ರಾಷ್ಟ್ರೀಯ ಮತ್ತು  ಅಂತರಾಷ್ಟ್ರೀಯ ಕ್ರೀಡಾಲೋಕಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದ್ದು,  ಅಂದು, ಇಂದು ಮತ್ತು ಮುಂದೆಯೂ ದೇಶದ ಕೀರ್ತಿಪತಾಕೆಯನ್ನು ಎತ್ತಿ ಹಿಡಿಯಲು ಅನೇಕ ಕ್ರೀಡಾಪಟುಗಳು ಸಿದ್ಧರಾಗಿದ್ದಾರೆ/ಸಿದ್ಧವಾಗುತ್ತಿದ್ದಾರೆ. 80ರ ದಶಕದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಲ್ಲದೇ,, ನಂತರ ಸಿನಿಮಾದಲ್ಲಿ ನಾಯಕಿಯಾಗಿಯೂ ಪ್ರಸಿದ್ಧಿ ಪಡೆದು ಪ್ರಸ್ತುತ ಸಮಾಜಸೇವೆ ಮತ್ತು ಶಿಕ್ಷಣ ರಂಗದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಅಶ್ವಿನಿ ನಾಚಪ್ಪ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ash8

ಕೊಡಗಿನ ಮೂಲದ  ಅಶ್ವಿನಿ ಹುಟ್ಟಿದ್ದು 1967ರ ಅಕ್ಟೋಬರ್ 21ರಂದು. ಹೇಳಿ ಕೇಳಿ ಕೊಡಗಿನ ಗಂಡು ಮಕ್ಕಳಂತೆ  ಹೆಣ್ಣು ಮಕ್ಕಳು ಸಹಾ ಧೈರ್ಯ ಮತ್ತು ಸಾಹಸಿಗಳು ಜೊತೆಗೆ ಅಷ್ಟೇ ಸುಂದರಿಯರೂ ಹೌದು.   ಅಕ್ಕ ಪುಷ್ಪ ನಾಚಪ್ಪ  ಮತ್ತು ಅಶ್ವಿನಿ ಅಕ್ಕ ತಂಗಿಯರ ಮನೆ ಕಂಠೀರವ ಕ್ರೀಡಾಂಗಣದ  ಹತ್ತಿರದಲ್ಲೇ ಇದ್ದ ಕಾರಣ, ಪ್ರತೀ ದಿನವೂ ಆಲ್ಲಿ  ಆಭ್ಯಾಸ ಮಾಡುತ್ತಿದ್ದ ಇಲ್ಲವೇ ತರಭೇತಿ ಪಡೆಯುತ್ತಿದ್ದ ಅಥ್ಲೀಟ್ ಗಳನ್ನು ನೋಡುತ್ತಿದ್ದ ಅಕ್ಕ ತಂಗಿಯರು ಅದರಿಂದ ಸಹಜವಾಗಿ ಆಕರ್ಷಿತರಾಗಿ ಅವರಿಗೇ ಅರಿವಿಲ್ಲದಂತೆಯೇ ಕಂಠೀರವ ಕ್ರೀಡಾಂಗಣದತ್ತ ಹೆಜ್ಜೆ ಹಾಕತೊಡಗಿದರು.

ಭಾರತದ ಟ್ರಿಪಲ್ ಜಂಪ್ ಆಟಗಾರರಾಗಿದ್ದಂತಹ  ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದ  ಮೊಹಿಂದರ್ ಸಿಂಗ್ ಗಿಲ್ ಅವರು ಕಂಠೀರವ ಕ್ರೀಡಾಂಗಣಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದದ್ದಲ್ಲದೇ, ಅಲ್ಲಿ ಆಡುತ್ತಿದ್ದ ಮಕ್ಕಳು ಆವರು ಹೇಳಿದಂತೆ ಕ್ರೀಡಾಂಗಣದ ಸುತ್ತಲೂ ಸುತ್ತು ಹಾಕಿದಲ್ಲಿ ಮತ್ತು ಅವರು ಹೇಳಿದಂತೆ ಮಾಡುವ ಮಕ್ಕಳಿಗೆ  ಚಾಕ್ಲೇಟ್ ಇಲ್ಲವೇ ಸಿಹಿ ತಿಂಡಿಗಳನ್ನು ನೀಡುತ್ತಿದರು.  ಅದೃಷ್ಟವೋ ಏನೋ  ಎನ್ನುವಂತೆ ಅಂತಹ ಮೊಹಿಂದರ್ ಅವರ ದೃಷ್ಟಿಗೆ ಅಕ್ಕ ತಂಗಿಯರು ಬಿದ್ದಿದ್ದೆ ತಡಾ   ಅವರು ತಮ್ಮೆಲ್ಲಾ ಅನುಭವನ್ನು ಆ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಅಶ್ವಿನಿಯವರಿಗೆ ಧಾರೆ ಎರೆದರು. ಇದಾವುದರ ಪರಿವಿಲ್ಲದ ಆ ಅಕ್ಕ ತಂಗಿಯರು ಮೊಹಿಂದರ್ ಸಿಂಗ್ ನೀಡುತ್ತಿದ್ದ ಸಿಹಿ ತಿಂಡಿಗಳಿಗೆ ಪ್ರಚೋದಿತರಾಗಿ  ಅವರ ಅರಿವಿಗೇ ಬಾರದಂತೆ ಒಳ್ಳೆಯ ಅಥ್ಲೇಟ್ ಆಗತೊಡಗಿದರು.

ash4

ಅಶ್ವಿನಿ ಅವರಿಗೆ ಕೇವಲ 10 ವರ್ಷವಾಗಿದ್ದಾಗಲೇ, ಕ್ರೀಡಾಕೂಟವೊಂದರೆಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ  ಕ್ರೀಡಾ ಕ್ಷೇತ್ರದಲ್ಲಿ ತನ್ನ ಶ್ರೇಷ್ಠತೆಯನ್ನು ತೋರಿದರು. ಆಶ್ವಿನಿಯವರನ್ನು ಗಗನ ಸಖಿಯನ್ನಾಗಿಸ ಬೇಕೆಂದು ಬಯಸಿದ್ದ ಅವರ ಪೋಷಕರು, ತಮ್ಮ ಮಗಳಿಗೆ ವಿಮಾನಕ್ಕಿಂತ ಮೈದಾನದಲ್ಲೇ ಉಜ್ವಲ ಭವಿಷ್ಯವಿದೆ ಎಂಬುದನ್ನು ತಿಳಿದು ಆಕೆಗೆ ಸಕಲ ರೀತಿಯಲ್ಲೂ ಪ್ರೋತ್ಸಾಹ ನೀಡತೊಡಗಿದರು.  ಇನ್ನು ಆಕೆ ಓದುತ್ತಿದ್ದ  ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿಯಾಗಿದ್ದ  ಶ್ರೀಮತಿ ಬೀಟ್ರಿಸ್ ಹೆಗ್ಡೆ ಅವರು ಅಥ್ಲೆಟಿಕ್ಸ್‌ನಲ್ಲಿ ಆಶ್ವಿನಿಯವರ ಪ್ರತಿಭೆಯನ್ನು ಗುರುತಿಸಿ ಆಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಮುಂದೆ ಪ್ರೌಢಶಾಲೆಯ ದೈಹಿಕ ಶಿಕ್ಷಕರಾಗಿದ್ದ ಶ್ರೀ ಪುಷ್ಪಾಂಗದನ್,  ಪ್ರಾಂಶುಪಾಲರು ಮತ್ತು ಎಲ್ಲ  ಶಿಕ್ಷಕರೂ ನೀಡಿದ ಬೆಂಬಲ ಮತ್ತು ಪ್ರೇರಣೆ ನೀಡಿದ ಫಲವಾಗಿ ಶಾಲೆ ಮತ್ತು ಕಾಲೇಜು ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿಯೂ ಉತ್ತಮ ಸಾಧನೆ ತೋರಿದ ಪರಿಣಾಮ  ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಟ್ಟಕ್ಕೆ ಬೆಳೆದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ