ಕುಗ್ಗುತ್ತಿರುವ ಅಂತರ ಹೆಚ್ಚುತ್ತಿರುವ ಅತೃಪ್ತಿ

ವಿಶ್ವದಲ್ಲಿ ಈಗ ಕುಟುಂಬಗಳು ಹೊಸ ಸವಾಲುಗಳೊಂದಿಗೆ ಸೆಣಸಾಡುತ್ತಿವೆ. ಮೊದಲು ಅತ್ತೆ ಸೊಸೆ, ಹಿರಿ ಸೊಸೆ, ಕಿರಿ ಸೊಸೆಯರ ನಡುವೆ ಜಗಳಗಳು ಆಗುತ್ತಿದ್ದವು. ಈಗ ಗಂಡ ಹೆಂಡತಿಯರಿಗಿಂತ ತಂದೆ ಮಗಳು ಹಾಗೂ ತಾಯಿ ಮಗಳ ನಡುವೆ ಜಗಳಗಳು ಹೆಚ್ಚಾಗುತ್ತಿವೆ. ತಮ್ಮನ್ನು ತಾವು ಸಮರ್ಥರೆಂದು ಭಾವಿಸುವ ಪತ್ನಿಯರು ಈಗ ಗಂಡಂದಿರ ಆದೇಶ ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ. ಮನೆಯಿಂದ ಹೊರಗೆ ತಮ್ಮದೇ ಆದ ಪ್ರಪಂಚ ಕಟ್ಟಿಕೊಳ್ಳುವ ತವಕದಲ್ಲಿದ್ದಾರೆ.

ಮನೆಯಲ್ಲಿ ವಿವಾದಗಳು ಹೆಚ್ಚಲು ಕೇವಲ ಮೂಲ ಮಾಹಿತಿ ಲಭ್ಯತೆಯ ಕೊರತೆಯ ಜೊತೆಗೆ ಆಳವಾದ ಯೋಚನೆಯ ಅಭಾವ ಕೂಡ ಕಾರಣವಾಗಿದೆ. ಮೂಲ ಮಾಹಿತಿ ನನಗೆ ಇಂತಿಂಥ ಹಕ್ಕು ಇದೆ ಎನ್ನುವುದನ್ನು ತಿಳಿಸಿಕೊಡುತ್ತದೆ. ಜೀವನ ನಡೆಸಲು ಸ್ವಯಂ ನಿರ್ಧಾರ ಕೈಗೊಳ್ಳುವ ಹಕ್ಕು ಏನೋ ಇದೆ. ಆದರೆ ಅದು ಯಾವುದೇ ತಪ್ಪು ನಿರ್ಧಾರ ಹೇಗೆ ತೊಂದರೆಗೀಡು ಮಾಡುತ್ತದೆ ಎನ್ನುವುದನ್ನು ಹೇಳುವುದಿಲ್ಲ.

ಜನರು ಈಗ ಹಕ್ಕುಗಳ ಬಗೆಗೆ ತಿಳಿದುಕೊಳ್ಳಲು ಶುರು ಮಾಡಿದ್ದಾರೆ. ಆದರೆ ಈ ಹಕ್ಕುಗಳ ಕಾರಣದಿಂದ ಬೇರೆಯವರ ಜೀವನದಲ್ಲಿ ಹಸ್ತಕ್ಷೇಪ, ಉಂಟಾದರೆ ಏನು ಮಾಡಬೇಕೆಂದು ಈ ಮೀಡಿಯಾಗಳು, ಮೊಬೈಲ್‌ಗಳು ಹೇಳುವುದಿಲ್ಲ.

ತಮ್ಮ ನಿರ್ಧಾರಗಳ ಪ್ರಭಾವ ಬೇರೆಯವರ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವುದರ ಬಗ್ಗೆ ಈ ಮೀಡಿಯಾಗಳು ಹೇಳುವುದಿಲ್ಲ. ಏಕೆಂದರೆ ಅದು ಫಾಸ್ಟ್ ಫುಡ್‌ನ ಹಾಗೆ ಸ್ವಾದಿಷ್ಟ ಮತ್ತು ಆಕರ್ಷಕ ಎನ್ನುವುದರ ಬಗ್ಗೆ ಮಾತ್ರ ಮಾತನಾಡುತ್ತದೆ. ಇಂದಿನ ಮೀಡಿಯಾ ನಿಮಗೆ ನಿಮ್ಮ ತಪ್ಪುಗಳ ಬಗ್ಗೆ ಇಣುಕಿ ಎಂದು ಹೇಳುವುದಿಲ್ಲ. ಹಾಗೇನಾದರೂ ಹೇಳಿದರೆ ನೀವು ಬೇರೊಂದು ಚಾನೆಲ್‌ಗೆ ಹೋಗಿಬಿಡುತ್ತೀರಿ.

ಇಂದು ನಿಮಗೆ ಔಷಧಿಯ ರೂಪದಲ್ಲಿ ಕ್ಯಾಪ್ಸೂಲ್‌ಕೊಡುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಏರ್‌ಕಂಡೀಶನ್ಡ್ ಯಾವುದೇ ಹಾನಿಯನ್ನುಂಟು ಮಾಡದ, ಹಲವು ನಿಮಿಷ, ಹಲವು ಗಂಟೆಗಳಲ್ಲಿಯೇ ನಿಮ್ಮನ್ನು ಸರಿಪಡಿಸುವ ಜಿಮ್ ಗಳು ಬೇಕು.

ಈ ಕ್ಯಾಪ್ಸೂಲ್‌, ಈ ಟಿಪ್ಸ್, ಈ ಫಾಸ್ಟ್ ಟ್ರೀಟ್‌ಮೆಂಟ್‌ಗಳು ಜೀವನ ನಡೆಸಲು ದೊರೆಯುವುದಿಲ್ಲ. ಗಂಡ ಹೆಂಡತಿ ಪರಸ್ಪರರ ವಿರುದ್ಧ ಮುನಿಸಿಕೊಳ್ಳುತ್ತಾರೆ. ತಂದೆ ತಾಯಿಗಳ ವಿರುದ್ಧ ರೇಗುತ್ತಾರೆ. ಪ್ರತಿಯೊಬ್ಬರು ರೆಡಿಮೇಡ್‌ ಬಯಸುತ್ತಾರೆ. ಯಾವುದೇ ಸಮಸ್ಯೆಯಿಲ್ಲದೆ, ಆಳವಾಗಿ ಯೋಚಿಸದೆಯೇ ಪರಿಹಾರ ಬಯಸುತ್ತಾರೆ.

ಪರಸ್ಪರ ಹೇಗೆ ಪೂರಕ ಆಗಬೇಕು ಎಂಬ ಕಲೆ ಗೊತ್ತಿಲ್ಲದ ಕಾರಣದಿಂದ ಅತ್ತೆ ಸೊಸೆ ಅಥವಾ ಸೊಸೆಯಂದಿರ ಮಧ್ಯೆ ಜಗಳಗಳು ಆಗುತ್ತವೆ. ತೆಗೆದುಕೊಳ್ಳಬೇಕು ಎಂದರೆ ಕೊಡಲೂಬೇಕಾಗುತ್ತದೆ ಎಂಬ ಕಲೆಯನ್ನು ಯಾರು ಯಾರಿಗೂ ಕಲಿಸುತ್ತಿಲ್ಲ. ಆಫೀಸ್‌ನಲ್ಲಿ ಕೆಲಸ ಮಾಡಿದರೆ ಅದು ಮನೆ ಖರ್ಚಿಗೆ ಆಗುತ್ತದೆ. ಇನ್ನು ತಾನು ಕೇಳಿದ್ದನ್ನು ಮನೆಯವರು ಕೊಡಬೇಕು ಎಂದು ಅವರು ಅಪೇಕ್ಷಿಸುತ್ತಾರೆ.

ತಾನು ಗಂಡನ ಜೊತೆ ಸಿಂಗರಿಸಿಕೊಂಡು ಹೋದರೆ, ಅವನಿಗೆ ಸಾಂಗತ್ಯ ಕೊಟ್ಟರೆ ಇನ್ನು ಅವನು ತಾನು ಕೇಳಿದ್ದನ್ನು ಕೊಡಿಸಬೇಕು ಎಂದು ಹೆಂಡತಿ ಯೋಚಿಸುತ್ತಾಳೆ. ಮಕ್ಕಳು ಯೋಚಿಸುವುದೆಂದರೆ, ತಾವು ಹುಟ್ಟಿ ತಂದೆ ತಾಯಿಗೆ ಪರಿಪೂರ್ಣತೆ ಕೊಟ್ಟಿದ್ದೇವೆ, ಇನ್ನು ಮುಂದೆ ತಂದೆತಾಯಿ ತಾವು ಕೇಳಿದ್ದನ್ನು ಕೊಡುತ್ತಾ ಇರಬೇಕು. ಅಂದರೆ ತಂದೆ ತಾಯಿಯನ್ನು ಅವರು ಎಟಿಎಂ ಎಂದು ಭಾವಿಸಿದ್ದಾರೆ.

ಆಧುನಿಕ ಸುಖ ಸೌಲಭ್ಯಗಳು ಎಷ್ಟು ದುಬಾರಿ ಹಾಗೂ ಎಷ್ಟೊಂದು ಒತ್ತಡ ಕೊಡುವಂಥವು ಎನ್ನುವುದನ್ನು ಜನರು ಮರೆತುಬಿಡುತ್ತಾರೆ. ಲಕ್ಷಾಂತರ ವರ್ಷಗಳಿಂದ ವಿಕಸಿತಗೊಂಡಿರುವ ಮನುಷ್ಯನ ಸ್ವಭಾವವನ್ನು ಒಂದೇ ಪೀಳಿಗೆಯವರು ಅಷ್ಟು ಸುಲಭವಾಗಿ ಬದಲಿಸಲು ಆಗದು. ಅದು ಬಹಳಷ್ಟು ಜನರ ಸಲಹೆ, ಜ್ಞಾನ ಉದಾಹರಣೆಗಳ ಮೇಲೆ ನಿಂತಿದೆ. ಅದು ನಿಮಗೆ ಕೇವಲ ಓದುವುದರಿಂದ ಸಿಗುತ್ತದೆಯೇ ಹೊರತು, ಕೌನ್ಸಿಲರ್‌ ಅಥವಾ ಪ್ರವಚನದ ಮುಖಾಂತರ ಲಭಿಸುವುದಿಲ್ಲ.

ಈಗಲೂ ಲೇಖಕರು ಬರೆಯುವುದು ಭ್ರಮೆ ಹುಟ್ಟಿಸಲು ಅಥವಾ ರೋಮಾಂಚನಗೊಳಿಸಲು ಅಲ್ಲ. ಅವರು ಉದಾಹರಣೆಗಳನ್ನು ವಿಶ್ಲೇಷಿಸುತ್ತಾರೆ. ವಾಟ್ಸ್ಆ್ಯಪ್‌ಮುಖಾಂತರ ಹಂಚುವ ಜ್ಞಾನದಲ್ಲಿ ಕೇವಲ ಒಳ್ಳೆಯ ಶಬ್ದಗಳಿರುತ್ತವೆ ಹೊರತು ಜನರನ್ನು ಸುಧಾರಿಸುವ ಔಷಧಿಗಳಂತೆ ಅವು ಕೆಲಸ ಮಾಡುವುದಿಲ್ಲ.

ಕೌಟುಂಬಿಕ ವಿವಾದ, ಪ್ರೇಮ ವಿವಾಹಗಳು ವಿಚ್ಛೇದನಕ್ಕೆ ತಿರುಗುವುದು, ಮೇಲಿಂದ ಮೇಲೆ ಬ್ರೇಕ್‌ಅಪ್‌, ಮಕ್ಕಳ ದುರ್ವರ್ತನೆ, ಮುನಿಸಿಕೊಂಡ ಮಗ ಮಗಳು ಇವು ಎಂತಹ ಒಂದು ಅಂಧಃಕಾರದ ಕೊಡುಗೆ ಎಂದರೆ, ಅದರಲ್ಲಿ ನಮ್ಮನ್ನು ನಾವು ನೋಡುತ್ತಿದ್ದೇವೆ. ನಿರರ್ಥಕ ಚಾಟಿಂಗ್‌ನಿಂದ, ವೀಕ್ಷಣೆಯಿಂದ ನಾವು ಮೊಬೈಲ್‌, ಟಿ.ವಿಯನ್ನು ನಮ್ಮ ಏಕೈಕ ಮಾರ್ಗದರ್ಶಕವೆಂದು ಬಯಸುತ್ತಿದ್ದೇವೆಯೇ?

ಹಳೆಯ ನೈತಿಕತೆಗಿಂತ ಈಗಿನದು ಉತ್ತಮ

1956 ಹಾಗೂ 2005ರಲ್ಲಿ ಹಿಂದೂ ಕಾನೂನಿನಲ್ಲಿ ತಿದ್ದುಪಡಿ ಆದಾಗಿನಿಂದ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುತ್ತಿದೆ. ಆಗಿನಿಂದ ಸೋದರ ಸೋದರಿಯರ ನಡುವಿನ ಜಗಳಗಳು ಹೆಚ್ಚಿವೆ. 1956ರಲ್ಲಿ ವಿಶೇಷ ಬದಲಾವಣೆಯೇನೂ ಆಗಿರಲಿಲ್ಲ. ಆದರೆ ಆಗಲೂ ಅವಿಭಕ್ತ ಕುಟುಂಬದಲ್ಲಿ ಒಬ್ಬರ ಪಾಲಿನ ಆಸ್ತಿಯಲ್ಲಿ ಮಕ್ಕಳಿಗೆ ಸಮಾನ ಹಂಚಿಕೆ ಆಗಬೇಕೆಂಬ ಕಾನೂನು ಹಿಂದಿತ್ತು. 2005ರಲ್ಲಿ ಅವಿಭಕ್ತ ಕುಟುಂಬದಲ್ಲಿ ಮಗ ಮಗಳಿಗೆ ಸಮಾನ ಹಕ್ಕು ಕಾನೂನು ಘೋಷಣೆಯಾಯಿತು.

ಸೋದರ ಸೋದರಿಯರ ಪ್ರೀತಿಯ ಸಂಕೇತ ಹಿಂದೂ ಧರ್ಮದ ಪರಂಪರೆಗೆ ಇದರಿಂದ ಧಕ್ಕೆ ಆಯಿತೆಂದು ಅನೇಕರು ಹೇಳುತ್ತಾರೆ. ಆದರೆ ಪುರಾಣದ ಕಥೆಗಳಲ್ಲಿ ಸೋದರ ಸೋದರಿಯರ ಜಗಳದ ಅಂಶ ಉಲ್ಲೇಖ ಆಗಿರುವುದನ್ನು ಅವರು ಮರೆಯುತ್ತಾರೆ.

ಮಹಾಭಾರತದ ಮುಖ್ಯ ಪಾತ್ರಗಳಲ್ಲಿ ಒಂದಾಗಿರುವ ಭೀಮನ ಮದುವೆ ಹಿಡಿಂಬೆಯ ಜೊತೆ ಆಗಿತ್ತು. ಈ ಮದುವೆ ಆದದ್ದು ಯಾವ ಸಂದರ್ಭದಲ್ಲಿ ಅಂದರೆ ಭೀಮ ಹಿಡಿಂಬೆಯ ಸೋದರರನ್ನು ಹತ್ಯೆಗೈದಾಗ, ಅಸುರ ರಾಜ ತನ್ನ ಅಧೀನ ರಾಜ್ಯದಲ್ಲಿ ದಾಳಿಯಿಟ್ಟಿದ್ದ ಪಾಂಡವರನ್ನು ಮುಗಿಸಿ ಹಾಕಲು ಸೋದರಿ ಹಿಡಿಂಬೆಯನ್ನು ಕಳಿಸಿಕೊಟ್ಟಿದ್ದ. ಆದರೆ ಅವಳು ಭೀಮನ ಮೇಲೆ ಆಸಕ್ತಳಾದಳು. ಅವಳ ಆಗ್ರಹದ ಮೇರೆಗೆ ಭೀಮ ಅವಳ ಸೋದರನನ್ನು ಮುಗಿಸಿಬಿಟ್ಟ.

ಆ ಬಳಿಕ ಹಿಡಿಂಬೆ ಭೀಮನನ್ನು ಮದುವೆಯಾದಳು. ಈಕೆಗೆ ಹುಟ್ಟಿದವನೇ ಘಟೋತ್ಕಚ. ಅವನು ಮಹಾಭಾರತದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ. ಕಥೆ ಬರೆದ ಲೇಖಕನಿಂದ ಈ ಸಂಗತಿಯ ಬಗ್ಗೆ ಎಲ್ಲೂ ಟೀಕೆಯ ಮಾತು ಕಂಡುಬರುವುದಿಲ್ಲ. ಇಲ್ಲಿ ಆಸಕ್ತಿಯೆನ್ನುವ ವಿಷಯ ಹೇಗಿದೆ ಎಂದರೆ, ಯಾರಿಂದ ಯಾರನ್ನು ಬೇಕಾದರೂ ಮುಗಿಸಿಬಿಡಬಹುದು. ನಮ್ಮ ಪಂಡಿತರು, ಪುರೋಹಿತರು ಹೊಗಳಿ ಹಾಡುವ ಇಂತಹ ಧರ್ಮಗ್ರಂಥಗಳಲ್ಲಿ ಇಂತಹ ಅದೆಷ್ಟೋ ಉದಾಹರಣೆಗಳು ತುಂಬಿತುಳುಕುತ್ತವೆ. ವಾಸ್ತವದಲ್ಲಿ ಇಂದಿನ ನೈತಿಕತೆಯು ಹಳೆಯ ನೈತಿಕತೆಗಿಂತ ಅದೆಷ್ಟೋ ಪಟ್ಟು ಒಳ್ಳೆಯದು. ಒಂದು ಕುಟುಂಬದಲ್ಲಿ ಕೇವಲ ಅಣ್ಣ ತಂಗಿ ಇಬ್ಬರೇ ಇರುವುದು ಸಾಮಾನ್ಯ ಎಂಬಂತಾಗಿದೆ. ಅವರು ಪರಸ್ಪರರಿಗಾಗಿ ಜೀವ ಕೊಡಲು ಕೂಡ ಸಿದ್ಧ ಎಂಬಂತಿದ್ದಾರೆ.

ರಾಹುಲ್‌ಗಾಂಧಿ ಮದುವೆಯಾಗದೆಯೂ ಸಮತೋಲಿತ ಜೀವನ ನಡೆಸುತ್ತಿದ್ದಾರೆ. ಹಾಗೆಂದೇ ಅವರಿಗೆ ಸೋದರಿ ಪ್ರಿಯಾಂಕಾ ಹಾಗೂ ಅವರ ಮಕ್ಕಳ ಜೊತೆ ಅನ್ಯೋನ್ಯತೆಯ ಜೀವನ ಸಾಧ್ಯವಾಗಿದೆ. 2005ರ ಕಾನೂನನ್ನು ಸೋನಿಯಾ ಗಾಂಧಿಯವರ ಹೇಳಿಕೆಯ ಮೇರೆಗೆ ತರಲಾಗಿತ್ತು. ಅಂದಹಾಗೆ ಕಾಂಗ್ರೆಸ್‌ ಸಾಮಾನ್ಯವಾಗಿ ಹಿಂದೂ ಕಂದಾಚಾರಿಗಳಿಗೆ ಹೆದರಿ ಅಂಗೀಕರಿಸಲಾಗಲಿಲ್ಲ ಎಂದು ಹೇಳಲಾಗುತ್ತದೆ.

ಆದರೆ ವಾಸ್ತವ ಸಂಗತಿ ಏನೆಂದರೆ ಭಾರತದಲ್ಲಿ ಸಮಾಜ ಸುಧಾರಣೆ ಮಾಡಿದ್ದು ವಿದೇಶೀಯರೇ ಹೊರತು ಧರ್ಮದ ಡಂಗೂರ ಬಾರಿಸುವವರು ಅಲ್ಲ.

ಶೋಷಣೆಯ ಮತ್ತೊಂದು ಹೆಸರೇ ಧರ್ಮ

ಮಹಿಳೆಯರಿಗೆ ಬಾಲ್ಯದಿಂದಲೇ ಕಲಿಸಲಾಗುವ ಒಂದು ವಿಷಯವೆಂದರೆ, ದೇವರ ಪೂಜೆಯಿಂದ ಸಂಪೂರ್ಣವಾಗಿ ನಮ್ಮ ರಕ್ಷಣೆ ಸಾಧ್ಯವಾಗುತ್ತದೆ. ಬಹುತೇಕ ಎಲ್ಲ ಧರ್ಮಗಳ ಪೂಜಾರಿ ಪುರೋಹಿತರು, ಪಾದ್ರಿಗಳು ಹಾಗೂ ಮುಲ್ಲಾಗಳ ಮಾತನ್ನು ನಮ್ಮ ಮಹಿಳೆಯರು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ.

ಕೇರಳದ ಕೆಥೋಲಿಕ್‌ ಬಿಷಪ್‌ ಕೌನ್ಸಿಲ್‌ ಇತ್ತೀಚೆಗಷ್ಟೇ ಒಂದು ಗೈಡ್‌ಲೈನ್‌ನ್ನು ಜಾರಿಗೊಳಿಸಿ ಹೇಳಿತು. ಮಕ್ಕಳು ಹಾಗೂ ಮಕ್ಕಳ ಮೇಲೆ ಚರ್ಚ್‌ನ ಉದ್ಯೋಗಿಗಳು ಹಾಗೂ ಪಾದ್ರಿಗಳ ಲೈಂಗಿಕ ದೌರ್ಜನ್ಯ ಅಥವಾ ಪೋಪ್‌ನ್ನು ತಡೆಯಲು ಏನು ಕ್ರಮ ಕೈಗೊಳ್ಳಬೇಕು ಹಾಗೂ ದೂರುಗಳನ್ನು ಹೇಗೆ ಬಗೆಹರಿಸಬೇಕು ಎಂದು ಕೇಳಿದ್ದಾರೆ. ಅಮೆರಿಕ ಹಾಗೂ ಯೂರೋಪ್‌ನಲ್ಲಿ ಕೆಥೋಲಿಕ್‌ ಚರ್ಚ್‌ಗಳ ವಿರುದ್ಧ ದೂರು ಕೊಟ್ಟವರ ಬಾಯಿ ಮುಚ್ಚಿಸಲು ಲಕ್ಷ ಕೋಟಿಗಳಷ್ಟು ಮೊತ್ತವನ್ನು ಖರ್ಚು ಮಾಡಲಾಗುತ್ತದೆ.

ಭಾರತದಲ್ಲಿ ಆಸಾರಾಮ್ ಮತ್ತು  ರಾಮ್ ರಹೀಮ್ ಮೇಲೆ ಅತ್ಯಂತ ಕಷ್ಟಪಟ್ಟು ಆರೋಪ ಸಾಬೀತುಪಡಿಸಲಾಯಿತು. ಆದರೆ ಪ್ರತಿಯೊಂದು ಮಂದಿರದಲ್ಲೂ ಒಂದಿಲ್ಲೊಂದು ಘಟನೆ ನಡೆಯುತ್ತಲೇ ಇರುತ್ತದೆ. ಸ್ವಾಮಿ ಅಥವಾ ಸಾಧು ಆಗುವುದರಿಂದ ಅವನ ಲೈಂಗಿಕ ಅಭಿಲಾಷೆಗಳು ಕೊನೆಗೊಳ್ಳುತ್ತವೆ ಎಂಬುದು ಸುಳ್ಳು ಒಂದು ವೇಳೆ ಮಹಿಳೆಯರಿಗೆ ಈ ಸ್ಥಳಗಳಿಗೆ ಹೋಗಲು ಭಯ ಎನಿಸುತ್ತಿದ್ದರೆ ಅವರು ಅಲ್ಲಿಗೆ ಹೋಗುತ್ತಲೇ ಇರಲಿಲ್ಲ. ಧರ್ಮದ ಅಂಗಡಿಕಾರನ ಸೇವೆ ವಾಸ್ತವದಲ್ಲಿ ದೇವರ ಸೇವೆಯೇ ಹೌದು ಎಂದು ಅವರಿಗೆ ಕಲಿಸಲಾಗುತ್ತದೆ. ಅಲ್ಲಿ ಕೆಲವರು ದೈಹಿಕ ಶೋಷಣೆ ಮಾಡಿದರೂ ಅವರು ಅದನ್ನು ಹಾಗೆಯೇ ಸಹಿಸಿಕೊಳ್ಳುತ್ತಾರೆ. ಮತ್ತೆ ಮತ್ತೆ ಅವರ ದೌರ್ಜನ್ಯಕ್ಕೆ ಒಳಗಾಗುತ್ತಾರೆ.

ಯಾವ ಪ್ರಕರಣಗಳು ಹೊರಬರುತ್ತವೋ ಅಲ್ಲಿ ಪರಸ್ಪರ ಅಸೂಯೆ ಕೆಲಸ ಮಾಡುತ್ತದೆ. ದೂರುಗಳು ಹೆಚ್ಚಾದಾಗ ಮಾತ್ರ ಒಂದು ಪ್ರಕರಣ ಬಯಲಿಗೆ ಬರುತ್ತದೆ.

ಧರ್ಮದ ಅಂಗಡಿಕಾರರು ಧರ್ಮವನ್ನು ಹಣ ಹಾಗೂ ಅಧಿಕಾರಕ್ಕಾಗಿ ಬಳಸಿಕೊಳ್ಳುವಂತೆ ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಕೂಡ ಬಳಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ತಿರಸ್ಕಾರಕ್ಕೊಳಗಾದ, ಗಂಡನಿಂದ ಮುನಿಸಿಕೊಂಡ ಮಹಿಳೆಯರಿಗೆ ಹಾಗೂ ವಿಧವೆಯರಿಗೆ ಇಂತಹ ಸ್ಥಳಗಳಲ್ಲಿ ಆಶ್ರಯ ದೊರಕುತ್ತದೆ. ಅಂಥವರೇ ಇಂಥ ಕಡೆ ಶೋಷಣೆಗೊಳಗಾಗುತ್ತಾರೆ. ರಜನೀಶ್‌ರಂತಹ ಆಶ್ರಮದಲ್ಲಿ ನೂರಾರು ಮಹಿಳೆಯರು ಬರುತ್ತಿದ್ದರು.

ಕೇರಳದ ಚರ್ಚ್‌ ಜಾರಿಗೊಳಿಸಿದ ಗೈಡ್‌ಲೈನ್‌ಗಳನ್ನು ಜಗತ್ತಿನ ಎಲ್ಲ ಚರ್ಚ್‌ಗಳು ಅನುಸರಿಸುತ್ತಿವೆ. ಏಕೆಂದರೆ ಈ ಸಮಸ್ಯೆ ವಿಶ್ವವ್ಯಾಪಿ. ಅಮೆರಿಕ ಹಾಗೂ ಯೂರೋಪ್‌ನಲ್ಲಿ ಜನರು ನ್ಯಾಯಾಲಯದ ಮೊರೆ ಹೋಗಲು ಕೂಡ ಹೆದರುವುದಿಲ್ಲ. ಎಷ್ಟೋ ದೇಶಗಳಲ್ಲಿ ಧರ್ಮದ ಭಯ ಎಷ್ಟಿದೆಯೆಂದರೆ, ನ್ಯಾಯಾಧೀಶರು ಕೂಡ ಧರ್ಮ ತನ್ನ ವಿರುದ್ಧ ಏನಾದರೂ ಕ್ರಮ ಕೈಕೊಳ್ಳಬಹುದೇ ಎಂದು ಹೆದರುತ್ತಾರೆ.

ವಾಸ್ತವದಲ್ಲಿ ಧರ್ಮ ಶೋಷಣೆಯ ಮತ್ತೊಂದು ಹೆಸರು. ಅದನ್ನು ಜನರು ತಮಗೆ ತಾವೇ ಆಹ್ವಾನಿಸಿಕೊಳ್ಳುತ್ತಿದ್ದಾರೆ. ಅದೊಂದು ರೀತಿಯ ಜೂಜಾಟ. ಇಲ್ಲಿ ಪ್ರತಿಯೊಬ್ಬ ಜೂಜುಕೋರ ಸೋಲುತ್ತಾನೆ. ಸ್ಥಳಾವಕಾಶ ಮಾಡಿಕೊಟ್ಟನು ಮಾತ್ರ ಅಲ್ಲಿ ಗೆಲ್ಲುತ್ತಾನೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ