆಯಿಂದ  ಇಡೀ ಕಾರ್ಖಾನೆ ನೆಲಸಮವಾಗಿದೆ. 100 ಮೀಟರ್ ವ್ಯಾಪ್ತಿಯೊಳಗಿನ ಎಂಟು ಮನೆಗಳು ಹಾನಿಗೊಳಗಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಫೋಟದ ಪರಿಣಾಮ ಸುಮಾರು 500 ಮೀಟರ್ ದೂರದಲ್ಲಿರುವ ಪ್ರಯಾಗ್‌ರಾಜ್-ಕಾನ್ಪುರ್ ರೈಲ್ವೆ ಮಾರ್ಗದಲ್ಲಿ OHE (ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್) ಮಾರ್ಗವು ಅಸ್ತವ್ಯಸ್ತಗೊಂಡಿದೆ. ಇದು ಕಾನ್ಪುರದಿಂದ ಪ್ರಯಾಗ್‌ರಾಜ್‌ಗೆ ಸುಮಾರು ಒಂದೂವರೆ ಗಂಟೆಗಳ ಕಾಲ ರೈಲು ಕಾರ್ಯಾಚರಣೆಯನ್ನು ಅಡ್ಡಿಪಡಿಸಿತ್ತು. ಎಂಜಿನಿಯರ್‌ಗಳು ಮಾರ್ಗವನ್ನು ದುರಸ್ತಿಪಡಿಸಿ ಪುನಃಸ್ಥಾಪಿಸಿದರು.

ಸ್ಫೋಟದ ಶಬ್ದವು 2 ಕಿಲೋಮೀಟರ್ ದೂರದವರೆಗೆ ಕೇಳಿಬಂತು. ಸ್ವಲ್ಪ ಸಮಯದಲ್ಲೇ ದಡ್ಡ ಹೊಗೆ ಪ್ರದೇಶವನ್ನು ಆವರಿಸಿತು. ಗ್ರಾಮಸ್ಥರು ಸುಟ್ಟ ಗಾಯಾಳುಗಳನ್ನು ಹಾಸಿಗೆಗಳ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಕೌಶಾಂಬಿ ಜಿಲ್ಲೆಯ ಮೊಹಮ್ಮದ್‌ಪುರ ಗ್ರಾಮದಲ್ಲಿ ಬೆಳಗ್ಗೆ 11:30 ಕ್ಕೆ ಅವಘಡ ಸಂಭವಿಸಿದೆ. ಈ ಗ್ರಾಮ ಪ್ರಯಾಗ್‌ರಾಜ್ ಗಡಿಯಲ್ಲಿದ್ದು, ಮನುರಿಯಲ್ಲಿರುವ ವಾಯುಪಡೆಯ ನಿಲ್ದಾಣವು ಇಲ್ಲಿಂದ 2 ಕಿ.ಮೀ ದೂರದಲ್ಲಿದೆ. ಪೊಲೀಸ್, ವಾಯುಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ 200 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, 10 ಬುಲ್ಡೋಜರ್‌ಗಳು ಅವಶೇಷಗಳನ್ನು ಹೊರತೆಗೆದಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ