ಹೇಳಿ ಕೇಳೀ ಕರ್ನಾಟಕ ಕಾಫಿಯ ತವರೂರು. ವಿಶ್ವಾದ್ಯಂತ ಬಹುತೇಕರ ದಿನ ಆರಂಭವಾಗೋದೇ ಬಿಸಿ ಬಿಸಿ ಕಾಫಿಯಿಂದ ಎಂದರೂ ತಪ್ಪಾಗದು. ಭಾರತವು ವಿಶ್ವದ 6ನೇ ಅತಿದೊಡ್ಡ ಕಾಫಿ ಉತ್ಪಾದಕ ದೇಶವಾಗಿದೆ. ಭಾರತ ಅರೇಬಿಕಾ ಎಂಬ ಹೆಸರಿನ ಅತ್ಯುತ್ತಮ ಗುಣಮಟ್ಟದ ಕಾಫಿ ಬೀಜವು ವಿಶ್ವಾದ್ಯಂತ ಹೆಚ್ಚಿನ ಜನಪ್ರಿಯವಾಗಿದ್ದು ಅದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಇನ್ನು ಕರ್ನಾಟಕದಿಂದಲೇ  ದೇಶದ  72.5% ಕಾಫಿ ಕೊಡಗು, ಚಿಕ್ಕಮಗಳೂರು, ಹಾಸನ ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಉತ್ಪಾದನೆಯಾದರೂ ಬೆಂಗಳೂರಿನಲ್ಲಿ 19ನೇ ಶತಮಾನದವರೆಗೂ ಕಾಫೀ ಕ್ಯೂರಿಂಗ್ ಕಂಪನಿ ಇರಲಿಲ್ಲ ಎಂದರೆ  ಎಲ್ಲರಿಗೂ ಅಚ್ಚರಿ ಎನಿಸಬಹುದು.  ಬೆಂಗಳೂರಿಗರಿಗೆ ತಾಜಾ ತಾಜಾ ಕಾಫೀ ಪುಡಿಯನ್ನು ಪರಿಚಯಿಸಿದ ಅಸಾಧಾರಣ ಮಹಿಳೆ  ಕಾಫಿ ಪುಡಿ  ಸಾಕಮ್ಮನವರ ಬಗ್ಗೆ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

ತುಮಕೂರು ಜೆಲ್ಲೆಯ ಬಿದರೆ ಎಂಬ ಗ್ರಾಮದ ಕೆಳಮದ್ಯಮ ವರ್ಗದ ನೇಕಾರರ ಕುಟುಂಬದಲ್ಲಿ 1880ರಲ್ಲಿ ಜನಿಸಿದ ಸಾಕಮ್ಮನವರು ಚಿಕ್ಕವಯಸ್ಸಿನಲ್ಲೇ ಮುದ್ದಾಗಿ ಮತ್ತು  ಅಷ್ಟೇ ಚೂಟಿಯಾದ ಹುಡುಗಿಯಾಗಿದ್ದಳು. ಊರಿನಲ್ಲಿ ಮಳೆ ಬೆಳೆ ಸರಿಯಾಗಿ  ಆಗದೇ ಇದ್ದ ಕಾರಣ, ಆಕೆಯ ಪೋಷಕರು ಉತ್ತಮ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ವಲಸೆ ಬರುತ್ತಾರೆ.  ಹೆಣ್ಣು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿವುದು ಅಷ್ಟಾಗಿ ಇರದಿದ್ದ ಅಂದಿನ ಕಾಲದಲ್ಲೂ ಆಟ ಪಾಠಗಳಲ್ಲಿ ಚುರುಕಾಗಿದ್ದ ಕಾರಣ ಆವರ ಪೋಷಕರು ಆಕೆಯನ್ನು ಶಾಲೆಗೆ ಸೇರಿಸಿದಾಗ ಅಕ್ಕ ಪಕ್ಕದವರೆಲ್ಲಾ, ಅಯ್ಯೋ ಹೆಣ್ಣು ಮಕ್ಕಳು ಶಾಲೆಗೆ ಕಲಿತು ಏನು ಮಾಡಬೇಕು? ಎಷ್ಟೇ ಓದಿದರೂ ಅಂತಿಮವಾಗಿ ಮುಸುರೆ ತಿಕ್ಕಲೇ ಬೇಕು ಎಂಬ ಮೂದಲಿಸುತ್ತಾರೆ. ಅಂತಹ ಯಾವ ಕೊಂಕು ಮಾತಿಗೂ ಸೊಪ್ಪು ಹಾಕದ ಸಾಕಮ್ಮನವರು  ಆಡಿಕೊಂಡವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚ್ಚರಿ ಪಡುವಂತೆ ಅವರೆಲ್ಲರ  ನಿರೀಕ್ಷೆಗಳೂ ಮೀರುವಂತೆ ಅಂದಿನ ಮೈಸೂರು ಪ್ರಾಂತ್ಯದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೆಲವೇ ಕೆಲವು ಹುಡುಗಿಯರಲ್ಲಿ ಸಾಕಮ್ಮನವರೂ ಒಬ್ಬರಾಗಿರುತ್ತಾರೆ.

ಅದೊಮ್ಮೆ ಅವರ ಸ್ನೇಹಿತೆಯ ಮನೆಗೆ ಹಬ್ಬದ ದಿನ ಅರಿಶಿನ ಕುಂಕುಮಕ್ಕೆ ಹೋಗಿದ್ದ ಸಾಕಮ್ಮನವರು ದೇವರ ಮುಂದೆ ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಲ್ಲದೇ ಬಹಳು ಚುರುಕಾಗಿ ಓಡಾಡಿಕೊಂಡಿದ್ದನ್ನು ಗಮನಿಸಿದ  ಅವರ ಸ್ನೇಹಿತೆಯ ಮನೆಗೆ ಬಂದಿದ್ದ ನೆಂಟರಾದ ಕೊಡಗಿನ ಅತಿದೊಡ್ಡ ಕಾಫಿ ಪ್ಲಾಂಟರ್ ಮತ್ತು ಆಗರ್ಭ ಶ್ರೀಮಂತರಾಗಿದ್ದ  ದೊಡ್ಡಮನೆ ಚಿಕ್ಕಬಸಪ್ಪನವರು ಬಂದಿರುತ್ತಾರೆ.  ಚಿಕ್ಕಬಸಪ್ಪನವರಿಗೆ ಆದಾಗಲೇ ಎರಡು ಮದುವೆಯಾಗಿದ್ದರೂ ಮಕ್ಕಳಾಗದೇ ಇರದಿದ್ದರಿಂದ ಸಾಕಮ್ಮನವರನ್ನು ಮದುವೆಯಾಗಲು ಇಚ್ಚಿಸುತ್ತಾರೆ.  ವಯಸ್ಸಿನಲ್ಲಿ ಬಹಳ ಅಂತರವಿದ್ದರೂ ಸಾಕಮ್ಮನವರ ಮನೆಯ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿರದಿದ್ದ ಕಾರಣ ವಿಧಿ ಇಲ್ಲದೇ 16 ವರ್ಷದ ಸಾಕಮ್ಮನವರಿಗಿಂತಲೂ ಅತ್ಯಂತ ವಯಸ್ಸಾದ ಸೋಮವಾರಪೇಟೆಯ ಸಾಹುಕಾರ ದೊಡ್ಡಮನೆ ಬಸಪ್ಪನವರ ಮೂರನೇ ಹೆಂಡತಿಯಾಗಿ ಮದುವೆ ಮಾಡಿಕೊಡಲಾಗುತ್ತದೆ.

WhatsApp Image 2024-11-05 at 22.12.40

ಹೀಗೆ ತಮ್ಮ 16ನೇ ವಯಸ್ಸಿನಲ್ಲೇ  ಚಿಕ್ಕಬಸಪ್ಪನವರ 3ನೇ ಪತ್ನಿಯಾಗಿ ಅನಿವಾರ್ಯವಾಗಿ ಸಾಕಮ್ಮ ಕೊಡಗಿಗೆ ಬಂದು  ಅಲ್ಲಿನ ಹವಾಮಾನಕ್ಕೆ ಒಗ್ಗುಕೊಳ್ಳುವಷ್ಟರಲ್ಲೇ ಅವರ ಪತಿಯು ನಿಧನರಾಗಿ ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾಗುತ್ತಾರೆ.   ಅವರ ಪತಿ ತೀರಿಕೊಂಡ ಕೆಲವೇ ವರ್ಷಗಳಲ್ಲಿ ಆವರ ಮೊದಲ ಮತ್ತು ಎರಡನೇ ಪತ್ನಿಯರೂ ನಿಧನರಾದ ಕಾರಣ, ಕುಟುಂಬದ ಕೃಷಿ ಚಟುವಟಿಕೆ ಮತ್ತು ವ್ಯಾಪಾರ ವಹಿವಾಟುಗಳು ಸಾಕಮ್ಮನವರ ಹೆಗಲ ಮೇಲೆ ಬೀಳುತ್ತದೆ ಅಂದಿನ ಕಾಲದಲ್ಲೇ ಅವರ ಬಳಿ ನೂರಾರು ಎಕರೆ ಕಾಫಿ ತೋಟವಿರುತ್ತದೆ. ವಿದ್ಯಾವಂತಳೂ ಮತ್ತು  ಬುದ್ಧಿವಂತಳೂ ಆಗಿದ್ದ ಸಾಕಮ್ಮನವರು ಅತ್ಯಂತ ಕಡಿಮೆ ಸಮಯದಲ್ಲೇ ವ್ಯವಹಾರವನ್ನೆಲ್ಲಾ ಕಲಿತು  ನೂರಾರು ಎಕರೆ ಕಾಫಿ ತೋಟದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಲ್ಲದೇ, ಅಂದಿನ ಕಾಲದ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಾಫಿ ಇಳುವರಿಯು ಹೆಚ್ಚಾಗುವಂತೆ ನೋಡಿಕೊಳ್ಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ